Bangladesh Writer Taslima Nasreen Statement : ಬಾಂಗ್ಲಾದೇಶಕ್ಕಾಗಿ 17 ಸಾವಿರ ಸೈನಿಕರನ್ನು ಕಳೆದುಕೊಂಡ ಭಾರತವು ಶತ್ರುವಾಗಿದೆ, ಹಾಗೂ 3 ಲಕ್ಷ ಜನರನ್ನು ಕೊಂದ ಪಾಕಿಸ್ತಾಬ ಸ್ನೇಹಿತ ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ನಿಂದ ಬಾಂಗ್ಲಾದೇಶ ಸರಕಾರದ ವಿರುದ್ಧ ತೀಕ್ಷ್ಣ ಟೀಕೆ

ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ನವ ದೆಹಲಿ – ಬಾಂಗ್ಲಾದೇಶವನ್ನು ಅದರ ಶತ್ರು ಪಾಕಿಸ್ತಾನದಿಂದ ರಕ್ಷಿಸುವಾಗ 17 ಸಾವಿರ ಸೈನಿಕರು ಪ್ರಾಣ ಕಳೆದುಕೊಂಡ ಭಾರತವು ಈಗ ಬಾಂಗ್ಲಾದೇಶದ ಶತ್ರುವಾಗಿದೆ. 1 ಕೋಟಿ ನಿರಾಶ್ರಿತರಿಗೆ ವಸತಿ, ಊಟ, ಬಟ್ಟೆ ಒದಗಿಸಿದ ಭಾರತ ಈಗ ಶತ್ರುವಾಗಿದೆ. ಪಾಕಿಸ್ತಾನದ ಸೇನೆಯಿಂದ ದೇಶವನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಒದಗಿಸಿದ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ ನೀಡಿದ ಭಾರತ ಈಗ ಶತ್ರುವಾಗಿದೆ. ಮತ್ತೊಂದೆಡೆ, 30 ಲಕ್ಷ ಜನರನ್ನು ಕೊಂದು 2 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪಾಕಿಸ್ತಾನ ಈಗ ಸ್ನೇಹಿತವಾಗಿದೆ, ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರಿನ್ ಇವರು ಪಾಕಿಸ್ತಾನವನ್ನು ಹತ್ತಿರ ತರುವ ಮೂಲಕ ಭಾರತವನ್ನು ಶತ್ರುವನ್ನಾಗಿ ಮಾಡುವ ಬಾಂಗ್ಲಾದೇಶದ ನಿಲುವನ್ನು ಟೀಕಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಸ್ಲಿಮಾ ನಸ್ರಿನ್ ಮಾತು ಮುಂದುವರೆಸಿ, ಭಯೋತ್ಪಾದಕರ ನಿರ್ಮಿಸುವಲ್ಲಿ ಮಂಚೂಣಿಯಲ್ಲಿರುವ ಪಾಕಿಸ್ತಾನ ಈಗ ಬಾಂಗ್ಲಾದೇಶದ ಸ್ನೇಹಿತನಾಗಿ ಮಾರ್ಪಟ್ಟಿದೆ. 1971ರ ದುಷ್ಕೃತ್ಯಕ್ಕೆ ಬಾಂಗ್ಲಾದೇಶದ ಕ್ಷಮೆ ಕೇಳದ ಪಾಕಿಸ್ತಾನ ಈಗ ತನ್ನ ಗೆಳೆಯನಾಗಿಬಿಟ್ಟಿದೆ ಎಂದು ಹೇಳಿದ್ದಾರೆ.