ನಾರ್ವೆಯಲ್ಲಿ ಪ್ರಧಾನಿ ಮೋದಿ ಅವರ ಪ್ರವಾಸದ ವೇಳೆ ಭಾರತದ ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಕುರಿತು ವಿದೇಶಿ ಮಹಿಳಾ ಪತ್ರಕರ್ತೆಯ ಪ್ರಶ್ನೆಗಳು

ಓಸ್ಲೋ (ನಾರ್ವೆ), ನವದೆಹಲಿ – ಯುರೋಪಿಯನ್ ದೇಶವಾದ ನಾರ್ವೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಪ್ರಧಾನಿ ಜೊನಾಸ್ ಗಾರ್ ಸ್ಟೋರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಅವಕಾಶವಿರಲಿಲ್ಲ. ಈ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತೆ ಹ್ಯಾಲಿ ಲಿಂಗ್ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಕೇಳಲು ಯತ್ನಿಸಿದರು; ಆದರೆ, ಯೋಜನೆಯ ಪ್ರಕಾರ ಪ್ರಶ್ನೆಗಳಿಗೆ ನಿಷೇಧವಿದ್ದ ಕಾರಣ ಪ್ರಧಾನಿ ಮೋದಿ ಉತ್ತರಿಸಲಿಲ್ಲ. ಇದಕ್ಕಾಗಿ ಹ್ಯಾಲಿ ಲಿಂಗ್ ಎಕ್ಸ್ ನಲ್ಲಿ ಟೀಕಿಸಿದ್ದಾರೆ. ಅವರು, ‘ನಾರ್ವೆ ವರ್ಲ್ಡ್ ಪ್ರೆಸ್ ಫ್ರೀಡಮ್ ಇಂಡೆಕ್ಸ್’ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ. ಪತ್ರಕರ್ತರ ಕೆಲಸವೇ ಸರಕಾರವನ್ನು ಪ್ರಶ್ನಿಸುವುದು.’ ಇದರ ನಂತರ, ಭಾರತೀಯ ವಿದೇಶಾಂಗ ಸಚಿವಾಲಯವು ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಅಲ್ಲಿಗೆ ಹೋಗಿ ಅವರು ಭಾರತೀಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ‘ನಾವು ಭಾರತವನ್ನು ಏಕೆ ನಂಬಬೇಕು? ಭಾರತದಲ್ಲಿ ಮಾನವ ಹಕ್ಕುಗಳ ಬಗ್ಗೆ ನಡೆಯುತ್ತಿರುವ ಘಟನೆಗಳನ್ನು ನಿಲ್ಲಿಸಲಾಗುತ್ತದೆಯೇ? ಭಾರತೀಯ ಮಾಧ್ಯಮಗಳ ಕಠಿಣ ಪ್ರಶ್ನೆಗಳಿಗೆ ಪ್ರಧಾನಿ ಎಂದಾದರೂ ಉತ್ತರಿಸುತ್ತಾರೆಯೇ?’ ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ಪಶ್ಚಿಮ ವ್ಯವಹಾರಗಳ ಕಾರ್ಯದರ್ಶಿ ಸಿಬಿ ಜಾರ್ಜ್, ‘ಅನೇಕ ಜನರಿಗೆ ಭಾರತದ ಗಾತ್ರ ಮತ್ತು ಇಲ್ಲಿನ ಮಾಧ್ಯಮ ವ್ಯವಸ್ಥೆಯ ಬಗ್ಗೆ ತಿಳುವಳಿಕೆಯಿಲ್ಲ. ದೆಹಲಿಯಲ್ಲಿಯೇ 200ಕ್ಕೂ ಹೆಚ್ಚು ಸುದ್ದಿವಾಹಿನಿಗಳಿವೆ. ಇಂಗ್ಲಿಷ್, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರತಿದಿನ ಸಾವಿರಾರು ಸುದ್ದಿಗಳು ಪ್ರಸಾರವಾಗುತ್ತವೆ. ಜನರು ಕೆಲವು ಅಪರಿಚಿತ ಸ್ವಯಂಸೇವಾ ಸಂಸ್ಥೆಗಳ ವರದಿಗಳನ್ನು ಓದುತ್ತಾರೆ ಮತ್ತು ನಂತರ ಪ್ರಶ್ನೆಗಳನ್ನು ಕೇಳಲು ಬರುತ್ತಾರೆ’ ಎಂದು ಕಠಿಣ ಶಬ್ದಗಳಲ್ಲಿ ತಿರುಗೇಟು ನೀಡಿದರು.
ಜಾರ್ಜ್ ಮಾತು ಮುಂದುವರೆಸುತ್ತಾ,
1. ಮೊದಲು ಭಾರತ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಒಂದು ದೇಶವು ನಾಲ್ಕು ಅಂಶಗಳಿಂದ ಮಾಡಲ್ಪಟ್ಟಿದೆ; ಜನಸಂಖ್ಯೆ, ಸರಕಾರ, ಸಾರ್ವಭೌಮತ್ವ ಮತ್ತು ಪ್ರದೇಶ. ಭಾರತವು 5 ಸಾವಿರ ವರ್ಷಗಳಷ್ಟು ಹಳೆಯದಾದ ಪ್ರಾಚೀನ ಸಂಸ್ಕೃತಿಯಾಗಿದ್ದು, ನಾವು ಜಗತ್ತಿಗೆ ಬಹಳಷ್ಟು ನೀಡಿದ್ದೇವೆ.
2. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಭಾರತವು ತನ್ನನ್ನು ತಾನು ಪ್ರಪಂಚದಿಂದ ಪ್ರತ್ಯೇಕಿಸಿಕೊಳ್ಳಲಿಲ್ಲ. ಭಾರತವು ಇತರ ದೇಶಗಳಿಗೆ ಸಹಾಯ ಮಾಡಿತು ಮತ್ತು ಲಸಿಕೆಯನ್ನು ಇತರ ದೇಶಗಳಿಗೆ ತಲುಪಿಸಿತು. ಇದುವೇ ನಂಬಿಕೆಯ ನಿಜವಾದ ಕಾರಣ.
3. ಭಾರತವು ‘ಜಿ20’ (‘ಜಿ20’ ಅಂದರೆ 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟದ (ಇದರಲ್ಲಿ 27 ದೇಶಗಳಿವೆ) ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಂಘಟನೆ) ಮತ್ತು ‘ಎಐ ಶೃಂಗಸಭೆ’ (ಕೃತಕ ಬುದ್ಧಿಮತ್ತೆ ಆಧಾರಿತ ಸಮ್ಮೇಳನ) ದಂತಹ ವೇದಿಕೆಗಳಲ್ಲಿಯೂ ಪ್ರಪಂಚದ ಪ್ರಮುಖ ವಿಷಯಗಳನ್ನು ಪ್ರಸ್ತುತಪಡಿಸಿದೆ ಮತ್ತು ಜವಾಬ್ದಾರಿಯುತ ಪಾತ್ರವನ್ನು ವಹಿಸಿದೆ.
4. ನಾವು ಪ್ರಪಂಚದ ಜನಸಂಖ್ಯೆಯ ಆರನೇ ಒಂದು ಭಾಗವಾಗಿದ್ದೇವೆ; ಆದರೆ ಪ್ರಪಂಚದ ಸಮಸ್ಯೆಗಳ ಆರನೇ ಒಂದು ಭಾಗವಲ್ಲ. ಭಾರತದಲ್ಲಿ ಯಾರೊಬ್ಬರ ಹಕ್ಕುಗಳ ಉಲ್ಲಂಘನೆಯಾದರೆ, ಅವರಿಗೆ ನ್ಯಾಯಾಲಯದ ಮೊರೆ ಹೋಗುವ ಹಕ್ಕಿದೆ ಮತ್ತು ಭಾರತವು ತನ್ನ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆಪಡುತ್ತದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು