ತೇಜೋಮಹಾಲಯ !

ಯಾವುದೇ ವಿಷಯವು ಪೂರ್ಣಗೊಳ್ಳದಿದ್ದರೆ, ಅದು ಪುನಃ ಪುನಃ ಎದುರಿಗೆ ಬರುತ್ತಿರುತ್ತದೆ. ಇದರ ಕಾಲಾವಧಿ ಹೆಚ್ಚು ಕಡಿಮೆಯಿರಬಹುದು; ಆದರೆ ಅದು ಪುನಃ ಬರುವುದು ಖಚಿತವೆಂದು ಹೇಳಬಹುದು. ಮನುಷ್ಯನು ಪೂರ್ಣತ್ವಕ್ಕೆ ಹೋಗದಿದ್ದರೆ, ಅವನು ಪುನಃ ಪುನಃ ಜನ್ಮ ಪಡೆಯಬೇಕಾಗುತ್ತದೆ, ಇದೊಂದು ಮಹತ್ವದ ಉದಾಹರಣೆಯಾಗಿದೆ. ಭಾರತದ ಮೇಲೆ ಇಸ್ಲಾಮೀ ಆಕ್ರಮಣವಾದ ನಂತರ ಇಲ್ಲಿನ ಹಿಂದೂಗಳ ಅನೇಕ ದೇವಸ್ಥಾನಗಳು ಮತ್ತು ವಾಸ್ತುಗಳನ್ನು ಇಸ್ಲಾಮೀಕರಣಗೊಳಿಸಲಾಯಿತು. ಅವುಗಳಿಗೆ ಅವುಗಳ ಮೂಲ ಸ್ವರೂಪವನ್ನು ಪುನಃ ಪ್ರಾಪ್ತಿ ಮಾಡಿಕೊಡಲು ಕಳೆದ ಅನೇಕ ಶತಮಾನಗಳಿಂದ ಪ್ರಯತ್ನ ಮಾಡಲಾಗುತ್ತಿದೆ. ನಡುವೆ ಅದು ನಿಂತಿದೆಯೆಂದು ಅನಿಸಿದಾಗ ಪುನಃ ಹೊಸದಾಗಿ ಪ್ರಯತ್ನ ಆರಂಭವಾಗಿರುವುದು ಕಂಡುಬಂತು. ಆದ್ದರಿಂದ ಈ ವಿಷಯವು ಶಾಶ್ವತವಾಗಿ ಉಳಿದಿದೆ. ಎಷ್ಟರವರೆಗೆ ಆ ವಾಸ್ತುಗಳಿಗೆ ಮೂಲ ಸ್ವರೂಪ ಸಿಗುವುದಿಲ್ಲವೋ, ಅಷ್ಟರವರೆಗೆ ಅದು ಶಾಶ್ವತವಾಗಿ ಉಳಿಯುವುದಿಲ್ಲ, ಎಂಬುದು ಖಚಿತವಾಗಿದೆ. ಇಂತಹ ಒಂದು ಪ್ರಕರಣವು ಈಗ ಪುನಃ ಬೆಳಕಿಗೆ ಬಂದಿದೆ.

ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತೀ ಇವರು ಆಗ್ರಾದಲ್ಲಿನ ‘ತಾಜಮಹಲ ತೇಜೋಮಹಾಲಯ ಆಗಿತ್ತು ಎಂದು ಹೇಳಿದ್ದಾರೆ. ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಈ ಇತಿಹಾಸವನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಕೆಲವು ದಿನಗಳ ಹಿಂದೆಯೆ ಯೋಗಿ ಆದಿತ್ಯನಾಥರು ಆಗ್ರಾದಲ್ಲಿಯೆ ಮೊಗಲರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಸಂಗ್ರಹಾಲಯದ ಹೆಸರನ್ನು ಬದಲಾಯಿಸಿ ‘ಛತ್ರಪತಿ ಶಿವಾಜಿಯ ಹೆಸರನ್ನಿಡಲಾಗಿದೆ, ಎಂದು ಘೋಷಣೆ ಮಾಡಿದ್ದರು. ಈಗ ಯೋಗಿ ಆದಿತ್ಯನಾಥರೇ ತಾಜಮಹಲನ ಸತ್ಯ ಇತಿಹಾಸವನ್ನು ಜಗತ್ತಿಗೆ ಹೇಳಬೇಕೆಂಬುದು ಶಂಕರಾಚಾರ್ಯರ ಇಚ್ಛೆಯಾಗಿದೆ. ಈ ಹಿಂದೆ ಅನೇಕ ಜನರಿಂದ ಅನೇಕ ಬಾರಿ ಇಂತಹ ಬೇಡಿಕೆಗಳನ್ನು ಆಗ್ರಹಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಖಟ್ಲೆ ಕೂಡ ದಾಖಲಿಸಲಾಗಿತ್ತು; ಆದರೆ ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ಶಪಥಪತ್ರವನ್ನು ಸಲ್ಲಿಸಿ ‘ತಾಜಮಹಲ ಇದು ‘ತೇಜೋಮಹಾಲಯ ಅಥವಾ ಹಿಂದಿನ ಶಿವಮಂದಿರ ಆಗಿರಲಿಲ್ಲ, ಎಂದು ಹೇಳಿತ್ತು. ಆದ್ದರಿಂದ ನ್ಯಾಯಾಲಯ ಈ ಖಟ್ಲೆಯನ್ನು ರದ್ದುಪಡಿಸಿತ್ತು; ಆದರೆ ಈಗ ಶಂಕರಾಚಾರ್ಯರ ಇಚ್ಛೆ ವ್ಯಕ್ತವಾಗಿರುವುದರಿಂದ ಪುನಃ ಇದು ಚರ್ಚೆಯ ವಿಷಯವಾಗಿದೆ.

ಆಜ್ಞಾಪಾಲನೆಯಾಗಬೇಕು !

ಯೋಗಿ ಆದಿತ್ಯನಾಥರು ಮುಖ್ಯಮಂತ್ರಿ ಮಾತ್ರವಲ್ಲ ಓರ್ವ ಮಹಂತರೂ ಆಗಿದ್ದಾರೆ. ಅಂದರೆ ಅವರು ಅಧ್ಯಾತ್ಮದಲ್ಲಿನ ಓರ್ವ ಅಧಿಕಾರಿ ಪುರುಷರಾಗಿದ್ದಾರೆ. ಆದ್ದರಿಂದ ಹಿಂದೂ ಧರ್ಮದ ಪ್ರಸ್ತುತ ಕಾಲದ ಸರ್ವೋಚ್ಚ ಸ್ಥಾನದಲ್ಲಿರುವ ಅಧಿಕಾರಿರಾಗಿರುವ ಪುರಿ ಶಂಕರಾಚಾರ್ಯರು ಅವರಿಗೆ ‘ತಾಜಮಹಾಲ್ನ್ನು ಪುನಃ ‘ತೇಜೋಮಹಾಲಯ ಮಾಡಲು ಆಗ್ರಹಿಸಿದ್ದಾರೆ; ಅಂದರೆ ಯೋಗಿ ಆದಿತ್ಯನಾಥರಿಗೆ ಅದು ಆಜ್ಞೆಯೆ ಎಂದು ಹೇಳಬೇಕಾಗುವುದು. ಸಾಧು-ಸಂತರ ಆದೇಶವು ಅವರ ಶಿಷ್ಯರಿಗೆ, ಸಾಧಕರಿಗೆ ಮತ್ತು ಭಕ್ತರಿಗೆ ಆಜ್ಞೆಯೆ ಆಗಿರುತ್ತದೆ. ಅದರ ಪಾಲನೆ ಮಾಡಿದರೆ ಅವರಿಗೆ ಈಶ್ವರನ, ಗುರುಗಳ ಕೃಪೆಯಾಗುತ್ತದೆ ಹಾಗೂ ಅದರಿಂದ ಅವರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಯೋಗಿ ಆದಿತ್ಯನಾಥರು ನಾಥಪಂಥೀಯ ಮಹಂತ ಆಗಿದ್ದಾರೆ. ನಾಥಪಂಥೀಯರು ಶಂಕರನ ಆರಾಧನೆ ಮಾಡುತ್ತಾರೆ. ಆದ್ದರಿಂದ ಅವರು ಶಂಕರಾಚಾರ್ಯರ ಈ ಆಜ್ಞೆಯನ್ನು ಶಿರಸಾ ವಂದಿಸುತ್ತಾ ಸ್ವೀಕರಿಸಿ ತಕ್ಷಣ ಪೂರ್ಣಗೊಳಿಸಲು ಹೆಜ್ಜೆಯಿಡುವ ಅವಶ್ಯಕತೆಯಿದೆ, ಎಂದು ಧರ್ಮಾಭಿಮಾನಿ ಹಿಂದೂಗಳಿಗೆ ಹಾಗೂ ಇತರ ಸಾಧು-ಸಂತರಿಗೂ ಅನಿಸುತ್ತದೆ, ಆದಿ ಶಂಕರಾಚಾರ್ಯರು ದೇಶದಲ್ಲಿ ವೈದಿಕ ಸನಾತನ ಧರ್ಮದ ಪುನರ್ಸ್ಥಾಪನೆ ಮತ್ತು ಅವುಗಳ ರಕ್ಷಣೆಗಾಗಿ ಮೂಲತಃ ೪ ಪೀಠಗಳನ್ನು ರಚಿಸಿದ್ದಾರೆ. ಆ ಹೊಣೆಯನ್ನು ಶಂಕರಾಚಾರ್ಯರು ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೆ ಅವರು ಶ್ರೀರಾಮಜನ್ಮಭೂಮಿ, ಕಾಶಿ ಮತ್ತು ಮಥುರಾದಲ್ಲಿನ ಹಿಂದೂಗಳ ಮಂದಿರಗಳನ್ನು ಇಸ್ಲಾಂನ ಹಿಡಿತದಿಂದ ಮುಕ್ತಗೊಳಿಸಬೇಕೆಂಬ ತಮ್ಮ ವಿಚಾರವನ್ನು ಮುಂದಿಟ್ಟಿದ್ದಾರೆ; ಆದರೆ ಹಿಂದೂದ್ವೇಷಿ ಆಡಳಿತದವರಿಂದಾಗಿ ಅದು ಸಾಧ್ಯವಾಗಲಿಲ್ಲ; ಆದರೆ ಈಗ ಹಿಂದುತ್ವನಿಷ್ಠ ಪಕ್ಷದ ಮತ್ತು ಅದರಲ್ಲಿಯೂ ಮಹಂತರಾಗಿರುವ ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗೆ ಇಂತಹ ಆದೇಶ ಬಂದಿದೆ. ಆದ್ದರಿಂದ ಅವರು ಅದನ್ನು ಪೂರ್ಣ ಗೊಳಿಸುವುದು ಅತ್ಯಗತ್ಯವಾಗಿದೆ. ಯೋಗಿ ಆದಿತ್ಯನಾಥರು ಇಷ್ಟರವರೆಗೆ ರಾಜ್ಯದಲ್ಲಿನ ಅನೇಕ ನಗರಗಳನ್ನು ಮೊಗಲರ ಕಾಲದ ಹೆಸರನ್ನು ಬದಲಾಯಿಸಿ ಅವುಗಳಿಗೆ ಮೂಲ ಹೆಸರನ್ನು ನೀಡಿದ್ದಾರೆ. ಅಲಹಾಬಾದ್ ಮತ್ತು ಫೈಜಾಬಾದ್ ಇವು ಅವುಗಳಲ್ಲಿನ ಪ್ರಮುಖ ಹಾಗೂ ದೊಡ್ಡ ಉದಾಹರಣೆಗಳಾಗಿವೆ. ಆದ್ದರಿಂದ ಶಂಕರಾಚಾರ್ಯರ ಆಜ್ಞೆಯನ್ನು ಪಾಲಿಸುವುದು ಯೋಗಿ ಆದಿತ್ಯನಾಥರಿಗೆ ಕಠಿಣ ವಾಗಲಿಕ್ಕಿಲ್ಲ, ಎಂದು ಹಿಂದೂಗಳಿಗೆ ಅನಿಸುತ್ತದೆ.

ಕೊನೆಗೆ ಹಿಂದೂ ರಾಷ್ಟ್ರವಂತೂ ಇದ್ದೇ ಇದೆ !

‘ತಾಜಮಹಲ ಇದು ‘ತೇಜೋಮಹಾಲಯ ಆಗಿತ್ತು ಎಂದು ಮೊತ್ತಮೊದಲು ಇತಿಹಾಸತಜ್ಞ ಪು. ನಾ. ಓಕ್ ಇವರು ಪುಸ್ತಕವನ್ನು ಬರೆದು ಜಗತ್ತಿನ ಮುಂದಿಟ್ಟಿದ್ದಾರೆ. ಅವರು ತಾಜಮಹಲ್‌ಗೆ ಅನೇಕ ಬಾರಿ ಭೇಟಿಕೊಟ್ಟು ಅದನ್ನು ನಿರೀಕ್ಷಣೆ ಮಾಡಿ ಅದರ ಬಗ್ಗೆ ಸಂಶೋಧನೆ ಮಾಡಿ ಈ ಸತ್ಯವನ್ನು ಹೊರಗೆ ತಂದಿದ್ದಾರೆ. ಅನಂತರ ಹಿಂದುತ್ವನಿಷ್ಠರು ಪದೇ ಪದೇ ಈ ವಿಷಯದಲ್ಲಿ ಧ್ವನಿಯೆತ್ತಲು ಆರಂಭಿಸಿದರು; ಆದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದ ಕಾರಣ ಮತಾಂಧರ ವಶದಲ್ಲಿರುವ ಯಾವುದೇ ದೇವಸ್ಥಾನ ಅಥವಾ ಇತರ ವಾಸ್ತುಗಳ ವಿಷಯದಲ್ಲಿ ದುರ್ಲಕ್ಷ ಮಾಡಲಾಯಿತು. ಈಗ ಕೇಂದ್ರದಲ್ಲಿ ಭಾಜಪದ ಸರಕಾರವಿರುವುದರಿಂದ ಹಿಂದೂಗಳಿಗೆ ಈ ವಿಷಯದಲ್ಲಿ ಆಶಾಕಿರಣ ಕಾಣಿಸುತ್ತಿದೆ; ಆದರೆ ಕೇಂದ್ರ ಸರಕಾರದಿಂದ ಈ ವಿಷಯದಲ್ಲಿ ಯಾವುದೇ ಪ್ರಯತ್ನ ನಡೆಯುತ್ತಿರುವುದು ಕಾಣಿಸುವುದಿಲ್ಲ. ಕೆಲವರಿಗೆ ‘ಸ್ವಲ್ಪ ಸಮಯದ ನಂತರ ಸರಕಾರ ಇದನ್ನು ಮಾಡಿಯೇ ಮಾಡುವುದು, ಈಗ ಅವಸರ ಪಡುವ ಅವಶ್ಯಕತೆಯಿಲ್ಲ. ಎಂದು ಅನಿಸುತ್ತದೆ. ಒಂದು ರೀತಿಯಲ್ಲಿ ಅದು ಸರಿಯೆನಿಸಿದರೂ ಆ ನಿಟ್ಟಿನಲ್ಲಿ ಚಲನವಲನ ಮಾಡುವ ಅವಶ್ಯಕತೆಯಿದೆ, ಎಂದು ಅನಿಸುತ್ತದೆ. ಅದರ ತುಲನೆಯಲ್ಲಿ ಯೋಗಿ ಆದಿತ್ಯನಾಥರ ಕಾರ್ಯಶೈಲಿಯನ್ನು ನೋಡುವಾಗ, ‘ಅವರಿಗೆ ಸಾಧ್ಯವಾಗಿರುವಂತಹ ಕೇಂದ್ರ ಸರಕಾರಕ್ಕೆ ಏಕೆ ಸಾಧ್ಯವಿಲ್ಲ ?, ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತದೆ. ಈಗ ತಾಜಮಹಲನ ಸಮಸ್ಯೆ ಕೇಂದ್ರ ಸರಕಾರದ ಅಧೀನದಲ್ಲಿದೆ ಏಕೆಂದರೆ ಪುರಾತತ್ವ ಇಲಾಖೆಯು ಕೇಂದ್ರ ಸರಕಾರದ ಹತೋಟಿಯಲ್ಲಿದೆ. ಸರಕಾರದ ನಿರ್ದೇಶನಕ್ಕನುಸಾರ ಈ ವಿಭಾಗವು ಯಾವುದೇ ವಾಸ್ತುವಿನ ವಿಷಯದಲ್ಲಿ ಸಂಶೋಧನೆ ಮಾಡುತ್ತದೆ ಹಾಗೂ ಸತ್ಯವನ್ನು ಬೆಳಕಿಗೆ ತರುತ್ತದೆ. ತಾಜಮಹಾಲ್‌ನ ವಿಷಯದಲ್ಲಿ ಪುರಾತತ್ವ ಇಲಾಖೆಯು ಪು. ನಾ. ಓಕ್ ಇವರು ಮಂಡಿಸಿರುವ ನಿರೀಕ್ಷಣೆಗನುಸಾರ ಯಾವುದೇ ಸಂಶೋಧನೆಯನ್ನು ಮಾಡಿಲ್ಲ. ತದ್ವಿರುದ್ಧ ಅದನ್ನು ತಳ್ಳಿ ಹಾಕಿರುವಂತೆ ತೋರಿಸಲಾಗಿದೆ. ಆದ್ದರಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿಯೂ ಹಿಂದೂಗಳಿಗೆ ನಿರಾಶೆಯೆ ಎದುರಾಯಿತು. ಈಗ ಯೋಗಿ ಆದಿತ್ಯನಾಥರಿಗೆ ಶಂಕರಾಚಾರ್ಯರು ಕರೆ ನೀಡಿರುವುದರಿಂದ ಅವರು ಮುಂದಾಳತ್ವ ವಹಿಸಿ ಇದಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಶಂಕರಾಚಾರ್ಯರ ಆಜ್ಞೆಯನ್ನು ಪಾಲಿಸಿ ಹಿಂದೂಗಳ ವಾಸ್ತು ಶಾಸ್ತ್ರ ಮತ್ತು ಇತಿಹಾಸದ ಹೆಸರನ್ನು ಜಗತ್ತಿಗೆ ತೋರಿಸಬೇಕೆಂದು ಅನಿಸುತ್ತದೆ. ಅವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅವರು ಹೀಗೆ ಮಾಡಿ ಶಂಕರಾಚಾರ್ಯರ ಕೃಪೆಗೆ ಪಾತ್ರರಾಗಬೇಕು. ಭವಿಷ್ಯದಲ್ಲಿ ಭಾರತ ಹಿಂದೂ ರಾಷ್ಟ್ರವಾದಾಗ ಕೇವಲ ತಾಜಮಹಲ ಅಲ್ಲ, ಇಸ್ಲಾಮೀ ಆಕ್ರಮಣವಾಗಿರುವ ಹಿಂದೂಗಳ ಸಾವಿರಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ವಾಸ್ತುಗಳನ್ನು ಮುಕ್ತಗೊಳಿಸಲಾಗುವುದು, ಎಂಬುದನ್ನು ಹಿಂದೂಗಳು ಗಮನದಲ್ಲಿಡಬೇಕು.