
ನನ್ನ ಓರ್ವ ಸಂಬಂಧಿಕರು ಅವರ ಹುಟ್ಟುಹಬ್ಬದ ಒಂದು ಛಾಯಾಚಿತ್ರವನ್ನು ಇನ್ನೊಬ್ಬ ಸಂಬಂಧಿಕರಿಗೆ ಕಳುಹಿಸಿದ್ದರು. ಇನ್ನೊಬ್ಬ ಸಂಬಂಧಿಕರು ಅದನ್ನು ನನಗೆ ತೋರಿಸಿದರು. ಅದರಲ್ಲಿ ಮೊದಲನೇ ಸಂಬಂಧಿಕರ ಮುಖದ ಮೇಲೆ ಅವನ ಗೆಳೆಯರು ಕೇಕ್ ಮೆತ್ತಿರುವುದು ಕಾಣಿಸುತ್ತಿತ್ತು ಮತ್ತು ಅವರ ಮುಖದ ಮೇಲೆ ಕೇಕ್‌ನ ದೊಡ್ಡ ತುಂಡುಗಳು ಕಾಣಿಸುತ್ತಿದ್ದವು.

ಅದನ್ನು ನೋಡಿ ನಾನು, “ಈ ರೀತಿ ಆಹಾರದ ದುರುಪಯೋಗವನ್ನು ಮಾಡುವುದು ತಪ್ಪಾಗಿದೆ. ನಾವು ತಿಳಿಸಬೇಕು” ಎಂದು ಹೇಳಿದೆನು. ಅದಕ್ಕೆ ಇನ್ನೊಬ್ಬ ಸಂಬಂಧಿಕರು, “ಇತ್ತೀಚೆಗೆ ಹೀಗೆಯೇ ಮಾಡುತ್ತಾರೆ” ಎಂದು ಹೇಳಿದರು. ಇದರಿಂದ ಇತ್ತೀಚೆಗೆ ಹುಟ್ಟುಹಬ್ಬವನ್ನು ಆಚರಿಸುವಾಗ ಈ ರೀತಿ ಕೇಕ್‌ಅನ್ನು ಮುಖಕ್ಕೆ ಮೆತ್ತುವ ಪದ್ಧತಿಯಾಗಿದೆ, ಎಂದು ಅನಿಸುತ್ತದೆ. ನಿಜ ಹೇಳುವುದಾದರೆ ಈ ರೀತಿ ಮಾಡುವುದು ತಪ್ಪು; ಏಕೆಂದರೆ ಮೂಲತಃ ನಿಸರ್ಗವು ಯಾವ ವಸ್ತುಗಳನ್ನು ಯಾವ ಕಾರಣಕ್ಕಾಗಿ ನೀಡಿದೆಯೋ, ಆ ಕಾರಣಕ್ಕಾಗಿಯೇ ಅವುಗಳನ್ನು ಬಳಸುವುದು ಶ್ರೇಯಸ್ಕರವಾಗಿದೆ. ಕೆಲವು ಧಾರ್ಮಿಕ ವಿಧಿಗಳಲ್ಲಿ ಆಹಾರದ ಬಳಕೆಯನ್ನು ಹೊರತುಪಡಿಸಿದರೆ ಆಹಾರವು ಸೇವನೆಗಾಗಿ ಮತ್ತು ಪೋಷಣೆಗಾಗಿಯೇ ಆಗಿದೆ. ಅದನ್ನು ಈ ರೀತಿ ವ್ಯರ್ಥ ಮಾಡುವುದು ತಪ್ಪು. ಕೆಲವರಿಗೆ, ‘ನಾವು ಹಣವನ್ನು ಕೊಟ್ಟು ಖರೀದಿ ಮಾಡುತ್ತೇವೆ. ಆಗ ಅದನ್ನು ನಾವು ಏನಾದರೂ ಮಾಡಿದರೆ ಏನು ದೊಡ್ಡ ವಿಷಯ ?’, ಎಂದು ಅನಿಸುತ್ತದೆ. ಈ ದೃಷ್ಟಿಕೋನವು ತಪ್ಪಾಗಿದೆ. ಹಣವು ಮಾನವನು ನಿರ್ಮಾಣ ಮಾಡಿದ ಕೃತಕ ವ್ಯವಸ್ಥೆಯಾಗಿದೆ. ಅದನ್ನು ನಾವು ವ್ಯವಹಾರಕ್ಕಾಗಿ ಬಳಸುತ್ತೇವೆ ಮತ್ತು ವಸ್ತುಗಳನ್ನು ಖರೀದಿಸುತ್ತೇವೆ. ರೈತನು ಎಲ್ಲರಿಗಾಗಿ ಹೊಲದಲ್ಲಿ ಶ್ರಮಪಟ್ಟು ದುಡಿದು ಧಾನ್ಯ ಬೆಳೆಸುತ್ತಾನೆ ! ಹೀಗಿದ್ದರೂ, ಆ ಬೀಜಗಳನ್ನು ಅವನು ತಯಾರಿಸುವುದಿಲ್ಲ. ಮೂಲತಃ ಆ ಬೀಜಗಳನ್ನು ಮತ್ತು ಭೂಮಿ, ನೀರು ಮುಂತಾದ ಧಾನ್ಯಗಳನ್ನು ಬೆಳೆಯಲು ಆವಶ್ಯಕವಾಗಿರುವ ಘಟಕಗಳು ನಿಸರ್ಗವೇ ಕೊಡುತ್ತದೆ. ಹೀಗಿರುವಾಗ ಯಾವ ವಸ್ತುಗಳು ಮನುಷ್ಯನು ನಿರ್ಮಾಣ ಮಾಡಲು ಸಾಧ್ಯವಿಲ್ಲವೋ, ನಾವು ಅದರ ಬೆಲೆಯನ್ನು ಕಟ್ಟಲು ಸಾಧ್ಯವಿದೆಯೇ ? ಇದರೊಂದಿಗೆ ಯುವ ಪೀಳಿಗೆಯೂ ಗಮನದಲ್ಲಿಡಬೇಕಾದ ಅಂಶವೆಂದರೆ, ಕೆಲವು ದಶಕಗಳ ಹಿಂದೆ ಭಾರತದಲ್ಲಿ ಆಹಾರಸಂಗ್ರಹದ ಸ್ಥಿತಿ ಹೇಗಿತ್ತೆಂದರೆ, ಗೋದಿ ಸಾಗಿಸುವ ಹಡಗು ಮುಂಬೈ ಬಂದರಿಗೆ ಬಂದಾಗ, ಗೋದಿ ಪಡಿತರಕ್ಕೆ ಸಿಗುತ್ತಿತ್ತು. (ವೈಯಕ್ತಿಕವಾಗಿ ನಾನು ಸ್ವತಃ ಪಡಿತರಕ್ಕೆ ಹೋಗಿ ಗೋದಿ ಬಂದಿದೆಯೇ ? ಎಂದು ನೋಡಲು ಮೊದಲು ಖಚಿತಪಡಿಸಲು ಹೋಗುತ್ತಿದ್ದೆನು ಮತ್ತು ಗೋದಿ ಬಂದಿರುವುದು ಗೊತ್ತಾದರೆ, ಅಂದು ಪಡಿತರದ ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದೆನು.) ಅಂದಿನ ಭಾರತದ ಪ್ರಧಾನಮಂತ್ರಿಯು ಆ ಕಾಲದಲ್ಲಿ ‘ನಮಗೆ ರಿಯಾಯತಿಯ ದರದಲ್ಲಿ ಗೋದಿಯನ್ನು ಕೊಡಿ’, ಎಂದು ಅಮೇರಿಕದ ಬಳಿ ಹೇಳಲು ಹೋದರೆ, ‘ನ್ಯೂಯಾರ್ಕ ಟೈಮ್ಸ್’ ಈ ಪತ್ರಿಕೆಯು ಅಂದು ‘ಭಿಕ್ಷಾ ಪಾತ್ರೆ ಹಿಡಿದು ಬಂದ ಪ್ರಧಾನಿ’, ! ಎಂಬ ತಲೆಬರಹ ಕೊಟ್ಟಿತ್ತು. (೨೬.೩.೨೦೨೪)
– ಆಧುನಿಕ ವೈದ್ಯ ದುರ್ಗೇಶ ಸಾಮಂತ, ಸನಾತನ ಆಶ್ರಮ, ರಾಮನಾಥಿ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು