ಶಾಂತಿಸೇನೆಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಬೇಕು ! – ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೇಡಿಕೆ

ಕೋಲಕಾತಾ (ಬಂಗಾಳ) – ಕೇಂದ್ರ ಸರಕಾರವು ಬಾಂಗ್ಲಾದೇಶದ ಮಧ್ಯಂತರ ಸರಕಾರದೊಂದಿಗೆ ಮಾತನಾಡಬೇಕು ಮತ್ತು ಅಗತ್ಯ ಬಿದ್ದರೇ ಬಾಂಗ್ಲಾದೇಶದಲ್ಲಿ ಸಹಜ ಸ್ಥಿತಿಗೆ ಮರಳಲು ವಿಶ್ವಸಂಸ್ಥೆಯ ಶಾಂತಿಸೇನಾ ಪಡೆಯನ್ನು ಕಳುಹಿಸಬೇಕು. ಅಲ್ಲಿ ಶೋಷಣೆಗೆ ಒಳಗಾಗುತ್ತಿರುವ ಹಿಂದೂಗಳನ್ನು ಭಾರತಕ್ಕೆ ಕರೆತಂದು ಅವರಿಗೆ ತುರ್ತಾಗಿ ಪುನರ್ವಸತಿ ಕಲ್ಪಿಸುವುದು ಆವಶ್ಯಕವಿದೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಬಾಂಗ್ಲಾದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ಭಾರತದ ನಿಲುವನ್ನು ಮಂಡಿಸಬೇಕು ಎಂದು ಬ್ಯಾನರ್ಜಿ ಒತ್ತಾಯಿಸಿದರು.

ಉಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾತು ಮುಂದುವರೆಸಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತನಾಡುವುದು ನನ್ನ ಅಧಿಕಾರದ ಹೊರಗಿದೆ; ಆದರೆ ಬಾಂಗ್ಲಾದೇಶದ ಬೆಳವಣಿಗೆಗಳನ್ನು ನೋಡಿದ ನಂತರ ಮತ್ತು ಬಂಗಾಳದಲ್ಲಿ ವಾಸಿಸುವ ನಾಗರಿಕರು ಬಾಂಗ್ಲಾದೇಶದ ತಮ್ಮ ಸಂಬಂಧಿಕರ ಅನುಭವಗಳನ್ನು ಹೇಳಿದ ನಂತರ ಮತ್ತು ಇಲ್ಲಿನ ‘ಇಸ್ಕಾನ್’ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಂತರ, ನಾನು ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಲು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಕಳೆದ 10 ದಿನಗಳಿಂದ ಕೇಂದ್ರ ಸರಕಾರ ಈ ಬಗ್ಗೆ ಏನೂ ಹೇಳುತ್ತಿಲ್ಲ ಎಂದು ಟೀಕಿಸಿದರು. ‘ಇದು ರಾಜಕೀಯ ಸೂತ್ರವಲ್ಲ ಬದಲಾಗಿ ಬಂಗಾಳಿ ಹಿಂದೂಗಳಿಗೆ ಅಸ್ತಿತ್ವವಾದದ ಸೂತ್ರವಾಗಿದೆ’, ಎಂದು ಮುಖ್ಯಮಂತ್ರಿ ಬ್ಯಾನರ್ಜಿ ಹೇಳಿದ್ದಾರೆ. (ಬಂಗಾಳಿ ಹಿಂದೂಗಳ ಬದುಕುಳಿಯುವ ಸೂತ್ರವು ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಮಮತಾ ಬ್ಯಾನರ್ಜಿಯವರ ಬಂಗಾಳದಲ್ಲೂ ಇದೆ. ಮಮತಾ ಬ್ಯಾನರ್ಜಿ ಬಂಗಾಳದ ಹಿಂದೂಗಳಿಗಾಗಿ ಏನು ಮಾಡುತ್ತಿದ್ದಾರೆ ಮತ್ತು ಬಾಂಗ್ಲಾದೇಶಿ ನುಸುಳುಕೋರರು, ಜಿಹಾದಿ ಮುಸ್ಲಿಮರು, ದೇಶದ ಹಿಂದೂಗಳು ನೋಡುತ್ತಿದ್ದಾರೆ ! – ಸಂಪಾದಕರು)

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಬಂಗಾಳದಲ್ಲಿಯೂ ಹಿಂದೂಗಳ ರಕ್ಷಣೆಗಾಗಿ ಶಾಂತಿಸೇನಾ ಪಡೆಯನ್ನು ಕಳುಹಿಸಿ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ನುಸುಳುಕೋರರನ್ನು ಓಡಿಸುವುದು ಹಾಗೂ ಜಿಹಾದಿ ಭಯೋತ್ಪಾದಕರ ಕಾಟವನ್ನು ಹತ್ತಿಕ್ಕುವುದು ಅಗತ್ಯವಾಗಿದೆ !