‘ನಿಮೆಸುಲೈಡ್’ ಔಷಧದ ಕುರಿತು ಭಾರತ ಸರಕಾರ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರ ಮತ್ತು ಕೆಲವು ಪ್ರಮುಖ ಪ್ರಶ್ನೆಗಳು !

ಭಾರತ ಸರಕಾರವು ಇತ್ತೀಚೆಗೆ ‘ನಿಮೆಸುಲೈಡ್’ ಔಷಧದ ಬಗ್ಗೆ ಕೆಲವು ಮಹತ್ವದ ಮತ್ತು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ

೧. ಈ ನಿರ್ಧಾರಗಳು ಯಾವುವು ?

ಭಾರತ ಸರಕಾರವು ೧೦೦ ಮಿಲಿಗ್ರಾಂಗಿಂತ ಹೆಚ್ಚಿನ ಡೋಸ್ ಹೊಂದಿರುವ ‘ನಿಮೆಸುಲೈಡ್’ ಬಾಯಿಯ ಮೂಲಕ ಸೇವಿಸುವ ಔಷಧಗಳನ್ನು ನಿಷೇಧಿಸಿದೆ. ಇದರಲ್ಲಿ ಮಾತ್ರೆಗಳು ಮತ್ತು ಸಿರಪ್‌ಗಳು ಸೇರಿವೆ. ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬಂದಿದೆ.

‘ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆ, ೧೯೪೦’ ರ ‘ವಿಭಾಗ ೨೬ ಅ’ ಅಡಿಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ‘ನಿಮೆಸುಲೈಡ್’ ಬಳಕೆಯನ್ನು ಭಾರತದಲ್ಲಿ ೨೦೧೧ ರಿಂದಲೇ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಿನ ಹೊಸ ನಿರ್ಧಾರದಿಂದಾಗಿ ವಯಸ್ಕರು ತೆಗೆದುಕೊಳ್ಳುವ ಡೋಸ್ ಮೇಲೆಯೂ ಮಿತಿ ಹೇರಲಾಗಿದೆ.

ವೈದ್ಯ ಪರೀಕ್ಷಿತ ಶೆವಡೆ

೨. ನಿಷೇಧಿಸಲು ಮುಖ್ಯ ಕಾರಣವೇನು ?

ಸರಕಾರ ಮತ್ತು ತಜ್ಞರು ಈ ಔಷಧವು ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. ಇದರ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ:

ಅ. ಯಕೃತ್ತಿನ ಮೇಲೆ ಗಂಭೀರ ಪರಿಣಾಮ : ‘ನಿಮೆಸುಲೈಡ್’ನ ಅತಿಯಾದ ಬಳಕೆಯಿಂದ ಯಕೃತ್ತಿಗೆ ಹಾನಿ ಅಥವಾ ಯಕೃತ್ತು ವೈಫಲ್ಯದ ಅಪಾಯ ಬಹಳ ಹೆಚ್ಚಿದೆ. ಇದೇ ಕಾರಣಕ್ಕಾಗಿ ಈ ಔಷಧವನ್ನು ಈಗಾಗಲೇ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ನಿಷೇಧಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಯಕೃತ್ತಿನ ಮೇಲೆ ಮಾತ್ರವಲ್ಲ, ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮಗಳು ಉಂಟಾಗಬಹುದು.

ಗಮನಿಸಬೇಕಾದ ಅಂಶವೆಂದರೆ, ‘ನಿಮೆಸುಲೈಡ್’ ಔಷಧವು ಯಕೃತ್ತಿನ ಮೇಲೆ ಉಂಟುಮಾಡುವ ಗಂಭೀರ ಅಡ್ಡಪರಿಣಾಮಗಳಿಂದಾಗಿ ಅನೇಕ ಮುಂದುವರಿದ ದೇಶಗಳಲ್ಲಿ ಅನೇಕ ವರ್ಷಗಳಿಂದ ನಿಷೇಧಿಸಲ್ಪಟ್ಟಿದೆ ಅಥವಾ ಅದಕ್ಕೆ ಎಂದಿಗೂ ಮಾನ್ಯತೆ ಸಿಕ್ಕಿಲ್ಲ.

ಅ ೧. ಔಷಧಕ್ಕೆ ಮಾನ್ಯತೆಯನ್ನೇ ನೀಡದ ದೇಶಗಳು : ಅತ್ಯಂತ ಕಟ್ಟುನಿಟ್ಟಾದ ಔಷಧ ನಿಯಮಗಳನ್ನು ಹೊಂದಿರುವ ದೇಶಗಳಾದ ಅಮೇರಿಕಾ, ಯುನೈಟೆಡ್ ಕಿಂಗ್ಡಮ್ (ಬ್ರಿಟನ್), ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಜಪಾನ್ ‘ನಿಮೆಸುಲೈಡ್’ ಸುರಕ್ಷಿತವಲ್ಲ ಎಂಬ ಕಾರಣ ನೀಡಿ ಅದನ್ನು ಯಾವತ್ತೂ ಮಾರುಕಟ್ಟೆಗೆ ಬಿಟ್ಟಿಲ್ಲ. (ಈ ದೇಶಗಳು ಆರಂಭಿಕ ಹಂತದ ಪರೀಕ್ಷೆಗಳಲ್ಲಿಯೇ ಈ ಔಷಧವು ಯಕೃತ್ತಿಗೆ ಅಪಾಯಕಾರಿ ಎಂಬುದನ್ನು ಗುರುತಿಸಿ, ಇದಕ್ಕೆ ಅನುಮತಿಯನ್ನು ನಿರಾಕರಿಸಿದ್ದವು.)

ಅ ೨. ‘ನಿಮೆಸುಲೈಡ್’ನ ಬಳಕೆ ಮೊದಲು ಜಾರಿಯಲ್ಲಿದ್ದು, ನಂತರ ನಿಷೇಧಿಸಿದ ದೇಶಗಳು : ಕೆಲವು ದೇಶಗಳಲ್ಲಿ ಈ ಔಷಧವು ಮೊದಲು ಲಭ್ಯವಿತ್ತು; ಆದರೆ ರೋಗಿಗಳ ಯಕೃತ್ತಿನ ಮೇಲೆ ಗಂಭೀರ ಪರಿಣಾಮಗಳು (ಕಾಮಾಲೆ, ಯಕೃತ್ತು ಹಾಳಾಗುವುದು) ಕಂಡು ಬಂದ ನಂತರ ಅದರ ಮೇಲೆ ನಿಷೇಧ ಹೇರಲಾಯಿತು. ಸ್ಪೇನ್ : (ವರ್ಷ ೨೦೦೨ ರಲ್ಲಿ ನಿಷೇಧ), ಫಿನ್ಲ್ಯಾಂಡ್ : (ವರ್ಷ ೨೦೦೨ ರಲ್ಲಿ ನಿಷೇಧ) ಐಲ್ಯಾಂಡ್ : (ವರ್ಷ ೨೦೦೭ ರಲ್ಲಿ ನಿಷೇಧ (ಯಕೃತ್ತು ಹಾಳಾಗುವ ಪ್ರಕರಣಗಳಲ್ಲಿ ಏರಿಕೆಯಾದ ಕಾರಣ) ಸಿಂಗಾಪುರ : ವರ್ಷ ೨೦೦೭-೦೮ ರ ಸುಮಾರಿಗೆ ನಿಷೇಧ) ಮತ್ತು ಮಲೇಷ್ಯಾ, ವಿಯೆಟ್ನಾಂ ಮತ್ತು ಅಜೆಂಟೀನಾ ಈ ದೇಶಗಳೂ ಸಹ ವರ್ಷ ೨೦೦೮-೦೯ ರ ಅವಧಿಯಲ್ಲಿ ಇದರ ಮೇಲೆ ನಿಷೇಧ ಹೇರಿದವು.

೩. ಕೆಲವು ಪ್ರಮುಖ ಪ್ರಶ್ನೆಗಳು

ಅ. ಮೇಲಿನ ಅಂಕಿಅಂಶಗಳನ್ನು ಗಮನಿಸಿದರೆ, ತೀರಾ ಇತ್ತೀಚೆಗಾದರೂ ಅಂದರೆ ೨೦೦೯ ರ ವೇಳೆಗೆ ವಿಯೆಟ್ನಾಂನಂತಹ ದೇಶಕ್ಕೂ ಈ ಔಷಧದ ಅಡ್ಡಪರಿಣಾಮಗಳು ತಿಳಿದು ನಿಷೇಧಿಸಿತು. ಆದರೆ ಭಾರತದಂತಹ ದೇಶದಲ್ಲಿ ಇದಕ್ಕೆ ೨೦೨೬ ನೇ ವರ್ಷ ಬರಬೇಕಾಯಿತೇ ?

ಆ. ಕ್ಲಿನಿಕಲ್ ಟ್ರಯಲ್ ಫೇಸ್ ೪’ (ವೈದ್ಯಕೀಯ ಉಪಾಯಗಳು), ಅಂದರೆ ಔಷಧವು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾದ ನಂತರ ನಡೆಯುವ ಸಂಶೋಧನೆ ಅಥವಾ ನಿರಂತರ ವೀಕ್ಷಣೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಪೋಸ್ಟ್-ಮಾರ್ಕೆಟಿಂಗ್ ಸರ್ವೆಲೆನ್ಸ್’ ಎಂದೂ ಕರೆಯುತ್ತಾರೆ. ಇದರಲ್ಲಿ ಅಡ್ಡಪರಿಣಾಮಗಳು ಕಂಡುಬಂದ ‘ಸಿಂಥೆಟಿಕ್’ (ಕೃತಕ) ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತದೆ; ಆದರೆ ಅಲ್ಲಿಯವರೆಗೆ ಈ ಸಂಶೋಧನೆಗೊಳಪಟ್ಟ ಔಷಧಗಳು ಮಾಡಿದ ಹಾನಿಯ ಹೊಣೆಗಾರಿಕೆ ಯಾರದ್ದು ?

ಇ. ಸಣ್ಣಪುಟ್ಟ ವಿಷಯಗಳಿಗೂ ‘ಲಿವರ್ ಇಂಜುರಿ’ (ಯಕೃತ್ತು ವೈಫಲ್ಯ) ನೆಪವೊಡ್ಡಿ ಆಯುರ್ವೇದದ ಬಗ್ಗೆ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುವವರು ಮತ್ತು ವೈಜ್ಞಾನಿಕತೆಯ ಬೊಗಳೆ ಬಿಡುವವರು, ಈ ಅಪಾಯಕಾರಿ ಔಷಧಗಳ ಬಗ್ಗೆ ಅಷ್ಟೇ ತಳಮಳದಿಂದ ಮತ್ತು ಸತತವಾಗಿ ಬರೆಯುವುದನ್ನು ನಾವು ಕಾಣುತ್ತೇವೆಯೇ ?

ಈ. ಈ ‘ಸಿಂಥೆಟಿಕ್’ ಔಷಧಗಳ ಮೇಲೆ ಭಾರತದಲ್ಲಿ ಇನ್ನೂ ಸಂಪೂರ್ಣ ನಿಷೇಧ ಬಂದಿಲ್ಲ. ಇದು ಅಷ್ಟು ಅನಿವಾರ್ಯವಾದ ಮತ್ತು ಪರ್ಯಾಯವೇ ಇಲ್ಲದ ಔಷಧವೇ ?

ಉ. ನಾವು ನಿರ್ಲಕ್ಷ್ಯ ಮತ್ತು ಅನಾಸ್ಥೆಯ ಗಾಢ ನಿದ್ರೆಯಿಂದ ಎಚ್ಚರಗೊಳ್ಳುವೆವೇನು ? ಹೊಸ ಆಂಗ್ಲ ವರ್ಷ ಪ್ರಾರಂಭವಾಗಿದೆ, ಸ್ವಲ್ಪ ಹೊಸ ಆಲೋಚನೆಯನ್ನೂ ಮಾಡಬೇಕಿದೆ !

– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ, ಮಹಾರಾಷ್ಟ್ರ.