ಅಮೆರಿಕವು ‘ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್’ನಿಂದ ‘ಇಂಡೋ’ ಹೆಸರನ್ನು ಕೈಬಿಟ್ಟ ಪ್ರಕರಣ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಮೆರಿಕವು ಇತ್ತೀಚೆಗೆ ತನ್ನ ‘ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್’ ಹೆಸರನ್ನು ಬದಲಾಯಿಸಿ, ಮತ್ತೊಮ್ಮೆ ಹಳೆಯ ಹೆಸರಾದ ‘ಯುಎಸ್ ಪೆಸಿಫಿಕ್ ಕಮಾಂಡ್’ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ. 2018 ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಭಾರತದ ವ್ಯೂಹಾತ್ಮಕ ಮಹತ್ವವನ್ನು ಜಗತ್ತಿಗೆ ಮನವರಿಕೆ ಮಾಡಲು ಮತ್ತು ಚೀನಾಕ್ಕೆ ಟಾಂಗ್ ನೀಡಲು ಈ ‘ಪೆಸಿಫಿಕ್ ಕಮಾಂಡ್’ ಹೆಸರನ್ನು ಬದಲಾಯಿಸಿ ‘ಇಂಡೋ-ಪೆಸಿಫಿಕ್ ಕಮಾಂಡ್’ ಎಂದು ಮಾಡಿದ್ದರು.
ಅಮೆರಿಕವು ಈಗ ‘ಇಂಡೋ’ ಹೆಸರನ್ನು ಕೈಬಿಡುತ್ತಿದ್ದಂತೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ಅವರು ಭಾರತದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ‘ಎಕ್ಸ್’ (ಟ್ವಿಟರ್) ನಲ್ಲಿ ವ್ಯಂಗ್ಯಭರಿತ ಪೋಸ್ಟ್ ಒಂದನ್ನು ಬರೆದಿದ್ದಾರೆ. ಹಿನಾ ಅವರು, ‘‘ಅಮೆರಿಕದ ಒಂದು ಮಿಲಿಟರಿ ಕಮಾಂಡ್‌ನ ಹೆಸರು ಬದಲಾದ ತಕ್ಷಣ ದೇಶವೊಂದರ ಪ್ರಸ್ತುತತೆ ಮತ್ತು ಪ್ರತಿಷ್ಠೆಯ ಅಂದಾಜು ಸಂಪೂರ್ಣವಾಗಿ ತಲ್ಲಣಗೊಂಡು ಹೋಗುವುದು ಅತ್ಯಂತ ಆಘಾತಕಾರಿಯಾಗಿದೆ. ನಿಮ್ಮ ರಾಷ್ಟ್ರೀಯ ಗೌರವಕ್ಕೆ ಇದು ಅತ್ಯಂತ ಕೆಟ್ಟ ಮತ್ತು ಅಸಹಾಯಕ ಸ್ಥಿತಿಯಾಗಿದೆ’’ಎಂದು ಹೇಳಿದ್ದಾರೆ.
ಪಾಕಿಸ್ತಾನದ ಈ ಟೀಕೆಗೆ ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಂನಲ್ ಸಿಬ್ಬಲ್ ಅವರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಕಂನಲ್ ಸಿಬ್ಬಲ್ ಅವರು, ‘‘ಹಿನಾ ರಬ್ಬಾನಿ ಖಾರ್ ಅವರ ಈ ಟಿಪ್ಪಣಿಯು ‘ಭೂಗೋಳ ಮತ್ತು ರಾಜತಾಂತ್ರಿಕತೆಯ ತಿಳುವಳಿಕೆಗೆ ಮೀರಿದ’, ಅಂದರೆ ಮೂರ್ಖತನದಿಂದ ಕೂಡಿದ್ದಾಗಿದೆ. ಇಂಡೋ-ಪೆಸಿಫಿಕ್ ಎಂಬುದು ಕೇವಲ ಒಂದು ಹೆಸರಲ್ಲ, ಅದು ಪೆಸಿಫಿಕ್ ಮಹಾಸಾಗರದ ಭದ್ರತೆಯನ್ನು ನೇರವಾಗಿ ಹಿಂದೂ ಮಹಾಸಾಗರದ ಭದ್ರತೆಯೊಂದಿಗೆ ಜೋಡಿಸುವ ಒಂದು ವ್ಯೂಹಾತ್ಮಕ ಪರಿಕಲ್ಪನೆಯಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.
A highly geopolitically uneducated comment.
The Indo- Pacific concept linked the security of the Pacific Ocean to the Indian Ocean.
Chinese maritime expansionism in the western Pacific and Japan’s concerns underlay this concept.
The Quad provided the structure.
Trump in his… https://t.co/LUgcf18OI1
— Kanwal Sibal (@KanwalSibal) June 17, 2026
ಈ ಬದಲಾವಣೆಯ ನಿಜವಾದ ಲೆಕ್ಕಾಚಾರವನ್ನು ಬಿಚ್ಚಿಡುತ್ತಾ ಸಿಬ್ಬಲ್ ಅವರು ‘ಎಕ್ಸ್’ ನಲ್ಲಿ,
1. ‘‘ಟ್ರಂಪ್ ಅವರು ಒಂದು ದೊಡ್ಡ ವ್ಯೂಹಾತ್ಮಕ ಸಂದೇಶವನ್ನು ನೀಡಲು ‘ಯುಎಸ್ ಪೆಸಿಫಿಕ್ ಕಮಾಂಡ್’ ಹೆಸರನ್ನು ಬದಲಾಯಿಸಿ ‘ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್’ ಎಂದು ಮಾಡಿದ್ದರು. ಈಗ ಅವರು ಮತ್ತೆ ಹಳೆಯ ಹೆಸರನ್ನೇ ಇಟ್ಟಿದ್ದಾರೆ. ಇದರಿಂದಾಗಿ ಸದ್ಧಾಂತಿಕವಾಗಿ ಪೆಸಿಫಿಕ್ ಮಹಾಸಾಗರದ ಭದ್ರತೆಯು ಹಿಂದೂ ಮಹಾಸಾಗರದಿಂದ ಪ್ರತ್ಯೇಕಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ದೇಶಕ್ಕಾದರೂ ಈ ಬದಲಾವಣೆಯ ಹಿಂದೆ ಅಡಗಿರುವ ವ್ಯೂಹಾತ್ಮಕ ಚಿಂತನೆ ಮತ್ತು ರಾಜತಾಂತ್ರಿಕ ಬುದ್ಧಿವಂತಿಕೆಯನ್ನು ವಿಶ್ಲೇಷಿಸುವುದು ಅತ್ಯಂತ ಸಹಜವಾಗಿದೆ.
2. ಚೀನಾವು ಮೊದಲ ದಿನದಿಂದಲೂ ‘ಇಂಡೋ-ಪೆಸಿಫಿಕ್’ ಎಂಬ ಪದವನ್ನು, ಹಾಗೆಯೇ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ ‘ಕ್ವಾಡ್’ (Quad) ಒಕ್ಕೂಟವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಈ ಸಂಪೂರ್ಣ ಪರಿಕಲ್ಪನೆಯು ಕೇವಲ ತನ್ನನ್ನು ಸಮುದ್ರದಲ್ಲಿ ಸುತ್ತುವರಿಯಲು ರೂಪಿಸಲಾಗಿದೆ ಎಂಬುದು ಚೀನಾದ ಅಭಿಪ್ರಾಯವಾಗಿದೆ.
3. ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿ ಚೀನಾದ ವಿಸ್ತರಣಾವಾದವನ್ನು ಎದುರಿಸಲು ‘ಇಂಡೋ-ಪೆಸಿಫಿಕ್’ ಪರಿಕಲ್ಪನೆಯು ಮುನ್ನೆಲೆಗೆ ಬಂದಿತ್ತು. ಅದಕ್ಕೆ ‘ಕ್ವಾಡ್’ ಮೂಲಕ ಒಂದು ಬಲವಾದ ಚೌಕಟ್ಟು ಸಿಕ್ಕಿತ್ತು.
4. ಈಗ ಅಮೆರಿಕವು ‘ಇಂಡೋ’ ಪದವನ್ನು ತೆಗೆದುಹಾಕಿರುವಾಗ, ಚೀನಾ ಖಂಡಿತವಾಗಿಯೂ ಇದರ ಲಾಭ ಪಡೆಯಲು ಪ್ರಯತ್ನಿಸುತ್ತದೆ. ‘ಅಮೆರಿಕ ಈಗ ಹಿಂದೂ ಮಹಾಸಾಗರದ ಭದ್ರತೆಯ ಬಗ್ಗೆ ಅಷ್ಟೊಂದು ಗಂಭೀರವಾಗಿಲ್ಲ’ ಎಂಬುದನ್ನು ತೋರಿಸಿ, ಚೀನಾ ಈಗ ಈ ಇಡೀ ಪ್ರದೇಶದಲ್ಲಿ ಶಕ್ತಿಯ ಸಮತೋಲನವನ್ನು (balance of power) ಕದಡಲು ಪ್ರಯತ್ನಿಸಲಿದೆ.’’
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ