Tattoo Lord Jaganath : ವಿದೇಶಿ ಮಹಿಳೆಯ ತೊಡೆಯ ಮೇಲೆ ಭಗವಾನ್ ಜಗನ್ನಾಥನ ಟ್ಯಾಟೂ!

ಮಹಿಳೆ ವಿರುದ್ಧ ಪ್ರಕರಣ ದಾಖಲಾದ ನಂತರ ಕ್ಷಮೆಯಾಚನೆ

ಭುವನೇಶ್ವರ್ (ಒಡಿಶಾ) – ಇಲ್ಲಿ ವಿದೇಶಿ ಮಹಿಳೆಯೊಬ್ಬಳು ತೊಡೆಯ ಮೇಲೆ ಭಗವಾನ್ ಜಗನ್ನಾಥನ ಚಿತ್ರವನ್ನು (ಟ್ಯಾಟೂ ಎಂದರೆ ದೇಹದ ಮೇಲೆ ಉದ್ದೇಶಪೂರ್ವಕವಾಗಿ ಮಾಡಿದ ಗುರುತು, ಆಕೃತಿ, ವಿನ್ಯಾಸ ಅಥವಾ ಪದ) ಹಚ್ಚಿಸಿಕೊಂಡಿದ್ದಾರೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಸಂಬಂಧ ಭುವನೇಶ್ವರದ ಶಹೀದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ವಿದೇಶಿ ಮಹಿಳೆ ಭುವನೇಶ್ವರದ ಟ್ಯಾಟೂ ಪಾರ್ಲರ್‌ನಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಈ ಮಹಿಳೆ ಸಾಮಾಜಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಎಂದು ಹೇಳಿದೆ.

1. ಮಹಿಳೆ ವಿರುದ್ಧ ದೂರು ದಾಖಲಿಸಿದ ಸುಬ್ರತ್ ಮೊಹಾನಿ, ಮಹಿಳೆ ಭಗವಾನ್ ಜಗನ್ನಾಥನ ಟ್ಯಾಟೂ ಅನ್ನು ಅನುಚಿತ ಸ್ಥಳದಲ್ಲಿ ಹಾಕಿಸಿಕೊಂಡಿದ್ದಾಳೆ, ಇದು ನಮ್ಮ ಭಾವನೆಗಳಿಗೆ ಧಕ್ಕೆ ತಂದಿದೆ. ಇದು ಜಗನ್ನಾಥನ ಭಕ್ತರು ಮತ್ತು ಎಲ್ಲಾ ಹಿಂದೂಗಳ ಅವಮಾನವಾಗಿದೆ. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಎಂದಿದ್ದಾರೆ.

2. ಈ ಸಂಬಂಧ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಮಹಿಳೆ, ನನಗೆ ಭಗವಾನ್ ಜಗನ್ನಾಥನಿಗೆ ಅವಮಾನ ಮಾಡುವ ಉದ್ದೇಶವಿರಲಿಲ್ಲ. ನಾನು ಭಗವಾನ್ ಜಗನ್ನಾಥನ ನಿಜವಾದ ಭಕ್ತೆ, ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ತಪ್ಪು ಮಾಡಿದ್ದೇನೆ ಮತ್ತು ಅದಕ್ಕೆ ನನಗೆ ತುಂಬಾ ಬೇಸರವಾಗಿದೆ. ಟ್ಯಾಟೂವನ್ನು ಮರೆಮಾಡುವ ಸ್ಥಳದಲ್ಲಿ ಹಾಕಲು ಕಲಾವಿದನಿಗೆ ಹೇಳಿದ್ದೆ. ಯಾವುದೇ ಪ್ರಶ್ನೆಗಳನ್ನು ಹುಟ್ಟುಹಾಕಲು ನಾನು ಬಯಸಲಿಲ್ಲ. ಅದನ್ನು ತೆಗೆದುಹಾಕುತ್ತೇನೆ. ನನ್ನ ತಪ್ಪಿಗೆ ಕ್ಷಮಿಸಿ ಎಂದಿದ್ದಾರೆ.

3. ಟ್ಯಾಟೂ ಅಂಗಡಿ ಮಾಲೀಕರು, ಮಹಿಳೆ ತನ್ನ ತೊಡೆಯ ಮೇಲೆ ಭಗವಾನ್ ಜಗನ್ನಾಥನ ಟ್ಯಾಟೂ ಹಾಕಿಸಿಕೊಳ್ಳಲು ಬಂದಿದ್ದಳು. ನಮ್ಮ ಸಿಬ್ಬಂದಿ ಹಾಗೆ ಮಾಡದಂತೆ ಸಲಹೆ ನೀಡಿದ್ದರು. ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವಂತೆ ಹೇಳಲಾಗಿತ್ತು, ಆದರೆ ಆಕೆ ಒಪ್ಪಲು ಸಿದ್ಧವಿರಲಿಲ್ಲ. ಈ ಘಟನೆಗೆ ನಾನು ಮನಃಪೂರ್ವಕವಾಗಿ ಕ್ಷಮೆ ಕೋರುತ್ತೇನೆ. ಟ್ಯಾಟೂ ಹಾಕಿದಾಗ ನಾನು ಅಂಗಡಿಯಲ್ಲಿರಲಿಲ್ಲ, ಎಂದಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರನ್ನು ಕ್ಷಮೆಯಾಚಿಸಿ ಬಿಡುವುದು ಸರಿಯಲ್ಲ, ಅವರನ್ನು ಜೈಲಿಗೆ ಹಾಕಬೇಕು!