
‘೧೨ ರಿಂದ ೧೪.೫.೨೦೨೬ ರ ಕಾಲಾವಧಿಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನಲ್ಲಿ ೩ ದಿನಗಳ ‘ಈಶ್ವರಪ್ರಾಪ್ತಿಗಾಗಿ ಸಂಗೀತ-ಸಾಧನಾ ಶಿಬಿರ’ವನ್ನು ಆಯೋಜಿಸಲಾಗಿತ್ತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಹೀಗೆ ೪ ರಾಜ್ಯಗಳ ಒಟ್ಟು ೨೫ ಶಿಬಿರಾರ್ಥಿಗಳು ಈ ಶಿಬಿರದ ಲಾಭವನ್ನು ಪಡೆದುಕೊಂಡರು. ಈ ಶಿಬಿರಾರ್ಥಿಗಳು ಗಾಯನ, ವಾದನ ಮತ್ತು ನೃತ್ಯ ಕಲೆಗಳನ್ನು ಕಲಿಯುವವರಾಗಿದ್ದರು.

೧. ಶಿಬಿರದ ಸ್ವರೂಪ
ಶಂಖನಾದದೊಂದಿಗೆ ಶಿಬಿರದ ಶುಭಾರಂಭವಾಯಿತು. ಅನಂತರ ಸೌ. ಅನಘಾ ಜೋಶಿ (ಆಧ್ಯಾತ್ಮಿಕ ಮಟ್ಟ ಶೇ. ೬೨, ವಯಸ್ಸು ೪೫ ವರ್ಷ) ಇವರು ಸಂಗೀತದ ಆರಾಧ್ಯ ದೇವತೆಯಾದ ಶ್ರೀ ಸರಸ್ವತಿ ದೇವಿಯ ಸ್ತುತಿಪರ ಗೀತೆಯನ್ನು ಹಾಡಿದರು. ಈ ೩ ದಿನಗಳ ಶಿಬಿರದಲ್ಲಿ ‘ಕಲೆಗೆ ಸಾಧನೆಯ ಜೊತೆಯನ್ನು ಹೇಗೆ ನೀಡಬೇಕು ? ಕಲೆಯಲ್ಲಿನ ಸೂಕ್ಷ್ಮ ಸ್ಪಂದನಗಳನ್ನು ಹೇಗೆ ಅಭ್ಯಸಿಸಬೇಕು ? ಕಲೆಯಿಂದ ಸಾಧನೆಯ ಅಡಿಪಾಯ ಸಿದ್ಧವಾಗಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಹೇಗೆ ಮಾಡಬೇಕು ? ಕಲೆಯನ್ನು ಪ್ರಸ್ತುತಪಡಿಸುವಾಗ ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು ?’, ಎಂಬಂತಹ ವಿವಿಧ ವಿಷಯಗಳ ಮಾರ್ಗದರ್ಶನ ಮಾಡಲಾಯಿತು. ಶಿಬಿರಾರ್ಥಿಗಳಿಂದ ಈ ವಿಷಯಗಳ ಅಭ್ಯಾಸವನ್ನು ಕಲೆಯ ಪ್ರಾತ್ಯಕ್ಷಿಕೆಗಳೊಂದಿಗೆ ಮಾಡಿಸಿಕೊಳ್ಳಲಾಯಿತು. ಗುಂಪು ಚರ್ಚೆಯಲ್ಲಿ ಎಲ್ಲಾ ಶಿಬಿರಾರ್ಥಿಗಳು ಮುಕ್ತವಾಗಿ ಮಾತನಾಡಿದರು ಮತ್ತು ಅವರು ತಮ್ಮ ಅಡಚಣೆಗಳನ್ನು ಮಂಡಿಸಿ ಮಾರ್ಗದರ್ಶನ ಪಡೆದರು. ಶಿಬಿರದಲ್ಲಿ ಎಲ್ಲಾ ಶಿಬಿರಾರ್ಥಿಗಳ ಸಹಭಾಗವು ಉತ್ತಮವಾಗಿತ್ತು. ಶಿಬಿರಾರ್ಥಿಗಳು ಸ್ವಯಂಪ್ರೇರಿತರಾಗಿ ಉತ್ತರಗಳನ್ನು ನೀಡುವ ಮೂಲಕ ಶಿಬಿರದಲ್ಲಿ ಭಾಗವಹಿಸಿದ್ದರು.
ಶಿಬಿರದಲ್ಲಿ ಸುಶ್ರೀ ತೇಜಲ ಪಾತ್ರಿಕರ (ಆಧ್ಯಾತ್ಮಿಕ ಮಟ್ಟ ಶೇ. ೬೦), ಸೌ. ಅನಘಾ ಜೋಶಿ ಮತ್ತು ಶ್ರೀ. ಮನೋಜ ಸಹಸ್ರಬುದ್ಧೆ ಇವರು ವಿವಿಧ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೧೯ ವರ್ಷಗಳು) ಇವಳು ಶಿಬಿರದ ನಿರೂಪಣೆ ಮಾಡಿದಳು. ಈ ಶಿಬಿರಕ್ಕೆ ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ ಇವರು ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಶಿಬಿರಾರ್ಥಿಗಳಿಗೆ ಕಲೆಯ ಮಾಧ್ಯಮದಿಂದ ಸಾಧನೆ ಮಾಡಲು ಕೃತಿಶೀಲರಾಗುವ ದೃಷ್ಟಿಯಿಂದ ಮಾರ್ಗದರ್ಶನ ಮಾಡಿದರು.
೨. ಕಲೆಯ ಪ್ರಸ್ತುತೀಕರಣದ ಪ್ರಾತ್ಯಕ್ಷಿಕೆಗಳು
ಅ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕಿ ಕು. ಅಪಾಲಾ ಔಂಧಕರ ಇವಳು ಶ್ರೀ ಸರಸ್ವತಿ ದೇವಿಯ ಸ್ತುತಿಪರ ಭಜನೆಗೆ ಭರತನಾಟ್ಯಮ್ ನೃತ್ಯವನ್ನು ಪ್ರಸ್ತುತಪಡಿಸಿದಳು. ಆ ಸಮಯದಲ್ಲಿ ‘ಕಲೆಯನ್ನು ಪ್ರಸ್ತುತಪಡಿಸುವಾಗ ಸಾಧಕ-ಕಲಾವಿದನ ಭಾವವು ಹೇಗಿರಬೇಕು ? ಕಲೆಯ ಸಾತ್ತ್ವಿಕ ಪ್ರದರ್ಶನ ಹೇಗೆ ಇರಬೇಕು ?’, ಎಂಬುದನ್ನು ಶಿಬಿರಾರ್ಥಿಗಳು ಅನುಭವಿಸಿದರು. ಈ ನೃತ್ಯದ ಸಮಯದಲ್ಲಿ ಉಪಸ್ಥಿತರಿದ್ದ ಶಿಬಿರಾರ್ಥಿಗಳಿಗೆ ವಿವಿಧ ಅನುಭೂತಿಗಳು ಬಂದವು.
ಆ. ಶಿಬಿರಾರ್ಥಿಗಳಲ್ಲಿ ಕಥ್ಥಕ್ ನರ್ತಕಿ ಕು. ಪ್ರೇರಣಾ ಪ್ರಭು ಮತ್ತು ಕರ್ನಾಟಕಿ ಭಜನೆಯನ್ನು ಹಾಡುವ ಸಾಧಕಿ ಸೌ. ಅಪರ್ಣಾ ಭಟ್ ಇವರ ಪ್ರಾತ್ಯಕ್ಷಿಕೆಯನ್ನು ಇಡಲಾಗಿತ್ತು. ಇವರಿಬ್ಬರೂ ತಮ್ಮ ಕಲೆಯನ್ನು ನಾಮಜಪವನ್ನು ಮಾಡದೇ ಮತ್ತು ನಾಮಜಪ ಸಹಿತ ಪ್ರಸ್ತುತಪಡಿಸಿದರು. ಶಿಬಿರಾರ್ಥಿಗಳಿಗೆ ‘ಈ ಎರಡೂ ಪ್ರಸ್ತುತಿಗಳ ಸಮಯದಲ್ಲಿ ಏನು ಅನಿಸುತ್ತದೆ ?’, ಎಂಬುದನ್ನು ಅಭ್ಯಸಿಸಲು ಹೇಳಲಾಗಿತ್ತು. ನಾಮಜಪದ ನಂತರ ನೃತ್ಯ ಮಾಡಿದ ಸಾಧಕಿಯಲ್ಲಿನ ಸಹಜತೆಯನ್ನು ಎಲ್ಲರಿಗೂ ಅನುಭವಿಸಲು ಸಾಧ್ಯವಾಯಿತು, ಹಾಗೆಯೇ ಸಾಧಕಿಯ ಭಾವಪೂರ್ಣ ಗಾಯನದಿಂದ ಅನೇಕ ಶಿಬಿರಾರ್ಥಿಗಳಿಗೆ ಭಾವಜಾಗೃತಿಯಾಯಿತು. ನಾಮಜಪವನ್ನು ಮಾಡಿ ಕಲೆಯನ್ನು ಪ್ರಸ್ತುತ ಪಡಿಸಿದ್ದರಿಂದ ಕಲೆಯಲ್ಲಿ ಸಕಾರಾತ್ಮಕ ಸ್ಪಂದನಗಳು ಬಂದವು. ಪ್ರಾಯೋಗಿಕ ಸ್ತರದಲ್ಲಿ ಈ ಸ್ಪಂದನಗಳ ಅಧ್ಯಯನವಾದ ಕಾರಣ ಎಲ್ಲ ಶಿಬಿರಾರ್ಥಿಗಳಿಗೆ ಸಾಧನೆಯ ಮಹತ್ವವು ಗಮನಕ್ಕೆ ಬಂದಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತ ಮಾಡುವ ‘ಧನ್ಯ ಧನ್ಯ ಹಮ್ ಹೋ ಗಯೇ ಗುರುದೇವ…’ (ಅಂದರೆ ಗುರುದೇವ, ನಾವು ಧನ್ಯ ಧನ್ಯರಾದೆವು)’, ಎಂಬ ಭಾವಪೂರ್ಣ ಗೀತೆಯೊಂದಿಗೆ ಶಿಬಿರ ಸಂಪನ್ನಯಿತು. ಈ ಗೀತೆಯಿಂದ ಶಿಬಿರದ ವಾತಾವರಣವು ಭಾವಪೂರ್ಣವಾಗಿತ್ತು. ಈ ಸಮಯದಲ್ಲಿ ಶಿಬಿರಾರ್ಥಿಗಳ ಭಾವಜಾಗೃತಿಯಾಯಿತು. ‘ಈ ಶಿಬಿರದ ಲಾಭವನ್ನು ಶಿಬಿರಾರ್ಥಿಗಳು ಭಾವದ ಸ್ತರದಲ್ಲಿ ಪಡೆದರು’, ಎಂದು ನಮ್ಮ ಗಮನಕ್ಕೆ ಬಂದಿತು.
೩. ಶಿಬಿರದ ಗಮನಾರ್ಹ ಅಂಶಗಳು
ಅ. ೧೪ ವರ್ಷ ವಯಸ್ಸಿನ ಕು. ಆದಿತ್ಯ ಭಟ್ ಇವನ ಅನುಭೂತಿ : ಶಿಬಿರದಲ್ಲಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಮಾಡಲಾದ ನಾಮಜಪ ಮತ್ತು ಇತರ ನಾಮಜಪ’ಗಳ ಅಭ್ಯಾಸವನ್ನು ಮಾಡಿಸಿಕೊಳ್ಳಲಾಯಿತು. ಆ ಸಮಯದಲ್ಲಿ ಕು. ಆದಿತ್ಯ ಭಟ್ (ವಯಸ್ಸು ೧೪ ವರ್ಷ) ಇವನು, “ಇತರ ಜಪಗಳನ್ನು ನಾನು ಬಾಹ್ಯ ಕಿವಿಗಳಿಂದ ಕೇಳುತ್ತಿದ್ದೆ; ಆದರೆ ಗುರುದೇವರ ಮಾರ್ಗದರ್ಶನಕ್ಕನುಸಾರ ಮಾಡಲಾದ ಜಪವನ್ನು ಹಾಕಿದಾಗ ಅದನ್ನು ಕೇಳುವಾಗ ‘ನನ್ನ ಜಪವು ಯಾವಾಗ ಶ್ವಾಸಕ್ಕೆ ಜೋಡಿಸಲ್ಪಟ್ಟಿತು ಮತ್ತು ಒಳಗಿನಿಂದ ಯಾವಾಗ ಆರಂಭವಾಯಿತು ?’, ಎಂಬುದು ತಿಳಿಯಲಿಲ್ಲ. ಇದಕ್ಕಾಗಿ ನಾನು ಯಾವುದೇ ಪ್ರತ್ಯೇಕ ಪ್ರಯತ್ನವನ್ನು ಮಾಡಲಿಲ್ಲ”, ಎಂದು ಹೇಳಿದನು.
ಆ. ಭಾವಾವಸ್ಥೆ ಮತ್ತು ದೈವೀ ಕಣಗಳು : ಶಿಬಿರದ ಎರಡನೇ ದಿನದಂದು ಎಲ್ಲಾ ಶಿಬಿರಾರ್ಥಿಗಳು ಭಾವಾವಸ್ಥೆಯಲ್ಲಿದ್ದರು. ಆ ದಿನ ರಾತ್ರಿ ಶಿಬಿರದ ಸ್ಥಳವನ್ನು ಸ್ವಚ್ಛಗೊಳಿಸುವಾಗ ಸಾಧಕರಿಗೆ ಅನೇಕ ಬಣ್ಣಗಳ ದೈವೀ ಕಣಗಳು ಕಾಣಿಸಿದವು. ‘ಈ ದೈವೀ ಕಣಗಳ ಮಾಧ್ಯಮದಿಂದ ಈಶ್ವರನು ಎಲ್ಲರನ್ನು ಮನಸಾರೆ ಆಶೀರ್ವದಿಸಿದ್ದಾನೆ’, ಎಂದು ನಮಗೆ ಅನಿಸಿತು.
ಇ. ಶಿಬಿರ ನಡೆಯುತ್ತಿದ್ದ ಸಭಾಂಗಣದ ಎದುರಿಗೇ ಒಬ್ಬ ಸಂತರ ಕೋಣೆ ಇತ್ತು. ‘ಶಿಬಿರ ನಡೆಯುತ್ತಿರುವಾಗ ಸಭಾಂಗಣದಿಂದ ಭಾವದ ಸ್ಪಂದನಗಳು ನನ್ನ ಕೋಣೆ ಯೊಳಗೆ ಬರುತ್ತಿರುವುದು ನನಗೆ ಅರಿವಾಗುತ್ತಿತ್ತು’, ಎಂದು ಆ ಸಂತರು ಹೇಳಿದರು.
೪. ಶಿಬಿರಾರ್ಥಿಗಳ ಬಗ್ಗೆ ಅರಿವಾದ ಅಂಶಗಳು
೪ ಅ. ‘ಶಿಬಿರದಿಂದ ‘ಸಂಗೀತದ ಮಾಧ್ಯಮದಿಂದ ಈಶ್ವರಪ್ರಾಪ್ತಿ’, ಎಂಬ ನಿಜವಾದ ಧ್ಯೇಯ ಸಿಕ್ಕಿತು’, ಎಂದು ಶಿಬಿರಾರ್ಥಿಗಳು ಹೇಳುವುದು : ಶಿಬಿರದಲ್ಲಿದ್ದ ಶಿಬಿರಾರ್ಥಿಗಳು ಅನೇಕ ವರ್ಷಗಳಿಂದ ಸಂಗೀತ ಕಲಿಯುವವರಾಗಿದ್ದರು. ಅವರಲ್ಲಿನ ಇಬ್ಬರು, “ನಾವು ಅನೇಕ ವರ್ಷಗಳಿಂದ ಸಂಗೀತಕ್ಷೇತ್ರದಲ್ಲಿ ಇದ್ದೇವೆ; ಆದರೆ ‘ಕಲೆಯನ್ನು ಯಾವ ಧ್ಯೇಯ ಇಟ್ಟುಕೊಂಡು ಕಲಿಯಬೇಕು ?’, ಎಂಬುದು ನಮಗೆ ತಿಳಿದಿರಲಿಲ್ಲ. ಈ ಶಿಬಿರದಿಂದಾಗಿ ನಮಗೆ ‘ಸಂಗೀತದ ಮಾಧ್ಯಮದಿಂದ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು’, ಎಂಬ ನಿಜವಾದ ಧ್ಯೇಯ ದೊರೆತಿದೆ”, ಎಂದು ಹೇಳಿದರು.
೪ ಆ. ತಮ್ಮ ಮನೋಗತವನ್ನು ವ್ಯಕ್ತಪಡಿಸುವಾಗಲೂ ಶಿಬಿರಾರ್ಥಿಗಳ ಬಹಳ ಭಾವಜಾಗೃತಿ ಆಗುತ್ತಿತ್ತು. ಆ ಸಮಯದಲ್ಲಿ ಅವರು, ‘ಶಿಬಿರದಿಂದಾಗಿ ನಮ್ಮ ವ್ಯಕ್ತಿತ್ವದ ಆಧ್ಯಾತ್ಮಿಕ ವಿಕಾಸವು ಪ್ರಾರಂಭವಾಗಿದೆ’, ಎಂದರು.
೪ ಇ. ಶಿಬಿರಾರ್ಥಿಗಳು ತಮಗೆ ಬಂದ ಅನುಭೂತಿಗಳನ್ನು ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ಕೃತಜ್ಞತಾಭಾವದಿಂದ ಬರೆದುಕೊಡುವುದು : ಎಲ್ಲಾ ಶಿಬಿರಾರ್ಥಿಗಳು ಮನೆಗೆ ಹಿಂದಿರುಗುವ ಮುನ್ನ ತಮಗೆ ಬಂದ ಅನುಭೂತಿಗಳನ್ನು ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ಬರೆದುಕೊಟ್ಟರು. ಶಿಬಿರಾರ್ಥಿಗಳು ಈ ಬರವಣಿಗೆಯನ್ನು ಏಕಾಗ್ರತೆಯಿಂದ ಮಾಡಿದರು. ಆ ಬರವಣಿಗೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು, ಶಿಬಿರ ಮತ್ತು ಆಯೋಜಕ-ಸಾಧಕರ ಬಗ್ಗೆ ಅಪಾರ ಕೃತಜ್ಞತಾಭಾವವು ಅರಿವಾಗುತ್ತಿತ್ತು.
೫. ಶಿಬಿರದ ಸೇವೆಯಲ್ಲಿ ಸಾಧಕರಿಗೆ ಬಂದ ಅನುಭೂತಿ
೬ ಆ. ‘ಸ್ವಂತ ಮನಸ್ಸು ಭಾವಜಾಗೃತಿಯ ಪ್ರಯತ್ನಗಳನ್ನು ನೆನಪಿಸುತ್ತಿದೆ’, ಎಂದು ಅರಿವಾಗುವುದು : ಶಿಬಿರದ ಸೇವೆಯಲ್ಲಿ ಭಾಗವಹಿಸಿದ್ದ ಶ್ರೀ. ಅಮರನಾಥ ಇವರು, “ಸಾಮಾನ್ಯವಾಗಿ ಶಿಬಿರದ ಸೇವೆಯನ್ನು ಮಾಡುವಾಗ ನಾನು ಸ್ವತಃ ಮನಸ್ಸಿಗೆ ‘ನಿನಗೆ ಭಾವವನ್ನಿಟ್ಟುಕೊಂಡು ಸೇವೆ ಮಾಡಬೇಕಾಗಿದೆ’ ಎಂದಪದೇ ಪದೇ ಹೇಳಬೇಕಾಗುತ್ತದೆ; ಆದರೆ ಈ ಶಿಬಿರದಲ್ಲಿ ನನ್ನ ಮನಸ್ಸೇ ನನಗೆ ‘ಭಾವಜಾಗೃತಿಯ ಪ್ರಯತ್ನಗಳನ್ನು ನೆನಪಿಸಿಕೊಡುತ್ತಿದೆ’, ಎಂದು ಹೇಳಿದರು.
೬ ಇ. ಶಿಬಿರಾರ್ಥಿಗಳ ಭಾವಜಾಗೃತಿಯಾಗುತ್ತಿತ್ತು; ಆದರೆ ‘ಶಿಬಿರದಲ್ಲಿನ ಭಾವಪೂರ್ಣ ವಾತಾವರಣದಿಂದ ನಮ್ಮದೂ ಭಾವಜಾಗೃತಿಯಾಗುತ್ತಿದೆ’, ಎಂದು ಅನುಭವಿಸುತ್ತಿದ್ದೆವು.
– ಸುಶ್ರೀ ತೇಜಲ ಪಾತ್ರೀಕರ (ಸಂಗೀತ ವಿಶಾರದ, ಆಧ್ಯಾತ್ಮಿಕ ಮಟ್ಟ ಶೇ. ೬೦), ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !
ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನದಂತೆಯೇ ಆಗಿದೆ !
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ, ಪ್ರಮಾದ ಮತ್ತು ಗೊಂದಲವನ್ನು ದೂರಗೊಳಿಸಿ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅನೇಕ ಸಂತರು ವಿವಿಧ ಕಾರಣಗಳಿಗಾಗಿ ನೀಡಿದ ನಾಮಜಪಗಳ ಬದಲು ಗುರುಮಂತ್ರದಿಂದಲೇ ಶಾಂತಿಯ ಅನುಭೂತಿ ಬರುತ್ತದೆ’
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !