ಪ್ರಧಾನಿ ಬಾಲೆನ್ ಶಹಾ ರಾಜೀನಾಮೆಗೆ ಆಗ್ರಹ

ಕಾಠ್ಮಂಡು (ನೇಪಾಳ) – ನೆರೆಯ ದೇಶದಲ್ಲಿ ಯುವಕರು ಮತ್ತೊಮ್ಮೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಪ್ರಾರಂಭಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಮೂವರು ಯುವಕರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಇಬ್ಬರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ವಿಫಲರಾಗಿರುವ ಪ್ರಧಾನಿ ಬಾಲೆನ್ ಶಹಾ ಅವರ ರಾಜೀನಾಮೆಗೆ ಆಗ್ರಹ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ, ವಿರೋಧ ಪಕ್ಷವಾದ ನೇಪಾಳಿ ಕಾಂಗ್ರೆಸ್, ಯುವಕರಲ್ಲಿ ಭರವಸೆ ಮತ್ತು ವಿಶ್ವಾಸ ಮೂಡಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದೆ.
೧. ಪ್ರಧಾನಿ ಬಾಲೆನ್ ಶಹಾ ಅವರು ಜನವಿರೋಧಿ ಮತ್ತು ನಿರಂಕುಶ ರೀತಿಯಲ್ಲಿ ಸರಕಾರ ನಡೆಸುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಬಜೆಟ್ ಮತ್ತು ನೀತಿಗಳಲ್ಲಿ ಯುವಕರ ಉದ್ಯೋಗ ಹಾಗೂ ಆದಾಯ ಹೆಚ್ಚಿಸಲು ಯಾವುದೇ ದೃಢವಾದ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಹೇಳಿದೆ.
೨. ನೇಪಾಳದಲ್ಲಿ ಸತತವಾಗಿ ನಡೆಯುತ್ತಿರುವ ಈ ಘಟನೆಗಳು ಯುವಕರ ಮಾನಸಿಕ ಸ್ಥಿತಿ, ನಿರುದ್ಯೋಗ ಮತ್ತು ಸರಕಾರದ ನೀತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಸರಕಾರ ಶೀಘ್ರದಲ್ಲೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಬಹುದು ಎಂದು ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
೨೦೨೫ರ ಪ್ರತಿಭಟನೆಯ ನೆನಪು
ದೇಶದ ಯುವಕರು ಮತ್ತೆ ರಸ್ತೆಗಿಳಿದಿರುವುದು ಸೆಪ್ಟೆಂಬರ್ ೨೦೨೫ ರಲ್ಲಿ ಯುವಕರು ಸರಕಾರದ ವಿರುದ್ಧ ನಡೆಸಿದ ಪ್ರತಿಭಟನೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ೯ ಸೆಪ್ಟೆಂಬರ್ ೨೦೨೫ ರಂದು ಯುವಕರು ಸಂಸತ್ ಭವನವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಗಲಾಟೆ ಮಾಡಿದ್ದರು. ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಆಯುಧಗಳನ್ನು ಕೂಡ ಲೂಟಿ ಮಾಡಿದ್ದರು. ಈ ಪ್ರತಿಭಟನೆಯಿಂದಾಗಿ ಅಂದಿನ ಸರಕಾರ ಪತನಗೊಂಡಿತ್ತು ಮತ್ತು ನಂತರ ನಡೆದ ಚುನಾವಣೆಯಲ್ಲಿ ಬಾಲೆನ್ ಶಹಾ ಅವರು ಆಯ್ಕೆಯಾಗಿದ್ದರು.
ಬಾಲೆನ್ ಶಹಾ ಅವರ ಹಳೆಯ ಹೇಳಿಕೆ ಈಗ ಚರ್ಚೆಯಲ್ಲಿ!

೨೦೨೩ ರಲ್ಲಿ ಅಂದಿನ ಸರಕಾರದ ನೀತಿಗಳನ್ನು ವಿರೋಧಿಸಿ ಪ್ರೇಮ್ ಆಚಾರ್ಯ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದನು. ಆಗ ಶಹಾ ಅವರು ಕಾಠ್ಮಂಡು ನಗರದ ಮೇಯರ್ ಆಗಿದ್ದರು. ಈ ಆತ್ಮಹತ್ಯೆಯ ಕುರಿತು ಪ್ರತಿಕ್ರಿಯಿಸಿದ್ದ ಅವರು, ‘ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದು ಸರಕಾರದ ವೈಫಲ್ಯವಾಗಿದೆ’ ಎಂದು ಹೇಳಿದ್ದರು. ಆದರೆ, ಈಗ ಪ್ರಧಾನಿಯಾಗಿರುವ ಶಹಾ ಅವರು ಯುವಕರ ಆತ್ಮಹತ್ಯೆಯ ಬಗ್ಗೆ ಮೌನ ವಹಿಸಿದ್ದಾರೆ. ಹೀಗಾಗಿ ಪ್ರತಿಭಟನಾಕಾರರು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’