ವಿಶೇಷ ಭಕ್ತಿಸತ್ಸಂಗ ಸರಣಿ : ಗುರುಕೃಪಾಯೋಗದಲ್ಲಿನ ಮೂಲತತ್ತ್ವದ ಪಾಠವನ್ನು ನೀಡುವ ಶ್ರೀ ಗುರುಗೀತೆ !
‘೨೦೨೫ ರ ಗುರುಪೂರ್ಣಿಮೆಯ ನಂತರ ಭಾರತದಾದ್ಯಂತದ ಎಲ್ಲಾ ಸಾಧಕರಿಗಾಗಿ ಭಕ್ತಿ ಸತ್ಸಂಗದಲ್ಲಿ ವಿಶೇಷ ಸರಣಿಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಸಾಧನೆಯ ‘ವಿಚಾರಿಸುವುದು, ಕೇಳಿಸಿಕೊಳ್ಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ನೀಡುವುದು’ ಈ ಪಂಚಸೂತ್ರಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. ಈ ಸತ್ಸಂಗದ ಬಗ್ಗೆ ಈಶ್ವರೀ ಜ್ಞಾನದಿಂದ ಲಭಿಸಿದ ಮಾಹಿತಿಯನ್ನು ನೀಡಲಾಗಿದೆ. (ಭಾಗ – ೧)

೧. ಗುರುಕೃಪಾಯೋಗದಂತೆ ಸಾಧನೆಗಾಗಿ ಶಿಷ್ಯತ್ವವು ಆವಶ್ಯಕವಿದ್ದು ಶಿಷ್ಯತ್ವಕ್ಕೆ ಹಾನಿಕರವಾದ ತಪ್ಪು ತಡೆಯಬೇಕು
‘ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಅಥವಾ ಗುರುಕೃಪಾಯೋಗ’ ಯಾವುದೇ ಯೋಗಮಾರ್ಗವಿರಲಿ, ಪ್ರತಿ ಯೊಂದು ಯೋಗಮಾರ್ಗದ ನಿಯಮಗಳು ಮತ್ತು ತತ್ತ್ವ ಗಳೊಂದಿಗೆ ಆ ಮಾರ್ಗದಲ್ಲಿ ಸಾಧನೆ ಮಾಡುವಾಗ ‘ಯಾವ ತಪ್ಪುಗಳನ್ನು ಮಾಡಬಾರದು ?’ ಎಂಬುದನ್ನು ಹೇಳಲಾಗುತ್ತದೆ.
ವರ್ತಮಾನ ಕಲಿಯುಗದಲ್ಲಿ ಎಲ್ಲಾ ಯೋಗಮಾರ್ಗಗಳಲ್ಲಿ ‘ಗುರುಕೃಪಾಯೋಗ’ವು ಈಶ್ವರಪ್ರಾಪ್ತಿ (ಮೋಕ್ಷಪ್ರಾಪ್ತಿ) ಮಾಡಿಸಿ ಕೊಡುವ ರಾಜಮಾರ್ಗವಾಗಿದ್ದರೂ, ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ಶಿಷ್ಯತ್ವವೃತ್ತಿ ಇರುವುದು ಪ್ರಧಾನವಾಗಿದೆ. ಹಾಗಾಗಿ ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಶಿಷ್ಯತ್ವವೃತ್ತಿಗೆ ಬಾಧಕವಾದ ಸ್ವಭಾವದೋಷ ತಡೆಯುವುದು ಆವಶ್ಯಕವಾಗಿದೆ. ಇದಕ್ಕಾಗಿ ಗುರುಕೃಪಾಯೋಗದ ಪ್ರವರ್ತಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ‘ಮನಸ್ಸಿನಂತೆ ಸಾಧನೆ’, ‘ಮನಸ್ಸಿನಿಂದ ಗುರುಗಳನ್ನು ನಿರ್ಧರಿಸುವುದು’, ‘ತನ್ನನ್ನು ತಾನು ಸಾಧಕನೆಂದು ತಿಳಿಯುವುದು’ ಮತ್ತು ‘ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕುವುದು’ ಎಂಬ ನಾಲ್ಕು ಹಾನಿಕರ ತಪ್ಪುಗಳನ್ನು ದೂರಗೊಳಿಸಿ ‘ಗುರುಕೃಪಾಯೋಗಾನುಸಾರ ಸಾಧನೆ’ ಮಾಡುವ ಮಾರ್ಗದರ್ಶನವನ್ನು ಸಾಧನೆ ಮಾಡುವ ಸಮಷ್ಟಿಗೆ ನೀಡಿದ್ದಾರೆ.
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮನಸ್ಸಿನಂತೆ ಸಾಧನೆ’ ಎಂಬ ಸಾಧನೆಯ ತಪ್ಪನ್ನು ಸಾಧಕರು ಗಮನದಲ್ಲಿಡದೇ ಸಾಧನೆಯನ್ನು ಮನಸ್ಸಿನಂತೆ ಮಾಡುತ್ತಾರೆ
ಸಮಷ್ಟಿ ಸಂತರು ಹೇಳುತ್ತಿರುವ ಸಾಧನೆಯ ತತ್ತ್ವಗಳು ಉನ್ನತಮಟ್ಟದ ಜ್ಞಾನದಿಂದ ಕೂಡಿರುತ್ತವೆ ಹಾಗೂ ಕಾಲಾತೀತವಾಗಿರುತ್ತವೆ; ಆದರೆ ಸಮಾಜವು ಅದನ್ನು ಸ್ವಂತ ಬುದ್ಧಿಗನುಗುಣವಾಗಿ ಅರ್ಥೈಸಿಕೊಳ್ಳುವುದರಿಂದ ಅದರಲ್ಲಿನ ಭಾವಾರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಮನೋಲಯವಾಗುವುದು ಹಾಗೆಯೇ ನಮಗೆ ಏನು ಇಷ್ಟವಾಗುತ್ತದೆ ? ಎನ್ನುವುದಕ್ಕಿಂತ ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆಯೆಂದು ಏನು ಮಾಡುವುದು ಆವಶ್ಯವಾಗಿದೆ ? ಎಂಬ ಎರಡು ಅಂಶಗಳು ಬಹಳ ಮಹತ್ವದ್ದಾಗಿವೆ. ವ್ಯಷ್ಟಿ ಸಾಧನೆ ಮಾಡುವವರು ಹೆಚ್ಚಾಗಿ ಈ ತತ್ತ್ವವನ್ನು ಅರ್ಥಮಾಡಿಕೊಳ್ಳದೆ, ಯಾವ ದೇವತೆಯ ಪೂಜೆ ಅಥವಾ ಯಾವ ಸಾಧನೆಯ ಪ್ರಕಾರಗಳಿಂದ (ದೇವರಪೂಜೆ, ತೀರ್ಥಯಾತ್ರೆ, ಧ್ಯಾನ ಇತ್ಯಾದಿ) ಸುಖ (ತಾತ್ಕಾಲಿಕ ಆನಂದ) ಸಿಗುತ್ತದೆಯೋ ಅದನ್ನು ಮಾಡುತ್ತಿರುತ್ತಾರೆ. ಈ ರೀತಿ ತಮ್ಮ ಸ್ವಂತ ಮನಸ್ಸಿನಂತೆ ಸಾಧನೆ ಮಾಡುವುದರಿಂದ ಮನಸ್ಸು ಮತ್ತು ಚಿತ್ತದ ಮೇಲಿನ ಸಂಸ್ಕಾರಗಳು ಕಾರ್ಯನಿರತವಾಗಿರುತ್ತವೆ ಮತ್ತು ಮನೋಲಯದ ಹಂತವನ್ನು ತಲುಪಲು ಎಂದಿಗೂ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮನಸ್ಸಿನಂತೆ ಸಾಧನೆ ಇದು ಸಾಧನೆಯ ಮೊದಲ ತಪ್ಪು’ ಎಂದು ಹೇಳಿದ್ದಾರೆ. ಹೀಗಿದ್ದರೂ ಇಂದಿಗೂ ಅನೇಕ ಸಾಧಕರಿಂದ ಈ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನಗಳಾಗದೇ ಅವರಿಂದ ಅವರಿಗೆ ಇಷ್ಟವಾಗುವ ಸಾಧನೆ (ವಿಶಿಷ್ಟ ಸೇವೆ, ತಮ್ಮ ಸಮಯಕ್ಕನುಸಾರ ಸೇವೆ) ಮಾಡುತ್ತಾರೆ.
೩ ಗುರುಕೃಪಾಯೋಗದಂತೆ ಸಾಧನೆ ಮಾಡುತ್ತಿದ್ದರೂ ಸಾಧಕರಿಂದ ಶಿಷ್ಯತ್ವಕ್ಕೆ ಹಾನಿಕರವಾದ ಪ್ರಮುಖ ತಪ್ಪುಗಳಾಗುವುದರಿಂದ ಸಾಧಕರ ಆಧ್ಯಾತ್ಮಿಕ ಉನ್ನತಿ ಆಗದೇ ಅವರು ವಿವಿಧ ಆಧ್ಯಾತ್ಮಿಕ ಅಡಚಣೆಗಳನ್ನು ಎದುರಿಸುವುದು
ಯಾವುದೇ ಸ್ಥಳಕ್ಕೆ ಪ್ರಯಾಣಿಸುವಾಗ ಹೋಗುವ ದಾರಿ ಉತ್ತಮವಾಗಿದ್ದರೂ, ಪ್ರಯಾಣಿಸುವ ವಾಹನವು ಸರಿಯಿಲ್ಲದಿದ್ದರೆ ಪ್ರಯಾಣದಲ್ಲಿ ಅನೇಕ ಅಡಚಣೆಗಳು ಬರುತ್ತವೆ ಮತ್ತು ಗುರಿಯನ್ನು ತಲುಪುವ ಅವಧಿಯೂ ಹೆಚ್ಚಾಗುತ್ತದೆ. ಅದೇ ರೀತಿ ಗುರುಕೃಪಾಯೋಗದಂತೆ ಸಾಧನೆ ಎಂಬುದು ಈಶ್ವರಪ್ರಾಪ್ತಿಯ (ಮೋಕ್ಷಪ್ರಾಪ್ತಿಯ) ರಾಜಮಾರ್ಗವಾಗಿದ್ದರೂ, ಅದರಂತೆ ಸಾಧನೆ ಮಾಡುತ್ತಿದ್ದರೂ, ಕೆಲವು ಸಾಧಕರಿಂದ ಶಿಷ್ಯತ್ವಕ್ಕೆ ಹಾನಿಕರವಾದ ಪ್ರಮುಖ ತಪ್ಪುಗಳು ಆಗುತ್ತವೆ. ಈ ಕಾರಣದಿಂದ ಅನೇಕ ವರ್ಷಗಳ ಕಾಲ ಸಾಧನೆ ಮಾಡಿದರೂ ಕೆಲವು ಸಾಧಕರ ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ಅನೇಕ ವರ್ಷಗಳ ಕಾಲ ಸಾಧನೆ ಮಾಡಿದರೂ ಕೆಲವು ಸಾಧಕರಲ್ಲಿ ಶಿಷ್ಯವೃತ್ತಿ ನಿರ್ಮಾಣವಾಗದ ಕಾರಣ ಅವರಿಗೆ ಸಂತರು ಮತ್ತು ಸದ್ಗುರುಗಳಿಂದ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಾಧಕರು ತೀವ್ರ ಪ್ರಾರಬ್ಧದ ಪ್ರಸಂಗಗಳನ್ನು ಎದುರಿಸುವಾಗ ಬಹಳ ಸಂಘರ್ಷ ಮಾಡ ಬೇಕಾಗುತ್ತದೆ, ಹಾಗೆಯೇ ಅನಿಷ್ಟ ಶಕ್ತಿಗಳಿಗೂ ಅವರ ಜೀವನದಲ್ಲಿ ವಿವಿಧ ಅಡಚಣೆಗಳನ್ನು ನಿರ್ಮಿಸಿ ಅವರನ್ನು ಸಾಧನೆಯಿಂದ ದೂರಗೊಳಿಸುವುದು ಅಥವಾ ದೀರ್ಘಕಾಲದ ವರೆಗೆ ವಿಕಲ್ಪದ ಸ್ಥಿತಿಯಲ್ಲಿಟ್ಟು ಅವರ ಸಾಧನೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಸಂಕ್ಷಿಪ್ತದಲ್ಲಿ, ಶಿಷ್ಯತ್ವಕ್ಕೆ ಹಾನಿಕರವಾದ ಪ್ರಮುಖ ತಪ್ಪುಗಳನ್ನು ತಡೆಯದ ಕಾರಣ ಕೆಲವು ಸಾಧಕರು ನಾವು ಗುರುಕೃಪಾಯೋಗದಂತೆ ಸಾಧನೆ ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲೇ ಇರುತ್ತಾರೆ. ಪ್ರತ್ಯಕ್ಷ ಗುರುಕೃಪಾಯೋಗದಂತೆ ಅವರ ಸಾಧನೆಯು ನಡೆಯದ ಕಾರಣ ಅಂತಹ ಸಾಧಕರಿಗೆ ಗುರುಗಳ ಕೃಪೆಯನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ ಮತ್ತು ಅವರು ವಿವಿಧ ಸಂಕಷ್ಟಗಳನ್ನು ಎದುರಿಸಬೇಕಾಗುತ್ತಿದೆ.
೪. ಗುರುಕೃಪಾಯೋಗ ಸಾಧನೆಯಲ್ಲಿನ ಪ್ರಮುಖ ೪ ತಪ್ಪುಗಳನ್ನು ತಡೆಯಲು ಪಂಚಸೂತ್ರ ಕೃತಿಗಳು

೫. ಸಾಧನೆಯಲ್ಲಿನ ಪಂಚಸೂತ್ರಗಳಿಗೆ ಅನುಗುಣವಾಗಿ ಆಚರಿಸುವುದರಿಂದ ಸಾಧಕರು ಪ್ರಮುಖ ತಪ್ಪುಗಳನ್ನು ತಪ್ಪಿಸಿ ತಮ್ಮ ಮನಸ್ಸಿನ ಮೇಲೆ ಶಿಷ್ಯತ್ವದ ಸಂಸ್ಕಾರಗಳನ್ನು ಮಾಡಿಕೊಳ್ಳಲು ಸಾಧ್ಯವಾಗುವುದು
ಸಾಧನೆಯಲ್ಲಿನ ಪಂಚಸೂತ್ರಗಳನ್ನು (ವಿಚಾರಿಸುವುದು, ಕೇಳಿಸಿಕೊಳ್ಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ನೀಡುವುದು) ಆಚರಿಸುವುದು ಎಂದರೆ ಸ್ವಂತ ಮನಸ್ಸಿನ ಮೇಲೆ ಶಿಷ್ಯತ್ವದ ಸಂಸ್ಕಾರಗಳನ್ನು ಮಾಡಿಕೊಳ್ಳುವುದು. ಸಾಧಕನು ಪಂಚಸೂತ್ರಗಳಂತೆ ಆಚರಿಸಿದಾಗ, ಅವನಿಂದ ಶಿಷ್ಯತ್ವಕ್ಕೆ ಹಾನಿಕರವಾದ ತಪ್ಪುಗಳು ಅರಿವಿಲ್ಲದೆಯೇ ತಾನಾಗಿಯೇ ದೂರವಾಗುತ್ತವೆ ಮತ್ತು ಅವನ ಮನಸ್ಸಿನ ಮೇಲೆ ಶಿಷ್ಯತ್ವದ ಗುಣಗಳ ಸಂಸ್ಕಾರಗಳಾಗಲು ಪ್ರಾರಂಭವಾಗುತ್ತವೆ. ಕಲಿಯುವ ವೃತ್ತಿ ಇರುವ ಸಾಧಕನು ಎಂದಿಗೂ ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕಲು ಸಾಧ್ಯವಿಲ್ಲ. ಪ್ರತಿಯೊಂದು ಸಾಧನೆಯ ಪ್ರಕಾರವನ್ನು (ನಾಮಜಪ, ಸೇವೆ, ತ್ಯಾಗ ಇತ್ಯಾದಿ) ಕೇಳಿ ಮತ್ತು ಅದರ ವರದಿಯನ್ನು ನೀಡಿ ಮಾಡುವ ಸಾಧಕನ ಮನಸ್ಸಿನಲ್ಲಿ ಆಜ್ಞಾಪಾಲನೆಯ ಗುಣವು ತಾನಾಗಿಯೇ ನಿರ್ಮಾಣ ವಾಗುತ್ತದೆ. ಈ ರೀತಿ ಸಾಧನೆಯ ಪಂಚತತ್ತ್ವಗಳ ಮೂಲಕ ಶಿಷ್ಯತ್ವಕ್ಕೆ ಪೂರಕವಾದ ಗುಣಗಳನ್ನು ಸ್ವೀಕರಿಸುವುದು ಎಂದರೆ ಮನೋಲಯ ಮಾಡಿಕೊಳ್ಳುವುದು. ಭಗವಂತನು ಅರ್ಹ ಜೀವದ ಮೇಲೆ ತಾನಾಗಿಯೇ ಕೃಪೆ ತೋರುತ್ತಾನೆ. ಆದ್ದರಿಂದ, ಶಿಷ್ಯತ್ವದ ಸಂಸ್ಕಾರಗಳನ್ನು ಹೊಂದಿರುವ ಜೀವವು ಸಹಜವಾಗಿಯೇ ಗುರುಕೃಪೆಗೆ ಪಾತ್ರವಾಗಿ ವೈಯಕ್ತಿಕ ಸ್ತರದಲ್ಲಿ ಈಶ್ವರಪ್ರಾಪ್ತಿಗಾಗಿ ಮತ್ತು ಸಮಷ್ಟಿ ಸ್ತರದಲ್ಲಿ ರಾಮರಾಜ್ಯ (ಹಿಂದೂ ರಾಷ್ಟ್ರ) ಸ್ಥಾಪನೆಗಾಗಿ ಭಗವಂತನ ಕೃಪೆಯನ್ನು ಸಂಪಾದಿಸುತ್ತದೆ.
೬. ವಿಶೇಷ ಭಕ್ತಿ ಸತ್ಸಂಗದ ಸರಣಿಯಿಂದಾಗಿ ಸಾಧಕರಿಗೆ ನಿಜವಾದ ಅರ್ಥದಲ್ಲಿ ಗುರುಕೃಪಾಯೋಗದಂತೆ ಸಾಧನೆ ಮಾಡಲು ಸಾಧ್ಯವಾಗುವುದು
ವಿಶೇಷ ಭಕ್ತಿ ಸತ್ಸಂಗದ ಮಾಲಿಕೆಯ ಮೂಲಕ ಗುರುಗಳು ಸಾಧಕರಿಗೆ ಅವರಿಂದ ಆಗುತ್ತಿರುವ ತಪ್ಪುಗಳ ಅರಿವು ಮಾಡಿಕೊಡುತ್ತಿದ್ದಾರೆ ಮತ್ತು ಪ್ರತಿಯೊಂದು ಸತ್ಸಂಗದಲ್ಲಿ ಸಾಧನೆಯ ಪಂಚಸೂತ್ರಗಳನ್ನು ಪ್ರತ್ಯಕ್ಷ ಆಚರಿಸುವ ಗುರಿಯನ್ನು ನೀಡಿ, ಸಾಧಕರಿಂದ ನಿಜವಾದ ಅರ್ಥದಲ್ಲಿ ಗುರುಕೃಪಾಯೋಗದಂತೆ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸಾಧಕರು ಕೃತಜ್ಞತಾಭಾವದಲ್ಲಿ ಇರಬೇಕು ಮತ್ತು ಭಕ್ತಿ ಸತ್ಸಂಗದಲ್ಲಿ ಹೇಳಿದ ಗುರಿಯನ್ನು ಆಚರಣೆಯಲ್ಲಿ ತರುವುದು ಆವಶ್ಯಕವಾಗಿದೆ.
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರೆತ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಲಭಿಸಿದ ದಿನಾಂಕ : ೧.೮.೨೦೨೫, ಸಮಯ : ಮಧ್ಯಾಹ್ನ ೧೨.೦೬)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !