ಯುವ ಪೀಳಿಗೆಯ ಅವಾಸ್ತವಿಕ ಅಪೇಕ್ಷೆಗಳಿಂದ ಅಸ್ಥಿರಗೊಂಡಿರುವ ವಿವಾಹ ವ್ಯವಸ್ಥೆ !

ಸದ್ಯದ ಯುವ ಪೀಳಿಗೆಯು ಅತಿ ವ್ಯಾವಹಾರಿಕವಾಗಿದೆ. ಅವರಿಗೆ ವಿವಾಹ ವ್ಯವಸ್ಥೆಯಲ್ಲಿ ಸ್ವಲ್ಪವೂ ವಿಶ್ವಾಸವಿಲ್ಲ. ಅವರಿಗೆ ‘ಸ್ವಂತ ಮನೆಗಿಂತ ಬಾಡಿಗೆ ಮನೆಯಲ್ಲಿರುವುದು ಅಥವಾ ಸ್ವಂತ ವಾಹನಕ್ಕಿಂತ ‘ಟ್ಯಾಕ್ಸಿಯಲ್ಲಿ ತಿರುಗಾಡುವುದು ಒಳ್ಳೆಯದೆನಿಸುತ್ತದೆ.ಅದೇ ರೀತಿ ‘ವೈವಾಹಿಕ ಜೀವನವು ಯಶಸ್ವಿ ಆಗಲಿ ಅಥವಾ ವಿಫಲವಾಗಲಿ; ಇಂತಹ ಯಾವುದೇ ಬಂಧನದಲ್ಲಿ ಅಥವಾ ಸಂಬಂಧಗಳಲ್ಲಿ ಸಿಲುಕಬಾರದು, ಎಂಬುದಕ್ಕೆ ಸಿಲುಕಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನಾವು ನಮ್ಮ ವೃದ್ಧ ತಾಯಿ-ತಂದೆಯ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನಮಗೂ ಅದೇ ಪರಿಸ್ಥಿತಿ ಬರಬಹುದು, ಎಂಬ ವಿಚಾರವನ್ನು ಮಾಡಿ ಎಲ್ಲ ಯುವಕ-ಯುವತಿಯರು ಅಂತಹ ಸ್ಥಿತಿ ಬರಬಾರದೆಂದು ತಮ್ಮ ತಾಯಿ-ತಂದೆಯರ ವೃದ್ಧಾಪ್ಯದಲ್ಲಿ ಅವರ ಕಾಳಜಿ ತೆಗೆದುಕೊಳ್ಳಬೇಕು.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸಂಗಾತಿ ಬಗ್ಗೆ ಹುಡುಗಿಯರಲ್ಲಿರುವ ಅವಾಸ್ತವ ಅಪೇಕ್ಷೆ

ಸದ್ಯ ಮದುವೆಗಾಗಿ ಸಂಗಾತಿಯನ್ನು ಹುಡುಕುವ ಜನರ ಅಪೇಕ್ಷೆಗಳು ಬಹಳ ಬದಲಾಗಿವೆ. ಅವು ಈಗ ಹೆಚ್ಚು ಸ್ವಕೇಂದ್ರಿತ ಮತ್ತು ಭೌತಿಕ ಸುಖಗಳ ಮೇಲೆ ಆಧರಿಸಿವೆ. ‘ಮದುವೆಯ ನಂತರ ಸ್ಥಿರ ಮತ್ತು ಆರಾಮದಾಯಕ ಜೀವನ ಬೇಕು’, ಎಂದು ಹುಡುಗಿಯರು ಬಯಸುತ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಉತ್ತಮ ಕೆಲಸ ಮತ್ತು ಒಳ್ಳೆಯ ಆದಾಯವಿರುವ ಸಂಗಾತಿಯನ್ನು ಹುಡುಕುವುದು ಕೂಡ ಸರಿಯೇ ಇದೆ; ಆದರೆ ತಾವು ಮದುವೆ ಆಗಲಿರುವ ವ್ಯಕ್ತಿಯೂ ಇನ್ನು ಯುವಕನಾಗಿದ್ದಾನೆ ಮತ್ತು ಅವನು ತನ್ನ ವ್ಯವಸಾಯ, ಉದ್ಯೋಗ ಅಥವಾ ನೌಕರಿಯ ಆರಂಭಿಕ ಹಂತದಲ್ಲಿದ್ದಾನೆ ಎಂಬುದನ್ನು ಅವರು ಅನೇಕ ಬಾರಿ ಮರೆಯುತ್ತಾರೆ. ಆದ್ದರಿಂದ ಹುಡುಗನ ಬಗ್ಗೆ ಇರುವ ಅಪೇಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿರಬೇಕು ಎಲ್ಲಕ್ಕಿಂತ ಮುಖ್ಯವಾಗಿ ‘ಆತನು ತನ್ನ ತಾಯಿ-ತಂದೆಯಿಂದ ಸಂಪೂರ್ಣವಾಗಿ ಬೇರೆಯಾಗಿರಬೇಕು’, ಎಂಬ ಅಪೇಕ್ಷೆಯೂ ಅವಾಸ್ತವಿಕವಾಗಿದೆ.

೨. ‘ವೃದ್ಧಾಪ್ಯದಲ್ಲಿ ಮಕ್ಕಳು ತಮ್ಮನ್ನು ನೋಡಿಕೊಳ್ಳಲಿ ಎಂದು ಅಪೇಕ್ಷಿಸಬಾರದು’ ಎಂದೆನಿಸುವುದು

ಕೆಲವು ಹುಡುಗಿಯರು ತಮ್ಮ ಭಾವಿ ಅತ್ತೆ-ಮಾವಂದಿರನ್ನು ‘ಕಸದ ಬುಟ್ಟಿಗಳು’ ಎಂದು ಸಂಬೋಧಿಸುವುದು ಕೇಳಿಬರುತ್ತದೆ. ಅನೇಕ ಹುಡುಗಿಯರು ತಮ್ಮ ಪಾಲಕರ ಕಾಳಜಿ ವಹಿಸಲು ಸಿದ್ಧರಿರುತ್ತಾರೆ; ಆದರೆ ಬಹುತೇಕ ಬಾರಿ ಅವರಿಗೆ ತಮ್ಮ ಜೀವನವನ್ನು ಸ್ವತಂತ್ರವಾಗಿ ನಡೆಸಲು ಇಚ್ಛೆ ಇರುವುದು’, ಕಂಡುಬರುತ್ತದೆ. ವೃದ್ಧ ಪಾಲಕರನ್ನು ನೋಡಿಕೊಳ್ಳುವ ಇಚ್ಛೆಯಿರುವುದಿಲ್ಲ. ಅನೇಕರಿಗೆ ಇದು ನಮ್ಮ ಜವಾಬ್ದಾರಿ, ಎಂದು ಅನಿಸುವುದೇ ಇಲ್ಲ. ‘ಪಾಲಕರು ತಮ್ಮ ಮಕ್ಕಳಿಂದ ಇಂತಹ ಅಪೇಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ’, ಎಂದು ಅವರು ಭಾವಿಸುತ್ತಾರೆ. ‘ಪಾಲಕರು ಮಗುವಿಗೆ ಜನ್ಮ ನೀಡಿರುವುದರಿಂದ ಅವನಿಗೆ ಶಿಕ್ಷಣ ನೀಡುವುದು, ಅವರಿಗೆ ಉತ್ತಮ ಸಂಸ್ಕಾರ ನೀಡುವುದು ಮತ್ತು ಅವನನ್ನು ಸ್ವಾವಲಂಬಿ ಯನ್ನಾಗಿಸವುದು ಅವರ ಕರ್ತವ್ಯ; ಆದರೆ ಅದರ ಬದಲಾಗಿ ವೃದ್ಧಾಪ್ಯದಲ್ಲಿ ಮಗನು ತಮ್ಮನ್ನು ನೋಡಿಕೊಳ್ಳಬೇಕು ಎಂಬ ಅಪೇಕ್ಷೆ ಇಟ್ಟುಕೊಳ್ಳಬಾರದು’, ಎಂದು ಅವರಿಗೆ ಅನಿಸುತ್ತದೆ.

೩. ಹಿರಿಯರ ಅನುಭವದ ಮಾರ್ಗದರ್ಶನ ಅವಶ್ಯಕ

ಪಾಶ್ಚಾತ್ಯ ಸಮಾಜದಲ್ಲಿ, ಮಕ್ಕಳು ೧೮ ವರ್ಷದವರಾದಾಗ ಸ್ವಾವಲಂಬಿಗಳಾಗುವುದನ್ನು ನಾವು ನೋಡುತ್ತೇವೆ. ಅವರು ಮನೆ ಬಿಟ್ಟು ಸ್ವತಂತ್ರವಾಗಿ ವಾಸಿಸತೊಡಗುತ್ತಾರೆ. ಅವರು ತಮ್ಮ ಪಾಲಕರನ್ನು ಅಪರೂಪಕ್ಕೆ ಮತ್ತು ಕೇವಲ ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಭೇಟಿಯಾಗುತ್ತಾರೆ. ಪಾಲಕರು ಕೂಡ ತಮ್ಮ ಇಚ್ಛೆಯಂತೆ ಜೀವನ ನಡೆಸುತ್ತಾರೆ. ಅವರು ಮಕ್ಕಳ ಮೇಲೆ ಅವಲಂಬಿಸುವುದಿಲ್ಲ. ದುರದೃಷ್ಟವಶಾತ್ ಈ ಪಾಶ್ಚಾತ್ಯ ಜೀವನಶೈಲಿಯು ಈಗ ಭಾರತದಲ್ಲೂ ಹರಡುತ್ತಿದೆ. ಒಂದು ವೇಳೆ ಈ ಪ್ರವೃತ್ತಿಯು ಹೀಗೆಯೇ ಬೆಳೆಯುತ್ತಾ ಹೋದರೆ, ಅದು ನಮ್ಮ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಪ್ರತಿಯೊಬ್ಬರೂ ಇಷ್ಟು ಸ್ವಾರ್ಥಿಗಳಾದರೆ, ನಮ್ಮ ಸಂಸ್ಕೃತಿಯು ನಾಶವಾಗುವುದರಲ್ಲಿ ಸಂಶಯವಿಲ್ಲ. ನಮ್ಮಲ್ಲಿರುವ ಗಟ್ಟಿಯಾದ ಕೌಟುಂಬಿಕ ಸಂಬಂಧಗಳು, ಪರಸ್ಪರರಿಗೆ ಆಧಾರ ನೀಡುವ ಸಂಪ್ರದಾಯ ಮತ್ತು ಪರಸ್ಪರರ ಬಗ್ಗೆ ಇರುವ ಜವಾಬ್ದಾರಿಯ ಭಾವನೆಯೇ, ನಮ್ಮ ಸಂಸ್ಕೃತಿಯ ಬಲವಾಗಿದೆ. ಈ ಸರಪಳಿಯು ಕುಟುಂಬ, ಸಮಾಜ, ಸಮುದಾಯ ಮತ್ತು ಅಂತಿಮವಾಗಿ ರಾಷ್ಟ್ರವನ್ನು ಜೋಡಿಸಿಡುತ್ತದೆ. ‘ಸ್ವಕೇಂದ್ರಿತ ವೃತ್ತಿಯ ಮೇಲೆ ಜೀವನವು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸಮೃದ್ಧವಾಗಿರಲು ಕುಟುಂಬದ ಆಧಾರ, ಸಂಬಂಧಗಳಲ್ಲಿನ ಆತ್ಮೀಯತೆ ಮತ್ತು ಹಿರಿಯರ ಅನುಭವ ಆಧಾರಿತ ಮಾರ್ಗದರ್ಶನ ಅತ್ಯಂತ ಅವಶ್ಯಕ ಎಂಬುದನ್ನು ಇಂದಿನ ಯುವ ಪೀಳಿಗೆಯು ಸಮಯೋಚಿತವಾಗಿ ಅರ್ಥಮಾಡಿಕೊಳ್ಳುತ್ತದೆ ಎಂದು ಆಶಿಸುತ್ತೇನೆ.

– ಸೌ. ಸುಜಾತಾ ಜೋಶಿ, ಮುಂಬಯಿ (೨೮.೧೦.೨೦೨೫)