ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಮಾಜದಲ್ಲಿ ಸಾಮಾನ್ಯವಾಗಿ ಯಾವುದಾದರೂ ವ್ಯಕ್ತಿ ಎಲ್ಲಿಯ ವರೆಗೆ ಉಪಯುಕ್ತವಾಗಿರುತ್ತಾನೆ, ಅಲ್ಲಿಯ ವರೆಗೆ ಇತರರು ಅವನ ಬಗ್ಗೆ ಯೋಗಕ್ಷೇಮ ವಿಚಾರಿಸುತ್ತಾರೆ ಅಥವಾ ಅವನ ಬಗ್ಗೆ ಕಾಳಜಿ ವಹಿಸುತ್ತಾರೆ. ಅನಂತರ ಅವನತ್ತ ಯಾರು ನೋಡುವುದೂ ಇಲ್ಲ. ಆದರೆ ದೇವರು ಮಾತ್ರ ಯಾರು ಹೇಗೆ ಇದ್ದರೂ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುತ್ತಾನೆ. ವ್ಯಕ್ತಿಯ ಮೃತ್ಯುವಿನ ನಂತರ ಕೂಡ ದೇವರು ಅವನನ್ನು ಹತ್ತಿರ ಕರೆದುಕೊಳ್ಳುತ್ತಾನೆ; ಆದರೆ ಅವನ ಈ ಕೃಪೆ ಅಥವಾ ಅವನ ‘ದೇವತ್ವ ಅನುಭವಿಸುವುದಕ್ಕಾಗಿ ಸಾಧನೆ ಮಾಡುವುದು ಅಗತ್ಯವಾಗಿದೆ. ಇಲ್ಲದಿದ್ದರೆ ‘ದೇವರು ನನಗೆ ಹೀಗೇಕೆ ಮಾಡಿದನು ? ಅಥವಾ ‘ದೇವರು ನನಗಾಗಿ ಎಲ್ಲಿ ಏನು ಮಾಡುತ್ತಾನೆ ? ಈ ರೀತಿಯ ವಿಕಲ್ಪಾತ್ಮಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೩.೬.೨೦೨೬)