Anti-Hindu Nirdesh Singh Arrested : ಹಿಂದೂ ದೇವತೆಗಳನ್ನು ಮತ್ತು ಮಹಾಕುಂಭಮೇಳವನ್ನು ಅವಮಾನಿಸಿದ ಆರೋಪದ ಮೇಲೆ ನಿರ್ದೆಶ ಸಿಂಗ್ ಬಂಧನ

ಹಿಂದೂ ದೇವತೆಗಳು, ಸಂತರು ಮತ್ತು ಮಹಾಕುಂಭಮೇಳವನ್ನು ನಿಂದಿಸಿದ ನಿರ್ದೆಶ ಸಿಂಗ್

ಮೊರಾದಾಬಾದ್ (ಉತ್ತರ ಪ್ರದೇಶ) – ಹಿಂದೂ ದೇವತೆಗಳು, ಸಂತರು ಮತ್ತು ಮಹಾಕುಂಭಮೇಳವನ್ನು ನಿಂದಿಸಿದ ನಿರ್ದೆಶ ಸಿಂಗ್ ಅಲಿಯಾಸ್ ದೀದಿಯನ್ನು ನೋಯ್ಡಾದಿಂದ ಬಂಧಿಸಲಾಯಿತು. ಪ್ರಮೋದ್ ಸೈನಿ ನೀಡಿದ ದೂರಿನ ಮೇರೆಗೆ ಸಿಂಗ್ ವಿರುದ್ಧ ಮಜೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲೆ ಅಮಿತಾ ಸಚ್‌ದೇವ ಅವರು ದೆಹಲಿ ಪೊಲೀಸರ ಸೈಬರ್ ವಿಭಾಗಕ್ಕೆ ದೂರು ನೀಡಿದ್ದರು. ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು, ಮತ್ತು ನ್ಯಾಯಾಲಯವು ಪೊಲೀಸರಿಗೆ ಪ್ರಕರಣ ದಾಖಲಿಸಲು ಆದೇಶಿಸಿತು. (ಹಿಂದುದ್ರೋಹಿ ಮತ್ತು ಹಿಂದೂ ದ್ವೇಷಿಗಳ ವಿರುದ್ಧ ಪ್ರಕರಣ ದಾಖಲಿಸಲು ಹಿಂದುತ್ವನಿಷ್ಠರು ನ್ಯಾಯಾಲಯದ ಬಾಗಿಲು ತಟ್ಟಬೇಕಾಗಿರುವುದು ಖೇದಕರ ಸಂಗತಿ! – ಸಂಪಾದಕರು)