ನ್ಯಾಯಾಲಯದ ಹೋರಾಟದ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಉಭಯ ಪಕ್ಷಗಳ ಪಟ್ಟು

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಕಾಶಿ, ಮಥುರಾ ಮತ್ತು ಸಂಭಲನಲ್ಲಿನ ದೇವಸ್ಥಾನ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಮತ್ತು ಮುಸ್ಲಿಂ ಪಕ್ಷದವರು ಸರ್ವೋಚ್ಚ ನ್ಯಾಯಾಲಯದ ಸಂಧಾನ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಈ ಮೂರೂ ವಿವಾದಗಳು ವಾರಣಾಸಿಯ ಜ್ಞಾನವಾಪಿ, ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮತ್ತು ಸಂಭಲನ ಹರಿಹರ ಮಂದಿರಕ್ಕೆ ಸಂಬಂಧಿಸಿವೆ.
೧. ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ೨೧ ರಿಂದ ೨೩ ಆಗಸ್ಟ್ ೨೦೨೬ ರವರೆಗೆ ‘ಸಮಾಧಾನ ಸಮಾರೋಹ’ದ ಅಡಿಯಲ್ಲಿ ವಿಶೇಷ ಲೋಕ ನ್ಯಾಯಾಲಯವನ್ನು ಆಯೋಜಿಸಲಾಗುತ್ತಿದೆ. ಸುದೀರ್ಘ ಕಾನೂನು ಹೋರಾಟದ ಬದಲಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿದೆ.
೨. ಈ ಉಪಕ್ರಮದ ಅಡಿಯಲ್ಲಿ, ಸರ್ವೋಚ್ಚ ನ್ಯಾಯಾಲಯವು ಈ ೩ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಧಾನದ ಪ್ರಸ್ತಾಪವನ್ನು ಮುಂದಿಟ್ಟಿತ್ತು ಮತ್ತು ಎರಡೂ ಕಡೆಯಿಂದ ಒಪ್ಪಿಗೆಯನ್ನು ಕೋರಿತ್ತು; ಆದರೆ ಯಾವುದೇ ಪಕ್ಷವೂ ಇದಕ್ಕೆ ಒಪ್ಪಿಗೆ ನೀಡಿಲ್ಲ. ನ್ಯಾಯಾಲಯವು ಈ ಪತ್ರವನ್ನು ಯಾವಾಗ ಕಳುಹಿಸಿತ್ತು ಎಂಬ ಮಾಹಿತಿ ಇನ್ನು ಹೊರಬಂದಿಲ್ಲ.
೩. ತಮಗೆ ನ್ಯಾಯಾಲಯದಲ್ಲೇ ಮೊಕದ್ದಮೆ ನಡೆಸಿ ತೀರ್ಪು ಬೇಕು ಎಂದು ಎರಡೂ ಕಡೆಯವರು ತಿಳಿಸಿದ್ದಾರೆ.
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಗ್ರಾಹಕನಿಗೆ 40 ಸಾವಿರ ರೂಪಾಯಿ ಪರಿಹಾರ ನೀಡಿ! – ‘ಗ್ರಾಹಕ ವಿವಾದಗಳ ಪರಿಹಾರ ಆಯೋಗ’ದಿಂದ ಅಂಚೆ ಕಚೇರಿಗೆ ಆದೇಶ : Postal Parcel Stolen
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver