
೧. ರಾಮನಾಥಿ ಆಶ್ರಮದ ಪುನರ್ ನಿರ್ಮಾಣ, ಅಂದರೆ ಆಶ್ರಮರೂಪಿ ಮೂರ್ತಿಯ ಶೃಂಗಾರ
ಸಪ್ಟೆಂಬರ್ ೨೦೨೫ ರಲ್ಲಿ ನವರಾತ್ರಿಯ ನಿಮಿತ್ತ ನಾನು ಗೋವಾದ ರಾಮನಾಥಿ ಆಶ್ರಮಕ್ಕೆ ಹೋಗಿದ್ದೆ. ಆ ಸಮಯದಲ್ಲಿ ನನಗೆ ಆಶ್ರಮದ ಒಂದು ವಿಶಿಷ್ಟ ರೂಪ ದರ್ಶನವಾಯಿತು. ‘ಆಶ್ರಮವು ಎಲ್ಲ ದೃಷ್ಟಿಗಳಿಂದ ಅಲಂಕೃತಗೊಳ್ಳುತ್ತಿದೆ’ ಎಂದು ನನಗೆ ಅನಿಸಿತು. ಅಂದರೆ ‘ನವರಾತ್ರಿಯಲ್ಲಿ ದೇವಿಯ ಮೂರ್ತಿಗೆ ಹೇಗೆ ಪೂರ್ಣ ಶೃಂಗಾರ ಮಾಡಲಾಗುತ್ತದೆಯೋ, ಹಾಗೆಯೇ ಆಶ್ರಮರೂಪಿ ದೇವಿಸ್ವರೂಪದ ಮೂರ್ತಿಗೂ ಪೂರ್ಣ ಶೃಂಗಾರ ಮಾಡಲಾಗುತ್ತಿದೆ’ ಎಂದು ನನಗೆ ಅನಿಸಿತು. ‘ರಾಮನಾಥಿ ಆಶ್ರಮರೂಪಿ ದೇವಿ ಸ್ವರೂಪದ ಮೂರ್ತಿಗೂ ಪೂರ್ಣ ಶೃಂಗಾರ ಮಾಡಲಾಗುತ್ತಿದೆ’ ಎಂದು ನನಗೆ ಅನಿಸಿತು. ‘ರಾಮನಾಥಿ ಆಶ್ರಮ’ ಎಂದರೆ ದೇವಿಯ ಒಂದು ಮೂರ್ತಿಯಾಗಿದ್ದು, ಅವಳನ್ನೀಗ ಶೃಂಗರಿಸಲಾಗುತ್ತಿದೆ. ಅವಳಿಗೆ ಆಭರಣಗಳನ್ನು ತೊಡಿಸುತ್ತಿದ್ದೇವೆ. ಅಂದರೆ ಕೆಲವು ಸ್ಥಳಗಳಲ್ಲಿ ತೂಗುದೀಪಗಳನ್ನು ಹಾಕುತ್ತಿದ್ದೇವೆ. ಇನ್ನು ಎಲ್ಲೋ ಸ್ವಾಗತಕೊಠಡಿಯ ಪರಿಸರದಲ್ಲಿ ದೀಪಗಳನ್ನು ಹಚ್ಚುತ್ತಿದ್ದೇವೆ. ಅಲ್ಲಿನ ನಿರ್ಮಾಣ ಕಾರ್ಯದಲ್ಲಿ ಕಲಾತ್ಮಕತೆಯನ್ನು ತರುತ್ತಿದ್ದೇವೆ ಮತ್ತು ಇದೇ ಅವಳ ಶೃಂಗಾರವಾಗಿದೆ. ಇವೆಲ್ಲವೂ ಅವಳ ಮೈಮೇಲಿನ ಆಭರಣಗಳೇ ಆಗಿವೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕೃಪೆಯಿಂದ ರಾಮನಾಥಿ ಆಶ್ರಮವು ತನ್ನ ಹಳೆಯ ವಸ್ತ್ರಗಳನ್ನು ತ್ಯಜಿಸಿ ನವರಾತ್ರಿಯ ನಿಮಿತ್ತ ಹೊಸ ವಸ್ತ್ರಗಳನ್ನು ಧರಿಸುತ್ತಿದೆ. ವಾಸ್ತುವಿಗೂ ನಾವು ಹೊಸ ವಸ್ತ್ರಗಳನ್ನು ನೀಡಿ ಶೃಂಗರಿಸಲು ಆರಂಭಿಸಿದ್ದೇವೆ. ನಾವು ಹೇಗೆ ಮೂರ್ತಿಯನ್ನು ಅಲಂಕರಿಸುತ್ತೇವೆಯೋ, ಹಾಗೆಯೇ ರಾಮನಾಥಿ ಆಶ್ರಮ ಮತ್ತು ಅದರ ಪರಿಸರದ ಪುನರ್ ನಿರ್ಮಾಣವಾಗುತ್ತಿದೆ ಮತ್ತು ಇದೇ ಆಶ್ರಮರೂಪಿ ಮೂರ್ತಿಯ ಶೃಂಗಾರವಾಗಿದೆ. ಆಶ್ರಮದ ಪರಿಸರವನ್ನು ಕಂಡು ನನಗೆ ‘ಈಗ ವೈಕುಂಠದ ಶ್ರೀವಿಷ್ಣುವು ನಮಗೆ ರಾಜಯೋಗದ ಮೂಲಕ ಮುಂದೆ ಕರೆದೊಯ್ಯುತ್ತಿದ್ದಾನೆ’ ಎಂದು ಅನಿಸಿತು. ನಮ್ಮ ಗುರುಗಳು ಸಾಕ್ಷಾತ್ ಶ್ರೀವಿಷ್ಣುವಿನ ಅವತಾರವೇ ಆಗಿದ್ದಾರೆ.

‘ಗುರುಕೃಪಾಯೋಗ’ದಲ್ಲಿ ಸರ್ವಯೋಗಗಳು ಅಡಕವಾಗಿರುವುದು.
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧಕರಿಗೆ ಗುರುಕೃಪಾಯೋಗದಂತೆ ಸಾಧನೆ ಮಾಡಲು ಕಲಿಸಿದ್ದಾರೆ. ಗುರುಕೃಪಾಯೋಗದಲ್ಲಿ ಎಲ್ಲಾ ಯೋಗಗಳು ಅಡಕವಾಗಿದೆ. ಈ ಯೋಗದಲ್ಲಿ ವ್ಯಾಪಕತ್ವವಿದೆ ಹಾಗೆಯೇ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಳ ಸುಂದರ ಸಂಗಮವಿದೆ. ಈ ಯೋಗವು ಸಾಧಕರನ್ನು ಅಲ್ಪಕಾಲಾವಧಿಯಲ್ಲಿ ಪಿಂಡದಿಂದ ಬ್ರಹ್ಮಾಂಡದತ್ತ ಮತ್ತು ಬ್ರಹ್ಮಾಂಡದಿಂದ ಪಿಂಡದತ್ತ ಕರೆದೊಯ್ಯುವಂತಹದ್ದಾಗಿದೆ.
೧. ಧ್ಯಾನಯೋಗ : ಗುರುಕೃಪಾಯೋಗವು ನಮಗೆ ಧ್ಯಾನಯೋಗವನ್ನು ಕಲಿಸಿತು. ಅಂದರೆ ನಾಮಜಪಕ್ಕಾಗಿ ಸ್ಥಿರವಾಗಿ ಕುಳಿತುಕೊಳ್ಳುವುದನ್ನು ಕಲಿಸಿತು.
೨. ಕರ್ಮಯೋಗ : ಕರ್ಮಯೋಗದ ಮೂಲಕ ಪರಿಪೂರ್ಣ ಸೇವೆ ಮಾಡುವ ಸಂಸ್ಕಾರವನ್ನು ಮೂಡಿಸಿತು
೩. ಭಕ್ತಿಯೋಗ : ಪ್ರತಿಯೊಂದು ಸೇವೆ ಮಾಡುವಾಗ ‘ಭಾವ ಹೇಗಿರಬೇಕು?’ ಎಂಬುದನ್ನು ಈ ಯೋಗದಿಂದ ಕಲಿಸಲಾಯಿತು.
೪. ಜ್ಞಾನಯೋಗ : ಈ ಯೋಗದ ಮೂಲಕ ಪ್ರತಿಯೊಂದು ಕೃತಿಯ ಹಿಂದಿನ ಶಾಸ್ತ್ರವನ್ನು ಕಲಿಸಲಾಯಿತು ಮತ್ತು ಇದರ ಮೇಲೆ ಅನೇಕ ಗ್ರಂಥಗಳನ್ನೂ ರಚಿಸಲಾಗಿದೆ.
೫. ಹಠಯೋಗ : ಸಾಧನೆಯಲ್ಲಿ ಹಠಯೋಗದಂತೆ ದೃಢ ನಿಶ್ಚಯ ಮಾಡುವುದನ್ನು ಕಲಿಸಲಾಗಿದೆ.
೬. ಸಹಜಯೋಗ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯಿಂದ ದೇಹಶುದ್ಧಿ ಮಾಡುವ ತಂತ್ರವನ್ನು ಕಲಿಸಿದರು ಮತ್ತು ಅದರಿಂದ ಅಧ್ಯಾತ್ಮದ ಹಾದಿಯಲ್ಲಿ ಸುಲಭವಾಗಿ ಸಾಗುವುದನ್ನು ಕಲಿಸಿದರು. ಇದರಿಂದಲೇ ಸಹಜಯೋಗವೂ ಸಾಧ್ಯವಾಯಿತು.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಕಾಂಚೀಪುರಮ್, ತಮಿಳುನಾಡು (೨೩.೧೦.೨೦೨೫)
೨. ಸಾಧಕರ ಸಾಧನೆಯ ೨ ತಪಗಳು ಪೂರ್ಣಗೊಂಡಿರುವುದು
ಸಾಧಕರು ಈ ರೀತಿ ವಿವಿಧ ಯೋಗಮಾರ್ಗಗಳಿಂದ ಸಾಧನೆ ಮಾಡುತ್ತಿದ್ದು, ಅವರ ಸಾಧನೆಯ ೨ ತಪಗಳು (೨೪ ವರ್ಷಗಳು) ಪೂರ್ಣಗೊಂಡಿವೆ. ಈ ಹಂತದಲ್ಲಿ ಈಗ ಶ್ರೀವಿಷ್ಣುವು ಪ್ರಸನ್ನನಾಗಿ ಸಾಧಕರ ಮೇಲೆ ವೈಕುಂಠದ ವೈಭವದ ಸಂಪನ್ನತೆಯನ್ನು ಹರಿಸುತ್ತಿದ್ದಾನೆ. ಈಗ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾಧ ಮಹೋತ್ಸವವು’ ಅವನ ಆಶೀರ್ವಾದದ ಒಂದು ಪ್ರತೀಕವಾಗಿದೆ ಎಂದು ನನಗೆ ಅನಿಸಿತು. ಇದಕ್ಕೆ ಕಾರಣವೆಂದರೆ, ‘ಈ ಉತ್ಸವದ ಖರ್ಚು ಕೇವಲ ಲಕ್ಷ್ಮಿಯ ಕೃಪಾಕಟಾಕ್ಷದಿಂದಲೇ ಸಾಧ್ಯವಾಯಿತು’ ಎಂಬುದು ನಮ್ಮ ಶ್ರದ್ಧೆಯಾಗಿದೆ. ಶ್ರೀವಿಷ್ಣುವು ಪುರುಷನಾಗಿದ್ದಾನೆ. ಅವನು ಬ್ರಹ್ಮಸ್ಥಿತಿಯಲ್ಲಿ ಮತ್ತು ಸಾಕ್ಷಿಭಾವದಲ್ಲಿ ಇರುತ್ತಾನೆ. ಅವನ ಮನಸ್ಸಿನಲ್ಲಿರುವ ಇಚ್ಛೆಗಳನ್ನು ಶ್ರೀಲಕ್ಷ್ಮಿ(ಪ್ರಕೃತಿ) ಸಗುಣ ರೂಪದಲ್ಲಿ ಪೂರ್ಣಗೊಳಿಸುತ್ತಾಳೆ. (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೩ ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆ ರಜತ ಮಹೋತ್ಸವದ ನಿಮಿತ್ತ ಮೇ ೧೭ ರಿಂದ ೧೯, ೨೦೨೫ ರ ಅವಧಿಯಲ್ಲಿ ಗೋವಾದ ಫರ್ಮಾಗುಡಿಯ ಇಂಜನಿಯರಿಂಗ್ ಕಾಲೇಜಿನ ಮೈದಾನದಲ್ಲಿ ‘ಸನಾತನ ಶಂಖನಾದ ಮಹೋತ್ಸವ’ವು ಜರುಗಿತು.

೩. ಬ್ರಹ್ಮಾಂಡವೇ ಕಾಲಕ್ಕೆ ಅನುಗುಣವಾಗಿ ಅಗತ್ಯವಿರುವ ಸೌಲಭ್ಯಗಳೊಂದಿಗೆ ಆಶ್ರಮಕ್ಕೆ ಸಾಧಕರ ಭೇಟಿಗೆ ಬರುತ್ತಿದೆ’ ಎಂದು ಅನಿಸುವುದು
ಈಗ ಆಶ್ರಮದ ನೂತನೀಕರಣವಾಗುತ್ತಿದೆ. ಸಾಧಕರು ಅನೇಕ ವರ್ಷಗಳಿಂದ ಆಶ್ರಮದಲ್ಲಿ ವಾಸವಾಗಿದ್ದು, ಋಷಿಮುನಿಗಳಂತೆ ಸಾಧನೆ ಮಾಡುತ್ತಿದ್ದಾರೆ. ಅನೇಕರು ಹೊರಗಿನ ಪ್ರಪಂಚವನ್ನೂ ನೋಡಿಲ್ಲ, ಆದರೂ ಗುರುಕೃಪೆಯಿಂದ ಅವರು ಆಶ್ರಮದಲ್ಲಿ ಆನಂದದಿಂದ ಇದ್ದಾರೆ. ಹೊರಗಿನ ಜಗತ್ತಿನಲ್ಲಿ ಯಾವೆಲ್ಲಾ ಆಧುನಿಕ ಸೌಲಭ್ಯಗಳಿವೆಯೋ, ಅವು ಈಗ ಗುರುದೇವರ ಕೃಪೆಯಿಂದ ಆಶ್ರಮದಲ್ಲಿಯೂ ಲಭ್ಯವಾಗುತ್ತಿವೆ. ‘ಸಾಧಕರಿಗೆ ಹೊರಗೆ ಹೋಗುವ ಪ್ರಮೇಯ ಬರಬಾರದು ಎಂಬ ಕಾರಣಕ್ಕೆ ಗುರುಗಳು ಆಧುನಿಕ ಸೌಲಭ್ಯಗಳಿಂದ ಕೂಡಿದ ಹೊರಗಿನ ಜಗತ್ತನ್ನೇ ಸಾಧಕರ ಭೇಟಿಗೆ ಆಶ್ರಮಕ್ಕೆ ತರುತ್ತಿದ್ದಾರೆ’ ಎಂದು ನನಗೆ ಅನಿಸಿತು. ಮೊದಲು ಸಾಧಕರು ಪ್ರಸಾರ ಸೇವೆಯಲ್ಲಿದ್ದರು. ಆ ಸಮಯದಲ್ಲಿ ಅವರ ಜಿಗಿತವು ‘ಪಿಂಡದಿಂದ ಬ್ರಹ್ಮಾಂಡದತ್ತ’ ಇತ್ತು. ‘ಈಗ ಇಡೀ ಬ್ರಹ್ಮಾಂಡವೇ ಕಾಲಾನುಸಾರ ಅಗತ್ಯವಿರುವ ಆಧುನಿಕ ಸೌಲಭ್ಯಗಳೊಂದಿಗೆ ಆಶ್ರಮಕ್ಕೆ ಸಾಧಕರ ಭೇಟಿ ಬರುತ್ತಿದೆ’ ಎಂಬ ಚಿತ್ರಣ ಕಾಣಿಸುತ್ತಿದೆ.
೪. ಆಶ್ರಮದದಲ್ಲಿನ ಬದಲಾವಣೆಯಿಂದ ‘ನಮ್ಮ ಸಾಧನೆಯ ಪ್ರವಾಸವು ಈಗ ರಾಜಯೋಗದ ಮೂಲಕ ಮುಂದೆ ಸಾಗುತ್ತಿದೆ’ ಎಂದು ಅನಿಸುವುದು
‘ಕಾಲಾನುಸಾರ ಸಾಧನೆ’ ಎಂಬ ವಚನದಂತೆ, ಈಗ ಕಾಲಕ್ಕೆ ಅನುಗುಣವಾಗಿ ಸಮಷ್ಟಿಗೆ ಅನುರೂಪವಾದ ಬದಲಾವಣೆಗಳು ಆಶ್ರಮದಲ್ಲಿಯೂ ಆಗುತ್ತಿವೆ. ನಮ್ಮ ಬೆಳವಣಿಗೆಯು ಈಗ ರಾಜಯೋಗದ ಮೂಲಕ ಆಗುತ್ತಿದೆ. ಶ್ರೀವಿಷ್ಣುವಿನ ವೈಕುಂಠದಲ್ಲಿ ಎಲ್ಲವೂ ಇರುತ್ತದೆ. ಈಗ ಆಧುನಿಕ ಸೌಲಭ್ಯಗಳು, ಕಲಾತ್ಮಕತೆ ಮುಂತಾದವುಗಳೆಲ್ಲವೂ ಆಶ್ರಮದಲ್ಲಿಯೂ ಕಾಣಿಸುತ್ತಿವೆ. ಆದ್ದರಿಂದ ‘ನಮ್ಮ ಪ್ರವಾಸವು ಈಗ ರಾಜಯೋಗದ ಮೂಲಕ ಮುಂದೆ ಸಾಗುತ್ತಿದೆ’ ಎಂದು ನನಗೆ ಅನಿಸಿತು.
೫. ಸನಾತನವು ಆರಂಭದಲ್ಲಿ ಸರಳತೆಯನ್ನು ಅನುಭವಿಸುವುದು ಮತ್ತು ಈಗ ಸನಾತನವು ರಾಜಯೋಗವನ್ನು ಅನುಭವಿಸುತ್ತಿರುವುದು.
ನಾವು ಸರಳತೆಯಿಂದ ಚೈತನ್ಯವನ್ನು ಅನುಭವಿಸುತ್ತಿದ್ದೇವೆ. ಈಗ ದೇವರು ನಮಗೆ ರಾಜಯೋಗವನ್ನು ನೀಡುತ್ತಿದ್ದಾನೆ. ಶ್ರೀಕೃಷ್ಣನೂ ದ್ವಾರಕೆಯಲ್ಲಿ ರಾಜನಂತೆ ಇದ್ದನು; ಆದರೆ ಅದಕ್ಕೂ ಮೊದಲು ಅವನು ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಶ್ರೀಕೃಷ್ಣನ ಜನ್ಮವು ಸೆರೆಮನೆಯಲ್ಲಿ ಆಯಿತು. ನಂತರ ಗೋಕುಲವನ್ನು ಬಿಟ್ಟು ಅವನು ಮಥುರೆಗೆ ಬಂದನು. ಅವನು ಚಾಣೂರನನ್ನು ಮುಷ್ಟಿಯುದ್ಧದಲ್ಲಿ ಸಂಹರಿಸಿದನು. ಅನಂತರ ಕಂಸನನ್ನೂ ಕೊಂದನು. ನಂತರ ಮಥುರೆಯನ್ನು ಬಿಟ್ಟು ಅವನು ದ್ವಾರಕೆಯನ್ನು ನಿರ್ಮಿಸಿದನು ಮತ್ತು ಅನಂತರ ಅವನು ದ್ವಾರಕೆಯ ರಾಜನಾದನು. ಅಂತಹ ರಾಜಯೋಗವನ್ನು ಈಗ ಸನಾತನವೂ ಅನುಭವಿಸುತ್ತಿದೆ.
೬. ಸಂಸ್ಥೆಯ ಸ್ಥಾಪನೆಯ ವೇಳೆ ಸನಾತನದ ಸಣ್ಣ ಸೇವಾಕೇಂದ್ರಗಳು ಇರುವುದು ಮತ್ತು ಕಾರ್ಯವು ಬೆಳೆದ ಕಾರಣ ದೇವರು ರಾಮನಾಥಿ ಆಶ್ರಮದಂತಹ ದೊಡ್ಡ ಆಶ್ರಮದ ನಿರ್ಮಾಣ ಮಾಡಿರುವುದು
ಸಂಸ್ಥೆಯ ಸ್ಥಾಪನೆಯ ಸಮಯದಲ್ಲಿ ನಮ್ಮದೊಂದು ಸಣ್ಣ ವಿಶ್ವವಿತ್ತು ಮತ್ತು ಅದಕ್ಕೆ ತಕ್ಕಂತೆ ಕುಟುಂಬ ಪ್ರಧಾನವಾದ ಆಶ್ರಮವಿತ್ತು. ಆಗ ಕೆಲವೇ ಸಾಧಕರಿದ್ದರು. ಇದರಲ್ಲಿ ಮುಂಬಯಿ ಸೇವಾಕೇಂದ್ರವು ಪ.ಪೂ. ಡಾಕ್ಟರರ ಮನೆಯಾಗಿತ್ತು, ದೋನಾಪಾವ್ಲಾ ಮತ್ತು ಮ್ಹಾರ್ದೋಳದ ಸೇವಾಕೇಂದ್ರಗಳು ಸಾಧಕರ ಮನೆಗಳೇ ಆಗಿದ್ದವು. ಸಂಸ್ಥೆಯ ಕಾರ್ಯವು ಬೆಳೆಯಲಾರಂಭಿಸಿದಂತೆ, ನಮ್ಮ ಸಂಪರ್ಕಗಳೂ ಹೆಚ್ಚಾದವು. ಆ ಸಮಯದಲ್ಲಿ ದೇವರು ನಮಗೆ ಫೋಂಡಾದಲ್ಲಿ ‘ಸುಖಸಾಗರ’ದಂತಹ ಸೇವಾಕೇಂದ್ರವನ್ನು ನೀಡಿದನು. ಈ ವಾಸ್ತುವು ದೊಡ್ಡದಾಗಿತ್ತು. ‘ಸುಖಸಾಗರ’ದ ೮ ಕೊಠಡಿಗಳಲ್ಲಿ ೮೦ ಸಾಧಕರು ಸಾಧನೆ ಮಾಡುತ್ತಿದ್ದರು ಮತ್ತು ಕೆಲವರು ಅಲ್ಲೇ ವಾಸವಾಗಿದ್ದರು. ವರ್ಷ ೨೦೦೪ ರ ನಂತರ ಸಂಸ್ಥೆಯ ಕಾರ್ಯವು ಇನ್ನೂ ಬೆಳೆಯಿತು. ಅನೇಕ ಸಂಸ್ಥೆಗಳು, ಸಜ್ಜನರು ಮತ್ತು ಸಂತರು ಸಂಸ್ಥೆಯ ಕಾರ್ಯದಲ್ಲಿ ಸಹಭಾಗಿಗಳಾಗತೊಡಗಿದರು. ಆದ್ದರಿಂದ ವರ್ಷ ೨೦೦೫ ರಲ್ಲಿ ದೇವರು ಗೋವಾದ ರಾಮನಾಥಿ ಆಶ್ರಮದಂತಹ ದೊಡ್ಡ ಆಶ್ರಮವನ್ನು ನಿರ್ಮಾಣ ಮಾಡಿದರು.
೭. ‘ಕಾಲಾನುಸಾರ ಪ್ರಕೃತಿಯೊಂದಿಗೆ ಹೊಂದಿಕೊಳ್ಳುವುದು’ ಇದೇ ಕಾಲಕ್ಕೆ ಅನುಗುಣವಾಗಿ ಆಗುವ ಸಾಧನೆಯಾಗಿದೆ
ನನಗೆ ರಾಮನಾಥಿ ಆಶ್ರಮವನ್ನು ನೋಡಿದಾಗ ಮೊದಲು ‘ಆಶ್ರಮದ ಪುನರ್ ಜನ್ಮವಾಯಿತು’ ಅನಿಸಿತು. ಸಾಧಕನಿಗೂ ಪುನರ್ ಜನ್ಮವಾಗುತ್ತದೆ. ಜಿಜ್ಞಾಸು ಸಾಧಕನಾಗುತ್ತಾನೆ, ನಂತರ ಅವನು ಶಿಷ್ಯನಾಗುತ್ತಾನೆ. ನಂತರ ಅವನು ‘ಸಂತ, ಸದ್ಗುರು ಮತ್ತು ಪರಾತ್ಪರ ಗುರು’ ಈ ಪದವಿಯವರೆಗೆ ತಲುಪುತ್ತಾನೆ. ಅನಂತರ ಅವನು ಭಗವಂತನೊಂದಿಗೆ ಏಕರೂಪವಾಗುತ್ತಾನೆ. ಹಾಗೆಯೇ ಆಶ್ರಮವೂ ಈಗ ತನ್ನ ಹಳೆಯ ಕವಚವನ್ನು ಕಳೆದು ಹೊಸ ಚೈತನ್ಯವನ್ನು ಮೈಗೂಡಿಸಿಕೊಳ್ಳುತ್ತಿದೆ. ಅದು ಈಗ ನವಚೈತನ್ಯವನ್ನು ಹೊದ್ದು ನಿಂತಿದೆ. ಅದಕ್ಕೂ ಆನಂದವಿದೆ. ‘ಕಾಲಾನುಸಾರ ಪ್ರಕೃತಿಯೊಂದಿಗೆ ಹೊಂದಿಕೊಳ್ಳುವುದು’ ಕಾಲಕ್ಕೆ ತಕ್ಕ ಸಾಧನೆಯಾಗಿದೆ. ಹೇಗೆ ನಾವು ಕಾಲಾನುಸಾರ ಬದಲಾಗುತ್ತೇವೆಯೋ, ಹಾಗೆಯೇ ಈ ಆಶ್ರಮದ ನಿರ್ಮಾಣವು ‘ನಾನು ಕೂಡ ಈಗ ಬದಲಾಗಲಿದ್ದೇನೆ’ ಎಂದು ಹೇಳುತ್ತಿರುವಂತಿದೆ.
೮. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ವಾಸ್ತುಶಿಲ್ಪಿಗಳು ಮತ್ತು ನಿರ್ಮಾಣವೃತ್ತಿಪರರಿಗೂ ಆಶ್ರಮದ ನೂತನೀಕರಣದ ಮಾಧ್ಯಮದಿಂದ ಸೇವೆಯ ಅವಕಾಶವನ್ನು ನೀಡಿರುವುದು.
ಕಳೆದ ಕೆಲವು ವರ್ಷಗಳಲ್ಲಿ ಮತ್ತು ಕಾಲಾನುಸಾರ ಸಮಾಜದ ಅನೇಕ ಗಣ್ಯರು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಸನಾತನದ ಸಂಪರ್ಕಕ್ಕೆ ಬರತೊಡಗಿದ್ದಾರೆ. ಆದ್ದರಿಂದ ಅವರು ಬರಲು ಅನುರೂಪವಾದ ಹೊಸ ಬದಲಾವಣೆಗಳು ರಾಮನಾಥಿ ಆಶ್ರಮದ ಕಟ್ಟಡಕಾಮಗಾರಿಯಲ್ಲಿ ಆಗುತ್ತಿವೆ. ಇದರಿಂದ ‘ಅವರೆಲ್ಲರಿಗೂ ಆಶ್ರಮವು ತಮ್ಮದೇ ಎಂದು ಅನಿಸಲಿ’ ಎಂಬುದು ದೇವರ ಉದ್ದೇಶವಿರಬಹುದು. ಈ ನಿಟ್ಟಿನಲ್ಲಿ ಆಶ್ರಮದ ನೂತನೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ಹೊಸ ವಾಸ್ತುಶಿಲ್ಪಿಗಳು, ನಿರ್ಮಾಣವೃತ್ತಿಪರರು ಮುಂತಾದವರಿಗೂ ಗುರುದೇವರು ಈ ಮಾಧ್ಯಮದಿಂದ ಸೇವೆಯ ಅವಕಾಶವನ್ನು ನೀಡುತ್ತಿದ್ದಾರೆ. ಹೇಗೆ ಕಾಲಾನುಸಾರ ಸಾಧನೆ ಮತ್ತು ಪ್ರಕೃತಿಗನುಸಾರ ಸಾಧನೆಯೋ ಅದೇ ರೀತಿ ಕಾಲಾನುಸಾರ ಆಶ್ರಮದ ವಾಸ್ತು ವಿನಲ್ಲಿಯೂ ಬದಲಾವಣೆಗಳಾಗಿರುವುದು ಕಾಣಿಸುತ್ತಿದೆ. ಆಶ್ರಮದ ಅನೇಕ ವಾಸ್ತುಗಳು ಈಗ ನವೀನವಸ್ತ್ರ ಧರಿಸಿ ಇಡೀ ವಿಶ್ವವನ್ನೇ ಆವರಿಸಿ ಕೊಳ್ಳುತ್ತಿವೆ. ‘ನಿತ್ಯನೂತನ ಸನಾತನ’ ಎಂಬ ಉಕ್ತಿಯಂತೆ ಗುರುಗಳ ಆಜ್ಞೆಯಿಂದ ಸನಾತನ ಸಂಸ್ಥೆಯ ಆಶ್ರಮಗಳ ನೂತನೀಕರಣವಾಗುತ್ತಿರುವುದು ಖಂಡಿತವಾಗಿಯೂ ಸ್ವಾಗತಾರ್ಹವಾಗಿದೆ.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಕಾಂಚೀಪುರಂ, ತಮಿಳುನಾಡು (೨೩.೧೦.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !