(ಸಮರ್ಥ ರಾಮದಾಸಸ್ವಾಮಿಗಳು ಬರೆದ ವಾಲ್ಮೀಕಿ ರಾಮಾಯಣ)
ಮೇ ೧೭ ರಿಂದ ೧೯, ೨೦೨೫ ರ ಕಾಲಾವಧಿಯಲ್ಲಿ ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಜರುಗಿತು. ಇದರಲ್ಲಿನ ಸಮರ್ಥ ರಾಮದಾಸ ಸ್ವಾಮಿಗಳು ತಮ್ಮ ೧೪ ನೇ ವಯಸ್ಸಿನಲ್ಲಿ ಸ್ವತಃ ಬರೆದ ವಾಲ್ಮೀಕಿ ರಾಮಾಯಣದ ಹಸ್ತಪ್ರತಿಗಳ ಪ್ರದರ್ಶನವಿತ್ತು. ಈ ಗ್ರಂಥವು ಸಂಸ್ಕೃತ ದಲ್ಲಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ರಾಮನಾಥಿಯ ಆಶ್ರಮದಲ್ಲಿ ಈ ಗ್ರಂಥದ ಭಾವಪೂರ್ಣ ದರ್ಶನವನ್ನು ಪಡೆದಿದ್ದಾರೆ. ಈ ವಾಲ್ಮೀಕಿ ರಾಮಾಯಣ ಗ್ರಂಥದ ೮ ಖಂಡಗಳನ್ನು ಧುಳೆಯ ‘ಶ್ರೀ ಸಮರ್ಥ ವಾಗ್ದೇವತಾ’ ಮಂದಿರದ ಮಾಜಿ ಅಧ್ಯಕ್ಷ ಶ್ರೀ. ಶರದ ಕುಬೇರ ಅವರು ಸನಾತನ ಸಂಸ್ಥೆಗೆ ಅರ್ಪಣೆಯಾಗಿ ನೀಡಿದ್ದಾರೆ. ಅವರು ನೀಡಿದ ಈ ಗ್ರಂಥದ ಮಾಹಿತಿ ಅವರ ಮಾತುಗಳಲ್ಲಿ ನೀಡಲಾಗಿದೆ.

|| ಶ್ರೀರಾಮ ಸಮರ್ಥ ||
ಶ್ರೀ ಸಮರ್ಥ ರಾಮದಾಸಸ್ವಾಮಿಯವರು ತಮ್ಮ ೧೪ ನೇ ವಯಸ್ಸಿನಲ್ಲಿ ಸ್ವಹಸ್ತದಿಂದ ಬರೆದ ‘ರಾಮೇಣ ರಾಮದಾಸೇನ ಲಿಖಿತಂ ವಾಲ್ಮೀಕಿ ರಾಮಾಯಣಮ್’ಅನ್ನು ಇಂದು ನಾವು ‘ಕಣ್ಣಾರೆ ನೋಡಲು’ ಸಾಧ್ಯವಾಗುತ್ತಿರುವುದು, ನಮ್ಮ ಭಾಗ್ಯದ ಪರಮಾವಧಿಯಾಗಿದೆ.

ಈ ಮೂಲ ಹಸ್ತಪ್ರತಿಯನ್ನು ಮಹಾರಾಷ್ಟ್ರದ ಧುಳೆಯ ಶ್ರೀಸಮರ್ಥ ವಾಗ್ದೇವತಾ ಮಂದಿರದಲ್ಲಿ ಅತ್ಯಂತ ಜಾಗರೂಕತೆಯಿಂದ ಮತ್ತು ಜೋಪಾನವಾಗಿ ಸಂರಕ್ಷಿಸಿಡಲಾಗಿದೆ. ಶ್ರೀ ಸಮರ್ಥ ರಾಮದಾಸಸ್ವಾಮಿಗಳ ಪವಿತ್ರ ಹಸ್ತಾಕ್ಷರದಲ್ಲಿರುವ ೪೦೦ ವರ್ಷಗಳಷ್ಟು ಹಳೆಯದಾದ ಈ ಹಸ್ತಲಿಖಿತವು ಎಲ್ಲ ದೃಷ್ಟಿಯಿಂದಲೂ ಅಮೂಲ್ಯವಾಗಿದೆ. ಬಹುಶಃ ಇಡೀ ವಿಶ್ವದಲ್ಲೇ ಇದು ಒಂದೇ ಅತ್ಯಂತ ಹಳೆಯ ಪ್ರತಿ (ಮಾದರಿ) ಇರಬಹುದು. ಸಂಪೂರ್ಣ ೭ ಕಾಂಡಗಳ ೧ ಸಾವಿರದ ೮೨೦ ಪುಟಗಳ ಈ ವಾಲ್ಮೀಕಿ ರಾಮಾಯಣದ ಮಾದರಿಯು ಒಂದೇ ಲೇಖನಿಯಿಂದ (ಅಂದಿನ ಕಾಲದಲ್ಲಿ ಬರೆಯುವ ಸಲುವಾಗಿ ಲೇಖನಿ ಮತ್ತು ದೌತಿ (ಮಸಿಯ ಪಾತ್ರೆ) ಬಳಸುತ್ತಿದ್ದರು. ಲೇಖನಿಯನ್ನು ಈಗಿನ ಕಾಲದ ಪೆನ್ನಿನಂತೆ ಬಳಸುತ್ತಿದ್ದರು ಮತ್ತು ದೌತಿಯಲ್ಲಿ ಮಸಿ ಇರುತ್ತಿತ್ತು.) ಸುಂದರವಾದ ಅಕ್ಷರಗಳಲ್ಲಿ ದೋಷರಹಿತವಾಗಿ ಇದೆ. ಕಿಷ್ಕಿಂಧಾ ಕಾಂಡದ ಪ್ರಾರಂಭದಲ್ಲಿ ಬಾಲ ಸಮರ್ಥರು ಬಿಡಿಸಿದ ಬಹುಬಣ್ಣದ ಆಕರ್ಷಕ ಚಿತ್ರವಿದೆ. ಅಕ್ಷರಗಳ ಗಾಢತೆ ಮನಸೆಳೆಯುವಂತಿದೆ. ಪುಟದ ಎಲ್ಲೆಡೆಗೂ ನಾಲ್ಕೂ ಬದಿಗಳಲ್ಲಿ ಸಮಾನ ಖಾಲಿ ಜಾಗ ಮತ್ತು ಸಮಾಸ (ಮಾರ್ಜಿನ) ಬಿಟ್ಟು ಮಧ್ಯದಲ್ಲಿ ಕಡು ಕಪ್ಪು ಬಣ್ಣದ ಸಾಲುಗಳಿವೆ. ಪ್ರತಿಯೊಂದು ಪುಟದಲ್ಲಿನ ಸಾಲುಗಳ ಸಂಖ್ಯೆ ಮತ್ತು ಪ್ರತಿಯೊಂದು ಸಾಲಿನಲ್ಲಿನ ಅಕ್ಷರಗಳ ಸಂಖ್ಯೆ ಸಮಾನವಾಗಿದೆ. ಶ್ಲೋಕ ಮುಕ್ತಾಯವಾದ ನಂತರ ಶ್ಲೋಕ ಸಂಖ್ಯೆಯನ್ನು ಸೂಚಿಸುವ ದಂಡಗಳನ್ನು ಕೆಂಪು ಮಸಿಯಲ್ಲಿ ಗುರುತಿಸಲಾಗಿದೆ. ಅಪ್ಪಿತಪ್ಪಿ ಬಿಟ್ಟುಹೋದ ವಿಷಯವನ್ನು (ಪಠ್ಯವನ್ನು) ಸಮಾಸಲ್ಲಿ (ಬದಿಯ ಜಾಗದಲ್ಲಿ) ಬರೆಯಲಾಗಿದೆ. ಲೇಖನ ತಿದ್ದುಪಡಿಗಾಗಿ ಸಂಕೇತಗಳನ್ನು (ಚಿಹ್ನೆಗಳನ್ನು) ಬಳಸಲಾಗಿದೆ.

ಪ್ರತಿಯೊಂದು ಕಾಂಡದ ಮುಕ್ತಾಯದ ನಂತರ ನಾಮಮುದ್ರೆ ಇದೆ. ಅದರಲ್ಲಿ ‘ರಾಮೇಣ ರಾಮದಾಸ ಲಿಖಿತಮ್’ ಹೀಗೆ ತಮ್ಮನ್ನು ಲೇಖಕರೆಂದು ತಿಥಿ, ವಾರ ಮತ್ತು ಶಕ ಸಂವತ್ಸರದೊಂದಿಗೆ ಸ್ಪಷ್ಟವಾಗಿ ಉಲ್ಲೇಖವಿದೆ. ಶ್ರೀರಾಮನೇ ಇದನ್ನು ಬರೆಸಿಕೊಂಡಿದ್ದಾನೆ ಎಂಬ ಕೃತಜ್ಞತಾಪೂರ್ವಕ ಉಲ್ಲೇಖವೂ ಇದೆ.
ಇಂತಹ ಗುಣವಿಶೇಷತೆಗಳಿಂದ ಕೂಡಿದ ಈ ಗ್ರಂಥವು ಮೌಲಿಕ-ಮೂಲಭೂತ ಸಂಶೋಧನೆಗಾಗಿ ಒಂದು ಅಮೂಲ್ಯ ಆಧಾರವಾಗಿದೆ. ಈ ಹಸ್ತಪ್ರತಿಯನ್ನು (ಹಸ್ತಲಿಖಿತದ) ಶಾಸ್ತ್ರಶುದ್ಧವಾಗಿ ಸಂಶೋಧಿಸಿ, ಮೂಲ ಹಸ್ತಪತ್ರಿಯೊಂದಿಗೆ (ಹಸ್ತಲಿಖಿತದೊಂದಿಗೆ) ಗಣಕೀಕೃತ ರೂಪಾಂತರ, ಹೇರಳವಾದ ಟಿಪ್ಪಣಿಗಳು, ವ್ಯಾಕರಣ ಶಾಸ್ತ್ರದ ದೃಷ್ಟಿಯಿಂದ ಶ್ರೀ ಸಮರ್ಥರ ಬರವಣಿಗೆಯಲ್ಲಿನ ವಿಶಿಷ್ಟ ಸಂಜ್ಞೆಗಳ ವಿವರಣೆಯೂ ಇದೆ. ಹಸ್ತಪ್ರತಿ (ಹಸ್ತಲಿಖಿತ) ಓದಲು ಸುಲಭವಾಗುವಂತೆ ಲೇಖನ ಶೈಲಿಯ ಮಾದರಿಗಳನ್ನು ಕೊಡಲಾಗಿದೆ. ಮರಾಠಿ ಮತ್ತು ಆಂಗ್ಲ ಭಾವಾನುವಾದವೂ ಲಭ್ಯವಿದೆ. ಪೂರಕ ಅನುಬಂಧಗಳಿವೆ(ಪೂರಕ ಮಾಹಿತಿ). ಪ್ರಾರಂಭದಲ್ಲಿ ಶ್ರದ್ಧೆ ಮತ್ತು ಭಕ್ತಿ ಹೆಚ್ಚಿಸಲು ಪೂರಕವಾದ ಪವಿತ್ರ ಸ್ತೋತ್ರಗಳು ಇವೆ. ತಂಜಾವೂರು ಮಠದಲ್ಲಿ ಮತ್ತು ಇತರ ಕಡೆಗಳಲ್ಲಿ ದೊರೆತ ಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.
– ಶ್ರೀ. ಶರದ ಕುಬೇರ, ಅಧ್ಯಕ್ಷರು, ಶ್ರೀಸಮರ್ಥ ವಾಗ್ದೇವತಾ ಮಂದಿರ, ಧುಳೆ, ಮಹಾರಾಷ್ಟ್ರ (೩೧.೫.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ