‘ಸಿಂಧೂ ಜಲ ಒಪ್ಪಂದಕ್ಕಾಗಿ ಪಾಕಿಸ್ತಾನ ಪ್ರತಿಯೊಂದು ಹಂತದಲ್ಲೂ ಪ್ರಯತ್ನಿಸಲಿದೆ!’

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹೇಳಿಕೆ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್

ರಾವಲಪಿಂಡಿ (ಪಾಕಿಸ್ತಾನ) – ಸಿಂಧೂ ಜಲ ಹಂಚಿಕೆ ಒಪ್ಪಂದದ ವಿಷಯದಲ್ಲಿ ಪಾಕಿಸ್ತಾನವು ಪ್ರತಿಯೊಂದು ಹಂತದಲ್ಲೂ ಪ್ರಯತ್ನಿಸಲಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಇಲ್ಲಿನ ಸೇನಾ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸಿನಿಯರ್ ಮಿಲಿಟರಿ ಅಧಿಕಾರಿಗಳ ಸಮ್ಮೇಳನದಲ್ಲಿ ಹೇಳಿದ್ದಾರೆ. ಭಾರತದ ಭದ್ರತಾ ಸಂಸ್ಥೆಗಳು ಈ ಹೇಳಿಕೆಯನ್ನು ಜಮ್ಮು-ಕಾಶ್ಮೀರ ಗಡಿಯಲ್ಲಿ ಅಕ್ರಮ ವಲಸೆಯನ್ನು ಹೆಚ್ಚಿಸುವ ಒಂದು ಸಂಭಾವ್ಯ ಸೂಚನೆಯಾಗಿ ನೋಡುತ್ತಿವೆ. ಪಾಕ್ ಆಕ್ರಮಿತ ಕಾಶ್ಮೀರದ (PoK) ಆಂತರಿಕ ಪರಿಸ್ಥಿತಿಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಗಡಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲು ಪಾಕಿಸ್ತಾನವು ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲು ಪ್ರಯತ್ನಿಸಬಹುದು. ಈ ಕಾರಣದಿಂದಾಗಿ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಭಾರತೀಯ ಸೇನೆ ತೀವ್ರಗೊಳಿಸಿದೆ. ಎಲ್ಲಾ ಭದ್ರತಾ ಸಂಸ್ಥೆಗಳನ್ನು ಹೈ ಅಲರ್ಟ್‌ನಲ್ಲಿಡಲಾಗಿದೆ. ಗಡಿ ಭದ್ರತಾ ಪಡೆಯು (BSF) ಅಂತರಾಷ್ಟ್ರೀಯ ಗಡಿಯಲ್ಲಿ ಸುರಂಗಗಳ ಮೂಲಕ ನಡೆಯಬಹುದಾದ ಸಂಭಾವ್ಯ ವಲಸೆಯನ್ನು ತಡೆಯಲು ವಿಶೇಷ ಸುರಂಗ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನವು ಯಾವುದೇ ದುಷ್ಕೃತ್ಯ ಮಾಡುವ ಮುನ್ನವೇ ಭಾರತ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠ ಕಲಿಸಬೇಕು!