‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವರು)ಯವರು ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ವಾಸಿಸುತ್ತಾರೆ. ಈ ಕೋಣೆಯು ಗುರುದೇವರಲ್ಲಿನ ದಿವ್ಯ ಚೈತನ್ಯವನ್ನು ಅನುಭವಿಸಿದೆ. ಗುರುದೇವರ ಮೇಲೆ ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಮಾಡಿದ ಮಾರಣಾಂತಿಕ ಆಕ್ರಮಣಗಳನ್ನೂ ಅದು ಅನುಭವಿಸಿದೆ. ಗುರುದೇವರ ಕೋಣೆ, ಗೋಡೆಗಳು, ಹಾಸುಗಲ್ಲು ಇತ್ಯಾದಿಗಳು ವಿವಿಧ ಪ್ರಸಂಗಗಳಲ್ಲಿ, ಉದಾ. ತೊಂದರೆದಾಯಕ ಅಥವಾ ಒಳ್ಳೆಯ ಬದಲಾವಣೆಯಾಗುವುದು, ವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕ ಘಟನೆ ಘಟಿಸುವುದು ಇತ್ಯಾದಿಗಳ ಸಮಯದಲ್ಲಿ ಛಾಯಾಚಿತ್ರಗಳನ್ನು ತೆಗೆಯಲಾಗಿದೆ. ಇವುಗಳಲ್ಲಿ ಕೆಲವು ಆಯ್ದ ಛಾಯಾಚಿತ್ರಗಳನ್ನು ಲೋಲಕದಿಂದ ಪರೀಕ್ಷಣೆ ಮಾಡಲಾಯಿತು. ಲೋಲಕದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಲು ಬರುತ್ತದೆ. ಈ ಲೇಖನದಲ್ಲಿ ನಾವು ಗುರುದೇವರ ಕೋಣೆಯು ಅನುಭವಿಸಿದ ದೇವಾಸುರ ಯುದ್ಧ, ಹಾಗೆಯೇ ಗುರುದೇವರ ಕೋಣೆಯಲ್ಲಿ ಆದ ತೊಂದರೆದಾಯಕ ಮತ್ತು ಒಳ್ಳೆಯ ಬದಲಾವಣೆ ಇತ್ಯಾದಿಗಳ ಸಂದರ್ಭದಲ್ಲಿನ ಸಂಶೋಧನೆಯನ್ನು ನೋಡೋಣ.

೧. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕೋಣೆಯು ಅನುಭವಿಸಿದ ದೇವಾಸುರರ ಯುದ್ಧ
ಗುರುದೇವರ ಕೋಣೆಯಲ್ಲಿ ೨೦೧೩ ರಿಂದ ೨೦೨೧ ರ ಕಾಲಾವಧಿಯಲ್ಲಿ ವಿವಿಧ ರೀತಿಯ ತೊಂದರೆದಾಯಕ ಮತ್ತು ಒಳ್ಳೆಯ ಬದಲಾವಣೆಗಳನ್ನು ಅನುಭವಿಸಲು ಸಾಧ್ಯವಾಯಿತು. ಮುಖ್ಯವೆಂದರೆ ಸೂಕ್ಷ್ಮದ ಕೆಟ್ಟ ಶಕ್ತಿಗಳು ಮಾಡಿದ ಆಕ್ರಮಣಗಳ ಲಕ್ಷಣಗಳು ಗುರುದೇವರ ಕೋಣೆಯಲ್ಲಿ ಸ್ಥೂಲದಲ್ಲಿಯೂ ಸ್ಪಷ್ಟವಾಗಿ ಕಂಡುಬರುತ್ತವೆ, ಉದಾ. ಕೋಣೆಯಲ್ಲಿನ ಗೋಡೆಗಳು ಮತ್ತು ಹಾಸುಗಲ್ಲುಗಳ ಮೇಲೆ ತನ್ನಿಂದ ತಾನೆ ಕಲೆಗಳು ಬೀಳುವುದು, ಗೋಡೆ ಅಲ್ಲಲ್ಲಿ ಹಕ್ಕಳಿಕೆ ಉದುರುವುದು, ಗೋಡೆಗಳ ಮೇಲೆ ಕೆಟ್ಟ ಶಕ್ತಿಗಳ ಮುಖ ಮತ್ತು ಆಕೃತಿಗಳು ಮೂಡುವುದು, ಹಾಸುಗಲ್ಲಿನ ಮೇಲೆ ಎಣ್ಣೆಜಿಡ್ಡಿನ ಕಲೆಗಳು ಬೀಳುವುದು, ಹಾಸುಗಲ್ಲಿನ ಮೇಲೆ ಕಾಲುಗಳು ಮೂಡುವುದು ಇತ್ಯಾದಿ. ಈ ದೇವಾಸುರರ ಯುದ್ಧದಲ್ಲಿ ಈಶ್ವರನು ವಿವಿಧ ಮಾಧ್ಯಮಗಳಿಂದ ಗುರುದೇವರ ರಕ್ಷಣೆಯನ್ನು ಮಾಡುತ್ತಿದ್ದಾನೆ. ಗುರುದೇವರಲ್ಲಿ ಹೆಚ್ಚಾಗುತ್ತಿರುವ ಚೈತನ್ಯದ ಸಕಾರಾತ್ಮಕ ಪರಿಣಾಮವು ಅವರ ಕೋಣೆಯಲ್ಲಿ ಕಂಡುಬರುತ್ತಿದೆ. ಗುರುದೇವರು ಅವರಲ್ಲಿನ ಸಂಶೋಧಕವೃತ್ತಿಯಿಂದಾಗಿ ಸಮಯಕ್ಕೆ ಸರಿಯಾಗಿ ತೊಂದರೆದಾಯಕ ಮತ್ತು ಒಳ್ಳೆಯ ಬದಲಾವಣೆಗಳ ಛಾಯಾಚಿತ್ರಗಳನ್ನು ಸಂಶೋಧನೆಗಾಗಿ ತೆಗೆದಿಡುವ ಬಗ್ಗೆ ಸಾಧಕರಿಗೆ ಮಾರ್ಗದರ್ಶನ ಮಾಡಿದರು. ಈ ಛಾಯಾಚಿತ್ರಗಳಲ್ಲಿನ ಕೆಲವು ಆಯ್ದ ಛಾಯಾಚಿತ್ರಗಳ ಲೋಲಕದಿಂದ ಮಾಡಿದ ಪರೀಕ್ಷಣೆಗಳಲ್ಲಿನ ನೊಂದಣಿಗಳ ವಿವೇಚನೆಗಳನ್ನು ಮುಂದೆ ಕೊಡಲಾಗಿದೆ.

೧ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೋಣೆಯಲ್ಲಿನ ತೊಂದರೆದಾಯಕ ಬದಲಾವಣೆಗಳ ಛಾಯಾಚಿತ್ರಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ಈ ಛಾಯಾಚಿತ್ರಗಳಲ್ಲಿ ಸಕಾರಾತ್ಮಕ ಊರ್ಜೆ ಏನು ಇಲ್ಲ, ಅದರ ಬದಲು ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಉರ್ಜೆ ಕಂಡುಬಂದಿತು. ಇದು ಮುಂದೆ ಕೊಟ್ಟಿರುವ ನೊಂದಣಿಗಳಿಂದ ಗಮನಕ್ಕೆ ಬರುತ್ತದೆ.

ಟಿಪ್ಪಣಿ ೧ : ಈ ಛಾಯಾಚಿತ್ರದಲ್ಲಿರುವ ಬಿಳಿ ಚುಕ್ಕೆಯು ತನ್ನದೇ ಆದ ಬೆಳಕನ್ನು ಹೊಂದಿದೆ. ಕೋಣೆಯ ಬೆಳಕನ್ನು ಕಡಿಮೆ ಮಾಡಿದರೂ ಆ ಚುಕ್ಕೆಯು ಇನ್ನಷ್ಟು ಸ್ಪಷ್ಟ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತದೆ.
ಟಿಪ್ಪಣಿ ೨ : ಈ ಛಾಯಾಚಿತ್ರದ ವಿಶೇಷತೆಯೆಂದರೆ, ಇದರಲ್ಲಿರುವ ಕೆಟ್ಟಶಕ್ತಿಗಳ ಕಣ್ಣುಗಳು ಮತ್ತು ಮುಖವು ಚಲಿಸುತ್ತಿರುವಂತೆ ಭಾಸವಾಗುತ್ತದೆ.


ಕೋಣೆಯಲ್ಲಿನ ಒಳ್ಳೆಯ ಬದಲಾವಣೆಗಳ ಛಾಯಾಚಿತ್ರಗಳು


೧ ಅ ೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೋಣೆಯಲ್ಲಿನ ತೊಂದರೆದಾಯಕ ಬದಲಾವಣೆಗಳ ಛಾಯಾಚಿತ್ರಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವ ಕಾರಣ : ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಗುರುದೇವರ ಮೇಲೆ ತೊಂದರೆದಾಯಕ ಶಕ್ತಿಯನ್ನು ಪ್ರಕ್ಷೇಪಿಸಿ ಅವರ ದೈವೀ ಕಾರ್ಯದಲ್ಲಿ ಅಡತಡೆಗಳನ್ನುಂಟು ಮಾಡಲು ಪ್ರಯತ್ನಿಸುತ್ತವೆ. ಗುರುದೇವರ ಸಮಷ್ಟಿ ಕಾರ್ಯಕ್ಕೆ (ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಮಹಾನ ಸಮಷ್ಟಿ ಕಾರ್ಯಕ್ಕೆ) ಅಡ್ಡಿಯಾಗಲೆಂದು, ಕೆಟ್ಟ ಶಕ್ತಿಗಳು ಹೊಸಹೊಸ ತಂತ್ರಗಳನ್ನು ಬಳಸಿ ಅವರೊಂದಿಗೆ ಸೂಕ್ಷ್ಮ ಯುದ್ಧವನ್ನು ಮಾಡುತ್ತವೆ; ಆದರೆ ಗುರುದೇವರಲ್ಲಿನ ಚೈತನ್ಯದಿಂದ ಅವುಗಳು ಹತಾಶವಾಗುತ್ತವೆ. ಗುರುದೇವರಿಂದ ಪ್ರಕ್ಷೇಪಿಸುವ ಚೈತನ್ಯದಿಂದ ಕೆಟ್ಟ ಶಕ್ತಿಗಳಿಗೆ ಅವರ ಧ್ಯೇಯವನ್ನು (‘ಪೃಥ್ವಿಯಲ್ಲಿ ಆಸುರಿ ರಾಜ್ಯವನ್ನು ನಿರ್ಮಿಸುವುದು’, ದೊಡ್ಡ ಕೆಟ್ಟ ಶಕ್ತಿಗಳ ಧ್ಯೇಯವಾಗಿದೆ.) ಸಾಧ್ಯಗೊಳಿಸಲು ಆಗುವುದಿಲ್ಲ. ಆದ್ದರಿಂದ ಅವುಗಳು ಕೋಪದಿಂದ ಗುರುದೇವರಲ್ಲಿನ ಚೈತನ್ಯ ದೊಂದಿಗೆ ಹೋರಾಡುತ್ತಿರುತ್ತವೆ. ಗುರುದೇವರ ಕೋಣೆಯೆಂದರೆ ಸೂಕ್ಷ್ಮದಲ್ಲಿನ ಯುದ್ಧದ ರಣಭೂಮಿಯೇ ಆಗಿದೆ.

೧ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೋಣೆಯಲ್ಲಿನ ಒಳ್ಳೆಯ ಬದಲಾವಣೆಗಳ ಛಾಯಾಚಿತ್ರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ಈ ಛಾಯಾಚಿತ್ರಗಳಲ್ಲಿ ನಕಾರಾತ್ಮಕ ಊರ್ಜೆ ಏನು ಇಲ್ಲ, ಬದಲಿಗೆ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇದು ಪಕ್ಕದಲ್ಲಿ ಕೊಟ್ಟಿರುವ ಕೋಷ್ಟಕದ ನೊಂದಣಿಗಳಿಂದ ಗಮನಕ್ಕೆ ಬರುತ್ತದೆ.
ಟಿಪ್ಪಣಿ ೩ – ಈ ಛಾಯಾಚಿತ್ರದಲ್ಲಿನ ಕನ್ನಡಿಯಲ್ಲಿ ಕೋಣೆಯಲ್ಲಿನ ದೇವರಕೋಣೆಯ ಪ್ರತಿಬಿಂಬ ಕಾಣಿಸುತ್ತಿದೆ.
೧ ಆ ೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೋಣೆಯಲ್ಲಿನ ಒಳ್ಳೆಯ ಬದಲಾವಣೆಗಳ ಛಾಯಾಚಿತ್ರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವ ಕಾರಣ : ಒಂದೆಡೆ ಸೂಕ್ಷ್ಮಸ್ತರದಲ್ಲಿನ ಯುದ್ಧದಿಂದಾಗಿ ಗುರು ದೇವರ ಕೋಣೆಯಲ್ಲಿ ತೊಂದರೆದಾಯಕ ಬದಲಾವಣೆಗಳನ್ನು ಅನುಭವಿಸಲು ಸಿಗುತ್ತಿವೆ, ಮೊತ್ತೊಂದೆಡೆ ಗುರುದೇವರಲ್ಲಿನ ಹೆಚ್ಚಳವಾಗುತ್ತಿರುವ ಚೈತನ್ಯದಿಂದ, ಹಾಗೆಯೇ ಸಮಯಕ್ಕೆ ಸರಿಯಾಗಿ ಈಶ್ವರನು ಗುರುದೇವರಿಗೆ ಮಾಡುತ್ತಿರುವ ಸಹಾಯ ದಿಂದಾಗಿ ಕೋಣೆಯಲ್ಲಿ ಆಪ, ತೇಜ ಮತ್ತು ವಾಯು ಈ ತತ್ತ್ವಗಳ ಒಳ್ಳೆಯ ಬದಲಾವಣೆಗಳೂ ಕಂಡುಬರುತ್ತಿವೆ, ಉದಾ. ಹಾಸುಗಲ್ಲಿನ ಮೇಲೆ ಪ್ರತಿಬಿಂಬ ಕಾಣಿಸುವುದು (ಆಪತತ್ತ್ವ), ಕೋಣೆಯು ಹೆಚ್ಚು ಪ್ರಕಾಶಮಾನವಾಗಿ (ಬೆಳಕು) ಕಾಣಿಸುವುದು (ತೇಜತತ್ತ್ವ), ಗೋಡೆಗಳು ನುಣುಪಾಗುವುದು (ವಾಯುತತ್ತ್ವ) ಇತ್ಯಾದಿ. ಗುರುದೇವರಲ್ಲಿನ ಹೆಚ್ಚಳವಾಗುತ್ತಿರುವ ಚೈತನ್ಯದ ಸಕಾರಾತ್ಮಕ ಪರಿಣಾಮವು ಅವರು ವಾಸಿಸುತ್ತಿರುವ ಕೋಣೆಯ ಮೇಲಾಗುತ್ತಿದೆ. ಆದ್ದರಿಂದ ಕೋಣೆಯಲ್ಲಿ ತುಂಬಾ ಚೈತನ್ಯ ನಿರ್ಮಾಣವಾಗಿದೆ. ಗುರುದೇವರ ಚೈತನ್ಯಮಯ ಅಸ್ತಿತ್ವದಿಂದ ಈ ಕೋಣೆಯಲ್ಲಿನ ಚೈತನ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಗುರುದೇವರ ಕೋಣೆಯು ತುಂಬಾ ಅದೃಷ್ಟಶಾಲಿಯಾಗಿದೆ; ಏಕೆಂದರೆ ಅದು ಗುರುದೇವರ ಸೂಕ್ಷ್ಮಸ್ತರದಲ್ಲಿನ ಕಾರ್ಯದ ಪ್ರತ್ಯಕ್ಷ ಸಾಕ್ಷಿಯಾಗಿದೆ ಮತ್ತು ದೇವಾಸುರರ ಯುದ್ಧದಲ್ಲಿಯೂ ಅದರ ಅಮೂಲ್ಯ ಕೊಡುಗೆ ಇದೆ. ಗುರುದೇವರ ಅಸ್ತಿತ್ವದಿಂದ ಪಾವನವಾಗಿರುವ ಈ ಕೋಣೆ ಮತ್ತು ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೫.೩.೨೦೨೫)
ತಜ್ಞರು, ಅಧ್ಯಯನಶೀಲರು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !ಈ ವಿಷಯದಲ್ಲಿ ತಜ್ಞರು, ಅಧ್ಯಯನ ಮಾಡುವವರು, ಈ ವಿಷಯದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯ ನಮಗೆ ದೊರೆತರೆ ನಾವು ಕೃತಜ್ಞರಾಗಿರುತ್ತೇವೆ. ಸಂಪರ್ಕ : ಸೌ. ಮಧುರಾ ಕರ್ವೆ ವಿ-ಅಂಚೆ : [email protected] |
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ