
‘ವೋಕಿಸಂ’ ಇದರ ಬೆಂಬಲಿಗರು ಮತ್ತು ಉದ್ಯಮಿ ನಮಿತಾ ಥಾಪರ್ ಅವರು ಕೆಲವು ವಾರಗಳ ಹಿಂದೆ ಮಾಡಿದ ‘ರೀಲ್’ನಲ್ಲಿ (‘ಕೆಲವು ಸೆಕೆಂಡಗಳ ವಿಡಿಯೋ’ದಲ್ಲಿ) ನಮಾಜು ಪಠಿಸುವುದರಿಂದಾಗುವ ಪ್ರಯೋಜನಗಳು ಮತ್ತು ಗುಣಗಳನ್ನು ಹಾಡಿ ಹೊಗಳಿದ್ದಾರೆ. (‘ವೋಕಿಸಂ’ ಎಂದರೆ ಜಗತ್ತಿನಾದ್ಯಂತ ಇರುವ ಪ್ರಸ್ಥಾಪಿತ ಸಮಾಜ ವ್ಯವಸ್ಥೆ, ಸಂಸ್ಕೃತಿ ಮತ್ತು ಕುಟುಂಬ ವ್ಯವಸ್ಥೆಯನ್ನು ವಿರೋಧಿಸುವ ಒಂದು ವಿಕೃತಿ !) ಇದರ ವಿರುದ್ಧ ಅವರ ಮೇಲೆ ಟೀಕೆಗಳಾದಾಗ ಅವರು ನೀಡಿದ ಸ್ಪಷ್ಟೀಕರಣವು, ‘ಥಾಪರ್ ಪ್ರವೃತ್ತಿ’ಯ ಸಾಮ್ಯವಾದಿ ಮಾನಸಿಕತೆಯ ಪ್ರಭಾವವು ಅಂತಾರಾಷ್ಟ್ರೀಯ ಸಂಸ್ಥೆಗಳ ಮೇಲೆ ಎಷ್ಟರ ಮಟ್ಟಿಗಿದೆ ? ಎಂಬುದನ್ನು ತೋರಿಸುತ್ತದೆ. ಅಲ್ಲದೆ, ಒಂದು ರೀತಿಯಲ್ಲಿ ‘ಹಿಂದೂದ್ವೇಷವನ್ನು ಹರಡುವುದು ಮತ್ತು ಇತರ ಧರ್ಮದವರನ್ನು ವೈಭವೀಕರಿಸುವುದು’ ಈ ಮೂಲಕ ಹಿಂದೂ ರಾಷ್ಟ್ರವನ್ನು ಒಡೆಯುವ ಕೆಲಸ ಹೇಗೆ ನಡೆಯುತ್ತಿದೆ’ ಎಂದು ತಿಳಿಯುತ್ತದೆ.
ಥಾಪರ್ ಅವರು ತಮ್ಮ ಮೇಲಿನ ಟೀಕೆಗೆ ಉತ್ತರಿಸುತ್ತಾ, ‘ಮಹಿಳೆಯರನ್ನು ಗುರಿ ಮಾಡುವ ಹಿಂದೂಗಳು’ ಮಹಿಳೆಯರಿಗಾಗಿ ಮೀಸಲಾತಿಯನ್ನು ಕೇಳುತ್ತಿದ್ದಾರೆ’, ಎಂದು ಹೇಳುವ ಮೂಲಕ ವಿಷಯಾಂತರ ಮಾಡಿದ್ದಾರೆ. ಇಲ್ಲಿ ಒಬ್ಬ ಪುರುಷ ಉದ್ಯಮಿ ಇದ್ದಿದ್ದರೂ ಅವನನ್ನೂ ಟೀಕಿಸಲಾಗುತ್ತಿತ್ತು. ಥಾಪರ್ ಅವರಂತಹ ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮಹಿಳೆಯು ಇಲ್ಲಿ ಅನುಕೂಲಕ್ಕಾಗಿ ‘ಮಹಿಳೆ’ಯ ಪಾತ್ರದ ಬಗ್ಗೆ ಹೇಳಿದರು. ಥಾಪರ್ ಮುಂದುವರಿದು ಅವರು, “ನಾನು ಒಬ್ಬಳು ಆರೋಗ್ಯ ವೃತ್ತಿಪರಳಾಗಿದ್ದು, ಯೋಗಾಸನ ಮತ್ತು ಸೂರ್ಯನಮಸ್ಕಾರಗಳ ಬಗ್ಗೆಯೂ ‘ರೀಲ್’ ಮಾಡುತ್ತೇನೆ; ಆದರೆ ಆಗ ಯಾರೂ ಏನೂ ಹೇಳಲಿಲ್ಲ” ಎಂದಿದ್ದಾರೆ. ಅವರ ಈ ಸ್ಪಷ್ಟೀಕರಣವು ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಅವರ ಉದ್ದೇಶವನ್ನು ಅರಿತಿರುವ ಸಾವಿರಾರು ಜನರು ಅವರನ್ನು ಟೀಕಿಸಿದ್ದಾರೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ‘ವೋಕಿಸಂ’ ಪ್ರಭಾವವಿರುವ ಗಣ್ಯ ಉದ್ಯಮಿಗಳು ಹಿಂದೂ ತತ್ತ್ವಶಾಸ್ತ್ರ ಮತ್ತು ಹಿಂದೂ ಧರ್ಮದ ಮೇಲೆ ನಡೆಸುತ್ತಿರುವ ದಾಳಿಗಳು ಪರಸ್ಪರ ಹೇಗೆ ಸಂಬಂಧ ಹೊಂದಿವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
‘ಸೋನಿ ಟಿವಿ’ ವಾಹಿನಿಯ ‘ಶಾರ್ಕ್ ಟ್ಯಾಂಕ್ ಇಂಡಿಯಾ’ ಎಂಬುದು ಉದ್ಯಮಿಗಳ ಒಂದು ‘ರಿಯಾಲಿಟಿ ಶೋ’ (ಜನ ಸಾಮಾನ್ಯರು ಪಾಲ್ಗೊಳ್ಳುವಂತಹ ವಾಹಿನಿಯಲ್ಲಿನ ವಾಸ್ತವವಾದಿ ಕಾರ್ಯಕ್ರಮ) ಆಗಿದೆ. ಇದರಲ್ಲಿ ಕೆಲವರು ಹೊಸ ವ್ಯವಹಾರದ ಹೊಸ ಪರಿಕಲ್ಪನೆಗಳನ್ನು ಹೂಡಿಕೆದಾರರ ಮುಂದೆ ಮಂಡಿಸುತ್ತಾರೆ. ಅಲ್ಲಿ ಕುಳಿತಿರುವ ದೊಡ್ಡ ಉದ್ಯಮಿಗಳು (‘ಶಾರ್ಕ್’) ಅದರಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ನಮಿತಾ ಥಾಪರ್ ಅವರು ಈ ಕಾರ್ಯಕ್ರಮದ ಒಬ್ಬ ಹೂಡಿಕೆದಾರರು ಮತ್ತು ತೀರ್ಪುಗಾರರಾಗಿದ್ದಾರೆ.

‘ವೇಕ್ ಅಪ್’ ಎಂದರೆ ಎಚ್ಚರಗೊಳ್ಳುವುದು, ಇದರಿಂದ ಬಂದ ‘ವೋಕ್’ ಪದದ ಅರ್ಥ ಜಾಗೃತಗೊಳಿಸುವುದು ಎಂದಾಗುತ್ತದೆ. ಅಮೆರಿಕದ ಬಿಳಿ ಜನರು ಅಲ್ಲಿನ ಮೂಲ ಕಪ್ಪು ಜನರ ಮೇಲೆ ಮಾಡುತ್ತಿದ್ದ ದೌರ್ಜನ್ಯಗಳ ವಿರುದ್ಧ ೧೯೩೦ ರ ದಶಕದಲ್ಲಿ ಹುಟ್ಟಿಕೊಂಡ ಈ ಪರಿಕಲ್ಪನೆಯು ಈಗ ಅತ್ಯಂತ ವಿಕೃತ ರೂಪವನ್ನು ಪಡೆದುಕೊಂಡಿದೆ. ಈ ‘ಜಾಗೃತಿ’ ಈಗ ಸಂಪ್ರದಾಯ, ಸಂಸ್ಕೃತಿ ಮತ್ತು ಧಾರ್ಮಿಕ ತತ್ತ್ವಜ್ಞಾನದ ವಿರುದ್ಧ ತಿರುಗಿದೆ. ಪ್ರಸ್ತುತ ಅಮೆರಿಕದ ಮತ್ತು ಭಾರತದ ಸಾಮ್ಯವಾದಿ ತಥಾಕಥಿತ ಚಿಂತಕರು ಹಾಗೂ ಪತ್ರಕರ್ತರು ಈ ‘ವೋಕಿಸಂ’ ಅನ್ನು ಬೆಂಬಲಿಸುತ್ತಿದ್ದಾರೆ. ಇದು ಎಲ್ಲ ಸಮಾಜವನ್ನು ಸಂಸ್ಕಾರರಹಿತರನ್ನಾಗಿಸವುದರ ಮೂಲವಾಗಿದೆ. ಇವರು ಕಟು ಸ್ತ್ರೀವಾದ, ಬಂಡಾಯ ಮತ್ತು ಸಲಿಂಗಕಾಮವನ್ನು ಬೆಂಬಲಿಸುತ್ತಾರೆ ಮತ್ತು ಜಾತಿ ತಾರತಮ್ಯ, ಹವಾಮಾನ ಬದಲಾವಣೆ ಮತ್ತು ಪರಿಸರ ಜಾಗೃತಿಯಂತಹ ವಿಷಯಗಳನ್ನು ಕೇವಲ ತೋರಿಕೆಗಾಗಿ ಬಳಸುತ್ತಾರೆ. ‘ಧಾರ್ಮಿಕ ತತ್ತ್ವಜ್ಞಾನ, ಸಂಪ್ರದಾಯ ಮತ್ತು ಶಾಸ್ತ್ರಗಳನ್ನು ಟೀಕಿಸುವುದು’ ಇವರ ಮೂಲ ಉದ್ದೇಶವಾಗಿದೆ. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುವ ಹಿಂದೂ ಧರ್ಮವಿರೋಧಿ ಶಿಕ್ಷಣವೂ ಇದಕ್ಕೆ ಕಾರಣವಾಗಿದ್ದು, ಈ ವಿಭಾಗಗಳಿಗೆ ಹಣಕಾಸು ಒದಗಿಸುವವರು ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆಗಳೇ ಆಗಿದ್ದಾರೆ !
ಕೆನಡಾದಲ್ಲಿ ಶಿಕ್ಷಣ ಪಡೆದ ‘ಲೆನ್ಸ್ ಕಾರ್ಟ್’ನ ಕಾರ್ಯದರ್ಶಿ ಪಿಯೂಷ್ ಬನ್ಸಲ್ ಅವರು ತಮ್ಮ ಮಳಿಗೆಗಳ ಉದ್ಯೋಗಿಗಳಿಗೆ ‘ಹಿಜಾಬ್ ಧರಿಸಲು ಅವಕಾಶವಿದೆ, ಆದರೆ ಕುಂಕುಮ ಅಥವಾ ರಕ್ಷಾಸೂತ್ರದಂತಹ ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಬಳಸುವಂತಿಲ್ಲ’ ಎಂಬ ಹಿಂದೂವಿರೋಧಿ ನಿಲುವನ್ನು ತಳೆದಿದ್ದರು. ಹಿಂದೂಗಳ ತೀವ್ರ ವಿರೋಧ ಮತ್ತು ಆರ್ಥಿಕ ನಷ್ಟದ ಭಯದಿಂದ ಅವರು ಈ ನಿರ್ಧಾರವನ್ನು ಬದಲಿಸಿದ್ದರೂ, ಅವರ ‘ಹಿಂದೂವಿರೋಧಿ ಮಾನಸಿಕತೆ ಬದಲಾಗಿದೆ’ ಎಂದು ಭಾವಿಸುವುದು ತಪ್ಪಾಗುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಅಂದರೆ, ಈ ಬನ್ಸಲ್ ಕೂಡ ಅದೇ ‘ರಿಯಾಲಿಟಿ ಶೋ’ನಲ್ಲಿ ಒಬ್ಬ ಹೂಡಿಕೆದಾರರಾಗಿದ್ದಾರೆ. ಹಿಂದೂದ್ವೇಷಿ ಅತಿಶ್ರೀಮಂತರು ಒಟ್ಟಾಗಿ ಹೇಗೆ ಹಿಂದೂವಿರೋಧಿ ಯೋಜನೆಗಳನ್ನು ರೂಪಿಸು ತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ ಮತ್ತು ಬಡ ಸಾಮಾನ್ಯ ಹಿಂದೂಗಳನ್ನು ಧರ್ಮದಿಂದ ದೂರ ಒಯ್ಯುತ್ತಾರೆ, ಎಂಬುದು ಅದರ ಎರಡನೇ ಉದಾಹರಣೆಯಾಗಿದೆ. ಮೂರನೇ ಉದಾಹರಣೆ ಎಂದರೆ ಟಿ.ಸಿ.ಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ಸಂಸ್ಥೆಯಲ್ಲಿನ ಮುಸಲ್ಮಾನ ಪ್ರಾಬಲ್ಯ. ‘ನೆರೆಯ ಮುಸಲ್ಮಾನ ಮಹಿಳೆಯು ಹಿಂದೂ ಮಹಿಳೆಗೆ ಚಹಾ ನೀಡುವ’ ‘ರೆಡ್ ಲೇಬಲ್’ ಚಹಾದ ಜಾಹೀರಾತು, ತನಿಷ್ಕ್ (ಟಾಟಾ)ನ ‘ಕುಂಕುಮವಿಲ್ಲದ ಹಿಂದೂ ಮಹಿಳೆ’ಯ ಜಾಹೀರಾತು ಅಥವಾ ಹಿಂದೂ ಹಬ್ಬದ ಸಮಯದಲ್ಲಿ ಮುಸಲ್ಮಾನರ ಬಟ್ಟೆಗಳು ಹಾಳಾಗುತ್ತವೆ ಎಂದು ತೋರಿಸುವ ಸಾಬೂನಿನ ಜಾಹೀರಾತು ಇವೆಲ್ಲವೂ ಹಿಂದೂದ್ವೇಷ ಮತ್ತು ಇತರ ಪಂಥದ ವೈಭವೀಕರಣವನ್ನು ಹೇಗೆ ಹರಡುತ್ತಿವೆ ? ಎಂಬುದು ಈಗ ಹಿಂದೂಗಳ ಗಮನಕ್ಕೆ ಬಂದಿದೆ.
ಬಹುರಾಷ್ಟ್ರೀಯ ಸಂಸ್ಥೆಗಳ ಮೇಲೆ ಕ್ರೈಸ್ತ ಮತ್ತು ಮುಸಲ್ಮಾನ ಪಂಥೀಯರ ಒತ್ತಡ !
ಹಿಂದೂ ಸಂಪ್ರದಾಯದಲ್ಲಿ ಋತುಸ್ರಾವದ ಸಮಯದಲ್ಲಿ ಪಾಲಿಸುವ ನಿಯಮಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದ ‘ರಿಯಾಲಿಟಿ ಶೋ’ನ ಉದ್ದಿಮೆಯಲ್ಲಿ ಥಾಪರ್ ಅವರು ಪಾಲುದಾರರಾಗಿದ್ದಾರೆ. ಆದರೆ ಅದೇ ಕಾರ್ಯಕ್ರಮದಲ್ಲಿ ಬುರ್ಖಾ ಮಾರಾಟ ಮಾಡುವ ಹುಡುಗಿಯ ಉದ್ದಿಮೆಗೆ ‘ನನಗೆ ಬೇಕಾದುದನ್ನು ಧರಿಸುವ ಹಕ್ಕಿದೆ’ ಎಂಬ ಸ್ತ್ರೀವಾದಿ ನಿಲುವನ್ನು ಬೆಂಬಲಿಸಿ ಥಾಪರ್ ಮತ್ತು ಬನ್ಸಲ್ ಆರ್ಥಿಕ ಸಹಾಯ ನೀಡಿದರು. ಇಲ್ಲಿ ಅವರ ಸ್ತ್ರೀಸ್ವಾತಂತ್ರ್ಯ ಮತ್ತು ಸಮಾನತೆ ಎಲ್ಲಿ ಹೋಯಿತು ?ಒಂದು ವೇಳೆ ಯಾರಾದರೂ ಮಹಿಳೆ ಅಲ್ಲಿ ‘ಘೂಂಘಟ್’ ಧರಿಸಿ (ತಲೆ ಮೇಲೆ ಸೆರಗು ಹೊದ್ದುಕೊಂಡು) ಬಂದಿದ್ದರೆ, ಇವರು ಆಕೆಯನ್ನು ಹಳೆಕಾಲದ ಅಥವಾ ಹಿಂದುಳಿದವರು ಎಂದು ಟೀಕಿಸುತ್ತಿದ್ದರು. ಈ ಘಟನೆಗಳಿಂದ ಉದ್ಯಮಿಗಳು ಮತ್ತು ಜನಸಾಮಾನ್ಯರಲ್ಲಿ ‘ಸ್ಟಾಕ್ಹೋಮ್ ಸಿಂಡ್ರೋಮ್’ (ತನ್ನನ್ನು ಪೀಡಿಸುವ ವ್ಯಕ್ತಿಯೊಂದಿಗೇ ಹೊಂದಿಕೊಳ್ಳುವ ಮಾನಸಿಕ ಸ್ಥಿತಿ ಬರುವುದು) ಉಂಟಾಗುವ ಅಪಾಯವಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಂತಹ ಸಂಸ್ಥೆಗಳಲ್ಲಿ ಹಿಂದೂ ಯುವಕ-ಯುವತಿಯರು ಅನುಭವಿಸಿದ ತೊಂದರೆಯು ಬೇರೇನೂ ಅಲ್ಲ, ಅದು ಒಂದು ರೀತಿಯ ‘ಸ್ಟಾಕ್ಹೋಮ್ ಸಿಂಡ್ರೋಮ್’ ಆಗಿತ್ತು.
ಏನೇ ಇರಲಿ, ಇಲ್ಲಿ ನೀಡಿರುವ ವಿವಿಧ ಅಂಶಗಳಿಂದ ಮತ್ತು ಒಟ್ಟಾರೆ ‘ವೋಕಿಸಂ’ ಮೂಲಕ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಎದುರಿಸಲು ಅವರು ಎಷ್ಟು ವಿವಿಧ ಸ್ತರಗಳಲ್ಲಿ ಸನ್ನದ್ದರಾಗಬೇಕು ಎಂಬುದು ಸ್ಪಷ್ಟವಾಗುತ್ತದೆ !
ಜಿರಳೆ ಮತ್ತು ಬೋಧನೆ : ಸಂಪಾದಕೀಯ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !