|
ಪುಣೆ – ‘ಎಕ್ಸ್’ ನಲ್ಲಿ ನಿರ್ದೇಶ ಸಿಂಗ ಎಂಬ ಮಹಿಳೆಯು ಭಗವಾನ ಶ್ರೀಕೃಷ್ಣ, ಶ್ರೀರಾಮ, ಮಾತಾ ಸೀತೆ ಮತ್ತು ದ್ರೌಪದಿಯ ಬಗ್ಗೆ ಅಶ್ಲೀಲ ಭಾಷೆಯ ಪೋಸ್ಟ್ ಮಾಡುವ ಮೂಲಕ ಅವಮಾನಿಸಿದ್ದಾರೆ. ಹಾಗೆಯೇ ಮಹಾಕುಂಭಮೇಳದ ಬಗ್ಗೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪೋಸ್ಟ್ ಅನ್ನು ಸಹ ಮಾಡಿದ್ದಾಳೆ. ಮಹಾಕುಂಭವೆಂದರೆ ಅಶ್ಲೀಲತೆಯಾಗಿದ್ದು, ಶ್ರೀ ಕೃಷ್ಣ ಮತ್ತು ಶ್ರೀ ರಾಮ ಅಪರಾಧಿಗಳಾಗಿದ್ದಾರೆ, ಎಂದು ನಿರ್ದೇಶ ಸಿಂಗ ಹೇಳಿದ್ದಾಳೆ. ಈ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯದ ವಕೀಲೆ ಅಮಿತಾ ಸಚದೇವ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. (ಧರ್ಮರಕ್ಷಣೆಗಾಗಿ ತ್ವರಿತ ಕ್ರಮ ಕೈಗೊಂಡ ವಕೀಲೆ ಅಮಿತಾ ಸಚದೇವ ಅವರಿಗೆ ಅಭಿನಂದನೆಗಳು ! – ಸಂಪಾದಕರು)
“ಸೈಬರ್ ಪೊಲೀಸ್ ಠಾಣೆಯು ಈ ದೂರನ್ನು ತಕ್ಷಣ ಗಮನಕ್ಕೆ ತೆಗೆದುಕೊಂಡು ನಿರ್ದೇಶ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಬೇಕು. ‘ಎಕ್ಸ್’ ನಿಂದ ಆಕ್ಷೇಪಾರ್ಹ ಪೋಸ್ಟಗಳನ್ನು ತೆಗೆದುಹಾಕಬೇಕು. ಈ ಕ್ರಮವನ್ನು ಯಾರಾದರೂ ತಡ ಮಾಡಿದರೆ, ಅದಕ್ಕೆ ಕಾರಣರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ದ್ವೇಷ ಭಾಷಣ ಮತ್ತು ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅಪಮಾನಜನಕ ವಿಷಯಗಳ ಹರಡುವಿಕೆಯನ್ನು ತಡೆಯಲು ಈ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ ಎಂದು ವಕೀಲೆ ಸಚದೇವ ಹೇಳಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳಲ್ಲಿನ ಅತಿಯಾದ ಸಹಿಷ್ಣುತೆಯ ಈ ಸದ್ಗುಣಶೀಲವಿಕೃತಿಯಿಂದಲೇ ಯಾರೂ ಹಿಂದೂ ದೇವತೆಗಳನ್ನು ಅವಮಾನಿಸುತ್ತಾರೆ. ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡುವುದು ಸೇರಿದಂತೆ ಈ ಪ್ರವೃತ್ತಿಗಳನ್ನು ನಿಗ್ರಹಿಸಲು ‘ಧರ್ಮನಿಂದನೆ ವಿರೋಧಿ ಕಾನೂನು’ ಆವಶ್ಯಕತೆಯಿದೆ. ಇದಕ್ಕಾಗಿ ಹಿಂದೂಗಳು ಈಗಲೇ ಸಂಘಟಿತರಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ! |