ಕಾರ್ಕಳ, ಶಿಗ್ಲಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದಹಿಂದೂ ರಾಷ್ಟ್ರ-ಜಾಗೃತಿ ಸಭೆ

ಕಾರ್ಕಳ : ‘ನಮ್ಮ ಪ್ರತಿಯೊಬ್ಬ ಹಿಂದೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಅಗತ್ಯ ಇದೆ. ಇಂದಿನ ಯುವ ಪೀಳಿಗೆಯಲ್ಲಿ ರಾಷ್ಟ್ರೀಯತೆ ಮತ್ತು ಧಾರ್ಮಿಕತೆಯನ್ನು ಹೆಚ್ಚಿಸುವುದು ತುಂಬಾ ಮುಖ್ಯ’ ಎಂದು ಬಜಗೋಳಿಯ ಉದ್ಯಮಿ ಹಾಗೂ ಕರ್ನಾಟಕ ರಾಜ್ಯ ಕ್ರಷರ್ ಗಣಿಗಾರಿಕೆ ಮಾಲಕರ ಸಂಘದ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಇವರು ಹೇಳಿದ್ದಾರೆ. ಅವರು ಮಾರ್ಚ್ ೨ ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಇಲ್ಲಿ ಆಯೋಜಿಸಲ್ಪಟ್ಟ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸನಾತನ ಸಂಸ್ಥೆಯ ಸೌ. ಅಶ್ವಿನಿ ನಾಯಕ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕ ಶ್ರೀ. ಚಂದ್ರ ಮೊಗೇರ ಇವರು ಮಾರ್ಗದರ್ಶನ ಮಾಡಿದರು.
ಶಿಗ್ಲಿ
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಗ್ಲಿ ಗ್ರಾಮದ (ಲಕ್ಷ್ಮೇಶ್ವರ) ಶ್ರೀ. ಶಾಖಂಬರಿ ಸಮುದಾಯ ಭವನದಲ್ಲಿ ಮಾರ್ಚ್ ೬ ರಂದು ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯು ನೆರವೇರಿತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಶ್ರೀ. ಗುರುಪ್ರಸಾದ ಗೌಡ, ಯುವ ಮುಖಂಡ ಶ್ರೀ. ಆದೇಶ ಹುಲಗೂರು ಇವರು ಮಾತನಾಡಿದರು.
ಹಗರಿಬೊಮ್ಮನಹಳ್ಳಿ
ಮಾರ್ಚ್ ೧ ರಂದು ನಗರದ ವಿದ್ಯಾರಣ್ಯ ಸಭಾ ಭವನದಲ್ಲಿ ನಡೆದ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯಲ್ಲಿ ಸಮಿತಿಯ ರಾಜ್ಯ ಸಮನ್ವಯಕ ಶ್ರೀ. ಗುರುಪ್ರಸಾದ ಗೌಡ, ನಿವೃತ್ತ ಶಿಕ್ಷಕ ಶ್ರೀ. ಸೋಮನಗೌಡ ಪಾಟೀಲ ಇವರು ಮಾರ್ಗದರ್ಶನ ಮಾಡಿದರು.
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !