ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
ಈ ಲೇಖನಮಾಲೆಯಲ್ಲಿನ ಮುಂದಿನ ಕೆಲವು ಭಾಗದಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ. ಈ ಲೇಖನದಲ್ಲಿ ನಾವು ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿದುಕೊಳ್ಳೋಣ. (ಲೇಖನ ೧೩)
ಭಾರತೀಯ ಕಲೆಗಳಿಗೆ ವಿದೇವತೆಗಳೊಂದಿಗೆ ಇರುವ ಸಂಬಂಧ !
‘ಭಾರತೀಯ ಸಂಸ್ಕೃತಿಯಲ್ಲಿ ‘ಕಲೆಯು ಕೇವಲ ಮನೋರಂಜನೆಯ ಸಾಧನವಾಗಿರದೇ ಅದು ಈಶ್ವರಪ್ರಾಪ್ತಿಯ ಪ್ರಭಾವಿ ಮಾಧ್ಯಮವೂ ಆಗಿದೆ’. ಸಂಗೀತ, ನೃತ್ಯ ಮತ್ತು ನಾಟ್ಯ ಈ ಲಲಿತ ಕಲೆಗಳ ಉಗಮವು ದೇವತೆ ಮತ್ತು ದೈವೀತತ್ತ್ವಗಳಿಗೆ ಜೋಡಿಸಲಾಗಿದೆ; ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ ‘ಕಲೆಯು ‘ಉಪಾಸನೆಯ ಮಾಧ್ಯಮ’ ಮತ್ತು ಕಲಾವಿದನು ‘ಉಪಾಸಕ’, ಎಂದು ಹೇಳಲಾಗಿದೆ.
ಹಿಂದಿನ ಭಾಗದಲ್ಲಿ ನಾವು ಭಗವಾನ ಶ್ರೀವಿಷ್ಣು, ಶ್ರೀಕೃಷ್ಣ, ರಾಮಭಕ್ತ ಹನುಮಾನ ಮತ್ತು ಗಣಪತಿ ಇವರ ಸಂಗೀತ ದೊಂದಿಗೆ ಇರುವ ಸಂಬಂಧವನ್ನು ತಿಳಿದುಕೊಂಡೆವು. ಈ ವಾರದಲ್ಲಿ ನಾವು ಶ್ರೀ ಸರಸ್ವತಿದೇವಿ, ಶ್ರೀ ಪಾರ್ವತಿದೇವಿ, ಹಾಗೆಯೇ ಗಂಧರ್ವ, ಯಕ್ಷ, ಕಿನ್ನರ ಮತ್ತು ಅಪ್ಸರೆ ಇವರ ಸಂಗೀತದೊಂದಿಗೆ ಇರುವ ಸಂಬಂಧವನ್ನು ತಿಳಿದುಕೊಳ್ಳಲಿದ್ದೇವೆ. (ಭಾಗ ೩)
ಹಿಂದಿನ ಲೇಖನ ಸಂಖ್ಯೆ ೧೨ ಓದಲು ಇಲ್ಲಿ ಲಿಂಕ್‌ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/173581.html
೭. ಶ್ರೀ ಸರಸ್ವತಿದೇವಿ

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಸರಸ್ವತಿದೇವಿಗೆ ವಿದ್ಯೆ, ವಾಣಿ, ಕಲೆ ಮತ್ತು ಸಂಗೀತದ ಅಧಿಷ್ಠಾತ್ರಿ ದೇವತೆ ಎಂದು ತಿಳಿಯಲಾಗುತ್ತದೆ.
೭ ಅ. ನಾದ ಮತ್ತು ಸ್ವರಗಳ ಅಧಿಷ್ಠಾತ್ರಿ ದೇವತೆ : ವೇದ ಮತ್ತು ಪುರಾಣಗಳಲ್ಲಿ ಸರಸ್ವತಿದೇವಿಯನ್ನು ವಾಕ್ (ವಾಣಿ) ಮತ್ತು ನಾದದ ಮೂಲ ಶಕ್ತಿ ಎನ್ನಲಾಗಿದೆ. ನಾದದಿಂದ ಸಂಗೀತದ ಆರಂಭವಾಗುತ್ತದೆ. ನಾದದಿಂದ ಸ್ವರ, ಸ್ವರದಿಂದ ರಾಗ ಮತ್ತು ರಾಗದಿಂದ ರಸಾನುಭೂತಿ ಘಟಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಸರಸ್ವತಿದೇವಿಯ ಕೃಪೆಯಿಂದಲೇ ಸಾಧ್ಯವಾಗುತ್ತದೆ.
೭ ಆ. ವಾಗ್ದೇವಿ ಸರಸ್ವತಿ : ಸರಸ್ವತಿಯನ್ನು ‘ವಾಗ್ದೇವಿ’, ಎಂದೂ ಕರೆಯುತ್ತಾರೆ. ‘ವಾಕ್’ ಅಂದರೆ ವಾಣಿ. ಕಲೆಯ ಉಪಾಸಕರ ವಾಣಿ ಮತ್ತು ಕಂಠದಲ್ಲಿ ಸರಸ್ವತಿಯ ವಾಸವಿರುತ್ತದೆ. ಆದ್ದರಿಂದ ಸಾಧನೆ ಎಂದು ಗಾಯನ ಮಾಡುವ ಕಲಾವಿದರ ಕಂಠದಲ್ಲಿನ ಸ್ವರದಿಂದ ಅವಳ ಮಾಧುರ್ಯವನ್ನು ಅನುಭವಿಸಲು ಬರುತ್ತದೆ. ಕಲೆಯ-ಉಪಾಸಕನು ಸರಸ್ವತಿದೇವಿಯ ಚರಣಗಳಲ್ಲಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡುತ್ತಾನೆ, ‘ಹೇ ವಾಗ್ದೇವಿ ಸರಸ್ವತಿ, ನಿನ್ನ ಕೃಪೆಯಿಂದಲೇ ನನಗೆ ಈ ಗಾಯನ, ವಾದನದ ಸೇವೆಯನ್ನು ಮಾಡಲು ಬರುತ್ತದೆ. ನಿನ್ನ ಚೈತನ್ಯದ ಮಾಧುರ್ಯವು ನನ್ನ ಕಂಠದಲ್ಲಿ ಮತ್ತು ನಾಲಿಗೆಯ ಮೇಲೆ ನಿರ್ಮಾಣವಾಗಲಿ’, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !’
೭ ಇ. ಸರಸ್ವತಿದೇವಿ ಮತ್ತು ವೀಣೆ : ಭಾರತೀಯ ಸಂಸ್ಕೃತಿಯಲ್ಲಿ ‘ನಾದಬ್ರಹ್ಮ’, ಇದು ಬ್ರಹ್ಮದೇವನ ಧ್ವನಿರೂಪವಾಗಿದೆ. ನಾದಬ್ರಹ್ಮನ ಮೂರ್ತ ಸ್ವರೂಪವೆಂದರೆ ಸರಸ್ವತಿದೇವಿ ! ಸರಸ್ವತಿದೇವಿಯು ಧರಿಸಿದ ವೀಣೆಯ ನಾದವು ಸೃಷ್ಟಿಯ ಆದಿ ನಾದದ, ಅಂದರೆ ನಾದಬ್ರಹ್ಮನ ಪ್ರತೀಕವಾಗಿದೆ ಮತ್ತು ಸರಸ್ವತಿದೇವಿಯು ಆ ನಾದದ ಅಧಿಷ್ಠಾತ್ರಿ ಶಕ್ತಿಯಾಗಿದ್ದಾಳೆ.
ಯಾ ಕುನ್ದೇನ್ದುತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ ಯಾ ವೀಣಾವರದಣ್ಡಮಣ್ಡಿತಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತಶಙ್ಕರಪ್ರಭೃತಿಭಿರ್ದೇವೈಃ ಸದಾ ವನ್ದಿತಾ ಸಾ ಮಾಂ ಪಾತು ಸರಸ್ವತೀ ಭಗವತೀ ನಿಃಶೇಷಜಾಡ್ಯಾಪಹಾ ||
ಅರ್ಥ : ಯಾವಳು ಕುಂದದ ಹೂವು, ಚಂದ್ರ, ಮಂಜಿನ ಹನಿ ಅಥವಾ ಮುತ್ತಿನ ಹಾರದಂತೆ ಶ್ವೇತವರ್ಣದವಳಾಗಿದ್ದಾಳೆಯೋ, ಯಾವಳು ಬಿಳಿ ವಸ್ತ್ರಗಳನ್ನು ಧರಿಸಿದ್ದಾಳೆಯೋ, ಯಾರ ಕೈಗಳು ಉತ್ತಮ ವೀಣೆಯಿಂದ ಶೋಭಿಸುತ್ತಿವೆಯೋ, ಯಾರು ಶುಭ್ರ ಕಮಲದ ಮೇಲೆ ವಿರಾಜಮಾನಳಾಗಿದ್ದಾಳೆಯೋ, ಬ್ರಹ್ಮ, ವಿಷ್ಣು, ಮಹೇಶ ಇತ್ಯಾದಿ ದೇವತೆಗಳು ಯಾರನ್ನು ನಿರಂತರ ಸ್ತುತಿಸುತ್ತಾರೆಯೋ, ಯಾರು ಎಲ್ಲ ರೀತಿಯ ಜಡತ್ವ (ಅಜ್ಞಾನ)ವನ್ನು ದೂರಗಳಿಸುತ್ತಾರೆಯೋ, ಆ ಭಗವತಿ, ಶ್ರೀ ಸರಸ್ವತಿದೇವಿ ನನ್ನನ್ನು ರಕ್ಷಿಸು.
೮. ಶ್ರೀ ರಾಜಮಾತಂಗಿದೇವಿ

ಶ್ರೀ ರಾಜಮಾತಂಗಿದೇವಿಯನ್ನು ‘ಸರಸ್ವತಿದೇವಿಯ ತಾಂತ್ರಿಕ ರೂಪ’, ಎಂದೂ ಕರೆಯುತ್ತಾರೆ. ಕವಿ ಕಾಳಿದಾಸನು ರಚಿಸಿದ ‘ಶ್ಯಾಮಲಾದಂಡಕಸ್ತೋತ್ರ’ದಲ್ಲಿ ರಾಜಮಾತಂಗಿದೇವಿಯನ್ನು ವರ್ಣಿಸುವಾಗ ಕವಿ ಕಾಳಿದಾಸನು ಹೇಳುತ್ತಾನೆ,
ಮಾಣಿಕ್ಯವೀಣಾಮುಪಲಾಲಯನ್ತೀಂ ಮದಾಲಸಾಂ ಮಞ್ಜುಲವಾಗ್ವಿಲಾಸಾಮ್ |
ಮಾಹೇನ್ದ್ರನೀಲದ್ಯುತಿಕೋಮಲಾಙ್ಗೀಂ ಮಾತಙ್ಗಕನ್ಯಾಂ ಮನಸಾ ಸ್ಮರಾಮಿ || – ಶ್ಯಾಮಲಾದಣ್ಡಕಸ್ತೋತ್ರ, ಶ್ಲೋಕ ೧
ಅರ್ಥ : ರತ್ನಜಡಿತ ವೀಣೆಯನ್ನು ನುಡಿಸುವ, ಮೋಹಕ, ಮಧುರ ವಾಣಿ ಇರುವ, ಮಾಹೇಂದ್ರನೀಲ ರತ್ನದಂತೆ ಮಿಂಚುವ ಕೋಮಲ ಅಂಗವಿರುವ ಮಾತಂಗಕನ್ಯೆಯನ್ನು ನಾನು ಮನಃಪೂರ್ವಕವಾಗಿ ಸ್ಮರಿಸುತ್ತೇನೆ.
೯. ಆದಿಶಕ್ತಿ ಪಾರ್ವತಿ
ಭಾರತೀಯ ಪರಂಪರೆಯಲ್ಲಿ ನೃತ್ಯಕಲೆಯು ಕೇವಲ ಒಂದು ಶೈಲಿಯಾಗಿರದೇ ಅದು ದೈವೀ ಶಕ್ತಿಯ ಸುರ, ಲಯ ಮತ್ತು ತಾಲಗಳಿಂದ ಬದ್ಧವಾಗಿರುವ ಕ್ರಿಯೆ ಎಂದು ಪರಿಗಣಿಸಲಾಗಿದೆ. ಈ ಶಕ್ತಿಯ ಸಜೀವ, ಸೌಂದರ್ಯ ಮತ್ತು ಸೃಜನಶೀಲ ರೂಪವಾಗಿರುವಳು, ಅಂದರೆ ದೇವಿ ಪಾರ್ವತಿ. ಯಾವ ಸ್ಥಳದಲ್ಲಿ ಭಗವಾನ ಶಿವನು ‘ನಟರಾಜ’ನ ರೂಪದಲ್ಲಿ ತಾಂಡವ ನೃತ್ಯವನ್ನು ಮಾಡುತ್ತಾನೆಯೋ, ಅದೇ ಸ್ಥಳದಲ್ಲಿ ದೇವಿ ಪಾರ್ವತಿಯು ‘ಲಾಸ್ಯ’ ರೂಪದಲ್ಲಿ ನೃತ್ಯವನ್ನು ಮಾಡಿ ಸೃಷ್ಟಿಯ ಸಮತೋಲನವನ್ನು ಕಾಪಾಡುತ್ತಾಳೆ.
೯ ಅ. ‘ಲಾಸ್ಯ’ ನೃತ್ಯದ ಅಧಿಷ್ಠಾತ್ರಿ ದೇವಿ : ‘ಲಾಸ್ಯ’ ಈ ನೃತ್ಯದ ಪ್ರಕಾರವು ಸೌಮ್ಯ ಭಾವ, ಶೃಂಗಾರ, ಕರುಣೆ ಮತ್ತು ಭಕ್ತಿಯ ಪ್ರತೀಕವಾಗಿದೆ. ನಾಟ್ಯಶಾಸ್ತ್ರಕ್ಕನುಸಾರ ಲಾಸ್ಯ ನೃತ್ಯವನ್ನು ಪಾರ್ವತಿಯು ನಿರ್ಮಿಸಿದಳು ಮತ್ತು ಆ ನೃತ್ಯ ಪ್ರಕಾರವನ್ನು ಅವಳು ದೇವತೆ ಮತ್ತು ಅಪ್ಸರೆಯರಿಗೆ ಕಲಿಸಿದಳು.
೯ ಆ. ಪಾರ್ವತಿದೇವಿ ಮತ್ತು ತಾಂಡವ ನೃತ್ಯ : ‘ಕಾಲಿಕಾ ತಾಂಡವ’, ‘ಗೌರಿ ತಾಂಡವ’, ‘ಉಮಾ ತಾಂಡವ’, ಹೀಗೆ ವಿವಿಧ ತಾಂಡವ ನೃತ್ಯದ ಪ್ರಕಾರಗಳನ್ನು ದೇವಿ ಪಾರ್ವತಿಯು ಶಿವನೊಂದಿಗೆ ಮಾಡಿದಳು. ‘ಈ ನೃತ್ಯಗಳಲ್ಲಿನ ಕೆಲವು ಪ್ರಕಾರಗಳಲ್ಲಿ ಪಾರ್ವತಿಯು ಶಿವನೊಂದಿಗೆ ಉಗ್ರ ರೂಪದಲ್ಲಿನ ತಾಂಡವ ಮತ್ತು ಕೆಲವು ಪ್ರಕಾರಗಳಲ್ಲಿ ‘ಆನಂದ ತಾಂಡವ’ ಮಾಡಿದಳು’, ಎಂಬ ಉಲ್ಲೇಖವು ಶಾಸ್ತ್ರದಲ್ಲಿದೆ.
ಕಲಾವಿದರ ಸಾಧನೆಗಾಗಿ ಬೇಕಾಗುವ ಊರ್ಜೆ ಮತ್ತು ಶಕ್ತಿಯನ್ನು ಪ್ರದಾನಿಸುವ ಆದಿಶಕ್ತಿ ಪಾರ್ವತಿಯ ಚರಣಗಳಲ್ಲಿ ಕೋಟಿ ಕೋಟಿ ವಂದನೆಗಳು !
೧೦. ಯಕ್ಷ, ಗಂಧರ್ವ, ಕಿನ್ನರ ಮತ್ತು ಅಪ್ಸರೆಯರು
ಭಾರತೀಯ ಪುರಾಣಗಳು ಮತ್ತು ಮಹಾಕಾವ್ಯಗಳಲ್ಲಿ ಯಕ್ಷ, ಗಂಧರ್ವ, ಕಿನ್ನರ ಮತ್ತು ಅಪ್ಸರೆಯರು ಈ ಕನಿಷ್ಠ ದೇವತೆಗಳ ಸಂಗೀತ ಮತ್ತು ನೃತ್ಯದೊಂದಿಗೆ ಬಿಡಿಸಲಾಗದ ಮತ್ತು ದೈವೀ ಸಂಬಂಧವಿದೆ ಎಂದು ಹೇಳಲಾಗಿದೆ. ಯಕ್ಷ, ಗಂಧರ್ವ, ಕಿನ್ನರ ಮತ್ತು ಅಪ್ಸರೆ ಇವರು ಸಂಗೀತ ಮತ್ತು ನೃತ್ಯದ ಪ್ರಿಯ ಇಂದ್ರದೇವನ ದೈವೀ ಆಸ್ಥಾನದಲ್ಲಿನ ದೈವೀ ಕಲಾವಿದರಾಗಿದ್ದರು. ಗಂಧರ್ವರ ಗಾಯನ ಅಥವಾ ಅಪ್ಸರೆಯರ ನೃತ್ಯವು ದೈವೀ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಇಂದಿಗೂ ಉತ್ಕೃಷ್ಟ ಗಾಯಕನಿಗೆ ‘ಗಂಧರ್ವ’, ಎಂಬ ಬಿರುದನ್ನು ನೀಡಲಾಗುತ್ತದೆ.
೧೦ ಅ. ಯಕ್ಷ : ಯಕ್ಷರು ನಿಸರ್ಗ, ಸಂಪತ್ತು ಮತ್ತು ಭೂಮಿಯ ರಕ್ಷಕರಾಗಿದ್ದು ಸಂಗೀತಕ್ಕೂ ಅವರ ಸಂಬಂಧವಿದೆ. ‘ಯಕ್ಷ-ಯಕ್ಷಣಿ ಈ ನೃತ್ಯ ಮತ್ತು ಹಾಡುಗಳಲ್ಲಿ ತಲ್ಲೀನರಾಗಿರುತ್ತಾರೆ’, ಎಂಬ ಉಲ್ಲೇಖವು ಪುರಾಣಗಳಲ್ಲಿ ಕಂಡುಬರುತ್ತದೆ. ಯಕ್ಷರು ಕುಬೇರನ ಸೇವಕರಾಗಿದ್ದಾರೆ. ಕರ್ನಾಟಕದಲ್ಲಿನ ದೇವಸ್ಥಾನಗಳ ಪರಂಪರೆಯಲ್ಲಿ ಪ್ರಸಿದ್ಧವಾಗಿರುವ ‘ಯಕ್ಷಗಾನ’ವು ‘ಯಕ್ಷ’, ಎಂಬ ಸಂಕಲ್ಪನೆಯಿಂದ ಪ್ರಸಿದ್ಧವಾಗಿದೆ.
೧೦ ಆ. ಗಂಧರ್ವ : ಭಾರತೀಯ ಸಂಗೀತದ ಎರಡು ಪ್ರಕಾರಗಳನ್ನು ಒಪ್ಪಿಕೊಳ್ಳಲಾಗಿದೆ – ನಾಡು (ದೇಶಿ) ಸಂಗೀತ (ಜನರ ರಂಜನೆಗಾಗಿ ಸಂಗೀತ) ಮತ್ತು ಮಾರ್ಗಿ ಸಂಗೀತ, ಅಂದರೆ ಈಶ್ವರಪ್ರಾಪ್ತಿಗಾಗಿ ಸಂಗೀತ. ಗಂಧರ್ವರು ಮಾರ್ಗಿ ಸಂಗೀತದ ಉಪಾಸಕರಾಗಿದ್ದರು. ಆದ್ದರಿಂದಲೇ ಭಾರತೀಯ ಸಂಗೀತಕ್ಕೆ ‘ಗಂಧರ್ವ ಸಂಗೀತ’, ಎಂದೂ ಕರೆಯುತ್ತಾರೆ.
೧೦ ಆ ೧. : ಚಿತ್ರಸೇನ ಗಂಧರ್ವ : ಚಿತ್ರಸೇನ ಗಂಧರ್ವನು ನೃತ್ಯ ಮತ್ತು ಗಾಯನದಲ್ಲಿ ನಿಪುಣನಾಗಿದ್ದಾನೆ. ಅವನು ಮಹಾಭಾರತದಲ್ಲಿ ಅರ್ಜುನನಿಗೆ ಸಂಗೀತಕಲೆ ಕಲಿಸಿದ ಉಲ್ಲೇಖವಿದೆ. ೧೦ ಆ ೨. ಹಾಹಾ ಮತ್ತು ಹೂಹೂ ಗಂಧರ್ವ : ಆದಿ ಶಂಕರಾಚಾರ್ಯರು ರಚಿಸಿದ ‘ಸ್ವರ್ಣಮಾಲಾಸ್ತುತಿ’ಯಲ್ಲಿ ಮುಂದಿನ ಸಾಲುಗಳಲ್ಲಿ ‘ಹಾಹಾ’ ಮತ್ತು ‘ಹೂಹೂ’, ಈ ಇಬ್ಬರು ಗಂಧರ್ವರ ಉಲ್ಲೇಖವು ಕಂಡುಬರುತ್ತದೆ.
ಹಾಹಾ-ಹೂಹೂ ಮುಖ ಸುರಗಾಯಕ ಗೀತಾ-ಪದಾನ ಪದ್ಯ ವಿಭೋ |
ಸಾಮ್ಬ ಸದಾಶಿವ ಶಮ್ಭೋ ಶಙ್ಕರ ಶರಣಂ ಮೇ ತವ ಚರಣಯುಗಮ್ || – ಸ್ವರ್ಣಮಾಲಾಸ್ತುತಿ, ಶ್ಲೋಕ ೧೫
ಅರ್ಥ : ಯಾರ ಶ್ರೇಷ್ಠತೆಯ ಗುಣಗಾನವನ್ನು ‘ಹಾಹಾ’ ಮತ್ತು ‘ಹೂಹೂ’ ಮುಂತಾದ ಗಂಧರ್ವರು ತಮ್ಮ ಸ್ವರಗಳಿಂದ ಮಾಡುತ್ತಾರೆಯೋ, ಯಾವನು ಶಬ್ದ ಮತ್ತು ಗೀತೆಯ ಸ್ವಾಮಿಯಾಗಿದ್ದಾನೆಯೋ, ಆ ಸರ್ವಶಕ್ತಿವಂತನಾದ ಭಗವಾನ ಶಂಕರನೇ, ನಾನು ನಿನ್ನ ಚರಣಗಳಲ್ಲಿ ಶರಣಾಗಿದ್ದೇನೆ.
೧೦ ಆ ೩. ತುಂಬರು : ತುಂಬರರು ನಾರದಋಷಿಗಳ ಶಿಷ್ಯ ರಾಗಿದ್ದು ಅವರನ್ನು ಗಂಧರ್ವರಲ್ಲಿ ಶ್ರೇಷ್ಠರೆಂದು ಪರಿಗಣಿಸ ಲಾಗುತ್ತದೆ. ತುಂಬgರು ‘ಕಲಾವತಿ’ ವೀಣೆಯನ್ನು ನಿರ್ಮಿಸಿ ದರು. ಅವರನ್ನು‘ಭಕ್ತಿಸಂಗೀತದ ಆದಿ ಪ್ರಚಾರಕರೆನ್ನಲಾಗುತ್ತದೆ.
೧೦ ಇ ಕಿನ್ನರ : ಕಿನ್ನರರನ್ನು ಅರ್ಧಮಾನವ ಮತ್ತು ಅರ್ಧದೇವ ಸ್ವರೂಪದ ದಿವ್ಯ ಸಂಗೀತಕಾರರೆಂದು ತಿಳಿಯಲಾಗುತ್ತದೆ ಕಿನ್ನರರನ್ನು ಉತ್ಕೃಷ್ಟ ಗಾಯಕ, ವಾದಕ ಮತ್ತು ನರ್ತಕ ರೆಂದು ಪರಿಗಣಿಸಲಾಗಿದೆ. ಅವರು ದೇವರ ಸ್ತುತಿಗಾಗಿ ಸಂಗೀತವನ್ನು ಪ್ರಸ್ತುತಪಡಿಸುತ್ತಾರೆ. ಕಿನ್ನರರ ಸಂಗೀತವು ಮನೋರಂಜನೆಗಾಗಿ ಇರದೇ ಭಕ್ತಿ ಮತ್ತು ಸ್ತುತಿಯ ಮಾಧ್ಯಮವಾಗಿದೆ. ಅವರು ಸಂಗೀತ ವೀಣೆ, ಮೃದಂಗ ಮತ್ತು ಕೊಳಲು ಈ ವಾದ್ಯಗಳಿಗೂ ಸಂಬಂಧಿಸಿದ್ದಾರೆ.
೧೦ ಈ. ಅಪ್ಸರೆಯರು : ಅಪ್ಸರೆಯರು ನೃತ್ಯ, ಸಂಗೀತ ಮತ್ತು ಅಭಿನಯಗಳಲ್ಲಿ ಪಾರಂಗತರಾಗಿರುತ್ತಾರೆ. ಅವರು ಸ್ವರ್ಗದಲ್ಲಿನ ದೇವರ ಸಭೆ ಮತ್ತು ಇಂದ್ರನ ಆಸ್ಥಾನದಲ್ಲಿ ದೈವೀ ನೃತ್ಯಗಳನ್ನು ಪ್ರಸ್ತುತಪಡಿಸುತ್ತಾರೆ. ಅಪ್ಸರೆಯರ ಸ್ವರೂಪವು ಅತ್ಯಂತ ಸುಂದರ, ತೇಜಸ್ವಿ ಮತ್ತು ಮೋಹಕವಾಗಿರುತ್ತದೆ. ಉರ್ವಶಿ, ಮೇನಕಾ, ರಂಭೆ, ತಿಲೋತ್ತಮೆ ಎಂದು ಕೆಲವು ಅಪ್ಸರೆಯರ ಹೆಸರುಗಳಿವೆ. ಮಹಾಭಾರತದಲ್ಲಿ ಅಜ್ಞಾತವಾಸದ ಕಾಲದಲ್ಲಿ ಉರ್ವಶಿ ಅಪ್ಸರೆಯು ಅರ್ಜುನನಿಗೆ ನೃತ್ಯವನ್ನು ಕಲಿಸಿದ ಉಲ್ಲೇಖವಿದೆ.
ಈ ಲೇಖನದಿಂದ ಭಾರತೀಯ ಕಲೆಗಳಿಗೆ ದೇವತೆಗಳ ಅಧಿಷ್ಠಾನವಿದೆ. ಕಲಾವಿದನು ಈಶ್ವರಪ್ರಾಪ್ತಿಗಾಗಿ ಕಲೆಯನ್ನು ಭಕ್ತಿಭಾವದಿಂದ ಆರಾಧಿಸಿದರೆ ಅವನಿಗೆ ದೇವಿದೇವರ ಆಶೀರ್ವಾದವು ಸಿಗುವುದು’,
– ಶ್ರೀ. ಮನೋಜ ಸಹಸ್ರಬುದ್ಧೆ, ವಾದ್ಯ-ಅಧ್ಯಯನಕಾರರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೨೯.೧೨.೨೦೨೫)
ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿ
ಈ ಲೇಖನದ ಬಗ್ಗೆ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಮುಂದಿನ ಕ್ರಮಾಂಕದಲ್ಲಿ ಸಂಪರ್ಕಿಸಿ. – ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
ಸಂಪರ್ಕಕ್ಕಾಗಿ ವಿಳಾಸ
ಶ್ರೀ. ಅಭಿಜಿತ ಸಾವಂತ, ಸಂಪರ್ಕ ಸಂಖ್ಯೆ : ೮೭೯೩೬೭೮೧೭೮
ವಿ-ಅಂಚೆ : [email protected]

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !