
ಗೋವಾದಲ್ಲಿ ಹಿಂದೆ ಭವ್ಯವಾದ ದೇವಸ್ಥಾನ ಸಂಸ್ಕೃತಿ ಇತ್ತು. ಈ ದೇವಸ್ಥಾನಗಳ ಮೂಲಕ ಗೋವಾ ರಾಜ್ಯವು ಭಾರತೀಯ ಸಂಸ್ಕೃತಿಯೊಂದಿಗೆ ಜೋಡಿಸಲ್ಪಟ್ಟಿತ್ತು. ಪೋರ್ಚುಗೀಸರು ಇದನ್ನರಿತು, ಹಿಂದೂ ಸಂಸ್ಕೃತಿಯನ್ನು ನಾಶಪಡಿಸುವ ಉದ್ದೇಶದಿಂದ ದೇವಸ್ಥಾನ ಗಳನ್ನು ನಾಶಪಡಿಸಿದರು. ಗೋವಾದ ಬಹುತೇಕ ದೇವಸ್ಥಾನಗಳನ್ನು ಇತರ ರಾಜ್ಯಗಳ ದೇವಸ್ಥಾನಗಳಿಗೆ ಹೋಲಿಸಿದರೆ ಅವು ಅತ್ಯಂತ ವಿಶಾಲವಾಗಿವೆ. ಗೋವಾದಲ್ಲಿರುವ ಕೆಲವು ಪ್ರಸಿದ್ಧ ದೇವಸ್ಥಾನಗಳ ಇತಿಹಾಸವೂ ರೋಮಾಂಚಕವಾಗಿವೆ. ಗೋವಾವನ್ನು ಪೋರ್ಚುಗೀಸರು ೪೫೦ ವರ್ಷಗಳ ಕಾಲ ಆಳಿದರು. ಪೋರ್ಚುಗೀಸರು ಗೋವಾ ದಲ್ಲಿ ನೆಲೆಯೂರಲು ಪ್ರಾರಂಭಿಸಿದಾಗ, ಅವರು ಮೊಟ್ಟಮೊದಲು ಹಿಂದೂಗಳ ದೇವಸ್ಥಾನಗಳನ್ನು ಒಡೆಯಲು ಪ್ರಾರಂಭಿಸಿದರು. ತಿಸವಾಡಿ (ಪಣಜಿ ಮತ್ತು ಸುತ್ತಮುತ್ತಲಿನ ಪ್ರದೇಶ) ತಾಲೂಕಿನ ದೇವಸ್ಥಾನಗಳ ಮೇಲೆ ಆಗ ಮೊದಲ ಆಘಾತ ಬಿತ್ತು. ಪೋರ್ಚುಗೀಸರ ಈ ಕ್ರೌರ್ಯವನ್ನು ನೋಡಿ ಇತರೆಡೆಯ ಹಿಂದೂ ಭಕ್ತರು ಎಚ್ಚೆತ್ತರು. ಅವರು ತಮ್ಮ ತಮ್ಮ ದೇವಸ್ಥಾನಗಳ ದೇವತೆಗಳ ಮೂರ್ತಿಗಳನ್ನು ನದಿಗಳ ಮೂಲಕ ದಾಟಿಸಿ ಪೋರ್ಚುಗೀಸರ ಪ್ರಭಾವ ಇಲ್ಲದ ಸ್ಥಳಗಳಿಗೆ ಸ್ಥಳಾಂತರಿಸಿದರು ಅಥವಾ ಆ ಮೂರ್ತಿಯಲ್ಲಿನ ದೈವತ್ವವನ್ನು ಯಾವುದಾದರೊಂದು ಕಲ್ಲು ಅಥವಾ ಲೋಹದ ಮೂಲಕ ಸ್ಥಳಾಂತರಿಸಿದರು. ಕೆಲವರು ಮೂರ್ತಿಗಳನ್ನು ಬಾವಿಯಲ್ಲಿ ಅಡಗಿಸಿಟ್ಟರು ಮತ್ತು ನಂತರ ಸರಿಯಾದ ಸಮಯದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸಿ ಪುನಃ ಪ್ರತಿಷ್ಠಾಪನೆ ಮಾಡಿದರು. ಈ ರೀತಿ ಸ್ಥಳಾಂತರಗೊಂಡ ಮೂರ್ತಿಗಳಿಗಾಗಿ ಕಟ್ಟಲಾದ ಬಹುತೇಕ ದೇವಸ್ಥಾನಗಳು ಇಂದು ತಮ್ಮ ಭವ್ಯತೆಯನ್ನು ಮೆರೆಯುತ್ತಿವೆ. ದೇವಸ್ಥಾನಗಳ ಪಕ್ಕದಲ್ಲಿ ಸಭಾಂಗಣ, ಮಹಾಜನರಿಗೆ ಉಳಿದುಕೊಳ್ಳಲು ಕೋಣೆಗಳು, ದೇವಸ್ಥಾನದ ಕಛೇರಿ, ಸಾಮಗ್ರಿಗಳನ್ನು ಇಡಲು ಕೋಣೆಗಳು, ಹೀಗೆ ದೇವಸ್ಥಾನಗಳ ಸ್ವರೂಪವು ಬದಲಾಯಿತು. ಅಂದರೆ ದೇವಸ್ಥಾನಗಳ ಈ ಸಮೃದ್ಧಿಯ ಹಿಂದೆ ಆ ದೇವಸ್ಥಾನಗಳ ಮಹಾಜನರು ಮತ್ತು ಸೇವಕರ ಕೊಡುಗೆ ಬಹಳ ದೊಡ್ಡದಾಗಿದೆ. ಈ ಸಮೃದ್ಧಿಯನ್ನು ಸಾಧಿಸುವಾಗಲೂ ಸಂಬಂಧಿತ ದೇವಸ್ಥಾನಗಳು ಎಲ್ಲಾ ಸಂಪ್ರದಾಯ, ವಿಧಿಗಳನ್ನು ಪಾಲಿಸಿ ಅವುಗಳ ಪಾವಿತ್ರ್ಯ ಕಾಪಾಡಿಕೊಂಡಿವೆ.
ಸಂತರ ಶ್ರೇಷ್ಠ ವಿಚಾರಗಳು, ಮರ್ಯಾದಾ ಪುರುಷೋತ್ತಮ ಶ್ರೀರಾಮ, ಶ್ರೀಕೃಷ್ಣನ ಸ್ಫೂರ್ತಿದಾಯಕ ಕಥೆಗಳಿಂದ ಇಂದಿನ ಬಹಳಷ್ಟು ಸಮಾಜ ಮತ್ತು ಮುಂದಿನ ಪೀಳಿಗೆ ಸಂಪೂರ್ಣ ವಂಚಿತವಾಗಿದೆ. ಧರ್ಮಶಿಕ್ಷಣ ನೀಡಲು ದೇವಸ್ಥಾನಗಳು ಮುಂದಾಳತ್ವ ವಹಿಸಿದರೆ, ಸಮಾಜವು ಧರ್ಮಶಿಕ್ಷಿತವಾಗುತ್ತದೆ ಮತ್ತು ಸಾಧನೆಯನ್ನೂ ಪ್ರಾರಂಭಿಸುತ್ತದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !