
ದೆಹಲಿ – ಇರಾನ್ ಯುದ್ಧದಿಂದಾಗಿ ಇಂಧನ ಕೊರತೆಯಾಗುತ್ತಿರುವುದರಿಂದ ದೇಶದ ಆರ್ಥಿಕ ಸ್ಥಿತಿಯ ಮೇಲಾಗುವ ಒತ್ತಡವನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಮನವಿ ಮಾಡಿದ್ದಾರೆ. ಆ ದೃಷ್ಟಿಯಿಂದ ಅವರು ಯಾವ ಸಂದರ್ಭದಲ್ಲಿ ಮನವಿ ಮಾಡಿದ್ದಾರೆಯೋ, ಅದಕ್ಕಾಗಿ ಪ್ರತಿವರ್ಷ ಭಾರತಕ್ಕೆ ಎಷ್ಟು ರೂಪಾಯಿ ಖರ್ಚು ಮಾಡಬೇಕಾಗುತ್ತದೆ ?, ಎಂಬುದರ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಒಂದು ವೇಳೆ ಜನತೆಯು ಪ್ರಧಾನಿಯವರು ಮಾಡಿದ ಮನವಿಯನ್ನು ಪಾಲಿಸಿದರೆ, ಭಾರತದ ವಿದೇಶಿ ವಿನಿಮಯದ ಉಳಿತಾಯವಾಗುತ್ತದೆ; ಏಕೆಂದರೆ ಈ ಎಲ್ಲ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ.

| ಪ್ರಧಾನಿ ಮೋದಿಯವರ ಮನವಿ | ವಾರ್ಷಿಕ ಖರ್ಚು | |
| 1 | ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ ! | 13 ಲಕ್ಷ 30 ಸಾವಿರ ಕೋಟಿ ರೂಪಾಯಿ |
| 2 | ಅಡುಗೆಯಲ್ಲಿ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ ! | 1 ಲಕ್ಷ 65 ಸಾವಿರ ಕೋಟಿ ರೂಪಾಯಿ |
| 3 | ಕನಿಷ್ಠ ಒಂದು ವರ್ಷ ಚಿನ್ನ ಖರೀದಿಸುವುದನ್ನು ತಪ್ಪಿಸಿ ! | 4 ಲಕ್ಷ 10 ಸಾವಿರ ಕೋಟಿ ರೂಪಾಯಿ |
| 4 | ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಶೇಕಡಾ 50 ರಷ್ಟು ಮಾತ್ರ ಮಾಡಿ ! | 2 ಲಕ್ಷ 50 ಸಾವಿರ ಕೋಟಿ ರೂಪಾಯಿ |
| 5 | ವಿದೇಶದ ಬದಲು ದೇಶದಲ್ಲಿಯೇ ಪ್ರವಾಸ ಮಾಡಿ ! | 1 ಲಕ್ಷ 50 ಸಾವಿರ ಕೋಟಿ ರೂಪಾಯಿ |
| 6 | ವಿದೇಶಿ ವಸ್ತುಗಳ ಬದಲಿಗೆ ಭಾರತೀಯ ವಸ್ತುಗಳನ್ನು ಬಳಸಿ ! | ಕೋಟ್ಯಂತರ ರೂಪಾಯಿ (ವಿವಿಧ ಕ್ಷೇತ್ರಗಳಲ್ಲಿ) |
| 7 | ಸಾರಿಗೆ ವೆಚ್ಚವನ್ನು ಉಳಿಸಲು ಮನೆಯಿಂದಲೇ ಕೆಲಸ ಮಾಡಿ (ವರ್ಕ್ ಫ್ರಮ್ ಹೋಮ್) ! | ಇಂಧನ ಮತ್ತು ವಿದೇಶಿ ವಿನಿಮಯದಲ್ಲಿ ಭಾರಿ ಉಳಿತಾಯ |
ಪ್ರಧಾನಿಯವರು ಮಾಡಿದ ಮನವಿಯನ್ನು ಎಲ್ಲ ದೇಶವಾಸಿಗಳು ಪಾಲಿಸಬೇಕು ! – ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಇನ್ನೂ ಮನೆಬಳಕೆಯ ಗ್ಯಾಸ್‌ಗಾಗಿ ಸಾಮಾನ್ಯ ಜನರು ಸರದಿಯಲ್ಲಿ ನಿಲ್ಲಬೇಕಾಗುತ್ತಿದೆ. ಭವಿಷ್ಯದ ಪರಿಸ್ಥಿತಿಯಿಂದಾಗಿ ದೇಶವಾಸಿಗಳು ತಮ್ಮ ಮೇಲೆ ಕೆಲವು ನಿರ್ಬಂಧಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕೆಲವು ಪ್ರಮುಖ ಮನವಿಗಳನ್ನು ಮಾಡಿದ್ದಾರೆ. ಅವರ ಮನವಿಗಳು ಯೋಗ್ಯವಾಗಿವೆ. ಪ್ರಧಾನಿಯವರು ಮಾಡಿದ ಈ ಮನವಿಗಳನ್ನು ಎಲ್ಲ ದೇಶವಾಸಿಗಳು ಪಾಲಿಸಬೇಕು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ.
मा. पंतप्रधान नरेंद्र मोदीजी यांनी केलेल्या आवाहनाला सर्वांनी प्रतिसाद द्यावा.
मा. प्रधानमंत्री नरेंद्र मोदी जी इनके द्वारा किए गए निवेदन पर सभी को प्रतिसाद देना चाहिए।
(नवी दिल्ली | 11-5-2026)@narendramodi#NewDelhi pic.twitter.com/WzWpmyrYjo
— Devendra Fadnavis (@Dev_Fadnavis) May 11, 2026
ಅವರು ಮಾತು ಮುಂದುವರೆಸಿ, ಪಾಕಿಸ್ತಾನದಲ್ಲಿ ತೈಲ ಬೆಲೆ ಪ್ರತಿ ಲೀಟರ್‌ಗೆ 450 ರೂಪಾಯಿ ಆಗಿದೆ; ಆದರೆ ನಮ್ಮ ಪ್ರಧಾನಿಯವರು ಯಾವುದೇ ರೀತಿಯಲ್ಲಿ ಪೂರೈಕೆಯ ಮೇಲೆ ಪರಿಣಾಮ ಬೀರಲು ಬಿಟ್ಟಿಲ್ಲ; ಆದರೆ ಮೂಲ ಸಮಸ್ಯೆಯನ್ನು ನಾವು ತಿಳಿದುಕೊಳ್ಳದಿದ್ದರೆ ಮತ್ತು ಇದರ ಬಳಕೆಯನ್ನು ಸರಿಯಾದ ಪ್ರಮಾಣದಲ್ಲಿ ಮಾಡದಿದ್ದರೆ, ನಾವೂ ಸಹ ಕಷ್ಟವನ್ನು ಎದುರಿಸಬೇಕಾಗುತ್ತದೆ.
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !