ದಿವ್ಯ ಅಂಶಗಳಿಗಾಗಿ ಸೋಮನಾಥದಲ್ಲಿರುವ ತ್ರಿವೇಣಿ ಸಂಗಮದ ಮರಳನ್ನು ತರಲಾಯಿತು !
ಸನಾತನ ಸಂಸ್ಥೆಗೆ ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲಿನ ಧರ್ಮಧ್ವಜ ಸಿಕ್ಕಿತು !

‘ಭೂಕೈಲಾಸವಾಗಿರುವ ಕಾಂಚೀಪುರಮ್‌ಗೆ ೨ ಏಪ್ರಿಲ್ ೨೦೨೬ ರಂದು ಹನುಮ ಜಯಂತಿಯ ದಿನ ಸೋಮನಾಥ ಶಿವಲಿಂಗದ ದಿವ್ಯ ಅಂಶಗಳ ಆಗಮನ ಆಯಿತು. ೨೯ ಏಪ್ರಿಲ್ ೨೦೨೬ ರಂದು ಸದ್ಗುರು ಡಾ. ಮುಕುಲ ಗಾಡಗೀಳ ಕಾಂಚೀಪುರಮ್‌ಗೆ ಬಂದರು. ಅದೇ ದಿನ ಸಂಜೆ ಸೋಮನಾಥ ಶಿವಲಿಂಗದ ದಿವ್ಯ ಅಂಶಗಳ ಅಭಿಷೇಕ ನಡೆಯುತ್ತಿರುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ಶಿವನು ಸೊರಟಿ ಸೋಮನಾಥದಿಂದ ಮರಳನ್ನು ತರಲು ಪ್ರೇರಣೆ ನೀಡುತ್ತಿದ್ದನು. ಅವರಿಗೆ ಅದರ ಕಾರಣ ಆರಂಭದಲ್ಲಿ ತಿಳಿಯಲಿಲ್ಲ. ನಂತರ, ಮರಳು ಪೃಥ್ವಿತತ್ತ್ವ ಮತ್ತು ಶಿವ ಎಂದರೆ ಆಕಾಶತತ್ತ್ವ ! ಅಂದರೆ ಮರಳು ಶಿವನ ಶಕ್ತಿಯಾಗಿದೆ. ಶಿವನು ಶಕ್ತಿಯಿಲ್ಲದೆ ಅಪೂರ್ಣ ಮತ್ತು ಶಕ್ತಿಯು ಶಿವನಿಲ್ಲದೆ ಅಪೂರ್ಣ, ಎಂಬುದು ಅವರ ಗಮನಕ್ಕೆ ಬಂತು. ಆದ್ದರಿಂದ ಸನಾತನ ಸಂಸ್ಥೆಗೆ ಶಿವ ಮತ್ತು ತ್ರಿವೇಣಿ ಸಂಗಮದ ಮರಳು ಎಂಬ ಎರಡೂ ಶಕ್ತಿಗಳನ್ನು ನೀಡಲು ಅವು ಸನಾತನದ ಆಶ್ರಮದಲ್ಲಿರಬೇಕು ಎಂಬುದು ಶಿವನ ಇಚ್ಛೆಯಾಗಿತ್ತು. ಎಲ್ಲಿ ಸೋಮಲಿಂಗ ಸಾಕ್ಷಾತ್ ಪ್ರಕಟವಾಗಿತ್ತೋ, ಅದರ ಅಂಶ ಆ ಮರಳಿನಲ್ಲಿತ್ತು. ಮರುದಿನ ರಾತ್ರಿ ನಾವು (ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ, ಸದ್ಗುರು ಡಾ. ಗಾಡಗೀಳ ಮತ್ತು ಶ್ರೀ. ವಿನಾಯಕ ಶಾನಭಾಗ) ವಿಮಾನದ ಮೂಲಕ ಸೋಮನಾಥವನ್ನು ತಲುಪಿದೆವು.

ರಾತ್ರಿಯೇ ಸೋಮನಾಥ ದೇವಸ್ಥಾನದಲ್ಲಿ ಶಿವನ ದರ್ಶನ ಪಡೆದೆವು. ‘ಬೆಳಗ್ಗೆ ಮರಳಿಗಾಗಿ ತ್ರಿವೇಣಿ ಸಂಗಮಕ್ಕೆ ಹೋಗಬೇಕು, ಎಂದು ಅಲ್ಲಿನ ಹಿರಿಯ ಅರ್ಚಕರು ಸೂಚಿಸಿದರು. ಸೋಮನಾಥದಲ್ಲಿ ಸರಸ್ವತಿ, ಹಿರಣ್ಯಾ ಮತ್ತು ಕಪಿಲಾ ಇಂತಹ ೩ ನದಿಗಳ ಸಂಗಮವಿದೆ. ಸೋಮನಾಥಕ್ಕೆ ಹೋಗುತ್ತಿರುವಾಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರಿಗೆ, ‘ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಹಾರಿಸುವ ಧರ್ಮಧ್ವಜ ನಮಗೆ ಸಿಗಬಹುದೇ ?, ಎಂದು ವಿಚಾರ ಬಂತು. ದೇವಸ್ಥಾನದ ಮಾಜಿ ವಿಶ್ವಸ್ಥ ಶ್ರೀ. ಪಿಯೂಷ ಪೋಫಾಂಡಿ ಅವರಿಗೆ ಈ ಬಗ್ಗೆ ಕೇಳಿದಾಗ ಅವರು, ಬೆಳಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಒಟ್ಟಿಗೆ ಕುಳಿತು ಹೊಸ ಧರ್ಮಧ್ವಜದ ಪೂಜೆ ಮಾಡಬೇಕು ಮತ್ತು ಹೊಸ ಧ್ವಜವನ್ನು ದೇವಸ್ಥಾನಕ್ಕೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಹೊಸ ಧ್ವಜವನ್ನು ದೇವಸ್ಥಾನದ ಮೇಲೆ ಹಾಕಿ ಹಿಂದಿನ ಧ್ವಜವನ್ನು ಯಜಮಾನ ದಂಪತಿಗಳಿಗೆ ನೀಡಲಾಗುತ್ತದೆ, ಎಂದು ಹೇಳಿದರು. ಅದರಂತೆ ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ೧ ಮೇ ೨೦೨೬ ರಂದು ಸೋಮನಾಥ ದೇವಸ್ಥಾನದಲ್ಲಿ ಹೊಸ ಧರ್ಮಧ್ವಜದ ಪೂಜೆ ಮಾಡಿದರು. ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಯು ಆ ಧ್ವಜವನ್ನು ದೇವಸ್ಥಾನದ ಶಿಖರದ ಮೇಲೆ ಏರಿಸಿದರು ಮತ್ತು ಹಿಂದಿನ ಧ್ವಜವನ್ನು ಅವರು ನಮಗೆ ನೀಡಿದರು.
– ಶ್ರೀ. ವಿನಾಯಕ ಶಾನಭಾಗ, ಕಾಂಚೀಪುರಮ್, ತಮಿಳುನಾಡು. (೧೨.೫.೨೦೨೬)

ಸೋಮನಾಥದಲ್ಲಿ ಸತಿಯ ಉದರ ಬಿದ್ದಿದೆ. ಆದ್ದರಿಂದ ಅದೂ ಅಲ್ಲಿ ಒಂದು ಜಾಗೃತ ಶಕ್ತಿಪೀಠವಾಗಿದೆ. ಹಾಗೆಯೇ ದೇವಿಯ ಶಕ್ತಿಯು ಆ ಮರಳಿನಲ್ಲಿದೆ. ಆ ಶಕ್ತಿಪೀಠದ ಹೆಸರು ಚಂದ್ರಭಾಗಾ ಶಕ್ತಿಪೀಠ ಎಂದಾಗಿದೆ. ನಾವು ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಅದರ ಕೆಳಗೆ ಲಿಂಗ ಇರುತ್ತದೆ. ಶಿವನು ನನಗೆ, ಯಾವಾಗ ಲಿಂಗ ಇರುವುದಿಲ್ಲವೋ, ಆಗ ಶಿವಲಿಂಗವನ್ನು ಈ ಚೈತನ್ಯಮಯ ಮರಳಿನಲ್ಲಿ ಇಡಿ, ಎಂದು ಸೂಚಿಸುತ್ತಿದ್ದನು. ಅಂದರೆ ಶಿವ ಮತ್ತು ಶಕ್ತಿ ಒಟ್ಟಿಗೆ ಇರುತ್ತಾರೆ.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
|| ಶ್ರೀ ರಾಜಮಾತಂಗಿ ಮಹಾಯಾಗ ||
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ