
೧. ಭಯೋತ್ಪಾದಕರ ಮುಂದೆ ಶರಣಾದ ಪೊಲೀಸ್ ಹವಾಲ್ದಾರ ವಜಾ
೭ ಮತ್ತು ೮ ಮೇ ೨೦೧೬ ರ ರಾತ್ರಿ ಜಮ್ಮು-ಕಾಶ್ಮೀರದ ಕುಲಗಾಮ್‌ನಲ್ಲಿ ಭಯೋತ್ಪಾದಕರು ನುಸುಳಿದರು. ಆ ಸಮಯದಲ್ಲಿ ಅವರು ಜಮ್ಮು-ಕಾಶ್ಮೀರ ಪೊಲೀಸ್ ಪಡೆಯ ಪೇದೆಗಳಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಆಶ್ಚರ್ಯವೆಂದರೆ ಆ ಸಮಯದಲ್ಲಿ ಪೊಲೀಸ್ ಪಡೆಯಿಂದ ಯಾವುದೇ ರೀತಿಯ ಪ್ರತಿರೋಧ ವ್ಯಕ್ತವಾಗಲಿಲ್ಲ. ಪೊಲೀಸರು ಆತ್ಮರಕ್ಷಣೆಗಾಗಿ ಅಥವಾ ಭಯೋತ್ಪಾದಕರನ್ನು ಗುರಿಯಾಗಿಸಲು ಒಂದು ಗುಂಡನ್ನೂ ಹಾರಿಸಲಿಲ್ಲ. ಈ ಘಟನೆಯನ್ನು ಪೊಲೀಸ್ ಪಡೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರು. ಇಲಾಖಾ ವಿಚಾರಣೆಯ ಸಮಯದಲ್ಲಿ, ೭ ಮತ್ತು ೮ ಮೇ ೨೦೧೬ ರ ರಾತ್ರಿ ಭಯೋತ್ಪಾದಕರು ಪೊಲೀಸ್ ಚೌಕಿಯ ಮೇಲೆ ಆಕ್ರಮಣ ಮಾಡಿ ಅವರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದು ದೃಢ ಪಟ್ಟಿತು. ಆ ಸಮಯದಲ್ಲಿ ಅಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಈ ಭಯೋತ್ಪಾದಕರನ್ನು ಪ್ರತಿರೋಧಿಸಲಿಲ್ಲ. ಪೊಲೀಸ್ ಇಲಾಖೆಯು ಇದರಲ್ಲಿ ಭಾಗಿಯಾಗಿದ್ದ ಬಶೀರ್ ಅಹಮದ್ ಎಂಬ ಪೊಲೀಸ್ ಹವಾಲ್ದಾರನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತು. ನಂತರ ಇಲಾಖಾ ವಿಚಾರಣೆ ನಡೆಸಿ, ೨೪ ವರ್ಷ ಸೇವೆ ಸಲ್ಲಿಸಿದ್ದ ಬಶೀರ್ ಅಹಮದನನ್ನು ನೇರವಾಗಿ ಕೆಲಸದಿಂದ ವಜಾ ಮಾಡಲಾಯಿತು.

೨. ಪೊಲೀಸ್ ಹವಾಲ್ದಾರನಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚ ನ್ಯಾಯಾಲಯದಲ್ಲಿ ಇದರ ವಿರುದ್ದ ಅರ್ಜಿ ಮತ್ತು ವಜಾ ಶಿಕ್ಷೆ ರದ್ದು !
ಈ ಆದೇಶದ ನಂತರ ಬಶೀರ್ ಅಹಮದ್ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದನು. ಈ ಅರ್ಜಿಯಲ್ಲಿ ಅವನು, ’೨೪ ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ನಂತರ ಯಾವುದೋ ಒಂದು ಘಟನೆಯಲ್ಲಿ ಕರ್ತವ್ಯಲೋಪವಾಗಿದ್ದರೆ, ಕೆಲಸದಿಂದ ವಜಾ ಮಾಡುವಂತಹ ದೊಡ್ಡ ಶಿಕ್ಷೆ ನೀಡುವುದು ಅಸಮರ್ಪಕವಾಗಿದೆ. ಅಪರಾಧ ಮತ್ತು ಅಪರಾಧಿಗೆ ನೀಡಿದ ಶಿಕ್ಷೆಯ ನಡುವೆ ಅಸಮಾನತೆಯಿದೆ, ಅಲ್ಲದೆ ಗೃಹಇಲಾಖೆಯು ಮಾನವೀಯತೆಯ ದೃಷ್ಟಿಯಿಂದ ಕರುಣೆಯನ್ನು ತೋರಲಿಲ್ಲ; ಆದ್ದರಿಂದ ಉಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಬೇಕು’ ಎಂದು ವಾದಿಸಿದರು. ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯವು, ’ಈ ಪ್ರಕರಣದಲ್ಲಿ ಜಮ್ಮು-ಕಾಶ್ಮೀರ ಪೊಲೀಸ್ ನಿಯಮಗಳು, ೧೯೬೦’ರ ನಿಯಮ ೩೫೯ ರ ಉಲ್ಲಂಘನೆಯಾಗಿದೆ. ಈ ನಿಯಮದ ಪ್ರಕಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ತನಿಖಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಮರ್ಥರಲ್ಲ. ಇದರೊಂದಿಗೆ ಹವಾಲ್ದಾರನನ್ನು ವಜಾ ಮಾಡುವಾಗ ಪೊಲೀಸ್ ಇಲಾಖೆಯಿಂದ ಕೆಲವು ತಾಂತ್ರಿಕ ವಿಷಯಗಳ ಪಾಲನೆಯಾಗದಿರುವುದನ್ನು ಮತ್ತು ಅರ್ಜಿದಾರನ ೨೪ ವರ್ಷಗಳ ಅವಿರತ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠವು ವಜಾ ಶಿಕ್ಷೆಯನ್ನು ರದ್ದುಗೊಳಿಸಿ, ಆತನನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು’ ಎಂದು ಆದೇಶಿಸಿತು.
೩. ವಜಾ ಆದೇಶವನ್ನು ಎತ್ತಿಹಿಡಿದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ !
ಅಂದಿನ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಸರಕಾರ ಹಾಗೂ ಪೊಲೀಸ್ ಪಡೆಯು ಈ ತೀರ್ಪನ್ನು ದ್ವಿಸದಸ್ಯ ಪೀಠದ ಮುಂದೆ ಪ್ರಶ್ನಿಸಿತು. ಈ ದ್ವಿಸದಸ್ಯ ಪೀಠವು, ’ಇಲಾಖಾ ವಿಚಾರಣೆಯಲ್ಲಿ ಯಾವುದೇ ರೀತಿಯಲ್ಲಿ ಪೊಲೀಸ್ ನಿಯಮ ೩೫೯ ರ ಉಲ್ಲಂಘನೆಯಾಗಿಲ್ಲ. ವಾಸ್ತವವಾಗಿ ಈ ನಿಯಮದಡಿ ಆರೋಪ ನಿಗದಿಪಡಿಸುವುದು ಮತ್ತು ಶಿಕ್ಷೆಯ ಪ್ರಸ್ತಾವನೆಗಾಗಿ ಕಾರಣ ಕೇಳುವ ನೋಟಿಸ್ ಕಳುಹಿಸುವವರೆಗೆ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಇದರೊಂದಿಗೆ ಪ್ರತಿವಾದಿಯು ತನ್ನ ಮೇಲಿರುವ ಮುಖ್ಯ ಆರೋಪವನ್ನು ನಿರಾಕರಿಸಿಲ್ಲ’ ಎಂಬುದನ್ನು ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಒತ್ತಿಹೇಳಿತು. ಉಚ್ಚ ನ್ಯಾಯಾಲಯವು ಮುಂದುವರಿದು, ’ಚೌಕಿಯಲ್ಲಿ ಕಡಿಮೆ ಜನರಿದ್ದರು ಮತ್ತು ಅವರು ಸುರಕ್ಷಿತವಾಗಿರಲಿಲ್ಲ ಎಂಬ ವಿವರಣೆಯು ದುಷ್ಕೃತ್ಯದ ಗಾಂಭೀರ್ಯವನ್ನು ಕಡಿಮೆ ಮಾಡುವುದಿಲ್ಲ. ಕರ್ತವ್ಯದಲ್ಲಿ ನಿಯೋಜಿತರಾದ ಪೊಲೀಸರು ಭಯೋತ್ಪಾದಕರ ಆಕ್ರಮಣವನ್ನು ಪ್ರತಿರೋಧಿಸದಿರುವುದು ಮತ್ತು ಒಂದು ಗುಂಡನ್ನೂ ಹಾರಿಸದೆ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡುವುದು ಹೇಡಿತನದ ಲಕ್ಷಣವಾಗಿದೆ. ಇದರಿಂದ ಇಡೀ ಪೊಲೀಸ್ ಪಡೆಯ ನೈತಿಕ ಗೌರವಕ್ಕೆ ಚ್ಯುತಿ ಬರುತ್ತದೆ. ಸಾರ್ವಜನಿಕರ ಸುರಕ್ಷತೆಗಾಗಿ ನಿಯೋಜಿಸಲಾದ ಪೊಲೀಸರ ಇಂತಹ ಕೆಲಸಗಳನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿ, ದ್ವಿಸದಸ್ಯ ಉಚ್ಚ ನ್ಯಾಯಾಲಯವು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿತು ಮತ್ತು ಪೊಲೀಸ್ ಹವಾಲ್ದಾರನ ವಜಾ ಶಿಕ್ಷೆಯನ್ನು ಕಾಯಂಗೊಳಿಸಿತು.
೪. ಗೃಹ ಇಲಾಖೆ ಮತ್ತು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ಶ್ಲಾಘನೀಯ ನಿರ್ಧಾರ !
ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ, ಆದರೂ ಕಳೆದ ೩೫ ವರ್ಷಗಳಿಂದ ಕಾಶ್ಮೀರಿ ಹಿಂದೂಗಳಿಗೆ ತಮ್ಮ ಮಾತೃಭೂಮಿಗೆ ಮರಳಲು ಸಾಧ್ಯವಾಗಿಲ್ಲ. ಆದ್ದರಿಂದ ಪೊಲೀಸ್ ಪಡೆಯು ತೆಗೆದುಕೊಂಡ ಕಠಿಣ ನಿರ್ಧಾರವು ಸರಿಯಾಗಿದೆ. ಇಂತಹ ಘಟನೆಗಳನ್ನು ಮೃದುವಾಗಿ ನಿರ್ವಹಿಸಿದ್ದರೆ, ಸೈನಿಕರು ಮತ್ತು ಪೊಲೀಸರ ಶತ್ರುಗಳೊಂದಿಗೆ ವೀರಾವೇಶದಿಂದ ಹೋರಾಡುವ ಮಾನಸಿಕತೆ ಕೊನೆಗೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಮತ್ತು ಉಚ್ಚ ನ್ಯಾಯಾಲಯದ ನಿರ್ಧಾರವು ಅಭಿನಂದನೀಯವಾಗಿದೆ.
ಶ್ರೀಕೃಷ್ಣಾರ್ಪಣಮಸ್ತು
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೮.೧೨.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’