‘ದೇವಸ್ಥಾನ ಇನಾಮ್ ನಿರ್ಮೂಲನೆ’ ಅಲ್ಲ, ಬದಲಿಗೆ ‘ದೇವಸ್ಥಾನ ಭೂಮಿ ಸಂರಕ್ಷಣೆ ಕಾಯ್ದೆ’ ತರುವ ನಿಟ್ಟಿನಲ್ಲಿ ಸರಕಾರಿ ದೇವಸ್ಥಾನ ಸಮಿತಿ ಪಟ್ಟು!

ಮುಂಬಯಿ – ರಾಜ್ಯದಲ್ಲಿನ ದೇವಸ್ಥಾನ ಇನಾಮ್ ಭೂಮಿಗಳನ್ನು ಸಂರಕ್ಷಿಸಿ, ವರ್ಷಾನುಗಟ್ಟಲೆಯಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ‘ದೇವಸ್ಥಾನ ಇನಾಮ್ ನಿರ್ಮೂಲನೆ’ ಅಲ್ಲ, ಬದಲಿಗೆ ‘ದೇವಸ್ಥಾನ ಭೂಮಿ ಸಂರಕ್ಷಣೆ ಕಾಯ್ದೆ’ಯನ್ನು ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಸರಕಾರಿ ದೇವಸ್ಥಾನ ಸಮಿತಿಯು ದೃಢ ನಿಲುವು ತಳೆದಿದೆ. ಸಚಿವಾಲಯದಲ್ಲಿ ಇತ್ತೀಚೆಗೆ ‘ದೇವಸ್ಥಾನ ಇನಾಮ್ ಭೂಮಿ ಸಂವರ್ಧನೆ ಸಮಿತಿ’ಯ ಮೊದಲ ಮಹತ್ವದ ಸಭೆಯು ಕಂದಾಯ ಸಚಿವ ಚಂದ್ರಶೇಖರ ಬಾವನಕುಳೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ವಿವಿಧ ದೇವಸ್ಥಾನಗಳ ವಿಶ್ವಸ್ತರು ಭಾಗವಹಿಸಿದ್ದರು.
‘ಹೊಸ ಕಾಯ್ದೆಯ ಕರಡನ್ನು ಸಿದ್ಧಪಡಿಸುವಾಗ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ಹಾಗೆಯೇ ಹಳೆಯ ಕಾಯ್ದೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಭವಿಷ್ಯದಲ್ಲಿ ಯಾವುದೇ ಕಾನೂನು ತೊಡಕುಗಳು ನಿರ್ಮಾಣವಾಗದಂತೆ ಜಾಗ್ರತೆ ವಹಿಸಬೇಕು’, ಎಂದು ಕಂದಾಯ ಸಚಿವ ಚಂದ್ರಶೇಖರ ಬಾವನಕುಳೆ ಅವರು ಸೂಚಿಸಿದರು.
1. ಸಭೆಯ ಆರಂಭದಲ್ಲಿ ಪ್ರಸ್ತಾವಿತ ಕಾಯ್ದೆಯ ಬಗ್ಗೆ ವಿವರವಾದ ಅಧ್ಯಯನವನ್ನು ಒಳಗೊಂಡ ವಿಶೇಷ ಪ್ರಸ್ತುತಿಯನ್ನು (ಪಿಪಿಟಿ) ದೇವಸ್ಥಾನ ಸಮಿತಿಯ ಪರವಾಗಿ ಮಂಡಿಸಲಾಯಿತು.
2. ಪ್ರಸ್ತಾವಿತ ಕಾಯ್ದೆಯನ್ನು ಸಿದ್ಧಪಡಿಸಲು ರಾಜ್ಯದ ಎಲ್ಲಾ ದೇವಸ್ಥಾನಗಳ ಭೂಮಿಗಳ ವರ್ಗವಾರು ಮಾಹಿತಿಯನ್ನು ಸಮಿತಿಗೆ ಲಭ್ಯವಾಗಿಸುವುದು, ಇನಾಮ್ ಭೂಮಿಗೆ ಸಂಬಂಧಿಸಿದಂತೆ ಬಂದಿರುವ ಎಲ್ಲಾ ದೂರುಗಳು ಮತ್ತು ಆಕ್ಷೇಪಣೆಗಳನ್ನು ವರ್ಗೀಕರಿಸಿ ನೀಡುವುದು, ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ವ್ಯಾಪ್ತಿಯಲ್ಲಿರುವ ಸಾವಿರಾರು ಎಕರೆ ಭೂಮಿಯ ಹಗರಣದ ವರದಿಯನ್ನು ಸಮಿತಿಯ ಮುಂದೆ ಮಂಡಿಸುವುದು, ವಿಶೇಷವಾಗಿ ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ‘ದೇವ್ ರಾಯಿ’ ಯ ಕೆಲವು ಸಾವಿರಾರು ಎಕರೆ ಭೂಮಿಯ ಮೇಲೆ ಸರಕಾರದ ಹೆಸರು ದಾಖಲಾಗಿರುವುದನ್ನು ಬದಲಾಯಿಸಿ, ಈ ಭೂಮಿಯನ್ನು ಮತ್ತೆ ‘ದೇವ್ ರಾಯಿ ಮತ್ತು ದೇವ್ ರಾಹಾಟಿ’ ಹೆಸರಿನಲ್ಲೇ ಮಾಡುವುದು, ಸರಕಾರೀಕರಣಗೊಂಡಿರುವ ವಿವಿಧ ದೇವಸ್ಥಾನಗಳ ಸಾವಿರಾರು ಎಕರೆ ಭೂಮಿಗಳ ಮೇಲಿನ ಅತಿಕ್ರಮಣ ಮತ್ತು ಅಕ್ರಮ ದಾಖಲಾತಿಗಳು, ದೇವಸ್ಥಾನಗಳ ಗಾವಠಾಣ್ (ಗ್ರಾಮದ ವ್ಯಾಪ್ತಿಯ) ಭೂಮಿಗೆ ಸಂಬಂಧಿಸಿದಂತೆ ನಿರ್ಮಾಣವಾಗಿರುವ ವಿವಾದಗಳ ಮಾಹಿತಿಯನ್ನು ಮೊದಲಿಗೆ ಲಭ್ಯವಾಗಿಸುವಂತೆ ಒತ್ತಾಯಿಸಲಾಯಿತು.
3. ಹೊಸ ಕಾಯ್ದೆಯನ್ನು ಕೇವಲ ಭೂಮಿಗೆ ಮಾತ್ರ ಸೀಮಿತಗೊಳಿಸದೆ, ಅದು ದೇವಸ್ಥಾನದ ಸರ್ವಾಂಗೀಣ ಮತ್ತು ವ್ಯಾಪಕ ಹಿತಾಸಕ್ತಿಯನ್ನು ರಕ್ಷಿಸುವಂತಿರಬೇಕು ಎಂದೂ ಸಹ ನಿಶ್ಚಯಿಸಲಾಯಿತು.
4. ವಕ್ಫ್ ಬೋರ್ಡ್ ಭೂಮಿಗಳಂತೆಯೇ ಹಿಂದೂ ದೇವಸ್ಥಾನಗಳ ಭೂಮಿಗಳಿಗೂ ವಿಶೇಷ ಕಾನೂನು ಸಂರಕ್ಷಣೆ ಸಿಗಬೇಕು ಎಂಬುದರ ಕಡೆಗೂ ಗಮನ ಸೆಳೆಯಲಾಯಿತು.
5. ಡಿಸೆಂಬರ್ 2026 ರಿಂದ ಮಾರ್ಚ್ 2027 ರ ಅಧಿವೇಶನದಲ್ಲಿ ಪರಿಪೂರ್ಣ ಕಾಯ್ದೆಯನ್ನು ರೂಪಿಸಲು ಸಮಿತಿಯ ಪ್ರತಿ ವಾರವೂ ಪ್ರತ್ಯಕ್ಷ ಮತ್ತು ಆನ್ ಲೈನ್ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಈ ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಕಾಸ ಖಾರಗೆ, ಜಂಟಿ ಕಾರ್ಯದರ್ಶಿ ಕೈಲಾಸ ಗಾಯಕವಾಡ ಸೇರಿದಂತೆ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಮನಿಷಾ ಜಾಯಭಾಯೆ, ಉಪಕಾರ್ಯದರ್ಶಿ ಸಂಜಯ ಧಾರುರಕರ, ಕಾನೂನು ಮತ್ತು ನ್ಯಾಯ ಇಲಾಖೆಯ ಉಪಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಇದರೊಂದಿಗೆ ಕೊಂಕಣ ಮತ್ತು ಪುಣೆ ವಿಭಾಗೀಯ ಆಯುಕ್ತರು, ಹಾಗೆಯೇ ಠಾಣೆ ಮತ್ತು ಅಹಿಲ್ಯಾನಗರದ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು. ಇವರಲ್ಲದೆ ಸಮಿತಿಯ ಸದಸ್ಯರಾದ ಶ್ರೀ. ಸಂದೀಪ ಮಹಾಜನ, ನ್ಯಾಯವಾದಿ ಆಶಿಶ ಸೋನವಣೆ, ಶ್ರೀ. ಸಂಜೀವ ದೇಶಪಾಂಡೆ, ಶ್ರೀ. ಅನಿಲ ಸಾಂಬರೆ, ನ್ಯಾಯವಾದಿ ರಾಜೇಶ ಮುಧೋಳಕರ, ಶ್ರೀ. ಜಗದೀಶ ಪಾಟೀಲ, ನ್ಯಾಯವಾದಿ ರವೀಂದ್ರ ಕ್ಷೀರಸಾಗರ, ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕರಾದ ಶ್ರೀ. ಸುನಿಲ ಘನವಟ, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್, ಶ್ರೀ. ಅನೂಪ ಜೈಸ್ವಾಲ್, ಶ್ರೀ. ವಿಜಯ ಪೋರೆ ಮತ್ತು ಚಿಂಚವಾಡ ದೇವಸ್ಥಾನ ಟ್ರಸ್ಟನ ವಿಶ್ವಸ್ತ ಶ್ರೀ. ಕೇಶವ ವಿದ್ವಾಂಸ ಉಪಸ್ಥಿತರಿದ್ದರು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation