
‘ದೇವಸ್ಥಾನಗಳು ಹಿಂದೂ ಧರ್ಮದ ಆಧಾರಶಿಲೆಯಾಗಿವೆ. ಸಾವಿರಾರು ವರ್ಷಗಳಿಂದ ಹಿಂದೂ ಸಂಸ್ಕೃತಿಯ ರಕ್ಷಣೆ, ಜೋಪಾಸನೆ ಮತ್ತು ಸಂವರ್ಧನೆಯಲ್ಲಿ ದೇವಸ್ಥಾನಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ದೇವಸ್ಥಾನಗಳಿಂದ ಹಿಂದೂಗಳಿಗೆ ಮಾನಸಿಕ ದೃಷ್ಟಿಯಿಂದ ಆಧಾರ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಚೈತನ್ಯ ಸಿಗುತ್ತದೆ. ಈ ಚೈತನ್ಯದಿಂದಲೇ ಲಕ್ಷಾಂತರ ಹಿಂದೂಗಳು ಪ್ರತಿದಿನ ದೇವಸ್ಥಾನಗಳು ಅಥವಾ ತೀರ್ಥಕ್ಷೇತ್ರಗಳ ಕಡೆಗೆ ಆಕರ್ಷಿತರಾಗುತ್ತಾರೆ. ಸದ್ಯದ ಸ್ಥಿತಿಯಲ್ಲಿ ಪ್ರತಿದಿನ ದೇವಸ್ಥಾನಗಳ ಮೇಲೆ ವಿವಿಧ ಆಘಾತಗಳಾಗುತ್ತಿವೆ. ದೇವಸ್ಥಾನಗಳ ಸರಕಾರಿಕರಣ ಆಗಿರುವುದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹಗರಣಗಳು ನಡೆಯುತ್ತಿವೆ, ಅನೇಕ ಕಡೆ ದೇವಸ್ಥಾನಗಳಲ್ಲಿ ಕಳ್ಳತನಗಳೂ ಆಗುತ್ತಿವೆ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದ ಕಾರಣ ಅವರಿಂದ ತಿಳಿದೋ-ತಿಳಿಯದೆಯೋ ದೇವಸ್ಥಾನಗಳ ಪಾವಿತ್ರ್ಯ ನಾಶವಾಗುತ್ತಿದೆ. ಆದ್ದರಿಂದ, ದೇವಸ್ಥಾನಗಳನ್ನು ರಕ್ಷಿಸುವುದು ಮತ್ತು ಕಾಪಾಡುವುದು, ಅದೇ ರೀತಿ ದೇವಸ್ಥಾನಗಳನ್ನು ಯೋಗ್ಯರೀತಿಯಲ್ಲಿ ನಿರ್ವಹಣೆ ಮಾಡುವುದು ಕಾಲದ ಅವಶ್ಯಕತೆಯಾಗಿದೆ. ಇದಕ್ಕಾಗಿಯೇ ಈ ವಿಶೇಷಾಂಕದ ಉದ್ದೇಶ….!

ದೇವಸ್ಥಾನಗಳ ಆಡಳಿತ ಯೋಗ್ಯ ರೀತಿಯಲ್ಲಿ ಆಗುವಲ್ಲಿ ಕೌಟಿಲ್ಯನ ‘ಅರ್ಥನೀತಿಯ ಕೊಡುಗೆ !
ಭಾರತದ ಪ್ರಾಚೀನ ಗ್ರಂಥಗಳಾದ ವೇದ, ಮಹಾಭಾರತ, ರಾಮಾಯಣ ಇತ್ಯಾದಿ ಧರ್ಮಗ್ರಂಥಗಳಿಂದ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ದೇವಸ್ಥಾನ ನಿರ್ವಹಣೆ ಅಸ್ತಿತ್ವದಲ್ಲಿರುವುದು ಕಂಡುಬರುತ್ತದೆ.
ದೇವಸ್ಥಾನ ಸಂಸ್ಕೃತಿಯ ಪೋಷಣೆಯಿಂದಾಗುವ ಲಾಭಗಳು !
೧. ಹಿಂದೂಗಳಲ್ಲಿ ಉತ್ತಮ ಸಂಸ್ಕಾರಗಳು ಬೇರೂರುತ್ತವೆ. ಹಿಂದೂಗಳ ಮತಾಂತರ ನಿಲ್ಲುತ್ತದೆ.
೨. ಧಾರ್ಮಿಕ ವಿಚಾರಗಳ ಸಂರಕ್ಷಣೆಯಾಗುತ್ತದೆ.
೩. ಸಮಾಜದಲ್ಲಿ ಅಪರಾಧಗಳು ನಿಲ್ಲುತ್ತವೆ.
೪. ವಸ್ತ್ರಸಂಹಿತೆಯ ಪ್ರಕಾರ ಆಚರಣೆ ಮಾಡಲಾಗುತ್ತದೆ.
೫. ನಕಾರಾತ್ಮಕತೆಯು ಕಡಿಮೆಯಾಗಿ ಹಿಂದೂಗಳಿಗೆ ಸಕಾರಾತ್ಮಕ ಶಕ್ತಿ ದೊರೆಯುತ್ತದೆ. ಹಿಂದೂಗಳು ಸಾತ್ತ್ವಿಕ ಮತ್ತು ಸತ್ತ್ವಗುಣಿಗಳಾಗುತ್ತಾರೆ.
೬. ಭಕ್ತಿಭಾವವು ಹೆಚ್ಚಾಗುತ್ತದೆ.
೭. ಹಿಂದೂಗಳು ಧರ್ಮಾಚರಣಿ, ಧರ್ಮಾಭಿಮಾನಿ ಮತ್ತು ಧರ್ಮನಿಷ್ಠರಾಗುತ್ತಾರೆ. ಅವರಿಗೆ ಧರ್ಮಕಾರ್ಯಗಳಿಗಾಗಿ ಊರ್ಜೆ ದೊರೆಯುತ್ತದೆ.
೮. ಧಾರ್ಮಿಕ ಸ್ಥಳಗಳ ರಕ್ಷಣೆಯಾಗುತ್ತದೆ.
೯. ದೇವಸ್ಥಾನಗಳು ನಿಜವಾದ ಅರ್ಥದಲ್ಲಿ ಧರ್ಮಶಿಕ್ಷಣದ ಕೇಂದ್ರಗಳಾಗುತ್ತವೆ.
೧೦. ಹಿಂದೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.
ಸುಮಾರು ೨ ಸಾವಿರ ವರ್ಷಗಳ ಹಿಂದೆ ಕೌಟಿಲ್ಯನು ಅರ್ಥಶಾಸ್ತ್ರ ಎಂಬ ಗ್ರಂಥವನ್ನು ಬರೆದು, ದೇವಸ್ಥಾನಗಳ ನಿರ್ವಹಣೆ ಸರಿಯಾಗಿ ಆಗುವ ಸಲುವಾಗಿ ಅನೇಕ ನಿಯಮಗಳನ್ನು ರೂಪಿಸಿದ್ದನು. ಈ ಗ್ರಂಥದಲ್ಲಿ ಜವಾಬ್ದಾರಿ, ನಿರ್ಣಯ ತೆಗೆದುಕೊಳ್ಳುವ ವಿಧಾನಗಳ ಬಗ್ಗೆ ಆಳವಾದ ವಿಚಾರ ಮಾಡಲಾಗಿದೆ.ಇದರಿಂದಾಗಿ ಇಡೀ ಭಾರತದಲ್ಲಿ ದೇವಸ್ಥಾನಗಳ ನಿರ್ವಹಣೆ ಅತ್ಯಂತ ಯೋಗ್ಯವಾದ ರೀತಿಯಲ್ಲಿ ನಡೆಯುತ್ತಿತ್ತು.
– ಡಾ. ಮೇಧಾ ಕಾನೇಟಕರ, ಪ್ರಾಧ್ಯಾಪಕಿ, ಸಿ.ಪಿ. ಬೇರಾರ್ ಮಹಾವಿದ್ಯಾಲಯ, ನಾಗಪುರ (ಆಧಾರ : ದೀಪಾವಳಿ, ದೇವಸ್ಥಾನ ವಿಶೇಷಾಂಕ ೨೦೨೪)
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !