ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ: ‘ಜಮ್ಮು-ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಸಮಿತಿ’ಯ ಆಗ್ರಹ

ಇಸ್ಲಾಮಾಬಾದ್ – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸರಕಾರಿ ವಿರೋಧಿ ಆಂದೋಲನಗಳನ್ನು ಹತ್ತಿಕ್ಕಲು ಸರಕಾರ ಅಮಾನವೀಯ ಮಾರ್ಗಗಳನ್ನು ಅನುಸರಿಸುತ್ತಿದೆ. ಇದೇ ವೇಳೆ ‘ಜಮ್ಮು-ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಸಮಿತಿ’ಯ ಪ್ರಮುಖ ಸದಸ್ಯರಾದ ಸರ್ದಾರ್ ಅಮನ್ ಖಾನ್ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿ, ಜನರಿಗೆ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಈ ಆಂದೋಲನಕ್ಕೆ ಭಾರತೀಯ ನಾಗರಿಕರು, ವಿಶೇಷವಾಗಿ ಕಾಶ್ಮೀರಿ ನಾಗರಿಕರು ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಸರ್ದಾರ್ ಅಮನ್ ಖಾನ್ ಮಾತನಾಡಿ,
೧. ನಮ್ಮ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿದ್ದಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ದಬ್ಬಾಳಿಕೆ, ಅನ್ಯಾಯ, ನರಮೇಧ ಮತ್ತು ಸೇನೆಯ ದಾಳಿಯನ್ನು ಎದುರಿಸಬೇಕಾಗುತ್ತಿದೆ.
೨. ಈ ಕಠಿಣ ಸಮಯದಲ್ಲಿ ನಮ್ಮ ಆಹಾರ ಮತ್ತು ಔಷಧಿಗಳ ಪೂರೈಕೆಯನ್ನು ತಡೆಹಿಡಿಯಲಾಗಿದೆ.
೩. ಗಡಿಯಾಚೆಗಿರುವ ಎಲ್ಲಾ ಜನರು ಮತ್ತು ವಿಶೇಷವಾಗಿ ಶ್ರೀನಗರ, ಪೂಂಚ್, ಮೆಂಧರ್, ರಾಜೌರಿ, ಜಮ್ಮು, ಕಾಶ್ಮೀರ ಕಣಿವೆ, ಲಡಾಖ್ ಮತ್ತು ಕಾರ್ಗಿಲ್ ನ ಜನರಿಗೆ ನಾವು ಕರೆ ನೀಡುತ್ತಿದ್ದೇವೆ. ನಮ್ಮ ಆಂದೋಲನಕ್ಕೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ಮುಂದೆ ಬರಲೇಬೇಕು ಮತ್ತು ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು.
ಈ ಹಿಂದೆಯೂ ಧ್ವನಿ ಎತ್ತಲಾಗಿತ್ತು
ಇದಕ್ಕೂ ಮುನ್ನ ಜೂನ್ ೩೦ ರಂದು ಪಾಕಿಸ್ತಾನಿ ಅಧಿಕಾರಿಗಳ ದಬ್ಬಾಳಿಕೆಯ ಕ್ರಮವನ್ನು ಖಂಡಿಸಿ ಈ ಸಮಿತಿ ಬೃಹತ್ ಆಂದೋಲನ ನಡೆಸಿತ್ತು. ಕೇವಲ ರಾಜಕೀಯ ಚಟುವಟಿಕೆಗಳ ಮೇಲಷ್ಟೇ ಸರ್ಕಾರ ನಿರ್ಬಂಧ ಹೇರಿಲ್ಲ, ಇಡೀ ಪ್ರದೇಶದಲ್ಲಿ ಆಹಾರ ಧಾನ್ಯಗಳ ಪೂರೈಕೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿ ಜನರಿಗೆ ತಲುಪದಂತೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇದರಿಂದ ಸರಕಾರದ ಅಸಲಿ ಮುಖವಾಡ ಹೊರಬಿದ್ದಿದೆ ಎಂದು ಈ ಸಮಿತಿ ಆರೋಪಿಸಿತ್ತು.
ವಿಶ್ವಸಂಸ್ಥೆಯ ಕಚೇರಿಯ ಹೊರಗೆ ಪ್ರತಿಭಟನೆ
ಜುಲೈ ೨ ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ‘ನ್ಯಾಷನಲ್ ಆಂಟಿ-ಟೆರರಿಸಂ ಫ್ರಂಟ್ ಆಫ್ ಇಂಡಿಯಾ’ ಸಂಸ್ಥೆಯು ವಿಶ್ವಸಂಸ್ಥೆಯ ಕಚೇರಿಯ ಹೊರಗೆ ತೀವ್ರ ಪ್ರತಿಭಟನೆ ನಡೆಸಿತು. ಈ ಪ್ರದೇಶದಲ್ಲಿ ನಡೆಯುತ್ತಿರುವ ಕೊಲೆ ಮತ್ತು ಮಾನವ ಹಕ್ಕುಗಳ ವ್ಯವಸ್ಥಿತ ಉಲ್ಲಂಘನೆಯನ್ನು ತಡೆಯಲು ತಕ್ಷಣ ಜಾಗತಿಕ ಹಸ್ತಕ್ಷೇಪ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ