|| ಶ್ರೀ ರಾಜಮಾತಂಗಿ ಮಹಾಯಾಗ ||

ಸದ್ಯ ಇಡೀ ವಿಶ್ವದ ಮೇಲೆ ಯುದ್ಧದ ಸಂಕಟವಿದೆ. ಇಂತಹ ಸಮಯದಲ್ಲಿ ತಪೋಭೂಮಿ ಭಾರತದ ರಕ್ಷಣೆಗಾಗಿ ರಾಜಮಾತಂಗಿ ದೇವಿಯ ಕವಚವು ಆವಶ್ಯಕವಾಗಿದೆ !

ರಾಜಮಾತಂಗಿ ದೇವಿಯ ಕುರಿತು

ದೇವಿ ಮಾತಂಗಿಯು ಆದಿಶಕ್ತಿಯ ಪ್ರಧಾನಮಂತ್ರಿಯಾಗಿರುವುದರಿಂದ ಅವಳಿಗೆ ರಾಜಮಾತಂಗಿ ಎಂದು ಕರೆಯುತ್ತಾರೆ. ಸದ್ಯ ಇಡೀ ವಿಶ್ವದ ಮೇಲೆ ಯುದ್ಧದ ಸಂಕಟವಿದೆ. ಈ ವೇಳೆ ತಪೋಭೂಮಿ ಭಾರತದ ರಕ್ಷಣೆಯಾಗಲು ರಾಜಮಾತಂಗಿ ದೇವಿಯ ಕವಚವು ಅತ್ಯಾವಶ್ಯಕವಾಗಿದೆ. ರಾಜಮಾತಂಗಿ ದೇವಿಯು ವಾಣಿಯನ್ನು ಶುದ್ಧಗೊಳಿಸುವ ಮತ್ತು ಜ್ಞಾನವನ್ನು ಪ್ರದಾನಿಸುವ ದೇವತೆಯಾಗಿದ್ದಾಳೆ. ಶ್ರೀವಿಷ್ಣುವಿನ ದಶಾವತಾರಗಳ ಸಮಯದಲ್ಲಿಯೂ ದಶಮಹಾವಿದ್ಯೆಗಳು ಕಾರ್ಯನಿರತವಾಗಿರುತ್ತವೆ. ಶ್ರೀರಾಮನ ಅವತಾರದಲ್ಲಿ ರಾಜಮಾತಂಗಿಯ ತತ್ತ್ವವು ಕಾರ್ಯನಿರತವಾಗಿತ್ತು, ಆದ್ದರಿಂದ ಈಗ ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ರಾಜಮಾತಂಗಿ ದೇವಿಯ ಉಪಾಸನೆಯ ಆವಶ್ಯಕತೆಯಿದೆ. ಮಾತಂಗಿಯು ದಶಮಹಾವಿದ್ಯೆಗಳಲ್ಲಿ ಒಂಬತ್ತನೆಯ ವಿದ್ಯೆಯಾಗಿದ್ದಾಳೆ. ಮಾತಂಗಿಯು ಮಾತಂಗ ಶಿವನ ಪತ್ನಿ ಎಂದು ನಂಬಲಾಗುತ್ತದೆ. ಅವಳು ಮಾತಂಗ ಭೈರವ ಎಂದು ಪ್ರಸಿದ್ಧಳಾಗಿದ್ದಾಳೆ. ನಿಜವಾದ ಅರ್ಥದಲ್ಲಿ ಅವಳು ಮಾತಂಗ ಶಿವನ ಶಕ್ತಿಯಾಗಿದ್ದಾಳೆ. ಅವಳು ಭಕ್ತರಿಗೆ ತಕ್ಷಣವೇ ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುವ ವರದಾಯಿನಿ ಆಗಿದ್ದಾಳೆ. ರಾಜಮಾತಂಗಿ ದೇವಿಯು ಆದಿಪರಾಶಕ್ತಿಯ ಅವತಾರವಾಗಿದ್ದಾಳೆ.

ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು. ತ್ರಿಪುರಾಸುರನನ್ನು ವಧಿಸಲು ಭಗವಾನ್ ರುದ್ರನೂ ಇದೇ ಮಾತಂಗಿ ದೇವಿಯ ಉಪಾಸನೆ ಮಾಡಿ ಪ್ರಾರ್ಥಿಸಿದ್ದನು ಎಂದು ಉತ್ತರಿಸಿದನು.

–  ಶ್ರೀ. ಚೇತನ ರಾಜಹಂಸ (೭.೫.೨೦೨೬)

ಕಲೆಯ ಉಪಾಸನೆಯಲ್ಲಿ ಮಹತ್ವ

ಶ್ರೀ. ಚೇತನ ರಾಜಹಂಸ

೧೪ ವಿದ್ಯೆ ಮತ್ತು ೬೪ ಕಲೆಗಳ ಉಗಮಸ್ಥಾನವೇ ಭಾರತ ! ಆಕಾಶದಲ್ಲಿ ನಕ್ಷತ್ರಗಳು ಅನಂತವಾಗಿವೆ. ಈ ನಕ್ಷತ್ರಗಳು ಇಡೀ ಬ್ರಹ್ಮಾಂಡವನ್ನು ಬೆಳಗುತ್ತವೆ. ಅದೇ ರೀತಿ ಇಡೀ ಸೃಷ್ಟಿಯನ್ನು ಜ್ಞಾನ ಮತ್ತು ವಿಜ್ಞಾನದ ಮೂಲಕ ಯಾರಾದರೂ ಬೆಳಗಿಸುತ್ತಿದ್ದರೆ ಅದು ವೈದಿಕ ಜ್ಞಾನ ಪರಂಪರೆ. ಭಗವಾನ್ ಶ್ರೀಕೃಷ್ಣನು ೧೪ ವಿದ್ಯೆ ಮತ್ತು ೬೪ ಕಲೆಗಳಲ್ಲಿ ನಿಪುಣನಾಗಿದ್ದನು. ಹಾಗಾಗಿ ಅವನನ್ನು ‘ಪೂರ್ಣಪುರುಷೋತ್ತಮ ಎನ್ನುತ್ತಿದ್ದರು. ಈ ವಿದ್ಯೆ ಮತ್ತು ಕಲೆಗಳ ಅಂತಿಮ ಉದ್ದೇಶ ‘ಮೋಕ್ಷಪ್ರಾಪ್ತಿ ಆಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರೇರಣೆಯಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸುತ್ತಿದೆ, ಅದರ ಮೂಲಕವೂ ಕಲೆಯ ಮುಖಾಂತರ ಈಶ್ವರಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳ ಬೇಕು ಎಂಬುದರ ಬಗ್ಗೆ ಪ್ರಾಯೋಗಿಕ ಶಿಕ್ಷಣವನ್ನು ನೀಡಲಾಗುತ್ತದೆ. ಶುದ್ಧ ಮತ್ತು ಸಾತ್ತ್ವಿಕ ಕಲೆಯ ಪ್ರಸ್ತುತಿ ಯಿಂದ ಆನಂದ ಹರಿಯುತ್ತದೆ; ಆದರೆ ಇತ್ತೀಚಿಗೆ ಅನೇಕ ಕಲೆಗಳು ವ್ಯಾಪಾರಿ ಸ್ವರೂಪವನ್ನು ಪಡೆದು ಕೊಂಡಿವೆ. ಅವುಗಳಲ್ಲಿ ವಿಕೃತಿ ನುಸುಳಿದೆ. ಇಂತಹ ಸಮಯದಲ್ಲಿ ವಿದ್ಯೆ-ಕಲೆಗಳ ಮೂಲ ಸಾತ್ತ್ವಿಕ ಸ್ವರೂಪವು ಉಳಿಯಲು ಕಲೆಗಳ ಅಧಿದೇವತೆಯಾದ ರಾಜಮಾತಂಗಿ ದೇವಿಯ ಆಶೀರ್ವಾದದ ಅಗತ್ಯವಿದೆ.

‘ಹೇ ಎಲ್ಲ ವಿದ್ಯೆ ಮತ್ತು ಕಲೆಗಳ ಜನನಿ, ವಿದ್ಯೆ ಮತ್ತು ಕಲೆಯ ಶುದ್ಧ ಸ್ವರೂಪವು ಉಳಿಯಲಿ. ವಿದ್ಯೆಯನ್ನು ಕಲಿಯುವ ಮತ್ತು ಕಲೆಯ ಸಾಧನೆ ಮಾಡುವ ಉಪಾಸಕರಮೇಲೆ ನಿನ್ನ ಕೃಪಾದೃಷ್ಟಿ ಸದಾ ಇರಲಿ. ಸನಾತನ ಸಂಸ್ಕೃತಿಯ ಮೇಲಿರುವ ಕರಿನೆರಳು ದೂರವಾಗಲಿ. ಸನಾತನ ಸಂಸ್ಕೃತಿಯ ತೇಜಸ್ಸು ಪ್ರಕಟವಾಗಲಿ ಎಂದು ಪ್ರಾರ್ಥಿಸುತ್ತೇವೆ.

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ. (೭.೫.೨೦೨೬)

ವ್ಯಷ್ಟಿ ಮಟ್ಟದಲ್ಲಿ ರಾಜಮಾತಂಗಿ ದೇವಿಯ ಉಪಾಸನೆಯ ಮಹತ್ವ

ನಮ್ಮಂತಹ ಸಾಮಾನ್ಯ ಜನರಿಗೆ ವೈಖರಿ ವಾಣಿಯು ಅತ್ಯಂತ ಮುಖ್ಯವಾಗಿದೆ ! ಅಂದರೆ ನಮ್ಮ ಬಾಯಿಯಿಂದ ಹೊರಬರುವ ಮಾತುಗಳು !ಪರಸ್ಪರರನ್ನು ಬೆಸೆಯಲು ಅಥವಾ ಪರಸ್ಪರರಿಂದ ದೂರ ಮಾಡಲು ಈ ಶಬ್ದಗಳೇ ಕಾರಣವಾಗಿರುತ್ತವೆ. ತಪ್ಪು ಪದಗಳನ್ನು ಬಳಸುವುದರಿಂದ ಅಥವಾ ಪದಗಳನ್ನು ತಪ್ಪಾಗಿ ಬಳಸುವುದರಿಂದ ಅನೇಕ ಪ್ರಸಂಗಗಳು ಘಟಿಸುತ್ತವೆ, ಅವು ಅಸಂತೋಷ ಅಥವಾ ದುಃಖಕ್ಕೆ ಕಾರಣವಾಗುತ್ತವೆ ಎಂಬುದನ್ನು ನಾವೂ ನಮ್ಮ ದೈನಂದಿನ ಜೀವನದಲ್ಲಿ ಅನುಭವಿಸಿರಬಹುದು. ರಾಜಮಾತಂಗಿ ದೇವಿಯ ಉಪಾಸನೆಯು ವೈಖರಿ ವಾಣಿಯ ಶುದ್ಧಿಗಾಗಿ ಬಹಳ ಮುಖ್ಯವಾಗಿದೆ. ಮಾತಂಗಿ ದೇವಿಯ ಉಪಾಸನೆಯಿಂದ ವಾಣಿಯಲ್ಲಿ ಮಾಧುರ್ಯ ಬರುತ್ತದೆ.

ಸಮಷ್ಟಿ ಮಟ್ಟದಲ್ಲಿ ರಾಜಮಾತಂಗಿ ದೇವಿಯ ಉಪಾಸನೆಯ ಮಹತ್ವ

ಪ್ರಸ್ತುತ ಸಮಷ್ಟಿ ಅಥವಾ ವಿಶ್ವ ಮಟ್ಟದಲ್ಲಿ ಅಮೆರಿಕ ಮತ್ತು ಇರಾನ್ ಯುದ್ಧದ ಸಮಯದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಅನೇಕ ಎಚ್ಚರಿಕೆಗಳನ್ನು ನೀಡುತ್ತಿದ್ದರು. ಮತ್ತೊಂದೆಡೆ ಇರಾನ್ ಕೂಡ ಅಮೆರಿಕಕ್ಕೆ ಪ್ರತ್ಯುತ್ತರ ನೀಡುತ್ತಿತ್ತು. ಹಾರ್ಮುಜ್ ಜಲಸಂಧಿ (ಎರಡು ಸಮುದ್ರಗಳನ್ನು ಸಂಪರ್ಕಿಸುವ ಭೂಭಾಗ) ಮುಚ್ಚಲ್ಪಟ್ಟಿದ್ದರಿಂದ ತೈಲ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರಿತು. ಈ ಎಲ್ಲಾ ಯುದ್ಧದಂತಹ ಪರಿಸ್ಥಿತಿಯಲ್ಲಿ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಯಾರಾದರೂ ಮಾಡಿದ್ದರೆ ಅದು ಜನರ ಮಾತುಗಳು. ಭಾರತವು ಈ ಯುದ್ಧದಲ್ಲಿ ಪಾಲ್ಗೊಳ್ಳದಿದ್ದರೂ ಅದರ ಬಿಸಿ ಭಾರತಕ್ಕೂ ತಟ್ಟಿತು; ಈ ಎಲ್ಲಾ ಕಾರ್ಯತಂತ್ರಗಳಲ್ಲಿಯೂ ಮಾತುಗಳು ಮತ್ತೆ ಮುಖ್ಯವಾಗುತ್ತವೆ.

  • ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
  • ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.
  • ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ
  • ಸೂಕ್ಷ್ಮ-ಪರೀಕ್ಷಣೆ : ಯಾವುದಾದರೂ ಘಟನೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅನಿಸುತ್ತದೆಯೋ, ಅದನ್ನು ‘ಸೂಕ್ಷ್ಮ-ಪರೀಕ್ಷಣೆ’ ಎನ್ನುತ್ತಾರೆ.