ಸಾಧಕರೇ, ನಿರೀಕ್ಷಿತ ಗುರಿಯು ಲಭಿಸದ ಕಾರಣ ನಾವು ಸಾಧನೆಯಿಂದ ದಾರಿ ತಪ್ಪುತ್ತಿಲ್ಲವಲ್ಲ ?’ ಎಂಬುದರ ವಿಚಾರ ಮಾಡಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧನೆಯ ಆರಂಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ‘ಮೋಕ್ಷ ಪಡೆಯುವುದು’ ಎಂಬ ಉನ್ನತ ಗುರಿಯನ್ನು ನೀಡಿದ್ದಾರೆ. ಈ ಗುರಿಯನ್ನು ತಲುಪಲು ಸಾಧನೆಯಲ್ಲಿ ಮುಂದೆ ಹೋಗಲು ಅನೇಕ ಪರ್ಯಾಯಗಳನ್ನು ಸಹ ಸೂಚಿಸಿದ್ದಾರೆ. ಮೋಕ್ಷದ ದಿಕ್ಕಿನಲ್ಲಿ ಸಾಗುವಾಗ ‘ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವುದು’ ಎಂಬುದು ಸಾಧಕರಿಗೆ ತಾವು ಸರಿಯಾದ ದಾರಿಯಲ್ಲಿದ್ದೇವೆ ಎಂಬುದನ್ನು ಖಚಿತಪಡಿಸುವ ಒಂದು ಪ್ರೋತ್ಸಾಹನೆಯಾಗಿದೆ. ಆದರೆ ಅದು ಕೇವಲ ಅಂತಿಮ ಗುರಿಯಾಗಬಾರದು. ಶೇಕಡಾ ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪುವುದೆಂದರೆ ನಮ್ಮಲ್ಲಿ ಸತ್ತ್ವಗುಣ ೬೦ ಶೇ. ಹೆಚ್ಚಾಗಿದೆ ಎಂದರ್ಥ. ‘ಈಶ್ವರನೊಂದಿಗೆ ಏಕರೂಪವಾಗಲು ಇನ್ನೂ ೪೦ ಪ್ರತಿಶತ ಬಾಕಿ ಇದೆ’ ಎಂಬ ಅರಿವು ಸಾಧನೆಯಲ್ಲಿ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆಯನ್ನು ನೀಡುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಕ್ಷಾತ್ ಮಹಾವಿಷ್ಣು ! ಪ್ರಸ್ತುತ ಕಾಲಘಟ್ಟದಲ್ಲಿ ಸಾಧನೆಗೆ ಎದುರಾಗುವ ಅಡೆತಡೆಗಳನ್ನು ಗಮನಿಸಿ ಅವರು ಹೊಸ ಹೊಸ ಉಪಾಯಗಳನ್ನು ನೀಡುತ್ತಿದ್ದಾರೆ. ವಿಶೇಷ ಭಕ್ತಿ ಸತ್ಸಂಗಗಳಲ್ಲಿ ಅವರು ತಿಳಿಸಿರುವ ಸಾಧನೆಯ ದೈವೀ ಪಂಚಸೂತ್ರಗಳು ಹೀಗಿದೆ: ಕೇಳುವುದು, ಹೇಳಿದ್ದನ್ನು ಕೇಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ನೀಡುವುದು’, ಈ ಪಂಚಸೂತ್ರಗಳು ಸಾಧಕರನ್ನು ಅಂತರ್ಮುಖಿಗಳನ್ನಾಗಿ ಮಾಡುತ್ತದೆ. ‘ಸಾಧಕರು ದೇವರ ಕಡೆಗೆ ಸಾಗುವಲ್ಲಿ ಎಲ್ಲಿ ಹಿಂದೆ ಬೀಳುತ್ತಿದ್ದೇವೆ ?’ ಎಂಬುದನ್ನು ಗುರುತಿಸಲು ‘ಆತ್ಮನಿವೇದನೆ’ ಮಾಡಲು ತಿಳಿಸಲಾಗಿದೆ. ಒಮ್ಮೆ ಚಿಂತನೆ ನಡೆಸಿ ಆತ್ಮನಿವೇದನೆ ಮಾಡಿಕೊಂಡರೆ, ದೇವರೆಡೆಗಿನ ಹಾದಿಯಲ್ಲಿರುವ ದೊಡ್ಡ ಅಡಚಣೆಯು ದೂರವಾಗುತ್ತದೆ.

ಕೆಲವು ದಿನಗಳ ಹಿಂದೆ ಎಪ್ಪತ್ತು ವರ್ಷ ವಯಸ್ಸಾದ ಸಾಧಕರೊಬ್ಬರ ಭೇಟಿಯಾಯಿತು. ಅವರು ವಿಷಾದದಿಂದ, “ಈಗಿನ ಕಾಲದಲ್ಲಿ ೬೦ ಪ್ರತಿಶತ ಆಧ್ಯಾತ್ಮಿಕ ಮಟ್ಟ ತಲುಪುವುದು ಅಸಾಧ್ಯ” ಎಂದರು. ಆಗ ನನಗೆ ಮೂಡಿದ ಪ್ರಶ್ನೆಯೆಂದರೆ ‘ಕೇವಲ ೬೦ ಶೇ. ಮಟ್ಟ ತಲುಪುವುದು ನನ್ನ ಸಾಧನೆಯ ಧ್ಯೇಯವೇ ?’, ಹಾಗೆ ಖಂಡಿತ ಇಲ್ಲ. ನನಗೆ ಮೋಕ್ಷವನ್ನು ಪಡೆಯುವುದಿದೆ. ಮತ್ತು ಅದನ್ನು ಪಡೆಯಲು ನನಗೆ ಕೆಲವು ಜನ್ಮಗಳು ಬೇಕಾಗಬಹುದು; ಏಕೆಂದರೆ ಮೋಕ್ಷವೆಂದರೆ ೧೦೦ ಶೇ. ಸಚ್ಚಿದಾನಂದ ಸ್ಥಿತಿ. ಈ ಅವಸ್ಥೆ ತಲುಪುವುದು ಈಗಿನ ಕಾಲದಲ್ಲಿ ಕಠಿಣವಿದೆ. (ಪ್ರತ್ಯಕ್ಷದಲ್ಲಿ ಫೆಬ್ರವರಿ ೨೦೨೬ ರಲ್ಲಿ ಕೇವಲ ಎರಡೇ ದಿನಗಳಲ್ಲಿ ನಾಲ್ವರು ಸಾಧಕರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿದ್ದಾರೆ ! – ಸಂಕಲನಕಾರರು) ಕಲಿಯುಗದ ಈ ಭೀಕರ ಪರಿಸ್ಥಿತಿಯಲ್ಲಿ ಸಮಾಜದ ಸ್ಥಿತಿಯನ್ನು ನೋಡುತ್ತಿದ್ದೇವೆ. ಸಂಪೂರ್ಣವಾಗಿ ಗೊಂದಲಕ್ಕೊಳಗಾದ ಮತ್ತು ಕಂಗಾಲಾದ ಸ್ಥಿತಿಯಲ್ಲಿ ಸಮಾಜವು ತನಗೆ ಅರ್ಥವಾಗುವ ಜೀವನದ ದಾರಿಯನ್ನು ಹುಡುಕುತ್ತಾ, ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಇಳಿದು ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅವರಿಗೆ ‘ಯಾವುದು ಯೋಗ್ಯ ?’ ಎಂಬುದು ತಿಳಿಯಲಿ ಎಂಬ ಉದ್ದೇಶದಿಂದ, ‘ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ ?’ ಎಂಬುದನ್ನು ನಾವು ‘ಸನಾತನ ಪ್ರಭಾತ’ದ ಮೂಲಕ ಕಳೆದ ೨೭ ವರ್ಷಗಳಿಂದ ಸಮಾಜಕ್ಕೆ ತೋರಿಸಿಕೊಡುತ್ತಿದ್ದೇವೆ. ಸನಾತನ ಸಂಸ್ಥೆಯೊಂದಿಗೆ ಜೋಡಣೆಯಾಗದ ಎಷ್ಟೋ ಜನರು ಇಂದು ತಮ್ಮ ಕಾರ್ಯ, ವೈಶಿಷ್ಟ್ಯ ಅಥವಾ ಅವರ ಭಾವ ಇವುಗಳಿಂದ ಸಂಸ್ಥೆಯೊಂದಿಗೆ ಜೋಡಿಸಲ್ಪಡುತ್ತಿದ್ದಾರೆ. ಅವರಲ್ಲಿ ಕೆಲವರ ಆಧ್ಯಾತ್ಮಿಕ ಉನ್ನತಿಯೂ ಆಗಿದೆ ಮತ್ತು ಈ ಪ್ರಕ್ರಿಯೆ ಹೀಗೆಯೇ ಮುಂದುವರಿಯುವುದು; ಆದರೆ ಸಾಧಕರ ಸ್ಥಿತಿ ಹೀಗಿಲ್ಲ. ಅವರ ಜೀವನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿದ್ದಾರೆ ಮತ್ತು ಅವರು ‘ಅನೇಕ ಭಕ್ತ ಪ್ರಹ್ಲಾದರನ್ನು ರೂಪಿಸಿದ್ದಾರೆ.’ ಹೀಗಿರುವಾಗ ಅವರು ಉಳಿದ ಸಾಧಕರನ್ನು ಸಾಧನೆಯಿಂದ ದಾರಿ ತಪ್ಪಲು ಬಿಡುವರೇ ?

‘ಆಧ್ಯಾತ್ಮಿಕ ಉನ್ನತಿಯಾಗುತ್ತಿಲ್ಲ’ ಎಂಬ ಕಾರಣದಿಂದ ನಿರಾಶರಾಗುವುದು, ಸಾಂಸಾರಿಕ ಚಿಂತೆಗಳು ಮುಂತಾದ ಅನೇಕ ಕಾರಣಗಳಿಂದ ಸಾಧಕರು ಸಾಧನೆಯಿಂದ ದೂರ ಹೋಗುತ್ತಿದ್ದಾರೆ ಅಥವಾ ‘ಅವರು ಸಾಧನೆಗಿಂತ ವ್ಯಾವಹಾರಿಕ ಕಾರಣಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ’ ಎಂಬುದು ಗಮನಕ್ಕೆ ಬಂದಿದೆ. ಯಾರಿಗೆ ಬೇರೆ ದಾರಿಯಿಲ್ಲವೋ ಅವರ ವಿಷಯ ಬೇರೆ; ಆದರೆ ‘ನಾವು ನಮ್ಮ ಅಗತ್ಯಗಳನ್ನು ಹೆಚ್ಚಿಸಿಕೊಂಡು ಸಾಧನೆಗೆ ದ್ವಿತೀಯ ಸ್ಥಾನ ನೀಡುತ್ತಿದ್ದೇವೆಯೇ !’, ಎಂಬುದರ ಕುರಿತೂ ವಿಚಾರ ಮಾಡೋಣ. ‘ಯಾವುದೋ ಒಂದು ಜನ್ಮದಲ್ಲಿ ಎಲ್ಲಾ ಚಿಂತೆಗಳನ್ನು ಬದಿಗೊತ್ತಿ ಸಾಧನೆಯನ್ನೇ ಮಾಡಬೇಕಿದೆ’ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ‘ಈ ಜನ್ಮದಲ್ಲಿಯೇ ಅದನ್ನು ಸಾಧಿಸುವ ಆಯ್ಕೆಯನ್ನು ಹೆಚ್ಚಿನ ಗಂಭೀರತೆಯಿಂದ ಮಾಡಲು ಸಾಧ್ಯವೇ?’, ಎಂಬ ಬಗ್ಗೆ ಚಿಂತನೆ ಮಾಡಬೇಕು.’

– ಒಬ್ಬ ಸಾಧಕಿ, ಸನಾತನ ಆಶ್ರಮ, ರಾಮನಾಥಿ, ಗೋವಾ.