ಮೂಲತಃ ಸಾತ್ತ್ವಿಕವಾಗಿದ್ದು ಆತ್ಮರಂಜನೆಯಿಂದ ವಿಕೃತಿಯತ್ತ ಸಾಗುತ್ತಿರುವ ಭಾರತೀಯ ಕಲೆಗಳು !

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !

 ಇಲ್ಲಿಯ ವರೆಗೆ ಮುದ್ರಿತವಾಗುತ್ತಿರುವ ಲೇಖನಮಾಲೆಯಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ. ಭಗವದ್ಭಕ್ತಿಯ ಮಾಧ್ಯಮವಾಗಿದ್ದ ಮತ್ತು ಮಂದಿರ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಈ ಕಲೆಗಳ ಪ್ರದರ್ಶನದ ಉದ್ದೇಶವು ಕಾಲದ ಪ್ರಭಾವದಿಂದ ಬದಲಾಗುತ್ತಿದೆ. (ಲೇಖನ ೧೪)

ಹಿಂದಿನ ಲೇಖನ ಓದಲು ಇಲ್ಲಿ ಲಿಂಕ್ ಮೇಲೆ ಕ್ಲಿಕ್‌ ಮಾಡಿ : https://sanatanprabhat.org/kannada/180652.html

‘ಈ ಹಿಂದಿನ  ಲೇಖನದಲ್ಲಿ ನಾವು ಮೂಲ ಶಾಸ್ತ್ರೀಯ ಕಲೆಗಳ ಶುದ್ಧ ಸ್ವರೂಪವು ಕಳೆದು ಅದರಲ್ಲಿ ‘ಫ್ಯೂಜನ್, ರಿಮಿಕ್ಸ್ (ಮೂಲ ಹಾಡಿನಲ್ಲಿ ಬದಲಾವಣೆ ಮಾಡಿ ಹೊಸ ಹಾಡುಗಳನ್ನು ತಯಾರಿಸುವುದು) ಮತ್ತು ಕೆಲವೊಮ್ಮೆ ವಿಡಂಬನೆ’ಯಾಗಿ ಇಂದು ಕಲೆಯು ಕ್ರಮೇಣ ಯಾವ ರೀತಿ ವಿಕೃತಿಯ ಕಡೆಗೆ ಹೋಗುತ್ತಿದೆ’, ಎಂಬುದನ್ನು ತಿಳಿದುಕೊಂಡೆವು. ಭಾರತೀಯ ಕಲೆಯು ಈಶ್ವರನಿರ್ಮಿತಿ ಆಗಿರುವುದರಿಂದ ಆ ಕಲೆಗಳಿಂದ ಮೂಲತಃ ವ್ಯಕ್ತಿಗೆ ಸಾತ್ತ್ವಿಕತೆ ಸಿಗುತ್ತದೆ. ಅಂದರೆ ಈ ದೈವೀ ಕಲೆಗಳಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚು ಪ್ರಮಾಣದಲ್ಲಿರುತ್ತದೆ; ಆದರೆ ಇಂದಿನ ವಿಕೃತಿಯುಕ್ತ ಕಲೆಗಳ ಪ್ರಸ್ತುತಿಕರಣದಿಂದ ಕಲೆಯಲ್ಲಿನ ಮೂಲ ಸಾತ್ತ್ವಿಕತೆಯು ಕಣ್ಮರೆಯಾಗಿದೆ. ಸದ್ಯದ ರಜ-ತಮಪ್ರಧಾನ ಕಲೆಯು ಮನುಷ್ಯನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಪರಿಣಾಮವಾಗುತ್ತದೆ ? ಎಂಬುದನ್ನು ನಾವು ಈ ವಾರದ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ.            (ಭಾಗ ೪)

|| ವಿಶ್ರಾಂತಿರ್ಯಸ್ಯ ಸಂಭೋಗೇ ಸಾ ಕಲಾ ನ ಕಲಾ ಮತಾ

ಲೀಯತೇ ಪರಮಾನಂದೇ ಯಯಾತ್ಮಾ ಸಾ ಪರಾ ಕಲಾ ||

ಅರ್ಥ : ಯಾವುದರ ಉದ್ದೇಶ ಕೇವಲ ಭೋಗ ಅಥವಾ ಮನರಂಜನೆಯಾಗಿದೆಯೋ ಅದು ಕಲೆಯಲ್ಲ; ಯಾವುದು ಆತ್ಮವನ್ನು ಪರಮಾನಂದದಲ್ಲಿ ಲೀನವಾಗುವಂತೆ ಮಾಡುತ್ತದೆಯೋ ಅದೇ ನಿಜವಾದ ಕಲೆಯಾಗಿದೆ.

(ಸಂದರ್ಭ: ಕಥಕ್ ನೃತ್ಯ ಶಿಕ್ಷಾ – ಪ್ರಥಮ ಭಾಗ)

ಲೇಖನದಲ್ಲಿರುವ ಕೆಲವು ಪದಗಳ ಅರ್ಥಗಳು

೧. ರಿಯಾಲಿಟಿ ಶೋ : ವಾಸ್ತವವಾದಿ ಅಥವಾ ಸತ್ಯ ಘಟನೆಗಳ ಮೇಲೆ ಆಧಾರಿತವಾದ ಕಾರ್ಯಕ್ರಮಗಳು.

೨. ಟ್ಯಾಲೆಂಟ್ ಶೋ : ಕಲಾ ಪ್ರತಿಭೆ ಅಥವಾ ಕೌಶಲ್ಯ ಪ್ರದರ್ಶನದ ಕಾರ್ಯಕ್ರಮಗಳು.

೩. ಫ್ಯೂಜನ್ : ಭಾರತೀಯ ಮತ್ತು ಪಾಶ್ಚಾತ್ಯ ಕಲೆಗಳನ್ನು ಒಟ್ಟುಗೂಡಿಸಿ ಪ್ರಸ್ತುತಪಡಿಸುವ ಕಲೆ.

೧. ರಜ-ತಮಪ್ರಧಾನ ಕಲೆಗಳಿಂದ ಶಾರೀರಿಕ ಸ್ತರದಲ್ಲಾಗುವ ದುಷ್ಪರಿಣಾಮಗಳು

೧ ಅ. ‘ವಿಪರೀತ ಚಲನವಲನಗಳು ಮತ್ತು ‘ಸ್ಟಂಟ್ಸ್’ಗಳಿಂದ ಕಲಾವಿದನ ಶರೀರದ ಮೇಲೆ ಆಗಬಹುದಾದ ದುಷ್ಪರಿಣಾಮಗಳು : ಅನೇಕ ‘ರಿಯಾಲಿಟಿ ಶೋ’ ಮತ್ತು ‘ಟ್ಯಾಲೆಂಟ್ ಶೋ’ಗಳಲ್ಲಿ ಕಲಾವಿದನು ತನ್ನ ಕಲೆಯನ್ನು ಪ್ರಸ್ತುತಪಡಿಸುವಾಗ ವಿವಿಧ ‘ಸ್ಟಂಟ್ಸ್’ (ಕಸರತ್ತುಗಳನ್ನು) ಮಾಡುತ್ತಾನೆ. ಉದಾಹರಣೆಗೆ. ಎತ್ತರದಿಂದ ಜಿಗಿಯುವುದು, ಬೆಂಕಿಯೊಂದಿಗೆ ಆಟ, ಕಲಾ ಪ್ರದರ್ಶನದಲ್ಲಿ ಚೂಪಾದ ವಸ್ತುಗಳ ಬಳಕೆ ಇತ್ಯಾದಿ. ಇಂತಹ ಸ್ಟಂಟ್‌ಗಳಿಂದ ಕಲಾವಿದನು ತನ್ನ ಪ್ರಾಣವನ್ನೇ ಅಪಾಯಕ್ಕೆ ಒಡ್ಡುತ್ತಾನೆ. ಇವುಗಳಿಂದ ಅವನ ಶರೀರದ ಮೇಲೆ ವಿಪರೀತ ಪರಿಣಾಮ ಆಗಬಹುದು.

೧ ಆ. ಪ್ರೇಕ್ಷಕರು ಕಲೆಯ ಮೂಲಕ ಅಂತರ್ಮುಖವಾಗದೇ, ಆಕ್ರಮಣಕಾರಿಯಾಗಿ ಕಿರುಚುತ್ತಾ ಪ್ರತಿಕ್ರಿಯೆಗಳನ್ನು ಕೊಡುವುದು : ಪ್ರಸ್ತುತ ಕಲಾವಿದರು ಕಲೆಯನ್ನು ಪ್ರಸ್ತುತಪಡಿಸುವಾಗ ಪ್ರೇಕ್ಷಕರು ಕಲೆಯಿಂದ ಅಂತರ್ಮುಖವಾಗುವ ಬದಲಿಗೆ, ಕಲೆಗೆ ಮೆಚ್ಚುಗೆ ಸೂಚಿಸಲು ಜೋರಾಗಿ ಕಿರುಚುತ್ತಾ ಅಥವಾ ಒದರುತ್ತಾ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಇದರಿಂದ ಪ್ರೇಕ್ಷಕಗೃಹದಲ್ಲಿ ಅಥವಾ ದೂರದರ್ಶನದ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರು ಮತ್ತು ಕೆಲವು ಬಾರಿ ತೀರ್ಪುಗಾರರು ಸಹ ಗದ್ದಲ ಮಾಡುವುದು ಕಂಡುಬರುತ್ತದೆ. ಇದರಿಂದ ‘ಮನುಷ್ಯನು ನಿಜವಾದ ಕಲೆಯ ಆಸ್ವಾದನೆಯಿಂದ ದೂರ ಸರಿಯುತ್ತಿದ್ದಾನೆ’ ಎಂಬುದು ಎದ್ದು ಕಾಣುತ್ತದೆ. ‘ಕಲೆಯನ್ನು ಒಳಗಿನಿಂದ ಅನುಭವಿಸುವುದಕ್ಕಿಂತ, ಕಿರುಚುತ್ತಾ ಮೆಚ್ಚುಗೆ ವ್ಯಕ್ತಪಡಿಸುವುದು ವ್ಯಕ್ತಿಯನ್ನು ಅತಿಯಾದ ಬಹಿರ್ಮುಖ ಸ್ಥಿತಿಗೆ ಕೊಂಡೊಯ್ಯುವುದರ ಲಕ್ಷಣವಾಗಿದೆ.

೧ ಇ. ಕಲಾವಿದರಲ್ಲಿ ವ್ಯಸನಾಧೀನತೆ ಹೆಚ್ಚಾಗುವುದು : ಕಲಾಕೃತಿಯ ಪ್ರಸ್ತುತಿಯಲ್ಲಿ ವಿವಿಧ ಕಲೆಗಳ ಆವೇಶಪೂರ್ಣ ಪ್ರದರ್ಶನಕ್ಕಾಗಿ ಕೆಲವು ಕಲಾವಿದರು ಅಮಲು ಪದಾರ್ಥಗಳನ್ನು ಬಳಸುವುದು ಕಂಡುಬರುತ್ತದೆ. ಉದಾಹರಣೆಗೆ ಮದ್ಯಪಾನ, ಮಾದಕದ್ರವ್ಯಗಳ ಸೇವನೆ ಇತ್ಯಾದಿ. ‘ಬಾಹ್ಯ ನಶೆಯಿಂದ ಕಲಾವಿದನು ತನ್ನನ್ನು ತಾನು ಮರೆತು ಕಲಾಕೃತಿಯನ್ನು ಹೆಚ್ಚು ಉತ್ತಮವಾಗಿ ಪ್ರಸ್ತುತಪಡಿಸಬಹುದು’ ಎಂಬ ತಪ್ಪು ತಿಳುವಳಿಕೆ ಪ್ರಸ್ತುತ ಸಮಾಜದಲ್ಲಿರುವುದರಿಂದ ಇಂದು ಮದ್ಯ ಸೇವಿಸಿ ಗಾಯನ, ವಾದನ ಮತ್ತು ನೃತ್ಯ ಮಾಡುವುದನ್ನು ಕಾಣುತ್ತಿದ್ದೇವೆ. ಇದರಿಂದ ಕಲೆಯ ಮೂಲ ಸಾತ್ತ್ವಿಕತೆಯ ಆಸ್ವಾದ ಪಡೆಯುವ ಬದಲಿಗೆ ವ್ಯಸನಾಧೀನತೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ.

೧ ಈ. ಅನೈತಿಕ ಕೃತ್ಯಗಳಲ್ಲಿ ಹೆಚ್ಚಳ : ಕಲಾಕೃತಿಗಳನ್ನು ಪ್ರಸ್ತುತ ಪಡಿಸುವಾಗ ಮಹಿಳೆಯರು ‘ತುಂಡು ಬಟ್ಟೆಗಳನ್ನು ಧರಿಸುವುದು, ಕಾಮೋದ್ರೇಕದ ಹಾವಭಾವಗಳೊಂದಿಗೆ ಹಾಡುವುದು ಅಥವಾ ನೃತ್ಯವನ್ನು ಮಾಡುವುದು, ಮಹಿಳೆಯರು ಮತ್ತು ಪುರುಷರಿಂದ ಅಮಲು ಪದಾರ್ಥಗಳ ಸೇವನೆ’ ಇವುಗಳಿಂದ ‘ಸಮಾಜದಲ್ಲಿ ಅನೈತಿಕ ಕೃತ್ಯಗಳು ಹೆಚ್ಚುತ್ತಿವೆ.’ ಇದಕ್ಕೆ ಒಂದು ಉದಾಹರಣೆಯೆಂದರೆ, ಸಾಂಪ್ರದಾಯಿಕ ಗರ್ಬಾ ಆಡಲು ಬರುವ ಯುವಕ-ಯುವತಿಯರಲ್ಲಿ ಅನೈತಿಕ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಇಂದು ಇಂತಹ ನಡವಳಿಕೆಗೆ ‘ಸ್ಟೇಟಸ್’ (ಪ್ರತಿಷ್ಠೆ) ಎಂದು ಪರಿಗಣಿಸಿ ಸಮಾಜದಲ್ಲಿ ಮೆಲ್ಲನೆ ಮಾನ್ಯತೆ ಸಿಗುತ್ತಿರುವುದರಿಂದ ಯುವ ಪೀಳಿಗೆಯು ಅದರತ್ತ ಪ್ರವೃತ್ತವಾಗುತ್ತಿದೆ.

ಕು. ಅಂಜಲಿ ಕಾನಸ್ಕರ

ಸೌ. ಅನಘಾ ಜೋಶಿ

೨. ರಜ-ತಮ ಕಲೆಯಿಂದಾಗುವ ಮಾನಸಿಕ ದುಷ್ಪರಿಣಾಮ

೨ ಅ. ಅಹಂಕಾರಕ್ಕೆ ಧಕ್ಕೆಯಾದಾಗ ಮಾನಸಿಕ ಒತ್ತಡದಿಂದಾಗಿ ಕಲಾವಿದ ವ್ಯಸನಗಳಿಗೆ ಬಲಿಯಾಗುವುದು : ಅನೇಕ ಬಾರಿ ಕಲಾವಿದನು ತನ್ನ ಕಲಾ ಕೌಶಲ್ಯದಿಂದಾಗಿ ಹೆಚ್ಚಿನ ಪ್ರಸಿದ್ಧಿಗೆ ಒಳಗಾಗುವುದರಿಂದ ಆ ಕಲಾವಿದನ ಅಹಂ ಜಾಗೃತವಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ತನ್ನ ಅಹಂಅನ್ನು ಉಳಿಸಿಕೊಳ್ಳಲು ಅವನ ಮನಸ್ಸಿನಲ್ಲಿ ಸದಾ ಪ್ರಶಂಸೆಯ ನಿರೀಕ್ಷೆ ಇರುತ್ತದೆ. ಸಹಕಲಾವಿದರು ಅಥವಾ ಸಮಾಜದವರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿದ್ದಾಗ, ಆ ಕಲಾವಿದನಿಗೆ ಕಿರಿಕಿರಿ ಉಂಟಾಗಿ ಅಸ್ವಸ್ಥತೆ ಕಾಡುತ್ತದೆ. ಈ ರೀತಿಯಾಗಿ ಅವನ ಮನಸ್ಸಿನಲ್ಲಿ ಮತ್ಸರ ಮತ್ತು ದ್ವೇಷದಂತಹ ಮಾನಸಿಕ ವಿಕಾರಗಳ ಬೀಜಗಳು ಬಿತ್ತಲ್ಪಡುತ್ತವೆ. ಇದರಿಂದ ಕಲಾವಿದನ ಅಂತರ್ಮನವು ಅಶಾಂತವಾಗಿ ಮನಸ್ಸಿನಲ್ಲಿ ಒತ್ತಡ, ಹಾಗೆಯೇ ನಕಾರಾತ್ಮಕ ವಿಚಾರಗಳು ಹೆಚ್ಚುತ್ತವೆ. ಇವುಗಳಿಂದ ದೂರ ಸರಿಯಲು ಅವನು ಅಮಲು ಪದಾರ್ಥಗಳ ಮೊರೆ ಹೋಗುತ್ತಾನೆ. ಒಂದು ಬಾರಿ ವ್ಯಸನದ ಅಭ್ಯಾಸವಾದರೆ ನಂತರ ಅದಕ್ಕೆ ಅಧೀನನಾಗುತ್ತಾನೆ. ವ್ಯಸನದಿಂದ ಅವನಿಗೆ ತಾತ್ಕಾಲಿಕ ಶಾಂತಿ ಸಿಕ್ಕಂತೆ ಅನಿಸುತ್ತದೆ; ಆದರೆ ಅವನ ಅಂತರ್ಮನದಲ್ಲಿರುವ ಸ್ವಭಾವದೋಷಗಳು, ಅಹಂಕಾರ ಮತ್ತು ಇತರ ವಿಕಾರಗಳು ಹಾಗೆಯೇ ಉಳಿಯುತ್ತವೆ. ಪರಿಣಾಮವಾಗಿ, ಇವೆಲ್ಲವುಗಳು ಅವನ ಕಲಾ ಪ್ರದರ್ಶನದ ಮೇಲೆ ಮತ್ತು ಅವನ ಶರೀರದ ಮೇಲೆಯೂ ಘಾತಕ ಪರಿಣಾಮ ಬೀರುತ್ತವೆ.

೨ ಆ. ಕಲಾವಿದನು ನಿರಾಶೆಯನ್ನು (ಡಿಪ್ರೇಶನ್) ಎದುರಿಸ ಬೇಕಾಗುವುದು : ಇಂದು ಎಲ್ಲೆಡೆ ಸ್ಪರ್ಧೆಯ ಯುಗವಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಈ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಸತತ ಪ್ರಸಿದ್ಧಿ ಮತ್ತು ಯಶಸ್ಸಿನಿಂದ ಒಂದು ಎತ್ತರಕ್ಕೆ ತಲುಪಿದ ಕಲಾವಿದನಿಗೆ ಹಠಾತ್ತನೆ ಪರಾಜಯ ಎದುರಾದರೆ, ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವು ಬಾರಿ ಕಲಾವಿದರು ಅನೇಕ ಬಾಹ್ಯ ವಿಷಯಗಳಲ್ಲಿ ಸಿಲುಕಿ ತೀವ್ರ ನಿರಾಶೆಗೆ ಒಳಗಾಗುತ್ತಾರೆ. ಈ ನಿರಾಶೆಯು ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿ ಅವರನ್ನು ವ್ಯಸನಾಧೀನತೆಯತ್ತ ಕೊಂಡೊಯ್ಯುತ್ತದೆ. ಕಲೆಯಿಂದ ಆನಂದದ ಬದಲಿಗೆ ಕಲಾವಿದನು ನೈರಾಶ್ಯಗ್ರಸ್ತನಾಗುತ್ತಾನೆ ಮತ್ತು ಈ ನಿರಾಶೆಯಿಂದ ಕಲಾವಿದರು ಆತ್ಮಹತ್ಯೆಗೂ ಪ್ರವೃತ್ತರಾಗುತ್ತಿದ್ದಾರೆ.

೨ ಇ. ಆತ್ಮಹತ್ಯೆಗೆ ಪ್ರೋತ್ಸಾಹಿಸುವ ಸಂಗೀತ : ಸಂಗೀತ ಕಲೆಯ ಇನ್ನೊಂದು ವಿಕೃತಿ ಎಂದರೆ ಕೆಲವು ನಿರಾಶೆಯುಕ್ತ ಗೀತೆಗಳ ರಚನೆ ! ಇಂತಹ ಗೀತೆಗಳಿಂದ ಉತ್ತಮ ವ್ಯಕ್ತಿಯೂ ನಿರಾಶೆಗೊಂಡು ಆತ್ಮಹತ್ಯೆಗೆ ಪ್ರವೃತ್ತನಾಗಬಹುದು. ಇದಕ್ಕೆ ಒಂದು ಉದಾಹರಣೆಯೆಂದರೆ ಮೂಲ ಹಂಗೇರಿಯನ್ ಭಾಷೆಯಲ್ಲಿರುವ, ಆತ್ಮಹತ್ಯೆಗೆ ಪ್ರೇರೇಪಿಸುವ ಒಂದು ಗೀತೆ ! ’ಈ ಗೀತೆಯನ್ನು ಬರೆದವನು ತೀವ್ರ ನಿರಾಶೆಯಲ್ಲಿ ಅದನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದನು’ ಎನ್ನಲಾಗುತ್ತದೆ. ಇದನ್ನು ‘ಹಂಗೇರಿಯನ್ ಸುಸೈಡ್ ಸಾಂಗ್’ ಎಂದೂ ಕರೆಯುತ್ತಾರೆ. ಇದನ್ನು ಕೇಳಿ ಅನೇಕರು ಆತ್ಮಹತ್ಯೆ ಮಾಡಿಕೊಂಡರು. ಇಂತಹ ವಿಕೃತ ಕಲೆಯ ನಿರ್ಮಾಣವಾಗುವುದು ಸಮಾಜಕ್ಕೆ ಮಾರಕವೇ ಸರಿ.

೨ ಈ. ಸ್ವಭಾವದೋಷ ಮತ್ತು ಅಹಂಭಾವ ಹೆಚ್ಚಾಗುವುದರಿಂದ ಕಲಾವಿದನ ವ್ಯಕ್ತಿತ್ವದ ಮೇಲಾಗುವ ದುಷ್ಪರಿಣಾಮಗಳು : ಸಂಗೀತದ ಜ್ಞಾನವು ಮಹಾಸಾಗರದಂತೆ ಅಗಾಧವಾಗಿದೆ. ಯಾವಾಗ ಒಬ್ಬ ಶಿಷ್ಯನಿಗೆ ‘ನನಗೆ ಪೂರ್ಣ ಜ್ಞಾನ ದೊರೆಕಿದೆ’ ಎಂದು ಅನಿಸುತ್ತದೆಯೋ, ಆಗ ಅವನಲ್ಲಿ ಅಹಂಕಾರ ಹೆಚ್ಚಾಗಿ ಕಲಿಯುವ ಇಚ್ಛೆ ಕಡಿಮೆಯಾಗುತ್ತದೆ. ಇದರಿಂದ ಕಲಾವಿದನ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಉದಾಹರಣೆಗೆ. ಎರಡು ಕಲೆಗಳ ಸಮನ್ವಯದಿಂದ ‘ಜುಗಲ್‌ಬಂದಿ’ ಎಂಬ ಪ್ರಕಾರವು ಮೂಡಿಬರುತ್ತದೆ. ಹಿಂದೆ ಜುಗಲ್‌ಬಂದಿಯಲ್ಲಿ ಕಲಾವಿದರು ಪರಸ್ಪರ ಗೌರವದಿಂದ ಕಲಿಯುವ ಮನೋಭಾವದೊಂದಿಗೆ ಕಲೆಯನ್ನು ಪ್ರಸ್ತುತಪಡಿಸುತ್ತಿದ್ದರು. ಆದರೆ ಇಂದು ಜುಗಲ್‌ಬಂದಿ ಯಲ್ಲಿ ಇತರ ಕಲಾವಿದರಿಗಿಂತ ತನ್ನ ಶ್ರೇಷ್ಠತೆ ಮತ್ತು ವರ್ಚಸ್ಸನ್ನು ತೋರಿಸುವ ಪ್ರಯತ್ನಗಳೇ ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ಕಲೆಯ ನಿರ್ಮಲ ಆನಂದಕ್ಕಿಂತ ಅಹಂಕಾರವೇ ಕಾಣಿಸುತ್ತಿದೆ.

೩. ರಜ-ತಮ ಪ್ರಧಾನ ಕಲೆಯ ಮನುಷ್ಯನ ಮೇಲೆ ಆಗುವ ಆಧ್ಯಾತ್ಮಿಕ ಸ್ತರದಲ್ಲಿನ ದುಷ್ಪರಿಣಾಮಗಳು

೩ ಅ. ವಿಕೃತ ಕಲೆಯಿಂದ ನಕಾರಾತ್ಮಕ ಊರ್ಜೆ (ಶಕ್ತಿ) ಅಧಿಕ ಪ್ರಮಾಣದಲ್ಲಿ ಗ್ರಹಣವಾಗುವುದು : ಸದ್ಯದ ಕಲೆಯ ವಿಕೃತಿಯನ್ನು (ಟ್ರೆಂಡ್) ನೋಡಿದರೆ, ನಕಾರಾತ್ಮಕ ಸ್ಪಂದನಗಳೇ ಹೆಚ್ಚು ಪ್ರಕ್ಷೇಪಣೆ ಆಗುತ್ತಿವೆ. ಈ ನಕಾರಾತ್ಮಕ ಊರ್ಜೆಯಿಂದ ಮನುಷ್ಯನ ಮೇಲೆ ನಿರ್ಮಾಣವಾಗುವ ದೃಶ್ಯ ಪರಿಣಾಮವೆಂದರೆ ಕಾರಣವಿಲ್ಲದೆ ಹಠಾತ್ತನೆ ತಲೆ ಭಾರ ಅಥವಾ ನೋವು ಅನಾವಶ್ಯಕ ಸಿಟ್ಟು, ಏನೂ ತೋಚದಂತಾಗುವುದು ಇತ್ಯಾದಿ. ಈ ಲಕ್ಷಣಗಳು ಮೇಲ್ನೋಟಕ್ಕೆ ಶಾರೀರಿಕ ಅಥವಾ ಮಾನಸಿಕ ಎಂದು ಅನಿಸಿದರೂ, ಇದರ ಹಿಂದೆ ಆ ಕಲೆಯಲ್ಲಿರುವ ನಕಾರಾತ್ಮಕ ಶಕ್ತಿಯೇ ಆಧ್ಯಾತ್ಮಿಕ ಕಾರಣವಾಗಿರುತ್ತದೆ.

೩ ಆ. ನಕಾರಾತ್ಮಕ ಶಕ್ತಿಯನ್ನು ಹೊರಸೂಸುವ ಕಲೆಗಳ ಮಾಧ್ಯಮದಿಂದ ಅನಿಷ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆ ಇರುತ್ತದೆ : ಹಿಂದೂ ಧರ್ಮದಲ್ಲಿನ ಅನೇಕ ಗ್ರಂಥ ಮತ್ತು ಪುರಾಣ ಗಳಲ್ಲಿ ನಾವು ನೋಡುವಂತೆ, ಪ್ರತಿಯೊಂದು ಯುಗದಲ್ಲಿಯೂ ಸುರ-ಅಸುರರ (ರಾಕ್ಷಸರು, ಅನಿಷ್ಟ ಶಕ್ತಿಗಳು) ನಡುವೆ ಯುದ್ಧ ನಡೆದಿದೆ. ನಮ್ಮ ಮನಸ್ಸು ಮತ್ತು ಬುದ್ಧಿಗಿಂತ ಆಚೆಗಿನ ಸುರ-ಅಸುರರ ಸೂಕ್ಷ್ಮ ಜಗತ್ತು ಇಂದಿಗೂ ಅಸ್ತಿತ್ವದಲ್ಲಿದೆ. ದೇವತೆಗಳು ಸತ್ತ್ವಗುಣಪ್ರಧಾನರಾಗಿದ್ದು, ಅನಿಷ್ಟ ಶಕ್ತಿಗಳು ತೀವ್ರ ರಜ-ತಮ ಪ್ರಧಾನವಾಗಿರುತ್ತವೆ. ಆಂಗ್ಲದಲ್ಲಿ ‘ಲೈಕ್ ಅಟ್ರಾಕ್ಟ್ಸ್ ಲೈಕ್’ (ಟiಞe ಚಿಣಣಡಿಚಿಛಿಣs ಟiಞe) ಎಂಬ ಗಾದೆಯಿದೆ, ಅಂದರೆ ‘ಸಮಾನ ಗುಣಧರ್ಮವುಳ್ಳ ವಸ್ತುಗಳು ಪರಸ್ಪರ ಬೇಗ ಆಕರ್ಷಿತವಾಗುತ್ತವೆ.’ ಅದರಂತೆ ರಜ-ತಮ ಪ್ರಧಾನ ವಿಕೃತ ಕಲಾ ಪ್ರದರ್ಶನಗಳಿಂದ ಅನಿಷ್ಟ ಶಕ್ತಿಗಳು ಕಲಾವಿದ ಮತ್ತು ಪ್ರೇಕ್ಷಕರತ್ತ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುವ ಸಾಧ್ಯತೆ ಇರುತ್ತದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಇಂತಹ ಆಧ್ಯಾತ್ಮಿಕ ತೊಂದರೆಗಳ ಬಗ್ಗೆ ಅನೇಕ ಸಂಶೋಧನೆಯ ಪ್ರಯೋಗಗಳನ್ನು ಮಾಡಲಾಗಿದೆ. ಇದರಿಂದಲೇ ‘ಯಾವ ರೀತಿಯ ಕಲೆಗೆ ಅನಿಷ್ಟ ಶಕ್ತಿಗಳು ಯಾವ ರೀತಿ ಬೆಂಬಲ ನೀಡುತ್ತವೆ ?’,

ಎಂಬುದರ ಅಧ್ಯಯನ ಮಾಡಲು ಸಾಧ್ಯವಾಯಿತು. ಈ ಪ್ರಯೋಗಗಳಿಂದ ‘ವಿಕೃತ ಕಲೆಗಳ ಮಾಧ್ಯಮದಿಂದ ವ್ಯಕ್ತಿಗಳು, ಮರಗಿಡಗಳು ಮತ್ತು ವಾತಾವರಣದ ಮೇಲೆ ನಕಾರಾತ್ಮಕ ಶಕ್ತಿಯ ಪ್ರಕ್ಷೇಪಣವು ಅಧಿಕವಾಗುತ್ತದೆ’, ಎಂಬುದೂ ಈ ಪ್ರಯೋಗಗಳಿಂದ ಸಾಬೀತಾಗಿದೆ.

ಈ ಲೇಖನಮಾಲೆಯ ಲೇಖನಗಳ ಮೂಲಕ ‘ನಮ್ಮ ಮೂಲ ಶುದ್ಧ ಮತ್ತು ಸಾತ್ತ್ವಿಕ ಕಲೆ ಇಂದು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ? ಮತ್ತು ಅದರಿಂದ ಸಮಾಜದ ಮೇಲೆ ಯಾವ ದುಷ್ಪರಿಣಾಮಗಳಾಗುತ್ತವೆ ?’, ಎಂಬುದನ್ನು ನಾವು ತಿಳಿದು ಕೊಂಡೆವು. ಇಂದಿನ ಪೀಳಿಗೆಯ ಕಲಾವಿದರು ‘ಈಶ್ವರಪ್ರಾಪ್ತಿಗಾಗಿ ಕಲೆ’ ಎಂಬ ಕಲೆಯ ಮೂಲ ಉದ್ದೇಶವನ್ನರಿತು ಸಾತ್ತ್ವಿಕ ಕಲೆಯ ಮೂಲಕ ಸಾಧನೆ ಮಾಡಿ ಜೀವನವನ್ನು ಧನ್ಯವಾಗಿಸಿ ಕೊಳ್ಳಲಿ ಎಂಬುದೇ ಭಗವಂತನಲ್ಲಿ ಪ್ರಾರ್ಥನೆ ! (ಮುಕ್ತಾಯ)

– ಕು. ಅಂಜಲಿ ಕಾನಸ್ಕರ ಮತ್ತು ಸೌ. ಅನಘಾ ಜೋಶಿ, ಬಿ.ಎ. ಸಂಗೀತ (ಆಧ್ಯಾತ್ಮಿಕ ಮಟ್ಟ ಶೇ. ೬೨, ವಯಸ್ಸು ೪೫ ವರ್ಷ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೨.೨೦೨೬)