ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಹಿಂದೂ ವ್ಯಾಪಾರಸ್ಥರೇ ಬೇಕು !

೧. ಮತಾಂಧರ ‘ಕೋಚಿಂಗ್‌ ಜಿಹಾದ್‌’ನ್ನು ತಿಳಿಯಿರಿ !

ನವ ದೆಹಲಿಯ ಜೆ.ಎಮ್‌.ಡಿ. ಕೋಚಿಂಗ್‌ ಸೆಂಟರ್‌ ನಲ್ಲಿ ಮುಸಲ್ಮಾನ ಶಿಕ್ಷಕ ರಿಝವಾನ್‌ ಈತನು ಹಿಂದೂ ವಿದ್ಯಾರ್ಥಿಗಳ ಬುದ್ಧಿಹಾಳು ಮಾಡುತ್ತಿದ್ದನು ಮತ್ತು ದೇವರನ್ನು ಪೂಜಿಸುವುದನ್ನು ನಿಲ್ಲಿಸಿ ಅಲ್ಲಾಹನನ್ನು ಪೂಜಿಸಲು ಮತ್ತು ಕುರಾನ್‌ ಓದಲು ಹೇಳುತ್ತಿದ್ದನು.

೨. ಹಿಂದೂಗಳೇ, ಮತಾಂಧರ ‘ನಾಮ್‌ ಜಿಹಾದ್‌’ನ್ನು ತಿಳಿಯಿರಿ ! 

‘ಝೀ ನ್ಯೂಸ್’ ಸುದ್ದಿವಾಹಿನಿಯು ಉತ್ತರಾಖಂಡ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುವ ಮೂಲಕ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದರಲ್ಲಿ ಅಂಗಡಿಗಳು ಮತ್ತು ಢಾಬಾಗಳಿಗೆ ಹಿಂದೂ ದೇವತೆಗಳ ಹೆಸರನ್ನು ಇಡಲಾಗಿದ್ದರೂ, ಅವುಗಳ ಮಾಲೀಕರು ಮುಸಲ್ಮಾನರಾಗಿರುತ್ತಾರೆ ಎಂದು ತಿಳಿದುಬಂದಿದೆ.

೩. ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಹಿಂದೂ ವ್ಯಾಪಾರಸ್ಥರೇ ಬೇಕು !

ಮುಸಲ್ಮಾನರು ತಮ್ಮ ಗುರುತನ್ನು ಮರೆಮಾಚುತ್ತಾರೆ ಮತ್ತು ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಸಾಹಿತ್ಯವನ್ನು ಮಾರಾಟ ಮಾಡುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಮತ್ತು ಮುಸಲ್ಮಾನರು ಪೂಜಾ ಸಾಹಿತ್ಯದ ಅಂಗಡಿಗಳನ್ನು ಇಡುವುದನ್ನು ತಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಆಗ್ರಹಿಸಿದೆ.

೪. ಈ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ !

‘ಇಸ್ರೋ’ ವಿಜ್ಞಾನಿ ನಂಬಿ ನಾರಾಯಣನ್‌ ವಿರುದ್ಧದ ಗೂಢಚಾರಿಕೆ ಆರೋಪ ಸುಳ್ಳಾಗಿತ್ತು. ಕೇರಳ ಪೊಲೀಸರ ವಿಶೇಷ ಶಾಖೆಯ ಮಾಜಿ ಅಧಿಕಾರಿಯೊಬ್ಬರು ಈ ಸಂಚು ರೂಪಿಸಿದ್ದಾರೆ ಎಂದು ಸಿಬೈ ಆರೋಪಪಟ್ಟಿಯಲ್ಲಿ ಹೇಳಿದೆ. ಈ ಪ್ರಕರಣದಲ್ಲಿ ಇಬ್ಬರು ಮಾಜಿ ಪೊಲೀಸ್‌ ಮಹಾನಿರ್ದೇಶಕರನ್ನು ಬಂಧಿಸಲಾಗಿದೆ.

೫. ಭಾರತವು ‘ಇಸ್ಲಾಮಿಕ್‌ ರಾಷ್ಟ್ರ’ವಾಗುವ ಮೊದಲು ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿ !

‘ಫೋರ್ಬ್ಸ್‌’ ನಿಯತಕಾಲಿಕೆಯ ವರದಿಗನುಸಾರ, ೨೦೫೦ ರ ವೇಳೆಗೆ, ಪ್ರಪಂಚದಾದ್ಯಂತ ಮುಸಲ್ಮಾನರ ಜನಸಂಖ್ಯೆಯು ವೇಗವಾಗಿ ಹೆಚ್ಚಾಗಲಿದೆ. ಇದರಲ್ಲಿ ಭಾರತ ಮೊದಲ ಸ್ಥಾನದಲ್ಲಿರಲಿದ್ದು, ಅಲ್ಲಿನ ಮುಸಲ್ಮಾನರ ಜನಸಂಖ್ಯೆ ೩೧ ಕೋಟಿ ೬೬ ಲಕ್ಷ ಇರಲಿದೆ ಎಂದು ಹೇಳಲಾಗಿದೆ.

೬. ಜಾತ್ಯತೀತರು ಈಗೇಕೆ ಮೌನವಾಗಿದ್ದಾರೆ ? 

ಇಸ್ಲಾಂನಲ್ಲಿ ಹುಟ್ಟದಿರುವವರು ದುರ್ದೈವಿಗಳಾಗಿದ್ದಾರೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಲು ನಾವು ಅವರನ್ನು ಆಹ್ವಾನಿಸಿದರೆ ಮತ್ತು ಅವರಲ್ಲಿ ಇಸ್ಲಾಂ ಧರ್ಮದ ಬಗ್ಗೆ ಭಕ್ತಿ ಮೂಡಿಸಿದರೆ, ನಾವು ಅಲ್ಲಾನನ್ನು ಮೆಚ್ಚಿಸಬಹುದು ಎಂದು ಬಂಗಾಲದ ಸಚಿವ ಫಿರ್ಹಾದ್‌ ಹಕೀಮ ಹೇಳಿಕೆ ನೀಡಿದ್ದಾರೆ.

೭. ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿ ಒಳನುಸುಳುವಿಕೆ ಸಮಸ್ಯೆ !

ಬಾಂಗ್ಲಾದೇಶದ ನುಸುಳುಕೋರರು ಜಾರ್ಖಂಡ್ನ್ನು ‘ಚಿಕ್ಕ ಬಾಂಗ್ಲಾದೇಶ’ವನ್ನಾಗಿ ಮಾಡಲು ಸಂಚು ರೂಪಿಸಿದ್ದಾರೆ.  ಈ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂದು ಭಾಜಪದ ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಮರಾಂಡಿ ಆಗ್ರಹಿಸಿದ್ದಾರೆ.