ಉಗ್ರ ನಿಗ್ರಹ ದಳಕ್ಕೆ ತನಿಖೆಗೆ ಆದೇಶ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಉಗ್ರ ನಿಗ್ರಹ ತಂಡವು ರಾಜ್ಯದಲ್ಲಿ ನಡೆಸಲಾಗುತ್ತಿರುವ ೪ ಸಾವಿರಗಿಂತಲೂ ಹೆಚ್ಚಿನ ಅನುದಾನ ರಹಿತ ಮದರಸಾಗಳ ನಿಧಿಯ ವಿಚಾರಣೆ ಆರಂಭಿಸಿದೆ. ಓರ್ವ ಹಿರಿಯ ಅಧಿಕಾರಿಯು ನೀಡಿದ ಮಾಹಿತಿಯ ಪ್ರಕಾರ, ಸರಕಾರವು ರಾಜ್ಯಾದ್ಯಂತ ಇರುವ ಅಪರಿಚಿತ ಮದರಸಾಗಳ ವಿಚಾರಣೆ ನಡೆಸುವ ಆದೇಶ ನೀಡಿತ್ತು. ಅದರ ನಂತರ ರಾಜ್ಯದಲ್ಲಿನ ೪ ಸಾವಿರದ ೧೯೧ ಮದರಸಾಗಳು ಆಗ್ರಾ ನಿಗ್ರಹ ದಳದ ಕೆಂಗಣ್ಣಿಗೆ ಗುರಿಯಾಗಿವೆ. ಇದರಲ್ಲಿ ಗೂಂಡಾ ಮತ್ತು ಬಹರಾಯಿಚ ಜಿಲ್ಲೆಯಲ್ಲಿನ ಸುಮಾರು ೭೦೦ ಮದರಸಾಗಳಿವೆ. ಮದರಸಾದ ವಿಚಾರಣೆಗಾಗಿ ಸ್ವತಂತ್ರ ಪಡೆಯನ್ನು ಸಿದ್ಧಪಡಿಸಲಾಗಿದೆ.
ಬಹರಾಯಿಚನಲ್ಲಿ ೪೯೫ ಮದರಸಾಗಳು
ಬಹರಾಯಿಚ್ ಜಿಲ್ಲೆ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಸಂಜಯ ಮಿಶ್ರಾ ಅವರ ಪ್ರಕಾರ ೪೯೫ ಮದರಸಾಗಳು ಕೇವಲ ಬಹರಾಯಿಚ್ ಜಿಲ್ಲೆಯಲ್ಲಿವೆ ಮತ್ತು ಕನಿಷ್ಠ ೧೦೦ ಮದರಸಾಗಳು ಭಾರತ ಮತ್ತು ನೇಪಾಳ ಗಡಿ ಪ್ರದೇಶದ ಗ್ರಾಮಗಳಲ್ಲಿ ನಡೆಸಲಾಗುತ್ತಿವೆ.
ಮದರಸಾಗಳಿಗೆ ಹಣ ಎಲ್ಲಿಂದ ಬರುತ್ತವೆ ?
ಬಹರಾಯಿಚ್ ಜಿಲ್ಲೆಯಲ್ಲಿನ ೭೯೨ ಮದರಸಾಗಳಲ್ಲಿ ೪೯೫ ಮದರಸಾಗಳು ಅಪರಿಚಿತವಾಗಿವೆ ಎಂದು ತಿಳಿದು ಬಂದಿವೆ. ಈ ಮದರಸಾಗಳಿಗೆ ನಿಧಿ ಎಲ್ಲಿಂದ ಬರುತ್ತದೆ ಎಂಬುದರ ತನಿಖೆ ನಡೆಯುತ್ತಿದೆ. ಈ ಮದರಸಾಗಳಿಗೆ ಯಾವುದೇ ಕಾನೂನ ಬಾಹಿರ ಮೂಲದಿಂದ ವಿಶೇಷವಾಗಿ ಗಡಿ ಭಾಗದಲ್ಲಿರುವ ಮದರಸಾಗಳಿಂದ ನಿಧಿ ದೊರೆಯುತ್ತಿದೆಯೇ? ಇದನ್ನು ಕೂಡ ಉಗ್ರ ನಿಗ್ರಹ ತಂಡ ತನಿಖೆ ನಡೆಸಲಿದೆ.
ಮದರಸಾಗಳ ಮೇಲೆ ಸರಕಾರದ ಗಮನ
‘ಮಕತಬ’ ಎಂದು ನಡೆಸಲಾಗುವ ಮದರಸಾಗಳ ನೋಂದಣಿ ಇಲ್ಲಿಯವರೆಗೆ ಏಕೆ ಆಗಿಲ್ಲ, ಎಂಬುದರ ವಿಚಾರಣೆ ಉಗ್ರ ನಿಗ್ರಹ ತಂಡ ಮಾಡುವುದು. ಈ ಮದರಸಾಗಳು ಸಂಬಂಧಿತ ಜಿಲ್ಲೆಯಲ್ಲಿ ಯಾವಾಗಿನಿಂದ ಆರಂಭವಾಗಿವೆ? ಅವುಗಳಿಗೆ ಹಣ ಎಲ್ಲಿಂದ ದೊರೆಯುತ್ತದೆ? ಈ ಎಲ್ಲಾ ವಿಷಯಗಳ ತಪಾಸಣೆ ಮಾಡಿ ಅದರ ವರದಿ ಮಹಾ ನಿರ್ದೇಶಕರಿಗೆ ಪ್ರಸ್ತುತಪಡಿಸಲಾಗುವುದು. ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳು ಈ ತಂಡದ ಜೊತೆಗೆ ಸಮನ್ವಯ ನಡೆಸಿ ಈ ತಂಡದ ಪೊಲೀಸ ಮಹಾ ನಿರ್ದೇಶಕರಿಗೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸರಕಾರದಿಂದ ಪತ್ರ ಬಂದಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಅವರು ಹೇಳಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆದಿದ್ದು ಅವರ ಸೂಚನೆಯ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಸಂಪಾದಕೀಯ ನಿಲುವು
|