ಕಥಾನಕದ ಕುತಂತ್ರಗಳು ?

ಎ.ಐ.ನಿರ್ಮಿತ ಚಿತ್ರ

‘ಟೈಮ್ಸ್ ಆಫ್ ಇಂಡಿಯಾ’ದ ‘ಸ್ಪೀಕಿಂಗ್ ಟ್ರೀ’ ಎಂಬ ಶೀರ್ಷಿಕೆಯಡಿಯಲ್ಲಿ ಆಧ್ಯಾತ್ಮಿಕ ವಿಷಯಗಳ ಕೆಲವು ಲೇಖನಗಳು, ವಿಡಿಯೋಗಳು ಅಥವಾ ‘ರೀಲ್ಸ್’ ಪ್ರಸಾರವಾಗುತ್ತಿರುತ್ತವೆ. ಅಂತಹದೇ ಒಂದು ಆಧ್ಯಾತ್ಮಿಕ ವಿಷಯದ ಸಂದರ್ಶನದ ರೀಲ್‌ನಲ್ಲಿ, ನಟರೂ ಆಗಿರುವ ವಿಜಯ ಆನಂದ ಎಂಬ ಸಜ್ಜನರು ನಿರೂಪಕಿಗೆ ಈ ಮುಂದಿನ ಮಾಹಿತಿಯನ್ನು ನೀಡಿದರು. ಅವರ ಪ್ರಕಾರ ನಮ್ಮ ಜೀವನದಲ್ಲಿ ೩ ಮುಖ್ಯ ದೇವಾಲಯಗಳಿವೆ. ಅವುಗಳಲ್ಲಿ ೩ ನೇ ಕ್ರಮಾಂಕದ ದೇವಾಲಯವೆಂದರೆ, ನಾವು ಸಾಮಾನ್ಯವಾಗಿ ಹೋಗುವ ದೇವರಗುಡಿ, ೨ ನೇ ಕ್ರಮಾಂಕದ, ಅಂದರೆ ಅದಕ್ಕಿಂತ ಮೇಲಿನ ದರ್ಜೆಯ ದೇವಾಲಯವೆಂದರೆ ನಮ್ಮ ಮನೆ ಮತ್ತು ಮನೆಯಲ್ಲಿನ ಜನರು. ಇನ್ನು ಎಲ್ಲಕ್ಕಿಂತ ಪ್ರಮುಖವಾದ, ಅಂದರೆ ಮೊದಲನೇ ಕ್ರಮಾಂಕದ ದೇವಾಲಯವೆಂದರೆ ನಮ್ಮ ಸ್ವಂತ ಶರೀರ (ದೇಹ). ಅದಕ್ಕಾಗಿ ತಿನ್ನುವುದು-ಕುಡಿಯುವುದು, ಧ್ಯಾನ, ಯೋಗ ಇವುಗಳನ್ನು ಪಾಲಿಸಬೇಕು. ಈ ದೇವಾಲಯಕ್ಕೆ ಅತಿ ಹೆಚ್ಚು ಆದ್ಯತೆ ನೀಡಬೇಕು. ಇದರಿಂದ ನಿಮ್ಮ ಜೀವನವು ಸುಂದರವಾಗುತ್ತದೆ. ಎಲ್ಲರೂ ಹೀಗೆ ಮಾಡಿದರೆ, ಇಡೀ ಜಗತ್ತಿನಲ್ಲಿರುವ ಭಯೋತ್ಪಾದನೆಯಂತಹ ಕೆಟ್ಟ ಅಥವಾ ನಕಾರಾತ್ಮಕ ವಿಷಯಗಳು ತಾವಾಗಿಯೇ ದೂರವಾಗುತ್ತವೆ ಮತ್ತು ಇಡೀ ಸೃಷ್ಟಿಯೇ ಸ್ವರ್ಗದಂತಾಗುತ್ತದೆ.

ಮೇಲ್ನೋಟಕ್ಕೆ ನೋಡಿದರೆ ವಿಜಯ ಆನಂದ ಅವರ ಮಾತುಗಳು ಚೆನ್ನಾಗಿ ಅನಿಸುತ್ತವೆ ಮತ್ತು ಅದರಲ್ಲಿ ಯಾವುದೇ ತಪ್ಪು ಕಾಣಿಸುವುದಿಲ್ಲ; ಆದರೆ ‘ಮನೆ’ ಎಂಬ ಎರಡನೇ ದೇವಾಲಯಕ್ಕೆ ಆದ್ಯತೆ ನೀಡಲು ಹೇಳುವಾಗ ಅವರು ಒಂದು ಉದಾಹರಣೆಯನ್ನು ನೀಡಿದ್ದಾರೆ. ಅವರ ಸಂಬಂಧಿಕರೊಬ್ಬರು ಸತ್ಸಂಗಕ್ಕೆ ಹೋಗಲು ಪ್ರಾರಂಭಿಸಿದರು ಮತ್ತು ಮುಂದೆ ಅವರು ಆ ಕಾರ್ಯದಲ್ಲಿ ಹೆಚ್ಚು ಹೆಚ್ಚು ಸಮಯವನ್ನು ವಿನಿಯೋಗಿಸತೊಡಗಿದರು. ಮುಂದೆ ಆ ಆಧ್ಯಾತ್ಮಿಕ ಕಾರ್ಯದಲ್ಲಿ ಅವರ ಸಹಭಾಗಿತ್ವ ಎಷ್ಟು ಹೆಚ್ಚಾಯಿತೆಂದರೆ, ಅವರ ಪತಿ ಮತ್ತು ಮಕ್ಕಳು ಅವರಿಂದ ದೂರವಾದರು. ಆದ್ದರಿಂದ ‘ಯಾರಾದರೂ ಇಂತಹ ಕೆಲಸಗಳನ್ನು ಮಾಡುವುದಕ್ಕಿಂತ ಮನೆ ಎಂಬ ದೇವಾಲಯದ ಕಡೆಗೆ ಮೊದಲು ಗಮನ ಹರಿಸಬೇಕು’, ಎಂಬುದು ಅವರ ಮಾತಿನ ಸಾರಾಂಶವಾಗಿದೆ. ನಿಜವಾದ ಸಂಚು ಇರುವುದೇ ಇಲ್ಲಿ ! ಈ ವಿಡಿಯೋದಲ್ಲಿ ಮೇಲ್ನೋಟಕ್ಕೆ ಯಾರಿಗೂ ಆಕ್ಷೇಪಾರ್ಹವಾದುದು ಏನೂ ಅನಿಸುವುದಿಲ್ಲ; ಆದರೆ ಈ ವಿಡಿಯೋದ ಮೂಲಕ ಪರೋಕ್ಷವಾಗಿ ೩ ಅತ್ಯಂತ ದೊಡ್ಡ ಘಾತಕ ಸಂದೇಶಗಳನ್ನು ಹಿಂದೂಗಳಿಗೆ ನೀಡಲಾಗಿದೆ.

ದೇವರ ದೇವಾಲಯಕ್ಕೆ, ಮೂರನೇ ಸ್ಥಾನ ನೀಡಲಾಗಿದ್ದು, ಶರೀರ ಮತ್ತು ಮನೆಗೆ ಪ್ರಾಮುಖ್ಯತೆ ನೀಡಲು ಒತ್ತು ನೀಡಿದ್ದಾರೆ. ಎರಡನೆಯದು, ಸತ್ಸಂಗ ಮುಂತಾದ ಕಾರ್ಯಗಳಿಗೆ ಹೆಚ್ಚು ಸಮಯ ನೀಡುವಾಗ ಮನೆಯನ್ನು ನಿರ್ಲಕ್ಷಿಸಬಾರದು; ಅಲ್ಲಿಗೆ ಹೋಗುವ ಬದಲು ಮನೆಯ ಕಡೆಯೇ ಹೆಚ್ಚು ಗಮನ ಹರಿಸಿ ಎಂಬುದು. ಮೂರನೆಯ ಮತ್ತು ಎಲ್ಲಕ್ಕಿಂತ ಹೆಚ್ಚು ಘಾತಕ ಹಾಗೂ ಹಿಂದೂಗಳನ್ನು ನಪುಂಸಕರನ್ನಾಗಿ ಮಾಡುವ ಸಂದೇಶವೆಂದರೆ, ಸ್ವಂತ ಶರೀರವನ್ನು ಚೆನ್ನಾಗಿ ನೋಡಿಕೊಂಡರೆ ನಕಾರಾತ್ಮಕತೆ ದೂರವಾಗುತ್ತದೆ ಮತ್ತು ಭಯೋತ್ಪಾದನೆಯೂ ನಾಶವಾಗಿ ಸ್ವರ್ಗ ನಿರ್ಮಾಣವಾಗುತ್ತದೆ ಎಂಬುದು. ಆದ್ದರಿಂದ ಈ ದೇವಾಲಯಕ್ಕೆ ಮೊದಲು ಆದ್ಯತೆ ನೀಡಿ ಎನ್ನುತ್ತಾರೆ. ಜೀವನವನ್ನು ಸರ್ವಾಂಗ ಸುಂದರವಾಗಿಸುವಲ್ಲಿ ಯೋಗಾಭ್ಯಾಸ ಮತ್ತು ಧ್ಯಾನದ ಮಹತ್ವವನ್ನು ಯಾರೂ ನಿರಾಕರಿಸುವುದಿಲ್ಲ; ಆದರೆ ಜಿಹಾದ್ ಮಾಡುವ ಮೂಲಕ ಮತಾಂಧರು ರಾಷ್ಟ್ರ ಮತ್ತು ಹಿಂದೂ ಸಮಾಜದ ಮೇಲೆ ನಡೆಸುತ್ತಿರುವ ಆಕ್ರಮಣಗಳು ಇದರಿಂದ ಹೇಗೆ ತಾನೇ ಕಡಿಮೆಯಾಗುತ್ತವೆ ? ಇಂತಹ ಸವಿಮಾತುಗಳನ್ನು ಹೇಳಿ ಹಿಂದೂಗಳ ಬುದ್ಧಿಭ್ರಮಣೆ ಮಾಡುವ ಸುಳ್ಳು ಕಥಾನಕಗಳನ್ನು ಜಾಗೃತ ಹಿಂದೂಗಳು ತೀವ್ರವಾಗಿ ಮಟ್ಟಹಾಕಬೇಕು ಎಂಬುದು ಮಾತ್ರ ಖಂಡಿತ !

– ಸೌ. ರೂಪಾಲಿ ಅಭಯ ವರ್ತಕ, ಸನಾತನ ಆಶ್ರಮ, ದೇವದ, ಪನವೇಲ