
ಪ್ರಶ್ನೆ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಸನಾತನ ಸಂಸ್ಥೆಯ ಜ್ಞಾನ ಪ್ರಾಪ್ತಮಾಡಿಕೊಳ್ಳುವ ಕು. ಮಧುರಾ ಭೋಸಲೆ, ಶ್ರೀ. ನಿಷಾದ ದೇಶಮುಖ ಮತ್ತು ಶ್ರೀ. ರಾಮ ಹೊನಪ ಈ ಸಾಧಕರಂತೆ ಸೂಕ್ಷ್ಮದಿಂದ ಜ್ಞಾನ ಪಡೆಯುವ ಸಾಧಕರು ಪೃಥ್ವಿಯಲ್ಲಿ ಎಷ್ಟು ಜನರಿದ್ದಾರೆ ? ಅವರ ಸಂಖ್ಯೆ ವಿಶೇಷವಾಗಿ ಇಲ್ಲದಿರಲು ಕಾರಣವೇನು ?’
ಉತ್ತರ – ಶ್ರೀ. ರಾಮ ಹೊನಪ :
೧. ಸನಾತನ ಸಂಸ್ಥೆಯ ಜ್ಞಾನ ಪ್ರಾಪ್ತಮಾಡಿಕೊಳ್ಳುವ ಸಾಧಕರಂತೆ ಸೂಕ್ಷ್ಮದಿಂದ ಜ್ಞಾನ ಪಡೆಯುವ ಸಾಧಕರು ಪೃಥ್ವಿಯಲ್ಲಿ ಒಟ್ಟು ೧೦೦ ಜನರಿದ್ದಾರೆ. ಈ ಸಂಖ್ಯೆಯು ಅತಿ ಕಡಿಮೆ ಇರಲು ಕಾರಣಗಳು ಈ ಕೆಳಗಿನಂತಿವೆ.
೧ ಅ. ಕಲಿಯುಗದ ಪ್ರಸ್ತುತ ಕಾಲದಲ್ಲಿ ಜ್ಞಾನಯೋಗಕ್ಕನುಸಾರ ಸಾಧನೆ ಮಾಡುವುದು ಕಠಿಣವಾಗಿದೆ : ‘ಕಲಿಯುಗದಲ್ಲಿನ ಪ್ರತಿಕೂಲ ಕಾಲ ಮತ್ತು ಕೆಟ್ಟ ಶಕ್ತಿಗಳ ತೊಂದರೆ’, ಇವುಗಳಿಂದಾಗಿ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವುದು ಕಠಿಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಕರ್ಮಯೋಗ ಮತ್ತು ಭಕ್ತಿಯೋಗ’ ಈ ಯೋಗಗಳಿಗನುಸಾರ ಸಾಧನೆ ಮಾಡುವುದು ಸಾಧಕರಿಗೆ ಸುಲಭವಾಗಿದೆ; ಆದರೆ ಜ್ಞಾನಯೋಗಕ್ಕನುಸಾರ ಸಾಧನೆ ಮಾಡುವುದು ಕಠಿಣ ಮತ್ತು ದುರ್ಲಭವಾಗಿದೆ. ‘ಸೂಕ್ಷ್ಮದಿಂದ ಜ್ಞಾನ ಪಡೆಯುವುದು’ ಜ್ಞಾನಯೋಗಕ್ಕನುಸಾರ ಸಾಧನೆಯಾಗಿದೆ. ಅದಕ್ಕಾಗಿ ಸಾಧಕನಲ್ಲಿ ‘ಈಶ್ವರನ ಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಶಬ್ದರೂಪದಲ್ಲಿ ಮಂಡಿಸುವುದು’, ಇವುಗಳಿಗಾಗಿ ಸೂಕ್ಷ್ಮದಲ್ಲಿನ ವಿಷಯ ತಿಳಿಯುವ ಸಾಮರ್ಥ್ಯದ ಆವಶ್ಯಕತೆಯಿರುತ್ತದೆ. ಕಲಿಯುಗದಿಂದಾಗಿ ಇಂತಹ ಸಾಮರ್ಥ್ಯವಿರುವ ಸಾಧಕರು ಪೃಥ್ವಿಯಲ್ಲಿ ಬಹಳ ಕಡಿಮೆ ಇದ್ದಾರೆ. ಆದ್ದರಿಂದ ಸೂಕ್ಷ್ಮದಿಂದ ಜ್ಞಾನ ಪಡೆಯುವ ಸಾಧಕರ ಸಂಖ್ಯೆ ಪೃಥ್ವಿಯಲ್ಲಿ ಕಡಿಮೆ ಇದೆ.

೧ ಆ. ನಿಷ್ಕಾಮ ಸಾಧನೆ ಮಾಡುವ ಸಾಧಕರು ಕಡಿಮೆ ಇರುವುದು : ಸೂಕ್ಷ್ಮದಿಂದ ಜ್ಞಾನ ಪಡೆಯಲು ‘ಸಾಧಕನು ನಿಷ್ಕಾಮನಾಗಿರುವುದು ಮತ್ತು ಅವನು ‘ಸೂಕ್ಷ್ಮದಿಂದ ಜ್ಞಾನ ಪಡೆಯುವುದು ಒಂದು ಗುರುಸೇವೆಯಾಗಿದೆ’ ಎಂಬ ವಿಚಾರದಿಂದ ಆ ಸೇವೆಯನ್ನು ಮಾಡುವುದು’, ಮಹತ್ವದ್ದಾಗಿದೆ. ಇಂತಹ ಸಾಧಕನ ಮೇಲೆಯೇ ಈಶ್ವರನ ಕೃಪೆಯಾಗಿ ಅವನಿಗೆ ಸೂಕ್ಷ್ಮದಿಂದ ಜ್ಞಾನವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಇಂತಹ ಸೇವಾಭಾವ ‘ಸಾಧಕನಲ್ಲಿ ನಿರ್ಮಾಣವಾಗುವುದು ಮತ್ತು ಅದು ಉಳಿದುಕೊಳ್ಳುವುದು’ ಕಠಿಣವಾಗಿದೆ; ಏಕೆಂದರೆ ಕಲಿಯುಗದಲ್ಲಿ ಸಾಧಕನ ಮನಸ್ಸಿನಲ್ಲಿ ಸೂಕ್ಷ್ಮ ಜ್ಞಾನದ ಮೂಲಕ ಹಣ ಮತ್ತು ಪ್ರಸಿದ್ಧಿಯನ್ನು ಪಡೆಯುವ ಹವ್ಯಾಸವು ಸಹಜವಾಗಿ ನಿರ್ಮಾಣವಾಗಬಹುದು.
೧ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಧ್ಯಾತ್ಮದ ವಿಷಯದಲ್ಲಿ ಸೂಕ್ಷ್ಮದಿಂದ ಜ್ಞಾನ ಪಡೆಯುವುದಕ್ಕೆ ಮಹತ್ವ ನೀಡುವುದು ಮತ್ತು ಶಿಷ್ಯರಿಂದ ಇಂತಹ ಕಾರ್ಯವನ್ನು ಮಾಡಿಸಿಕೊಳ್ಳುವ ಗುರುಗಳು ಅತಿಕಡಿಮೆ ಇರುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸನಾತನ ಧರ್ಮದಲ್ಲಿನ ಜ್ಞಾನದ ಮಹತ್ವವನ್ನು ಅರಿತಿದ್ದಾರೆ. ಪ್ರಸ್ತುತ ಕಾಲದಲ್ಲಿ ಜಿಜ್ಞಾಸು ಮತ್ತು ಸಾಧಕರ ಮನಸ್ಸಿನಲ್ಲಿ ‘ಅಧ್ಯಾತ್ಮದಲ್ಲಿ ಹೀಗೆ ಏಕೆ ಹೇಳಲಾಗಿದೆ ? ಯಾವುದಾದರೊಂದು ವಿಷಯದ ಹಿಂದಿನ ಆಧ್ಯಾತ್ಮಿಕ ಕಾರಣವೇನು ?’, ಎಂಬಂತಹ ಪ್ರಶ್ನೆಗಳು ಬರುತ್ತವೆ. ಅವುಗಳಿಗೆ ಉತ್ತರಗಳು ವಿವಿಧ ಗ್ರಂಥಗಳಲ್ಲಿ ಇರುವುದಿಲ್ಲ. ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳು ದೊರೆತರೆ ಜಿಜ್ಞಾಸುಗಳ ಮತ್ತು ಸಾಧಕರ ಸಾಧನೆಯು ಇನ್ನಷ್ಟು ಉತ್ತಮವಾಗುವುದು, ಹಾಗೆಯೇ ಅವರಲ್ಲಿ ಈಶ್ವರನ ಬಗ್ಗೆ ಇರುವ ಭಾವ ಮತ್ತು ಶ್ರದ್ಧೆಯು ಹೆಚ್ಚಾಗುವುದು. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸೂಕ್ಷ್ಮ ಜ್ಞಾನ ಪಡೆಯುವ ಸಾಧಕರಲ್ಲಿ ಕೇಳುತ್ತಾರೆ. ಗುರುಕೃಪೆಯಿಂದ ಆ ಸಾಧಕರಿಗೆ ಆ ಪ್ರಶ್ನೆಗಳಿಗೆ ಉತ್ತರಗಳು ಸೂಕ್ಷ್ಮದಿಂದ ದೊರೆಯುತ್ತವೆ.
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಜ್ಞಾನಕಾರ್ಯವು ಕಾಲಕ್ಕನುಗುಣವಾಗಿ ಮತ್ತು ದೂರದೃಷ್ಟಿಯಿಂದ ಆಗುತ್ತಿದೆ. ಅವರ ಆಧ್ಯಾತ್ಮಿಕ ಸಾಮರ್ಥ್ಯದಿಂದಾಗಿ ಸೂಕ್ಷ್ಮದ ಜ್ಞಾನವನ್ನು ಪಡೆಯುವ ಸಾಧಕರಿಗೆ ಸೂಕ್ಷ್ಮದಿಂದ ಜ್ಞಾನವನ್ನು ಪಡೆಯುವ ಬಗ್ಗೆ ಯೋಗ್ಯ ದಿಶೆ ಸಿಗುತ್ತಿದೆ. ಇಂತಹ ಅದ್ಭುತ ಕಾರ್ಯವನ್ನು ಮಾಡುವ ಗುರುಗಳು ಪೃಥ್ವಿಯಲ್ಲಿ ಬಹಳ ವಿರಳ. ಇದರಿಂದ ಸೂಕ್ಷ್ಮದಿಂದ ಜ್ಞಾನವನ್ನು ಪಡೆಯುವ ಸಾಧಕರು ಸಿದ್ಧರಾಗುವ ಪ್ರಕ್ರಿಯೆ ಅಪರೂಪದ್ದಾಗಿದೆ.’
– ಶ್ರೀ. ರಾಮ ಹೊನಪ (ಸೂಕ್ಷ್ಮ ಜ್ಞಾನ ಪ್ರಾಪ್ತಮಾಡಿಕೊಳ್ಳುವ ಸಾಧಕ), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಪಡೆಯುವ ದಿನಾಂಕ : ‘೧೦.೧.೨೦೨೬, ಸಮಯ : ಬೆಳಗ್ಗೆ ೧೦.೩೦)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !