ವೃಂದಾವನದಲ್ಲಿನ ಒಂದು ಗೋಶಾಲೆಯನ್ನು ನೋಡುವ ಅವಕಾಶ ಸಿಕ್ಕಿತು. ಅಲ್ಲಿನ ಒಬ್ಬ ಧರ್ಮಭಕ್ತ ಕಾರ್ಯಕರ್ತನಿಗೆ ನಾನು ಕೇಳಿದೆ, “ಮಹಾರಾಜರೆ, ಈ ಹಸುಗಳ ಭವಿಷ್ಯವೇನು ? ಅವು ಗೋಶಾಲೆಯಲ್ಲಿ ಉಪವಾಸವಿದ್ದರೂ ಪ್ರಸನ್ನವಾಗಿವೆಯೇ ? ಅಥವಾ ಕಟುಕನ ಚೂರಿಗೆ ಬಲಿಯಾಗಿ ಅವು ಮುಕ್ತವಾಗಲು ಇಚ್ಛಿಸುತ್ತವೆಯೆ ?” ಹಸುಗಳ ಈ ಅವಸ್ಥೆಯನ್ನು ನೋಡಿ ನನ್ನ ಮನಸ್ಸು ಖಿನ್ನವಾಯಿತು.

೧. ಹಸುವಿನ ಹಾಲಿನ ವಿಷಯದಲ್ಲಿ
ನಿಜವಾಗಿ ನೋಡಿದರೆ ಹಸುವಿನ ಹತ್ಯೆ ಮಾಡುವುದು ಒಂದು ದೊಡ್ಡ ಅಪರಾಧವಾಗಿದೆ; ಆದರೆ ಅದಕ್ಕಿಂತಲೂ ಅದನ್ನು ಉಪವಾಸವಿಡುವುದು ಮಹಾಪರಾಧವಾಗಿದೆ. ನಮ್ಮ ದೇಶದ ಹಸುಗಳ ಪರಿಸ್ಥಿತಿಯನ್ನು ಸುಧಾರಿಸುವುದು ನಮ್ಮ ಪರಮಕರ್ತವ್ಯವಾಗಿದೆ. ಅದಕ್ಕೆ ದಂಟು, ಹುಲ್ಲು ಮಾತ್ರ ಕೊಡದೆ ಕೆಲವು ಪೌಷ್ಟಿಕ ಪಾದಾರ್ಥಗಳನ್ನು ಅದರ ಮೇವಿನಲ್ಲಿ ಹಾಕಬೇಕಾಗುತ್ತದೆ, ಅಂದರೆ ಅದು ನಮಗೆ ಪೌಷ್ಟಿಕ ಹಾಲನ್ನು ಪೂರೈಸುವುದು; ಏಕೆಂದರೆ, ನಮ್ಮಲ್ಲಿ ತಾಯಿಯ ಹಾಲು ಇಲ್ಲದಿದ್ದರೆ ಅಥವಾ ಕಡಿಮೆಯಿದ್ದರೂ, ಮಗುವಿಗೆ ಹಸುವಿನ ಹಾಲನ್ನು ಕೊಡಲಾಗುತ್ತದೆ. ನಿಜವಾಗಿ ನೋಡಿದರೆ ಅದರ ಹಾಲಿನ ಮೊದಲ ಅಧಿಕಾರ ಅದರ ಕರುವಿನದ್ದಾಗಿರುತ್ತದೆ. ಆ ಕರುವಿಗೆ ಒಳ್ಳೆಯ ಹಾಲು ಸಿಕ್ಕಿದರೆ ಮುಂದೆ ಆ ಕರುವು ಸಮಾಜೋಪಯೋಗಿಯಾಗಬಹುದು; ಏಕೆಂದರೆ ಹಸುವಿನ ಹಾಲು ಜೀರ್ಣವಾಗಲು ಸುಲಭವಾಗಿರುತ್ತದೆ. ಅದನ್ನು ಸೇವಿಸಿದರೆ ನಮ್ಮ ಮುಂದಿನ ಪೀಳಿಗೆ ದಷ್ಟಪುಷ್ಟವಾಗಲು ಸಹಾಯವಾಗಬಹುದು.
೨. ಗೋಶಾಲೆಯಿಂದ ಆರ್ಥಿಕ ಉತ್ಪನ್ನ ಚೆನ್ನಾಗಿ ದೊರೆತು ಪರಿಸ್ಥಿತಿ ಸುಧಾರಿಸಬಹುದು !
ಹಸುವಿನ ಹಾಲಿನ ಉತ್ಪನ್ನ ತುಂಬಾ ಹೆಚ್ಚಾದರೆ ನಮ್ಮ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗಬಹುದು. ಅದರ ಗೋಮೂತ್ರ ಮತ್ತು ಸೆಗಣಿ ಕೂಡ ಕೃಷಿಗಾಗಿ ಉಪಯೋಗವಾಗುತ್ತದೆ ! ವೃಂದಾವನ ಗೋಶಾಲೆಯನ್ನು ಬಿಟ್ಟರೆ, ಇತರ ಎಲ್ಲ ಗೋ ಶಾಲೆಯಲ್ಲಿ ಈ ರೀತಿಯಲ್ಲಿ ಹಸುಗಳ ಪಾಲನೆ ಪೋಷಣೆ ಆಗುವುದಿಲ್ಲ, ಇದರ ಬಗ್ಗೆ ದುಃಖವೆನಿಸುತ್ತದೆ. ವೃಂದಾವನದ ಗೋಶಾಲೆಯ ಹೊರತು ಉಳಿದ ಎಲ್ಲ ಗೋಶಾಲೆಗಳು ಚಿಂತಾ ಜನಕ ಸ್ಥಿತಿಯಲ್ಲಿವೆ. ಹರ್ಯಾಣಾದಲ್ಲಿ ೨-೩ ಗೋಶಾಲೆಗಳು ಚೆನ್ನಾಗಿ ಕಾಣಿಸಿದವು. ವಿಶೇಷವೆಂದರೆ, ಅಲ್ಲಿ ಸ್ತ್ರೀಯರು ಹಸುವನ್ನು ‘ಗೋಮಾತೆ’ ಎಂದು ತಿಳಿದು ದೇಶದ ಹಿತಕ್ಕಾಗಿ ಒಳ್ಳೆಯ ರೀತಿಯಲ್ಲಿ ಅವುಗಳ ಕಾಳಜಿ ವಹಿಸುತ್ತಾರೆ. ಅದರಿಂದ ಅವರು ಒಳ್ಳೆಯ ಆರ್ಥಿಕ ಉತ್ಪನ್ನವನ್ನೂ ಗಳಿಸುತ್ತಾರೆ. ಹೆಚ್ಚೆಚ್ಚು ಜನರು ಹಸುವಿನ ಬಗ್ಗೆ ಹೀಗೆ ವಿಚಾರ ಮಾಡಿದರೆ, ದೇಶದ ಹಾಗೂ ಇದನ್ನು ಮಾಡುವವರ ಆರ್ಥಿಕ ಸ್ಥಿತಿ ಸುಧಾರಣೆಯಾಗಬಹುದು.
೩. ಹರ್ಯಾಣಾ ಮತ್ತು ಗುಜರಾತ ಈ ರಾಜ್ಯಗಳು ಗೋಪಾಲನೆಯಲ್ಲಿ ಮುಂಚೂಣಿಯಲ್ಲಿ ಇವೆ !
ಇಂದು ನಾವು ಗೋಸೇವೆಯನ್ನು ಗೋಶಾಲೆಗಳಲ್ಲಿ, ರೈತರಲ್ಲಿ ಮತ್ತು ವೈಯಕ್ತಿಕ ವ್ಯಕ್ತಿಗಳಲ್ಲಿ ನೋಡುತ್ತೇವೆ. ಸಣ್ಣ ಮಕ್ಕಳಿಗಾಗಿ ಗೋಪಾಲನೆ ಮಾಡುವವರು ಹೆಚ್ಚು ಪ್ರಮಾಣದಲ್ಲಿ ಅವುಗಳ ಕಾಳಜಿ ವಹಿಸುತ್ತಾರೆ. ಅವುಗಳಿಗೆ ಪೌಷ್ಟಿಕ ಆಹಾರ ನೀಡುತ್ತಾರೆ. ಇದರಿಂದ ಅವುಗಳ ಹಾಲು ಕೂಡ ಒಳ್ಳೆಯ ಗುಣಮಟ್ಟದ್ದಾಗಿರುತ್ತದೆ. ನನ್ನ ಅನುಭವಕ್ಕನುಸಾರ ಹರ್ಯಾಣಾದ ನಂತರ ಗುಜರಾತದ ಸರದಿ ಬರುತ್ತದೆ. ಇಲ್ಲಿನ ಯುವಕ-ಯುವತಿಯರು ಈ ಗೋಪಾಲನೆಯ ತರಬೇತಿ ಪಡೆದು ಮನೆಯಲ್ಲಿ ಅದೇ ವ್ಯವಸಾಯ ಮಾಡುತ್ತಾರೆ.
ಹಸುಗಳಿಗೆ ಉಳಿದುಕೊಳ್ಳಲು ಸ್ವಚ್ಛವಾದ ಸ್ಥಳ, ಕುಡಿಯಲು ಸಾಕಷ್ಟು ನೀರಿನ ಜೊತೆಗೆ ಹತ್ತಿಯ ಕಾಳು, ಹಸಿರು ಹುಲ್ಲಿನ ಮೇವು ಇತ್ಯಾದಿಗಳ ವ್ಯವಸ್ಥೆ ಕೂಡ ಮಾಡಬೇಕು. ಗುಜರಾತನ ಜನರು ತಮ್ಮ ಸಂಬಂಧಿಕರನ್ನೂ ಇದರಲ್ಲಿ ಜೋಡಿಸಿಕೊಳ್ಳುತ್ತಾರೆ. ಅವರು ತಮ್ಮೊಂದಿಗೆ ತಮ್ಮ ಸಂಬಂಧಿಕರ ಹಿತವನ್ನೂ ಸಾಧಿಸುತ್ತಾರೆ. ನೌಕರಿಯ ಹಿಂದೆ ಹೋಗದೆ ಶ್ರಮಪಟ್ಟು ಹಣಸಂಪಾದಿಸುವ ಆತ್ಮಬಲ ಆವರಲ್ಲಿರುತ್ತದೆ. ಹರ್ಯಾಣದಂತೆಯೆ ಗುಜರಾತ ರಾಜ್ಯವೂ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ.
೪. ವೃಂದಾವನದಲ್ಲಿ ಹಸುಗಳ ವಿಷಯದಲ್ಲಿ ನಡೆಯುವ ಕಾರ್ಯ
ನಮ್ಮ ಧಾರ್ಮಿಕ ಭಾವನೆಗನುಸಾರ ವೃಂದಾವನದಲ್ಲಿ ಅನೇಕ ಜನರು ತಮ್ಮ ಇಚ್ಛಾಪೂರ್ತಿಯಾದರೆ, ಬಾಕೆ ಬಿಹಾರಿಗೆ ಹಸುವನ್ನು ದಾನ ಮಾಡುತ್ತಾರೆ. ವೃಂದಾವನದಲ್ಲಿ ವಿಶೇಷವಾಗಿ ಒಳ್ಳೆಯ ವಂಶದ ಹಸುಗಳನ್ನು ಖರೀದಿ ಮಾಡಲಾಗುತ್ತದೆ. ಅದರ ಕಾರಣವೆಂದರೆ ಆ ಹಸುಗಳು ಹೆಚ್ಚು ಹಾಲು ಕೊಡುತ್ತವೆ, ಆದರೆ ಆ ಹಾಲಿನಲ್ಲಿ ಪೌಷ್ಟಿಕತೆ ಕಡಿಮೆಯಿರುತ್ತದೆ. ಕೆಲವು ದಾನಿಗಳು ಗೋಶಾಲೆಯಲ್ಲಿನ ಹಸುಗಳನ್ನು ಖರೀದಿಸಿ ದಾನ ಮಾಡುತ್ತಾರೆ; ಆದರೆ ಆ ‘ದಾನ ನೀಡಿದ ಹಸುಗಳು ಕೂಡ ಆರೋಗ್ಯದಿಂದ ಇರಬೇಕು’, ಎನ್ನುವ ವಿಚಾರ ದಾನಿಗಳಲ್ಲಿರಬೇಕು. ಭಗವಾನ ಶ್ರೀಕೃಷ್ಣ ಸ್ವತಃ ಹಸುಗಳ ಪೂಜೆಯನ್ನು ಮಾಡಿದ್ದಾನೆ. ಹಸುಗಳನ್ನು ಮೇಯಿಸಲು ಒಯ್ಯುವುದು ಹಾಗೂ ಕೊಳಲು ಊದುವುದು, ಇದು ಶ್ರೀಕೃಷ್ಣನ ನಿತ್ಯ ನಿಯಮವಾಗಿತ್ತು. ಹಸುಗಳ ಜೊತೆಗೆ ಅಡವಿಯಲ್ಲಿ ನಡೆಯುವಾಗ ಅವನ ಕಾಲಿಗೆ ಮುಳ್ಳುಗಳು ಚುಚ್ಚುತ್ತಿರಲಿಲ್ಲ, ಅವನು ಹಸುಗಳ ಕಾಲಿನ ಧೂಳನ್ನು ತನ್ನ ಹಣೆಗೆ ಹಚ್ಚಿಕೊಳ್ಳುತ್ತಿದ್ದನು. ಏಕೆಂದರೆ ಹಸುಗಳ ಶರೀರದಲ್ಲಿ ‘೩೩ ಕೋಟಿ ದೇವತೆಗಳ ವಾಸವಿದೆ’, ಎನ್ನುವುದು ನಮ್ಮ ಶ್ರದ್ಧೆಯಾಗಿದೆ. ವೃಂದಾವನದಲ್ಲಿ ಇಂತಹ ಒಳ್ಳೆಯ ಕಾರ್ಯ ನಡೆಯುತ್ತಿದೆ. ಈ ಹಸುಗಳ ಉಪಯೋಗ ಹಾಗೂ ಅವುಗಳಿಂದ ಸಿಗುವ ಆರ್ಥಿಕ ಲಾಭವನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
೫. ದೇಶ ಮೊದಲಿನಂತೆ ‘ಸುಜಲಾಮ್ ಸುಫಲಾಮ್’ಆಗಲು…
ಇಂದು ನಮ್ಮ ರೈತರು ಇದರತ್ತ ಗಮನ ಹರಿಸಿದರೆ, ಭಾರತ ಭವಿಷ್ಯದಲ್ಲಿ ಸಂಪದ್ಭರಿತವಾಗಲು ತಡವಾಗದು. ಇಂದು ರೈತರು ‘ಟ್ರಾಕ್ಟರ್’ನಿಂದ ಬೇಸಾಯ ಮಾಡಲು ಆರಂಭಿಸಿದ್ದಾರೆ. ಅದೇ ರೀತಿ ಹೊಲದಲ್ಲಿ ಗೊಬ್ಬರವೆಂದು ಹೆಚ್ಚು ಪ್ರಮಾಣದಲ್ಲಿ ‘ಯುರಿಯಾ’ ಉಪಯೋಗಿಸಲಾಗುತ್ತದೆ. ಅದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ, ಅದರ ಪರಿಣಾಮದಿಂದ ಭೂಮಿ ಬಂಜರು ಭೂಮಿಯಾಗುತ್ತದೆ. ಬೆಳೆ ಕಡಿಮೆಯಾಗುತ್ತದೆ ಹಾಗೂ ರೈತರು ಆರ್ಥಿಕದೃಷ್ಟಿಯಲ್ಲಿ ಕುಸಿಯುತ್ತಾರೆ. ಎಲ್ಲ ರೀತಿಯ ನಾಟಕ ಮಾಡಬಹುದು, ಆದರೆ ಹಣದ ಬಗ್ಗೆ ನಾಟಕವಾಡಲು ಸಾಧ್ಯವಿಲ್ಲ. ರೈತರು ಸುಖಸಂಪನ್ನರಾಗಬೇಕಾದರೆ ಹಾಗೂ ಹಿಂದಿನಂತೆ ಒಳ್ಳೆಯ ದಿನವನ್ನು ನೋಡಬೇಕಾದರೆ ಅವರು ಹಿಂದಿನಂತೆಯ ಗೋಪಾಲನೆ ಮಾಡಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪದ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ. ಹೀಗೆ ಮಾಡಿದರೆ ಮಾತ್ರ ದೇಶ ಮೊದಲಿನಂತೆ ‘ಸುಜಲಾಮ್ ಸುಫಲಾಮ್’ ಆಗುವುದು. ಒಳ್ಳೆಯ ತಳಿಯ ಗೂಳಿಯನ್ನು (ಗೋವಂಶದ ಒಂದು ತಳಿ) ಸಾಕಬೇಕು, ಅಂದರೆ ಹಸುವಿನಿಂದಾಗುವ ಸಂತತಿ ದಷ್ಟಪುಷ್ಟವಾಗುವುದು. ಪ್ರತಿಯೊಬ್ಬರೂ ಈ ಕಾರ್ಯವನ್ನು ಮಾಡುವವರಿಗೆ ಸಹಕರಿಸಿದರೆ ಹಾಗೂ ಹಸುವಿಗೆ ಒಳ್ಳೆಯ ಆಹಾರ ನೀಡಿದರೆ, ಮುಕ್ತ ವಾತಾವರಣದಲ್ಲಿ ತಿರುಗಾಡಿಸಿದರೆ, ಅದು ಆನಂದವಾಗಿರುವುದು ಹಾಗೂ ಆರೋಗ್ಯಸಂಪನ್ನವಾಗುವುದು. ಹಸುವಿಗೆ ಕೇವಲ ನಮಸ್ಕಾರ ಮಾಡಿದರೆ ಸಾಲದು, ಅದಕ್ಕೆ, ತನು, ಮನ, ಧನದಿಂದ ಸೇವೆ ಮಾಡಿ ನಮ್ಮ ಕುಟುಂಬ ಮತ್ತು ದೇಶದ ಭವಿಷ್ಯವನ್ನು ಸುಧಾರಿಸೋಣ !’
– ಡಾ. ವನಮಾಲಾ ಕ್ಷೀರಸಾಗರ, ನಾಗಪುರ (ಆಧಾರ : ತ್ರೈಮಾಸಿಕ ‘ಪ್ರಜ್ಞಾಲೋಕ’, ಅಕ್ಟೋಬರದಿಂದ ಡಿಸೆಂಬರ ೨೦೨೩)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು