FIR Rana Ayyub : ಮಹಿಳಾ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

ಹಿಂದೂಗಳ ದೇವತೆಗಳು ಮತ್ತು ಸ್ವಾತಂತ್ರ್ಯ ವೀರ ಸಾವರ್ಕರ ಅವರನ್ನು ಅವಮಾನಿಸಿದ ಪ್ರಕರಣ

ನವದೆಹಲಿ – ದೆಹಲಿಯ ಸಾಕೇತ ನ್ಯಾಯಾಲಯವು ಮಹಿಳಾ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದೆ. ರಾಣಾ ಅಯ್ಯೂಬ ಹಿಂದೂ ದೇವತೆಗಳು ಮತ್ತು ಸ್ವಾತಂತ್ರ್ಯ ವೀರ ಸಾವರ್ಕರ ಬಗ್ಗೆ ‘ಎಕ್ಸ್’ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಗ್ಗೆ ಈ ಆದೇಶ ಹೊರಡಿಸಿದ್ದಾರೆ. ವಕೀಲೆ ಅಮಿತಾ ಸಚದೇವ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ನ್ಯಾಯಾಲಯ ಈ ಆದೇಶವನ್ನು ನೀಡಿದೆ. ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ತನಿಖೆ ನಡೆಸದೆ ನಿಷ್ಕ್ರಿಯರಾಗಿದ್ದಾಗ ವಕೀಲೆ ಸಚದೇವ ನ್ಯಾಯಾಲಯದ ಮೆಟ್ಟಿಲೇರಬೇಕಾಗಿತ್ತು.

1. ನ್ಯಾಯಾಲಯವು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಅ (ದ್ವೇಷಪೂರಿತ ಭಾಷಣ), 295 ಅ (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು) ಮತ್ತು 505 (ಸಾರ್ವಜನಿಕ ತೊಂದರೆದಾಯಕ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದೆ.

2. ವಕೀಲೆ ಅಮಿತಾ ಸಚದೇವ ಅವರು ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಅ ಅಡಿಯಲ್ಲಿ ದೂರು ಸಲ್ಲಿಸಿದ್ದರು. ಅದರಲ್ಲಿ ಅವರು, ಅಯ್ಯೂಬ್ ಅವರ ಪೋಸ್ಟನಲ್ಲಿ ಹಿಂದೂ ದೇವತೆಗಳನ್ನು ಅವಮಾನ ಮಾಡಲಾಗಿದೆ ಮತ್ತು ಭಾರತ ವಿರೋಧಿ ಭಾವನೆಗಳನ್ನು ಹರಡಿದ್ದಾರೆ ಎಂದು ಹೇಳಿದ್ದರು. ಇದರಲ್ಲಿ ಹಿಂದೂಗಳ ಶ್ರದ್ಧೆಗಳನ್ನು ವ್ಯವಸ್ಥಿತವಾಗಿ ಅಪಹಾಸ್ಯ ಮಾಡುವ ಮತ್ತು ಕೀಳಾಗಿ ಕಾಣುವ, ಭಾರತದ ಅವಮಾನ ಮಾಡುವ ಹಾಗೂ ಧಾರ್ಮಿಕ ದ್ವೇಷವನ್ನು ಹರಡುವ ಪ್ರಯತ್ನ ಕಂಡು ಬರುತ್ತದೆ.

ಸಂಪಾದಕೀಯ ನಿಲುವು

  • ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ದೆಹಲಿ ಸರಕಾರದ ನಿಷ್ಕ್ರಿಯತೆಯಿಂದಾಗಿ ವಕೀಲೆ ಅಮಿತಾ ಸಚದೇವ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು ಎಂಬುದನ್ನು ಗಮನಿಸಬೇಕಾಗಿದೆ !
  • ಮುಸ್ಲಿಂ ರಾಣಾ ಅಯೂಬ ಹಿಂದೂ ದೇವತೆಗಳನ್ನು ಅವಮಾನಿಸಿದಾಗ ಪೊಲೀಸರು ನಿಷ್ಕ್ರಿಯರಾಗಿರುತ್ತಾರೆ; ಆದರೆ ಹಿಂದೂಗಳು ತಪ್ಪಾಗಿ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದರೆ, ಪೊಲೀಸರು ಇದೇ ರೀತಿ ನಿಷ್ಕ್ರಿಯರಾಗಿರುತ್ತಿದ್ದರೇ ?
  • ಇಂತಹವರ ವಿರುದ್ಧ ನಾವು ಕೇವಲ ಪ್ರಕರಣ ದಾಖಲಿಸಿ ಅಲ್ಲಿಗೆ ನಿಲ್ಲಿಸಬಾರದು, ಬದಲಿಗೆ ಅವರನ್ನು ತಕ್ಷಣ ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು !