|
ಕೋಲಕಾತಾ – ಬಂಗಾಳದಲ್ಲಿ ದುರ್ಗಾ ಪೂಜೆಯ ಉತ್ಸವದಲ್ಲಿ ಹಾವಡಾ ಜಿಲ್ಲೆಯ ಶ್ಯಾಮಪುರ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಕೆಲವು ಮತಾಂಧ ಮುಸ್ಲಿಮರು ದುರ್ಗಾ ಪೂಜೆ ಮಂಟಪಕ್ಕೆ ಬೆಂಕಿ ಇಟ್ಟರು ಹಾಗೆಯೇ ಮೂರ್ತಿಗಳನ್ನು ಧ್ವಂಸಗೊಳಿಸಿದರು. ಕೆಲವರು ವಿಸರ್ಜನೆ ದಡದ ಮೇಲೆಯೂ ಕಲ್ಲು ತೂರಾಟ ನಡೆಸಿದರು. ಇದರಿಂದ ದುರ್ಗಾ ಪೂಜೆಯ ಉತ್ಸವದ ಸಮಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
Today a group of miscreants while returning from the Shyampur Police Station where they went to submit a deputation, went berserk and started vandalising the Durga Puja Pandals.
They set on fire the idols at the Shyampur Bazar Byabsayi Samiti Puja Pandal and vandalised other… pic.twitter.com/FETp5rsSJd— Suvendu Adhikari (@SuvenduWB) October 13, 2024
ಈ ಪ್ರಕರಣದಲ್ಲಿ, ಹಾವಡಾ (ಗ್ರಾಮೀಣ) ಪೊಲೀಸ್ ಅಧೀಕ್ಷಕ ಸ್ವಾತಿ ಭಂಗಾಲಿಯಾ ಅವರು ಅಪರಾಧವನ್ನು ದಾಖಲಿಸಿ, ಆರೋಪಿಗಳನ್ನು ಬಂಧಿಸಿದರು. ಅವರು ಮಾತನಾಡಿ, ನಮಗೆ ಕೆಲವು ಪೂಜಾ ಮಂಟಪಗಳಲ್ಲಿ ವಿಧ್ವಂಸ ನಡೆದಿರುವ ಬಗ್ಗೆ ಜನರಿಂದ ದೂರುಗಳು ಸಿಕ್ಕಿತು ಮತ್ತು ನಾವು ತಕ್ಷಣವೇ ಪೊಲೀಸರನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದೇವೆ. ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಹಿಂಸಾಚಾರವನ್ನು ಖಂಡಿಸಿದ ಭಾಜಪ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ! ಬಂಗಾಳದ ಭಾಜಪ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು ಹಿಂಸಾಚಾರವನ್ನು ಖಂಡಿಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಮೂರ್ತಿ ವಿಸರ್ಜನೆಯ ಸಮಯದಲ್ಲಿ ನಡೆದ ಕಲ್ಲು ತೂರಾಟ ಮತ್ತು ಮೂರ್ತಿಯ ಧ್ವಂಸ ಪ್ರಕರಣದಲ್ಲಿ ಬಂಗಾಳದ ಗೃಹ ಸಚಿವರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸುವೆಂದು ಅಧಿಕಾರಿ ಒತ್ತಾಯಿಸಿದರು.
ಭಾಜಪದ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಅಮಿತ್ ಮಾಳವೀಯ ಇವರು ಮಮತಾ ಬ್ಯಾನರ್ಜಿಯವರ ನಾಯಕತ್ವದ ಬಂಗಾಳ ಸರಕಾರವನ್ನು ಟೀಕಿಸುವಾಗ ‘ಮತಾಂಧರು ದುರ್ಗಾ ಪೂಜಾ ಮಂಟಪ ಮತ್ತು ಶ್ರೀ ದುರ್ಗಾದೇವಿ ಮೂರ್ತಿಯನ್ನು ಗುರಿಯಾಗಿಸಿ, ಗದ್ದಲವೆಬ್ಬಿಸಿದರು. ಈ ಕೃತ್ಯವು ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಅವಮಾನಿಸುವಂತಹದ್ದಾಗಿದೆ” ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|