ಕಳೆದ ವರ್ಷ ಕೂಡ ಇದೇ ಮುಸಲ್ಮಾನರಿಂದ ಇಸ್ಕಾನ್ ದೇವಸ್ಥಾನವನ್ನು ಧ್ವಂಸ ಮಾಡಿದ್ದರು
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಫರೀದಪುರದಲ್ಲಿ ಓರ್ವ ಮುಸಲ್ಮಾನ ಯುವಕನು ಕಾಲಿ ದೇವಸ್ಥಾನಕ್ಕೆ ನುಗ್ಗಿ ಶ್ರೀಸರಸ್ವತಿ ದೇವಿಯ ಮೂರ್ತಿಯನ್ನು ಭಗ್ನಗೊಳಿಸಿದನು. ಆರೋಪಿಯ ಹೆಸರು ಮಹಮ್ಮದ್ ಮಿರಾಜುದ್ದೀನ್ ಎಂದಾಗಿದೆ. ಭಕ್ತರು ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ದೇವಸ್ಥಾನ ಸಮಿತಿಯ ಸದಸ್ಯರ ಪ್ರಕಾರ, ಕಾಲಿ ದೇವಸ್ಥಾನ ಸುತ್ತಲು ೪ ಅಡಿ ಎತ್ತರದ ಗೋಡೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಮಿರಾಜುದ್ದೀನನು ಸುಲಭವಾಗಿದೆ ದೇವಸ್ಥಾನದಲ್ಲಿ ಪ್ರವೇಶಿಸಿದ್ದಾನೆ. ಫೆಬ್ರುವರಿ ೩ ರಂದು ದೇವಸ್ಥಾನದಲ್ಲಿ ಶ್ರೀಸರಸ್ವತಿ ದೇವಿಯ ಪೂಜೆಗೆ ಸಿದ್ಧತೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ.
ಮನೋರೋಗಿ ಎಂದು ಹೇಳಿ ಬಿಡುಗಡೆ !
ಕಳೆದ ವರ್ಷ ಫೆಬ್ರುವರಿಯಲ್ಲಿ ಫರೀದಪುರ ಇಸ್ಕಾನ್ ದೇವಸ್ಥಾನದಲ್ಲಿನ ಶ್ರೀಸರಸ್ವತಿ ದೇವಿಯ ಮೂರ್ತಿಯನ್ನು ಭಗ್ನಗೊಳಿಸುವಲ್ಲಿ ಇದೇ ಮಿರಾಜುದ್ದೀನ್ ಸಹಭಾಗಿ ಆಗಿದ್ದನು. ಆ ಸಮಯದಲ್ಲಿ ಅವನನ್ನು ಮನೋ ರೋಗಿ ಎಂದು ಹೇಳಿ ಅವನನ್ನು ಬಿಡುಗಡೆಗೊಳಿಸಲಾಗಿತ್ತು. (ಮುಸಲ್ಮಾನರು ಮನೋರೋಗಿ ಇದ್ದರು ಮತ್ತು ಇಲ್ಲದಿದ್ದರೂ ಕೂಡ ಹಿಂದುಗಳನ್ನು, ಅವರ ದೇವಸ್ಥಾನಗಳನ್ನು ಗುರಿ ಮಾಡುತ್ತಾರೆ. ಇದರಿಂದ ಅವರ ಮಾನಸಿಕ ಸ್ಥಿತಿ ಹಿಂದುಗಳ ಸಂದರ್ಭದಲ್ಲಿ ಎಷ್ಟು ದ್ವೇಷಪೂರಿತವಾಗಿದೆ ಇದು ಗಮನಕ್ಕೆ ಬರುತ್ತದೆ ! ಇಂಥವರ ಜೊತೆಗೆ ಜಾತ್ಯತೀತತೆ, ಸಹೋದರತ್ವ ಎಂದಾದರೂ ಹೊಂದಲು ಸಾಧ್ಯವೇ ? – ಸಂಪಾದಕರು)
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂ ಮತ್ತು ಅವರ ದೇವಸ್ಥಾನಗಳು ಅಸುರಕ್ಷಿತವಾಗಿವೆ ಮತ್ತು ಅದಕ್ಕೆ ಯಾರು ರಕ್ಷಕರೇ ಉಳಿದಿಲ್ಲ, ಇದೇ ಮತ್ತೆ ಮತ್ತೆ ಕಂಡು ಬರುತ್ತಿದೆ. ಇದು ಜಗತ್ತಿನಾದ್ಯಂತ ಇರುವ ಹಿಂದುಗಳಿಗೆ ಲಜ್ಜಾಸ್ಪದವಾಗಿದೆ ! |