
ದೇವಸ್ಥಾನದಲ್ಲಿರುವ ವೈಶಿಷ್ಟ್ಯಪೂರ್ಣ ರಚನೆ !
ಶಿವನಿಗೆ ಸಮರ್ಪಿಸಲಾದ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ಭವ್ಯವಾದ ನಂದಿಯನ್ನು ಹೊಂದಿರುವ ನಂದಿ ಮಂಟಪ ಗೋಚರಿಸುತ್ತದೆ. ಮುಖ್ಯ ದೇವಸ್ಥಾನದ ಹೊರಭಾಗದ ಛಾವಣಿಯ ಮೇಲೆ ಅತ್ಯಂತ ಸುಂದರವಾದ ಸೂರ್ಯನ ಶಿಲ್ಪವನ್ನು ಕಾಣಬಹುದು. ಅಲ್ಲಿಂದ ನಾವು ದೇವಸ್ಥಾನದ ಮಂಟಪವನ್ನು ಪ್ರವೇಶಿಸುತ್ತೇವೆ.

ಸ್ತಂಭದ ಮೇಲೆ ಅದ್ಭುತವಾಗಿ ಕೆತ್ತಲಾದ ಶಿಲ್ಪಗಳು !
ದೇವಸ್ಥಾನದ ಮಂಟಪದಲ್ಲಿನ ಒಂದು ಸ್ತಂಭದ ಮೇಲೆ ರಾಮಾಯಣದ ಕಥೆಯನ್ನು ಕೆತ್ತಲಾಗಿದೆ. ಒಂದೂವರೆ ಅಡಿ ಚೌಕದಲ್ಲಿ ಈ ಶಿಲ್ಪವನ್ನು ಕೆತ್ತಲಾಗಿದೆ. ಇದೇ ಕಂಬದ ಒಂದು ಬದಿಯಲ್ಲಿ ಮೇಲೆ ಶಿಲ್ಪಶ್ಲೇಷ (ಪ್ರಾಣಿಗಳ ಎರಡು ದೇಹಗಳು; ಆದರೆ ಮುಖ ಮಾತ್ರ ಒಂದೇ !)ವನ್ನು ಕೆತ್ತಲಾಗಿದೆ. ಎಡದಿಂದ ನೋಡಿದಾಗ ಎತ್ತಿನ ದೇಹ ಮತ್ತು ಮುಖ ಕಾಣುತ್ತದೆ, ಆದರೆ ಬಲದಿಂದ ನೋಡಿದಾಗ ಆನೆಯ ದೇಹ ಮತ್ತು ಮುಖ ಕಾಣುತ್ತದೆ.
ದೇವಸ್ಥಾನದ ಹೊರಭಾಗದಲ್ಲಿ ನಟರಾಜ, ಲಿಂಗೋದ್ಭವ, ದುರ್ಗಾ, ವರಾಹ ಅವತಾರ ಮುಂತಾದ ಅನೇಕಶಿಲ್ಪಗಳನ್ನು ಕೆತ್ತಲಾಗಿದೆ. ಇವುಗಳಲ್ಲಿ ಅತ್ಯಂತ ಅಭಿವ್ಯಕ್ತ ಶಿಲ್ಪವೆಂದರೆ ದೇವಸ್ಥಾನದ ಎಡಭಾಗದಲ್ಲಿರುವ ಅರ್ಧ ಮಂಟಪದ ಕಂಬದ ಮೇಲೆ ಕೆತ್ತಲಾದ ಶಿಲ್ಪ. ಸರಿಸುಮಾರು ಮೂರು-ಮೂರೂವರೆ ಅಡಿ ಎತ್ತರದ ಈ ಶಿಲ್ಪವು ನರಸಿಂಹ ಮತ್ತು ಹಿರಣ್ಯಕಶ್ಯಪುವಿನ ನಡುವಿನ ಯುದ್ಧದ ಸನ್ನಿವೇಶವನ್ನು ತೋರಿಸುತ್ತದೆ. ಯಾವುದರಿಂದಲೂ ತನಗೆ ಸಾವು ಬರುವುದಿಲ್ಲ ಎಂದು ಗರ್ವದಲ್ಲಿದ್ದ ಹಿರಣ್ಯಕಶ್ಯಪು, ತನ್ನ ಸಾವಿನ ಮುನ್ಸೂಚನೆ ತಿಳಿದಾಗ ಭಯ ಪಡುವ ಆ ಕ್ಷಣವನ್ನು ಕಲಾವಿದನು ಈ ಶಿಲ್ಪದಲ್ಲಿ ಸೆರೆಹಿಡಿದಿದ್ದಾನೆ. ಒಂದು ಕಡೆ ನರಸಿಂಹ ನಿಂತಿದ್ದು, ತನ್ನ ಬಿಗಿಯಾದ ಹಿಡಿತದಲ್ಲಿ ಹಿರಣ್ಯಕಶ್ಯಪುವನ್ನು ಹಿಡಿದಿದ್ದಾನೆ ಮತ್ತು ಈಗ ಹೊಟ್ಟೆಯನ್ನು ಸೀಳಲು ಅವನನ್ನು ಮಂಡಿಯ ಮೇಲೆ ತೆಗೆದುಕೊಳ್ಳುವ ಕ್ಷಣ ಗೋಚರಿಸುತ್ತದೆ. ಕಲಾವಿದರು ಕಲ್ಲನ್ನು ಕೂಡಾ ಶಿಲ್ಪಗಳ ಮೂಲಕ ಜೀವಂತಗೊಳಿಸಿದ್ದಾರೆ.
– ಶ್ರೀ. ಇಂದ್ರನೀಲ ಬಂಕಾಪುರೆ (ಸೌಜನ್ಯ: ದೈನಿಕ ‘ಮುಂಬಯಿ ತರುಣ ಭಾರತ)
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !