ಕಾಯಿದೆಗಳನ್ನು ಏಕಪಕ್ಷೀಯವಾಗಿ ರೂಪಿಸಿದಾಗ ಎರಡು ವಿಷಯಗಳು ಘಟಿಸುತ್ತವೆ. ಮೊದಲನೆಯದಾಗಿ ಅನೇಕ ಜನರನ್ನು ಅನಾವಶ್ಯಕವಾಗಿ ಸಿಲುಕಿಸಲಾಗುತ್ತದೆ ಮತ್ತು ಎರಡನೇಯದಾಗಿ ಹಣವನ್ನು ವಸೂಲಿ ಮಾಡುವ ದಂಧೆಯ ಒಂದು ‘ರಾಕೆಟ್’ (ಜಾಲ) ಹಾಗೂ ಸರಪಳಿ ತಯಾರಾಗುತ್ತದೆ. ಎರಡನೇಯ ಕಾರಣ ಹೆಚ್ಚು ಅಪಾಯಕಾರಿಯಾಗಿದೆ; ಏಕೆಂದರೆ ಅದು ನಿಜವಾದ ಸಂತ್ರಸ್ತರಿಗೆ ಅನ್ಯಾಯ ಮಾಡುತ್ತದೆ. ಅನ್ಯಾಯವನ್ನು ನಿವಾರಿಸಲು ಮಾಡಿದ ನ್ಯಾಯವೇ ಅದಕ್ಕಿಂತ ದೊಡ್ಡ ಅನ್ಯಾಯ ಮಾಡುತ್ತದೆ, ಆಗ ಏನು ಮಾಡಬೇಕು ? ಕೇವಲ ಸಹಿಸಿಕೊಳ್ಳುತ್ತಾ ಇರುವುದೇ ?

೧. ‘ಕಲಂ ೪೯೮-ಅ’ನ ದುರ್ಬಳಕೆ
ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಯಾವುದೇ ಮಹಿಳೆಯ ಪತಿ ಅಥವಾ ಪತಿಯ ಸಂಬಂಧಿಕರಿಂದ ಅವಳನ್ನು ಹಿಂಸಾತ್ಮಕ ರೀತಿಯಲ್ಲಿ ನಡೆಸಿಕೊಳ್ಳುವುದನ್ನು (ಕಲಂ ೪೯೮- A Husband or relative of husband of a woman subjecting her to cruelty) ಕೆಲವು ಮಹಿಳೆಯರು ಅತ್ತೆ-ಮಾವನ ಮನೆಯವರಿಂದ ಹಣ ವಸೂಲಿ ಮಾಡಲು ಬಳಸಿ ಕೊಳ್ಳುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವೇ ಇದನ್ನು ‘ಕಾನೂನಾತ್ಮಕ ಭಯೋತ್ಪಾದನೆ’ ಎಂದು ಕರೆದಿದೆ. ಅಷ್ಟರಮಟ್ಟಿಗೆ ಪರಿಸ್ಥಿತಿ ಭೀಕರವಾಗಿದೆ. ‘ಕಲಂ ೪೯೮-ಅ’ ಅಡಿಯಲ್ಲಿ ಕೇವಲ ಪತಿಯ ಮೇಲೆ ಮಾತ್ರವಲ್ಲ, ಅತ್ತೆ-ಮಾವ, ನಾದಿನಿ ಮತ್ತು ದೂರದ ಸಂಬಂಧಿಕರ ಮೇಲೆಯೂ ಸಾಮಾನ್ಯ ಮತ್ತು ಅಸ್ಪಷ್ಟ ಆರೋಪಗಳನ್ನು ಮಾಡಲಾಗುತ್ತದೆ. ಇಂತಹ ಅನೇಕ ಪ್ರಕರಣಗಳ ನಂತರ ಬಂದ ನಿರ್ಬಂಧಗಳಿಂದಾಗಿ ಈಗ ಕೇವಲ ‘ಕಲಂ ೪೯೮-ಅ’ ಅಡಿಯಲ್ಲಿ ಸಹಜವಾಗಿ ಬಂಧನವಾಗುವುದಿಲ್ಲ. ಆದ್ದರಿಂದ ದೂರಿನಲ್ಲಿ ಪತಿಯ ಮೇಲೆ ‘ಅಸ್ವಾಭಾವಿಕ ಸೆಕ್ಸ್ (ಸಂಭೋಗ) (ಕಲಂ ೩೭೭)’ ಅಥವಾ ಅತ್ತೆಯ ಮನೆಯ ಪುರುಷರ ಮೇಲೆ ಬಲಾತ್ಕಾರದ (ಕಲಂ ೩೭೬) ಸುಳ್ಳು ಆರೋಪಗಳನ್ನು ಮಾಡಲಾಗುತ್ತದೆ. ಅನೇಕ ಪ್ರಕರಣಗಳಳ್ಲಿ ವಿಚ್ಛೇದನೆಯ ಸಮಯದಲ್ಲಿ ದೊಡ್ಡ ಮೊತ್ತದ ಜೀವನಾಂಶ, ನಿರ್ವಹಣೆಯ ಭತ್ತೆ (Alimony and Maintenance) ಅಥವಾ ಆಸ್ತಿಯನ್ನು ಪಡೆಯಲು ಈ ಕಲಂಗಳನ್ನು ಶಸ್ತ್ರವನ್ನಾಗಿ ಬಳಸಲಾಗುತ್ತದೆ.
೨. ಹಣ ವಸೂಲಿಗಾಗಿ ಆರೋಪ ಮಾಡುವ ಮಹಿಳೆಯರ ವಿರುದ್ಧ ಕ್ರಮ ಏಕಿಲ್ಲ ?

ಪೊಲೀಸ್ ಠಾಣೆಯಲ್ಲಿ ಅಥವಾ ನ್ಯಾಯಾಲಯದ ಹೊರಗೆ ಹಣ ನೀಡಿ ಮೊಕದ್ದಮೆಯನ್ನು ಹಿಂಪಡೆಯುವ ‘ಡೀಲಿಂಗ್’ (ವ್ಯವಹಾರ) ಇಂತಹ ಪ್ರಕರಣಗಳಲ್ಲ್ಲಿ ಸರ್ವೇಸಾಮಾನ್ಯವಾಗಿ ನೋಡಬಹುದಾಗಿದೆ. ಪೊಲೀಸರಿಂದ ನ್ಯಾಯಾಧೀಶರ ವರೆಗೆ ‘ಗ್ಯಾಂಗ್’ (ಗುಂಪುಗಳು) ಸಿದ್ಧವಾಗಿವೆ. ಬಿಹಾರದ ಅಭಿಯಂತರ ಅತುಲ ಸುಭಾಷ ತನ್ನ ಆತ್ಮಹತ್ಯೆಯ ಮೊದಲು ನೀಡಿರುವ ಹೇಳಿಕೆಯಲ್ಲಿ ಒಬ್ಬ ನ್ಯಾಯಾಧೀಶೆಯ ಹೆಸರನ್ನು ಉಲ್ಲೇಖಿಸಿದ್ದನು. ಏನಾಯಿತು ? ಅವರಿಗೆ ಪದೋನ್ನತಿ ಸಿಕ್ಕಿತು, ಕನಿಷ್ಠ ಅವರ ವಿಚಾರಣೆಯೂ ನಡೆಯಲಿಲ್ಲ ಮತ್ತು ಕ್ರಮವಂತೂ ಇಲ್ಲವೇ ಇಲ್ಲ. ಇಂತಹ ‘ರಾಕೆಟ್’ ನಡೆಯುತ್ತಿರುವ ಆರೋಪವಿದ್ದರೂ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಈ ರೀತಿಯ ದಂಧೆಗಳನ್ನು ನಿಲ್ಲಿಸಬೇಕೆಂದು ಯಾರಿಗೂ ಅನಿಸುತ್ತಿಲ್ಲ. ‘ಕಲಂ ೪೯೮-ಅ’ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಶೇ. ೧೪.೪ ರಷ್ಟು ಪ್ರಕರಣಗಳು ಸುಳ್ಳೆಂದು ಸಾಬೀತಾಗಿದೆ ಮತ್ತು ಇಂದಿನವರೆಗೂ ಒಬ್ಬ ಮಹಿಳೆಯ ಮೇಲೆಯೂ ಯಾವುದೇ ಕ್ರಮ ಕೈಕೊಂಡಿಲ್ಲ. ಯಾವ ಪ್ರಕರಣದಲ್ಲಿ ಮಹಿಳೆಯು ಪತಿಯ ಮೇಲೆ, ಅತ್ತೆ-ಮಾವನವರ ಮೇಲೆ ಕೇವಲ ಕಿರುಕುಳ ನೀಡಲು ಮತ್ತು ಹಣ ವಸೂಲಿಗಾಗಿ ‘ಕಲಂ ೪೯೮-ಅ’ ದುರ್ಬಳಕೆ ಮಾಡಿಕೊಂಡಿದ್ದಾಳೆಂದು ನ್ಯಾಯಾಲಯದಲ್ಲಿಯೇ ಸಾಬೀತಾಗಿದೆಯೋ, ಆ ಮಹಿಳೆಯ ವಿರುದ್ಧವೂ ಸರ್ವೋಚ್ಚ ನ್ಯಾಯಾಲಯವು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಕಾರಣದಿಂದಾಗಿ ಕೇವಲ ಇಂತಹ ಆರ್ಥಿಕ ವಸೂಲಿ ಅಥವಾ ಮಾನಸಿಕ ಕಿರುಕುಳದಿಂದಾಗಿ ೨೦೨೩ ರ ವರದಿಯ ಪ್ರಕಾರ ೮೩ ಸಾವಿರದ ೭೧೩ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
೩. ‘ಅಟ್ರಾಸಿಟಿ’ ಕಾಯಿದೆಯನ್ನು ಬಳಸಿ ಹಣ ಕಬಳಿಸುವ ದಂಧೆ ನಡೆಯುತ್ತಿದೆ !
ಅಲಿಗಢದ ಚಂದ್ರಾವತಿ ದೇವಿಯವರ ಪ್ರಕರಣವು ಆರ್ಥಿಕ ಲಾಭಕ್ಕಾಗಿ ‘ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ’ಯನ್ನು (ಅಟ್ರಾಸಿಟಿ) ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಅಲಿಗಢದ ಹಾಸ್ತಪೂರದ ಚಂದ್ರಾವತಿ ದೇವಿ ಮತ್ತು ಅವರ ಕುಟುಂಬದವರು ೧೦ ವರ್ಷಗಳ ಕಾಲಾವಧಿಯಲ್ಲಿ (೨೦೧೪ ರಿಂದ ೨೦೨೪ ರ ವರೆಗೆ) ‘ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ೧೫ ದೂರುಗಳನ್ನು ದಾಖಲಿಸಿ, ನಿಜವಾದ ಸಂತ್ರಸ್ತರಿಗಾಗಿ ಇರುವ ಸರಕಾರಿ ಪರಿಹಾರ ಧನದ ರೂಪದಲ್ಲಿ ಸುಮಾರು ೪೬ ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ ಎಂಬ ಆರೋಪವಿದೆ. ಆಯೋಗಕ್ಕೆ ಸಲ್ಲಿಸಿದ ಅಲಿಗಢ ಪೊಲೀಸರ ವರದಿಯ ಪ್ರಕಾರ ಈ ಕುಟುಂಬವು ದಾಖಲಿಸಿದ ಅನೇಕ ಪ್ರಕರಣಗಳೂ ಸಂಶಯಾಸ್ಪದವಾಗಿದ್ದವು ಮತ್ತು ಕೇವಲ ಪರಿಹಾರ ಪಡೆಯುವ ಉದ್ದೇಶದಿಂದ ಸುಳ್ಳು ಪ್ರಕರಣಗಳನ್ನು ಸೃಷ್ಟಿಸಲಾಗಿತ್ತು. ಕೇವಲ ತೊಂದರೆ ಕೊಡುವ ಉದ್ದೇಶದಿಂದ ‘ಅಟ್ರಾಸಿಟಿ’ ಪ್ರಕರಣ ದಾಖಲಿಸಿದ ಸಾವಿರಾರು ಉದಾಹರಣೆಗಳಿವೆ. ಈಗ ತಾವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಆಗಿರುವುದನ್ನು ಬಳಸಿಕೊಂಡು ಹಣ ಕೀಳುವ ಕಾನೂನಾತ್ಮಕ ದಂಧೆ ನಡೆಯುತ್ತಿದೆಯೇ ? ಕೇವಲ ‘ಪರಿಶಿಷ್ಟ ಜಾತಿ/ ಪಂಗಡ’ ಆಗಿರುವುದರಿಂದ ಯಾರ ಮೇಲೆ ದೌರ್ಜನ್ಯವಾಗಿದೆಯೋ ಆ ಜನರು ಒಂದು ಬದಿಗೆ ಉಳಿದಿದ್ದು, ಅವರು ಇಂದಿಗೂ ವಂಚಿತರಾಗಿಯೇ ಉಳಿದಿದ್ದಾರೆ. ಅವರನ್ನು ಮುಂದೆ ಮಾಡಿ ಕಾಯಿದೆಯನ್ನು ಬಳಸಿಕೊಂಡು ಬೇರೆ ಜನರೇ ಹಣವನ್ನು ಗಳಿಸುತ್ತಿದ್ದಾರೆ. ಮಹಿಳೆ ಮತ್ತು ‘ಪರಿಶಿಷ್ಟ ಜಾತಿ/ಪಂಗಡ’ ದವರ ಮೇಲೆ ದೌರ್ಜನ್ಯಗಳಾಗಬಾರದು ಎಂದು ರೂಪಿಸಲಾಗಿರುವ ಕಾಯಿದೆಯು ಹಣ ಗಳಿಸುವ ಸಾಧನವಾಗಿದೆ.

೪. ಸಮಾನತೆಯನ್ನು ತರುವ ವ್ಯರ್ಥ ಪ್ರಯತ್ನವೇಕೆ ಮಾಡಲಾಗುತ್ತಿದೆ ?
ಕಾನೂನಿನ ದುರ್ಬಳಕೆಯಾಗುತ್ತಿದೆ ಎಂಬ ನೈಜಸ್ಥಿತಿಯನ್ನು ನ್ಯಾಯಾಂಗ ವ್ಯವಸ್ಥೆಯು ಒಪ್ಪಿಕೊಳ್ಳುತ್ತದೆ; ಆದರೆ ಬದಲಾವಣೆ ಮಾಡಲು ಮಾತ್ರ ಇಚ್ಛಿಸುವುದಿಲ್ಲ. ಈ ಕಾಯಿದೆಯ ದುರ್ಬಳಕೆ ಆಗಲು ಅತ್ಯಂತ ದೊಡ್ಡ ಮತ್ತು ಪ್ರಮುಖ ಕಾರಣವೆಂದರೆ ಅದು ‘ಏಕಪಕ್ಷೀಯ’ವಾಗಿರುವುದು. ಕಾಯಿದೆಗಳನ್ನು ರೂಪಿಸುವ ಹಿಂದೆ ಇರುವ ‘ಶೋಷಕ-ಶೋಷಿತ’ ಎಂಬ ವಿಚಾರಸರಣಿಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ‘ಸ್ತ್ರೀ-ಪುರುಷರು ಸಮಾನರಲ್ಲ, ಸಾಮಾಜಿಕ ವರ್ಗ, ಜಾತಿ (ವೃತ್ತಿಪರ ಗುರುತು) ಸಮಾನವಲ್ಲ’ ಹೀಗಿರುವಾಗ ಅವುಗಳನ್ನು ಸಮಾನ ಮಾಡುವ ಈ ವ್ಯರ್ಥ ಪ್ರಯತ್ನವೇಕೆ ಮಾಡಲಾಗುತ್ತಿದೆ ? ಯಾರು ಇಂತಹ ದಂಧೆಗಳನ್ನು ಮಾಡುತ್ತಾರೆ ? ಕುಟುಂಬ ಮತ್ತು ಸಮಾಜ ವ್ಯವಸ್ಥೆಯನ್ನು ನಾಶಪಡಿಸುವ ಅಧಿಕೃತ ಧ್ಯೇಯ ಯಾರದ್ದಾಗಿದೆ ?
೫. ಎಲ್ಲಿಯವರೆಗೆ ಉಚ್ಚ-ನೀಚ ಹೋರಾಟವಿರುತ್ತದೆಯೋ, ಅಲ್ಲಿಯವರೆಗೆ ದಂಧೆ ನಡೆಯುತ್ತಲೇ ಇರುತ್ತದೆ !
ವ್ಯrA ‘ಸ್ತ್ರೀ ವಿರುದ್ಧ ಪುರುಷ’ ಎಂದಲ್ಲ, ಬದಲಿಗೆ ‘ಸ್ತ್ರೀ ಮತ್ತು ಪುರುಷ ಪರಸ್ಪರ ಪೂರಕವಾಗಿದ್ದಾರೆ’ ಸಮಾಜದಲ್ಲಿನ ಜಾತಿಗಳು ಪರಸ್ಪರ ವಿರುದ್ಧ ಅಥವಾ ಉಚ್ಚ ನೀಚಗಳಲ್ಲ. ಬದಲಿಗೆ ಅವು ಪರಸ್ಪರ ಪೂರಕ ಮತ್ತು ಪರಸ್ಪರಾವಲಂಬಿಯಾಗಿವೆ. ಅವುಗಳ ಸ್ವರೂಪವನ್ನು ಬದಲಿಸಿ ಪರಸ್ಪರರ ವಿರುದ್ಧ ನಿಲ್ಲಿಸುವ ಮತ್ತು ಎಂದಿಗೂ ಮುಗಿಯದ ಸಂಘರ್ಷವನ್ನು ಉಂಟು ಮಾಡುವುದನ್ನು ನಿಲ್ಲಿಸುವುದಿಲ್ಲವೋ, ಅಲ್ಲಿಯವರೆಗೆ ಆರ್ಥಿಕ ಸುಲಿಗೆ ಮಾಡುವ ‘ಗ್ಯಾಂಗ್’ಗಳು ಸಕ್ರಿಯವಾಗಿರುತ್ತವೆ. ಅವರ ದಂಧೆಯು ಎಷ್ಟೇ ಕೆಟ್ಟದ್ದಾಗಿದ್ದರೂ ಅದು ನಡೆಯುತ್ತಲೇ ಇರುತ್ತದೆ.
– ಶ್ರೀ. ಪ್ರಸನ್ನ ಬರ್ವೆ, ಪಣಜಿ, ಗೋವಾ (೪.೨.೨೦೨೬) (ಆಧಾರ : ‘ಪ್ರಸನ್ನವದನೆ ಬ್ಲಾಗ್’ನಿಂದ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಮಾಲೆಗಾಂವ್ ನಲ್ಲಿ ಬಕ್ರೀದ್ ಸಂದರ್ಭದಲ್ಲಿ 906 ಗೋವುಗಳಿಗೆ ಜೀವದಾನ : 257 ಗೋಕಳ್ಳಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲು !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !