ಫ್ರಾನ್ಸ್‌ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ

ಚತುಶ್ಚಕ್ರ ವಾಹನದಿಂದ ಶಸ್ತ್ರಾಸ್ತ್ರಗಳು ವಶಕ್ಕೆ

ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್‌ನಲ್ಲಿ ಯಹೂದಿ ಸಮುದಾಯದ ಮೇಲೆ ನಡೆಯಲಿದ್ದ ಸಂಭಾವ್ಯ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ಯಾರಿಸ್‌ನ ಉತ್ತರದ ಸಾರ್ಸೆಲ್ಸ್ ಪ್ರದೇಶದಲ್ಲಿ ಪೊಲೀಸರಿಗೆ ಕಾರೊಂದು ಪತ್ತೆಯಾಗಿದೆ. ಇದರಲ್ಲಿ ಒಂದು ರೈಫಲ್ ಮತ್ತು ಒಂದು ಬಂದೂಕು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಯಹೂದಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಕಾರು ಪತ್ತೆಯಾದ ಸ್ಥಳದ ಬಳಿ ಒಂದು ಚಿತ್ರಮಂದಿರ ಮತ್ತು ಹಲವು ಉಪಾಹಾರ ಗೃಹಗಳಿವೆ. ಇದರಿಂದಾಗಿ ತಕ್ಷಣವೇ 300 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.