
೧. ಸಾಮಾನ್ಯ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ತ್ಯಾಗ ಮಾಡಲು ಸಿದ್ಧನಿರುತ್ತಾನೆ; ಆದರೆ ಜೀವನದ ಅಂತಿಮ ಸತ್ಯವನ್ನು ತಲುಪಲು, ಅಂದರೆ ಭಗವಂತನ ದರ್ಶನ ಮತ್ತು ಮೋಕ್ಷಪ್ರಾಪ್ತಿಗಾಗಿ ತ್ಯಾಗ ಮಾಡುವ ಸಿದ್ಧತೆ ಇರುವುದಿಲ್ಲ
‘ಸಾಮಾನ್ಯ ಜೀವನದಲ್ಲಿ ಯಾವುದೇ ವಸ್ತುವನ್ನು ಪಡೆಯ ಬೇಕಾದರೂ ಅದಕ್ಕಾಗಿ ತ್ಯಾಗ ಮಾಡಲೇಬೇಕಾಗುತ್ತದೆ. ಪ್ರತಿ ಒಬ್ಬರೂ ತಮ್ಮ ಅಮೂಲ್ಯ ಸಮಯವನ್ನು ಹಗಲು-ರಾತ್ರಿ ವಿನಿಯೋಗಿಸಿ ಏನನ್ನಾದರೂ ಪಡೆಯಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಪ್ರತಿಯೊಬ್ಬರೂ ಸಂಘರ್ಷ ಮಾಡಬೇಕಾಗುತ್ತದೆ, ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ ಮತ್ತು ಮಾನ-ಅಪಮಾನಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ, ಅಂದರೆ ತ್ಯಾಗ ಮಾಡಬೇಕಾಗುತ್ತದೆ. ನಾವು ನಮ್ಮ ಸ್ವಾರ್ಥಕ್ಕಾಗಿ ತ್ಯಾಗ ಮಾಡುತ್ತೇವೆ; ಆದರೆ ಜೀವನದ ಅಂತಿಮ ಸತ್ಯವನ್ನು ತಲುಪಲು, ಅಂದರೆ ಭಗವಂತನ ದರ್ಶನ ಮತ್ತು ಮೋಕ್ಷಪ್ರಾಪ್ತಿಗಾಗಿ ತ್ಯಾಗ ಮಾಡುವ ಸಮಯ ಬಂದಾಗ, ಹೆಚ್ಚಿನ ಜನರು ”ನಮ್ಮ ಬಳಿ ಸಮಯವಿಲ್ಲ, ನಮಗೆ ಇದರ ಅವಶ್ಯಕತೆಯಿಲ್ಲ, ನಮಗೆ ಇಷ್ಟೊಂದು ಸಂಘರ್ಷ ಮಾಡಲು ಸಾಧ್ಯವಿಲ್ಲ,” ಎಂದು ಹೇಳುತ್ತಾರೆ. ಇದಕ್ಕೆ ಒಂದೇ ಕಾರಣವೆಂದರೆ, ಅವರಿಗೆ ಅದರ ಮಹತ್ವ ತಿಳಿದಿರುವುದಿಲ್ಲ.’
೨. ‘ತ್ಯಾಗದಲ್ಲಿ ಆನಂದವಿದೆ ಮತ್ತು ಭೋಗದಲ್ಲಿ ದುಃಖವಿದೆ’, ಇದೇ ಧರ್ಮಶಾಸ್ತ್ರದ ಸಂದೇಶ !
೨ ಅ. ಜೀವನದಲ್ಲಿ ಧನವನ್ನು ಪಡೆಯಲು ತ್ಯಾಗ ಮಾಡ ಬೇಕಾಗುತ್ತದೆ, ಹೀಗಿರುವಾಗ ಭಗವಂತನನ್ನು ಪಡೆಯಲು ಎಲ್ಲವನ್ನು ತ್ಯಾಗ ಮಾಡಲೇ ಬೇಕಾಗುತ್ತದೆ ! : ‘ದೇವರ ಕೃಪೆ ಸುಲಭವಾಗಿ ಸಿಗಲಿ, ದೇವರು ನಮ್ಮ ಬೇಡಿಕೆಗಳನ್ನು ಈಡೇರಿಸಲಿ ಮತ್ತು ನಮ್ಮ ದುಃಖಗಳನ್ನು ದೂರ ಮಾಡಲಿ ಎಂದು ಅನೇಕರು ಬಯಸುತ್ತಾರೆ; ಆದರೆ ಅವರು ದೇವರಿಗಾಗಿ ತ್ಯಾಗ ಮಾಡಲು ಸಮಯ ನೀಡುವುದಿಲ್ಲ, ಹಾಗೆಯೇ ಮನಸ್ಸನ್ನೂ ಅರ್ಪಿಸುವುದಿಲ್ಲ. ‘ಜೀವನದಲ್ಲಿ ಕೇವಲ ಹಣ ಗಳಿಸುವುದಕ್ಕೇ ತ್ಯಾಗ ಮಾಡಬೇಕೆಂದ ಮೇಲೆ, ಭಗವಂತನನ್ನು ಪಡೆಯಲು ಅತೀವ ತ್ಯಾಗ ಮಾಡುವುದು ಅವಶ್ಯಕವಲ್ಲವೇ ?’, ಎಂಬ ವಿಷಯದ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡುವುದು ಅತ್ಯಂತ ಆವಶ್ಯಕವಾಗಿದೆ. ‘ತ್ಯಾಗದಲ್ಲಿ ಆನಂದವಿದೆ ಮತ್ತು ಭೋಗದಲ್ಲಿ ದುಃಖವಿದೆ’ ಎಂಬುದು ಧರ್ಮಶಾಸ್ತ್ರದ ಸ್ಪಷ್ಟ ಸಂದೇಶವಾಗಿದೆ. ಇದನ್ನು ಯಾರೂ ಮರೆಯಬಾರದು.
೩. ‘ಸ್ವತಃ ಸಾಧನೆ ಮಾಡಿಯೇ ಇತರರಿಗೆ ಸಾಧನೆಯನ್ನು ತಿಳಿಸಬೇಕು’, ಇದೇ ಸಂತರ ಸಂದೇಶ
೩ ಅ. ಸ್ವತಃ ಸಾಧನೆ ಮಾಡದೆ ಇತರರಿಗೆ ಉಪದೇಶ ಮಾಡಿದರೆ ಅದು ಪರಿಣಾಮಕಾರಿಯಾಗುವುದಿಲ್ಲ : ಇತರರಿಗೆ ಆಧ್ಯಾತ್ಮಿಕ ಸಾಧನೆಯ ಬಗ್ಗೆ ತಿಳಿಸಬೇಕಾದರೆ, ಅದನ್ನು ಹೇಳುವವರು ಸ್ವತಃ ಸಾಧನೆಯನ್ನು ಮಾಡುತ್ತಿರಬೇಕು. ಆಗ ಮಾತ್ರ ಅವರ ಮಾತುಗಳು ಪರಿಣಾಮಕಾರಿಯಾಗಿರುತ್ತವೆ. ಸ್ವತಃ ಸಾಧನೆ ಮಾಡದೆ ಕೇವಲ ಉಪದೇಶ ನೀಡಿದರೆ ಅದು ಯಾಂತ್ರಿಕವಾಗಿರುತ್ತದೆಯೇ ಹೊರತು ಹೆಚ್ಚು ಪ್ರಭಾವ ಬೀರುವುದಿಲ್ಲ.
೩ ಆ. ರಾಮಕೃಷ್ಣ ಪರಮಹಂಸರಿಗೆ ಸಂಬಂಧಿಸಿದ ಒಂದು ಬೋಧಪ್ರದ ಕಥೆ ! : ‘ಒಮ್ಮೆ ರಾಮಕೃಷ್ಣ ಪರಮಹಂಸರ ಬಳಿ ಒಬ್ಬ ಮಹಿಳೆ ತನ್ನ ಮಗನನ್ನು ಕರೆದುಕೊಂಡು ಬಂದಳು. ಅವಳು ಪರಮಹಂಸರಲ್ಲಿ ವಿನಂತಿಸಿದಳು, ‘ನನ್ನ ಮಗನಿಗೆ ಬೆಲ್ಲ ತಿನ್ನಬೇಡ’ ಎಂದು ಬುದ್ಧಿ ಹೇಳಿ.’ ಆಗ ಪರಮಹಂಸರು ತಕ್ಷಣ ಉತ್ತರಿಸದೆ, ಆ ಮಹಿಳೆಗೆ ೪ ದಿನಗಳ ನಂತರ ಬರಲು ಹೇಳಿದರು. ೪ ದಿನಗಳ ನಂತರ ಆ ಮಹಿಳೆ ಬಂದಾಗ, ಪರಮಹಂಸರು ಆ ಹುಡುಗನಿಗೆ ಸ್ಪಷ್ಟವಾಗಿ ”ನೀನು ಬೆಲ್ಲ ತಿನ್ನಬೇಡ” ಎಂದು ಹೇಳಿದರು. ಇದನ್ನು ಕೇಳಿದ ಆ ಮಹಿಳೆ, ”ಇಷ್ಟನ್ನೇ ಹೇಳುವುದಕ್ಕಾಗಿ ನಮಗೆ ೪ ದಿನಗಳ ನಂತರ ಬರಲು ಏಕೆ ಹೇಳಿದಿರಿ ?” ಎಂದು ಕೇಳಿದಳು. ಆಗ ರಾಮಕೃಷ್ಣ ಪರಮಹಂಸರು, ”ನಾನು ಕೂಡ ಬೆಲ್ಲ ತಿನ್ನುತ್ತಿದ್ದೆ. ನನ್ನ ಬೆಲ್ಲ ತಿನ್ನುವ ಅಭ್ಯಾಸವನ್ನು ಬಿಡಲು ನಾನು ೪ ದಿನಗಳ ಕಾಲ ಪ್ರಯತ್ನಿಸಿದೆ. ಆ ನಂತರವೇ ನಿನಗೆ ಮತ್ತು ನಿನ್ನ ಮಗನಿಗೆ ಇದನ್ನು ಹೇಳಲು ಸಾಧ್ಯವಾಯಿತು,” ಎಂದು ಹೇಳಿದರು.
೩ ಆ ೧. ಸ್ವತಃ ಸಾಧನೆ ಮಾಡಿ ಇತರರಿಗೆ ತಿಳಿಸಿದಾಗ ಮಾತ್ರ ಅವರಿಗೆ ಕೃತಿ ಮಾಡಲು ಪ್ರೇರಣೆ ಸಿಗುತ್ತದೆ : ಈ ಕಥೆಯ ನೀತಿಯೆಂದರೆ, ‘ನಮ್ಮಲ್ಲಿ ಪ್ರಯತ್ನವಿಲ್ಲದಿದ್ದರೆ ಇತರರಿಗೆ ಹೇಳುವುದು ಸರಿಯಲ್ಲ. ನಾವು ಸ್ವತಃ ಸಾಧನೆ ಮಾಡಿ ಇತರರಿಗೆ ಸಾಧನೆಯ ಬಗ್ಗೆ ತಿಳಿಸಿದರೆ ಮಾತ್ರ ನಮ್ಮ ಮಾತುಗಳು ಎದುರಿಗಿರುವ ವ್ಯಕ್ತಿಯ ಹೃದಯವನ್ನು ಸ್ಪರ್ಶಿಸುತ್ತವೆ ಮತ್ತು ಅವರಿಗೆ ಕೃತಿ ಮಾಡಲು ಪ್ರೇರಣೆ ನೀಡುತ್ತವೆ.’ ಸಮಾಜಕ್ಕೆ ತ್ಯಾಗದ ಸಂದೇಶ ನೀಡುವಾಗ ‘ನಾನು ಸ್ವತಃ ಎಷ್ಟು ತ್ಯಾಗ ಮಾಡುತ್ತಿದ್ದೇನೆ ?’ ಎಂದು ಆತ್ಮಪರೀಕ್ಷೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಹಾಗೆಯೇ ಸಮಾಜಕ್ಕೆ ಧರ್ಮಾಚರಣೆಯ ಬಗ್ಗೆ ತಿಳಿಸುವಾಗ ‘ನಾನು ಸ್ವತಃ ಎಷ್ಟು ಧರ್ಮಾಚರಣೆ ಮಾಡುತ್ತಿದ್ದೇನೆ’ ಎಂದು ಪ್ರತಿಯೊಬ್ಬರೂ ಯೋಚಿಸಬೇಕು.
– ಶ್ರೀ. ಗುರುಪ್ರಸಾದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೪ ವರ್ಷ), ಮಂಗಳೂರು (೨೯.೧.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !