೨೦೨೫ ರಲ್ಲಿ ಗೋವಾದಲ್ಲಿ ನೆರವೇರಿದ ‘ಸನಾತನ ರಾಷ್ಟ್ರಶಂಖನಾದ ಮಹೋತ್ಸವದಲ್ಲಿನ ವಿವಿಧ ಕಕ್ಷೆಗಳ ಅವಿಸ್ಮರಣೀಯ ಕ್ಷಣಚಿತ್ರಗಳು |
ಭಗವಂತ ಸ್ವರೂಪ ಗುರುದೇವರ ದರ್ಶನ ಕಕ್ಷೆ
ಪ್ರಾಚೀನ ಋಷಿಮುನಿಗಳು ಬರೆದಿರುವ ನಾಡಿ ಪಟ್ಟಿಗಳಲ್ಲಿ ‘ಗುರುದೇವರ ಹುಟ್ಟುಹಬ್ಬ ಮತ್ತು ಇತರ ಉತ್ಸವಗಳನ್ನು ಹೇಗೆ ಆಚರಿಸಬೇಕು ?’, ‘ಆಗ ಗುರುದೇವರು ಯಾವ ದೇವತೆಯ ವಸ್ತ್ರ ಧರಿಸಬೇಕು ?’ ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ. ಅದಕ್ಕನುಸಾರ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಆಯಾ ಸಮಯದಲ್ಲಿ ಧರಿಸಿದ ವಸ್ತ್ರಗಳು ಮತ್ತು ಆಭರಣಗಳನ್ನು ಈ ಪ್ರದರ್ಶನದಲ್ಲಿ ಇಡಲಾಗಿತ್ತು. ೨೦೨೩ ರ ಬ್ರಹ್ಮೋತ್ಸವದ ಸುಂದರ ರಥವನ್ನೂ ಈ ಪ್ರದರ್ಶನದಲ್ಲಿ ಇಡಲಾಗಿತ್ತು. ಈ ರಥವನ್ನು ನೋಡಿ ಎಲ್ಲರ ಭಾವವೂ ಜಾಗೃತಗೊಳ್ಳುತ್ತಿತ್ತು.


ಗುರುದೇವರ ಕಾರ್ಯದ ಪ್ರದರ್ಶನ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಬಾಲ್ಯದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಸಂಮೋಹನತಜ್ಞರಾಗಿ ಮತ್ತು ಅನಂತರ ಪರಾತ್ಪರ ಗುರು ಸ್ಥಾನದ ವರೆಗಿನ ಅವರ ಜೀವನಪಥವನ್ನು ಚಿತ್ರಪ್ರದರ್ಶನದ ರೂಪದಲ್ಲಿ ಇಡಲಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೆಲವು ವಸ್ತುಗಳನ್ನು ಸಹ ಇಲ್ಲಿ ಇಡಲಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಜೀವನಶೈಲಿ ‘ಸರಳ ಜೀವನ ಮತ್ತು ಉನ್ನತ ವಿಚಾರಸರಣಿ’ ಆಗಿದೆ. ಅವರು ವಾಸಿಸುತ್ತಿದ್ದ ಕೋಣೆಯಲ್ಲಿನ ಸರಳವಾದ ಕಪಾಟು, ಹಾಸಿಗೆ, ಮೇಜು, ಕುರ್ಚಿ ಮುಂತಾದ ಸಾಮಗ್ರಿಗಳು ಉಪಸ್ಥಿತರಲ್ಲಿ ಭಾವವನ್ನು ಜಾಗೃತಗೊಳಿಸುತ್ತಿದ್ದವು.


|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ