‘ಸರಕಾರ ಈಗ ಭಾಜಪದ ನಿಲುವನ್ನೇ ಬೆಂಬಲಿಸುತ್ತಿದೆಯೇ?’(ಅಂತೆ?)

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಸಿ. ಜೋಸೆಫ್ ವಿಜಯ ಅವರ ಸರಕಾರವು ದೇವಸ್ಥಾನಗಳ ಹಣವನ್ನು ದೇವಸ್ಥಾನಗಳ ಧಾರ್ಮಿಕ ಕಾರ್ಯಗಳಿಗಾಗಿಯೇ ಬಳಸಲು ನಿರ್ಧರಿಸಿರುವ ಬಗ್ಗೆ ದ್ರಮುಕ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ವಿರೋಧಿಸಿದರು. ‘ಸರಕಾರ ಈಗ ಭಾಜಪದ ನಿಲುವನ್ನೇ ಬೆಂಬಲಿಸುತ್ತಿದೆಯೇ?’, ಎಂದು ಅವರು ಪ್ರಶ್ನಿಸಿದರು.
❓ Is the Joseph Vijay-led government adopting the BJP's stand on temple funds?
🚨 Udhayanidhi Stalin, who once compared Sanatan Dharma to "dengue and malaria," criticises Tamil Nadu government's policy of spending temple funds only on Hindu religious activities!
Even Tamil… https://t.co/g37eR3byJQ pic.twitter.com/QhtZ4C2dW3
— Sanatan Prabhat (@SanatanPrabhat) June 24, 2026
ಉದಯನಿಧಿ ಮಾತನಾಡಿ, ನಾನು ಸರಕಾರದ ನೀತಿಯನ್ನು ನೋಡಿದಾಗ, ನನ್ನ ಮನಸ್ಸಿನಲ್ಲಿ ಸರಕಾರವು ಈಗ ಭಾಜಪದ ನಿಲುವನ್ನೇ ಬೆಂಬಲಿಸುತ್ತಿದೆಯೇ ಎಂಬ ಸಂಶಯ ಮೂಡುತ್ತದೆ, ಇದರ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಯೇ ಅಸ್ತಿತ್ವದಲ್ಲಿರಬಾರದು! ಭಾಜಪ ಮತ್ತು ವಿವಿಧ ಬಲಪಂಥೀಯ ಸಿದ್ಧಾಂತಗಳ ಸಂಘಟನೆಗಳು ದೀರ್ಘಕಾಲದಿಂದಲೂ ಧಾರ್ಮಿಕ ದತ್ತಿ ಇಲಾಖೆಯು ಶಾಲೆ ಮತ್ತು ಕಾಲೇಜುಗಳನ್ನು ನಡೆಸಬಾರದು ಎಂಬ ನಿಲುವನ್ನು ಹೊಂದಿವೆ. ಇದು ಕೂಡ ಹಾಗೆಯೇ ಇದೆ. ಈ ವಿಷಯದ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳೂ ದಾಖಲಾಗಿವೆ. ಆದ್ದರಿಂದ ಈ ಹೊಸ ನಿಲುವು ಕೇವಲ ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಈ ನಿಯಮಗಳನ್ನು ಶೈಕ್ಷಣಿಕ ಸಂಸ್ಥೆಗಳಿಗೂ ಅನ್ವಯಿಸಲಾಗುತ್ತದೆಯೇ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ’’ ಎಂದರು.
ಉದಯನಿಧಿ ಅವರಿಗೆ ತಕ್ಕ ಉತ್ತರ ನೀಡುತ್ತಾ ಮುಖಭಂಗ ಮಾಡಿದ ಧಾರ್ಮಿಕ ದತ್ತಿ ಇಲಾಖೆಯ ಸಚಿವ ರಮೇಶ!
ಉದಯನಿಧಿ ಅವರ ಈ ಟೀಕೆಗೆ ಉತ್ತರಿಸಿದ ಧಾರ್ಮಿಕ ದತ್ತಿ ಇಲಾಖೆಯ ಸಚಿವ ರಮೇಶ ಅವರು,
1. ನಮ್ಮ ನೀತಿಯ ಅರ್ಥವೇನೆಂದರೆ, ದೇವಸ್ಥಾನದ ಆದಾಯವನ್ನು ದೇವಸ್ಥಾನಗಳಿಗಾಗಿ ಮತ್ತು ದರ್ಶನಕ್ಕಾಗಿ ಬರುವ ಭಕ್ತರಿಗಾಗಿಯೇ ಖರ್ಚು ಮಾಡಲಾಗುವುದು. ಭಕ್ತರಿಗೆ ಅಗತ್ಯವಿರುವ ವಸತಿ ವ್ಯವಸ್ಥೆ, ಶೌಚಾಲಯಗಳು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಬದಲಿಗೆ, ಹಿಂದಿನ ಸರಕಾರವು (ಉದಯನಿಧಿ ಅವರ ದ್ರಮುಕ ಸರಕಾರವು) ಕೇವಲ ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಆದಾಯ ಗಳಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಪ್ರಾರಂಭಿಸಿತ್ತು. ಆದ್ದರಿಂದಲೇ ನಾವು ಅವುಗಳನ್ನು ಮರುಪರಿಶೀಲಿಸಿ ರದ್ದುಗೊಳಿಸಿದ್ದೇವೆ. ಈ ಯೋಜನೆಗಳಲ್ಲಿ ಹಲವು ನ್ಯಾಯಾಲಯದ ಪ್ರಕರಣಗಳು ಮತ್ತು ತಡೆಯಾಜ್ಞೆಗಳನ್ನು ಎದುರಿಸುತ್ತಿದ್ದವು, ಇದು ಈಗಿನ ಸರಕಾರದ ನಿರ್ಧಾರವನ್ನು ಸಮರ್ಥಿಸುತ್ತದೆ.
2. ಕುನೂರಿನ ಅರುಳಮಿಗು ವಿನಾಯಕ ದೇವಸ್ಥಾನದಲ್ಲಿ ಹಿಂದಿನ ಸಚಿವರು ದೇವಸ್ಥಾನದ ಹಣವನ್ನು ಬಳಸಿ ಸುಮಾರು 10 ಕೋಟಿ ರೂಪಾಯಿ ವೆಚ್ಚದ ‘ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್’ (ಬಹು ಮಹಡಿ ವಾಹನ ನಿಲ್ದಾಣ) ಯೋಜನೆಯನ್ನು ಘೋಷಿಸಿದ್ದರು; ಆದರೆ ಆ ದೇವಸ್ಥಾನಕ್ಕೆ ಸರಾಸರಿ ತಿಂಗಳಿಗೆ ಕೇವಲ 500 ಭಕ್ತರು ಮಾತ್ರ ಬರುತ್ತಾರೆ. ಆ ದೇವಸ್ಥಾನದಲ್ಲಿ ಕನಿಷ್ಠ ಶೌಚಾಲಯದ ಸೌಲಭ್ಯವೂ ಇಲ್ಲ. ಅಷ್ಟೇ ಅಲ್ಲದೆ, ಕುನೂರ್ ಮತ್ತು ಉದಕಮಂಡಲ (ಊಟಿ) ಹಾಗೂ ಸುತ್ತಮುತ್ತಲಿನ ಸುಮಾರು 50 ದೇವಸ್ಥಾನಗಳಲ್ಲಿ ಮೂಲಭೂತ ಸ್ವಚ್ಛತೆಯ ಸೌಲಭ್ಯಗಳ ಕೊರತೆಯಿದೆ. ಇಂತಹ ಮೂಲಭೂತ ಸೌಕರ್ಯಗಳೇ ಲಭ್ಯವಿಲ್ಲದಿರುವಾಗ, ದೇವಸ್ಥಾನದ ಹಣವನ್ನು ಬಳಸಿ ‘ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್’ ನಿರ್ಮಿಸುವ ಅಗತ್ಯವಾದರೂ ಏನಿದೆ? ಅದು ವಾಣಿಜ್ಯ ಯೋಜನೆಯಲ್ಲವೇ? ನಾವು ಈ ಯೋಜನೆಗಳನ್ನು ನಿಲ್ಲಿಸಿದ್ದೇವೆ; ಏಕೆಂದರೆ ನಾವು ದೇವಸ್ಥಾನದ ನಿಧಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದರ ವಿರುದ್ಧವಾಗಿದ್ದೇವೆ. ಅದರ ಬದಲಿಗೆ, ಸರಕಾರಿ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ ನಾವು ಪರ್ಯಾಯ ಯೋಜನೆಗಳನ್ನು ರೂಪಿಸುತ್ತೇವೆ, ಇದರಿಂದ ದೇವಸ್ಥಾನಗಳಿಗೆ ಮತ್ತು ಭಕ್ತರಿಗೆ ನೇರ ಲಾಭವಾಗಲಿದೆ.
3. ನಾವು ಸಾರ್ವಜನಿಕ ಹಿತಾಸಕ್ತಿಯ ಶೈಕ್ಷಣಿಕ ಸಂಸ್ಥೆಗಳನ್ನು ಅಥವಾ ಆರೋಗ್ಯ ಸೌಲಭ್ಯಗಳನ್ನು ನಿರ್ಮಿಸುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಕೇಂದ್ರ ಸರಕಾರವು ಪಳನಿಯ ಆಸ್ಪತ್ರೆಗಾಗಿ ಧನಸಹಾಯ ನೀಡಲು ಸಿದ್ಧವಾಗಿತ್ತು; ಆದರೆ ‘ಇತರ ವೆಚ್ಚಗಳನ್ನು ಭರಿಸಲು ಸಾಧ್ಯವಿಲ್ಲ’ ಎಂದು ಹೇಳಿ ಹಿಂದಿನ ಸರಕಾರವು ಈ ಪ್ರಸ್ತಾವನೆಯನ್ನು ತಡೆಹಿಡಿದಿತ್ತು. ನಾವು ಈಗ ಆ ಯೋಜನೆಯನ್ನು ಪುನಃ ಪ್ರಾರಂಭಿಸಿದ್ದು, ಅದನ್ನು ಮುಂದುವರಿಸಲು ಅಧ್ಯಯನವನ್ನು ಕೈಗೊಂಡಿದ್ದೇವೆ.
4. ಮುಖ್ಯಮಂತ್ರಿ ವಿಜಯ ಮತ್ತು ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ನೇತೃತ್ವದ ಸರಕಾರಕ್ಕೆ ದೇವಸ್ಥಾನದ ಹಣವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಯಾವುದೇ ಅಗತ್ಯವಿಲ್ಲ. ದೇವಸ್ಥಾನದ ನಿಧಿಯನ್ನು ಎಂದಿಗೂ ವ್ಯಾಪಾರೀಕರಣಗೊಳಿಸಬಾರದು ಎಂದು ರಮೇಶ ಅವರು ಕೊನೆಯಲ್ಲಿ ತಿಳಿಸಿದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಭಾರತದ ಆಶಾವಾದಿ ‘ಜೆನ್ ಝಿ’