ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಸಂಸತ್ತಿನಲ್ಲಿನ ಆರೋಪ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಮೆರಿಕವು ತನ್ನ ಸ್ವಂತ ಲಾಭಕ್ಕಾಗಿ ಪಾಕಿಸ್ತಾನವನ್ನು ಬಳಸಿಕೊಂಡಿತು ಮತ್ತು ಕೆಲಸ ಮುಗಿದ ನಂತರ ಅದನ್ನು ‘ಟಾಯ್ಲೆಟ್ ಪೇಪರ್’ ನಂತೆ ಎಸೆದಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಸಂಸತ್ತಿನಲ್ಲಿ ಆರೋಪಿಸಿದ್ದಾರೆ.
ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದೇನು?
1. ಪಾಕಿಸ್ತಾನವು ತನ್ನದಲ್ಲದ ಎರಡು ಯುದ್ಧಗಳಲ್ಲಿ ಭಾಗವಹಿಸಿತು. ಅವು ಮಹಾಶಕ್ತಿಗಳ ನಡುವಿನ ಯುದ್ಧಗಳಾಗಿದ್ದವು. 1979ರಲ್ಲಿ ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದಲ್ಲಿ ಹಸ್ತಕ್ಷೇಪ ಮಾಡಿತ್ತು. ರಷ್ಯಾ ಈ ಕ್ರಮವನ್ನು ಅಫ್ಘಾನ್ ಸರಕಾರದ ಆಹ್ವಾನದ ಮೇರೆಗೆ ಕೈಗೊಂಡಿತ್ತು; ಆದರೆ ಅಮೆರಿಕ ಇದನ್ನು ನೇರ ಆಕ್ರಮಣ ಎಂದು ಬಿಂಬಿಸಿ ತನ್ನದೇ ಆದ ರೀತಿಯಲ್ಲಿ ಕಥೆಯನ್ನು ಸೃಷ್ಟಿಸಿತು.
2. ನಾವು ಅಫ್ಘಾನಿಸ್ತಾನದ ಭೂಮಿಯಲ್ಲಿ ನಡೆದ ಎರಡು ಯುದ್ಧಗಳಲ್ಲಿ ಹೋರಾಡಿದೆವು. ನಾವು ಇಸ್ಲಾಂ ಮತ್ತು ಧರ್ಮದ ಹೆಸರಿನಲ್ಲಿ ಇದರಲ್ಲಿ ಭಾಗವಹಿಸಿದೆವು; ಆದರೆ ವಾಸ್ತವವಾಗಿ ಇಬ್ಬರು ಸೇನಾ ಸರ್ವಾಧಿಕಾರಿಗಳು (ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್) ಜಾಗತಿಕ ಶಕ್ತಿಯ ಬೆಂಬಲ ಪಡೆಯಲು ಹೀಗೆ ಮಾಡಿದ್ದರು.
3. ಅಮೆರಿಕದ ಪರವಾಗಿ ನಿಂತಿದ್ದಕ್ಕೆ ಪಾಕಿಸ್ತಾನ ಇಂದಿಗೂ ಬೆಲೆ ತೆರುತ್ತಿದೆ!
ಸೆಪ್ಟೆಂಬರ್ 11, 2001 ರಂದು ಅಮೆರಿಕದ ಮೇಲೆ ನಡೆದ ದಾಳಿಯ ನಂತರ, ಅಮೆರಿಕದ ಪರವಾಗಿ ನಿಂತಿದ್ದಕ್ಕೆ ಪಾಕಿಸ್ತಾನ ಇಂದಿಗೂ ಬೆಲೆ ತೆರುತ್ತಿದೆ. ಪಾಕಿಸ್ತಾನ ಇತಿಹಾಸದಿಂದ ಪಾಠ ಕಲಿಯಲಿಲ್ಲ ಮತ್ತು ಸಣ್ಣ ಲಾಭಕ್ಕಾಗಿ ಒಮ್ಮೆ ಅಮೆರಿಕ, ಒಮ್ಮೆ ರಷ್ಯಾ ಮತ್ತು ಇನ್ನೊಮ್ಮೆ ಬ್ರಿಟನ್ ಕಡೆಗೆ ವಾಲುತ್ತಾ ಬಂದಿದೆ. ಇಂದು ಈ ದೇಶಗಳ ಪ್ರಭಾವ 30-40 ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಹೆಚ್ಚಾಗಿದೆ.
4. ಅಫ್ಘಾನಿಸ್ತಾನದ ಎರಡು ಯುದ್ಧಗಳಲ್ಲಿ ಭಾಗವಹಿಸಿದ್ದು ಪಾಕಿಸ್ತಾನದ ದೊಡ್ಡ ತಪ್ಪಾಗಿತ್ತು. ಇಂದು ದೇಶದಲ್ಲಿ ಇರುವ ಭಯೋತ್ಪಾದನೆಯು ಅದೇ ತಪ್ಪುಗಳ ಫಲಿತಾಂಶವಾಗಿದೆ.
5. ಇಂದಿನ ಪಾಕಿಸ್ತಾನದ ಭಯೋತ್ಪಾದನೆಯು ಸರ್ವಾಧಿಕಾರಿಗಳ ತಪ್ಪುಗಳ ಪರಿಣಾಮ!
ನಾವು ನಮ್ಮ ಇತಿಹಾಸ ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಇಂದಿನ ಭಯೋತ್ಪಾದನೆಯು ಅಂದಿನ ಸರ್ವಾಧಿಕಾರಿಗಳ ತಪ್ಪುಗಳ ಪರಿಣಾಮವಾಗಿದೆ. ಪಾಕಿಸ್ತಾನಕ್ಕೆ ಉಂಟಾದ ಹಾನಿಯನ್ನು ಎಂದಿಗೂ ತುಂಬಿಕೊಡಲು ಸಾಧ್ಯವಿಲ್ಲ. ಈ ಯುದ್ಧಗಳನ್ನು ಸಮರ್ಥಿಸಿಕೊಳ್ಳಲು ಪಾಕಿಸ್ತಾನದ ಶಿಕ್ಷಣ ವ್ಯವಸ್ಥೆಯಲ್ಲಿ ಉದ್ದೇಶಪೂರ್ವಕವಾಗಿ ಬದಲಾವಣೆಗಳನ್ನು ಮಾಡಲಾಗಿತ್ತು. ಆ ಬದಲಾವಣೆಗಳು ಇಂದಿಗೂ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿವೆ.
ಸಂಪಾದಕೀಯ ನಿಲುವುಒಂದು ಕಡೆ ಪಾಕಿಸ್ತಾನದ ಸಚಿವರು ಸಂಸತ್ತಿನಲ್ಲಿ ಹೀಗೆ ಹೇಳುತ್ತಾರೆ, ಇನ್ನೊಂದು ಕಡೆ ಅವರ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರು ಅಮೆರಿಕದ ಮುಂದೆ ಮಂಡಿಯೂರುತ್ತಿದ್ದಾರೆ! ಇದರ ಬಗ್ಗೆ ಆಸಿಫ್ ಏಕೆ ಮಾತನಾಡುವುದಿಲ್ಲ? |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು