|

ವಾರ್ಸಾ (ಪೋಲೆಂಡ್) – ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗದಂತೆ ತಡೆದರು. 2022 ರ ಕೊನೆಯಲ್ಲಿ ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮಾತುಕತೆ ನಡೆಸಿದ್ದರು. ಈ ಚರ್ಚೆಯಲ್ಲಿ ಉಕ್ರೇನ್ ನಲ್ಲಿ ಅಣ್ವಸ್ತ್ರಗಳ ಬಳಕೆಯನ್ನು ತಪ್ಪಿಸಲು ಮೋದಿ ಅವರು ರಷ್ಯಾದ ಮನವೊಲಿಸಿದ್ದರು. ಇದು ಪ್ರಧಾನಿ ಮೋದಿ ಅವರ ಸಕಾರಾತ್ಮಕ ಮತ್ತು ಜವಾಬ್ದಾರಿಯುತ ಜಾಗತಿಕ ಭೂಮಿಕೆಗೆ ಉದಾಹರಣೆಯಾಗಿದೆ ಎಂದು ಪೋಲೆಂಡ್ ನ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಬಾರ್ಟೋಶೆವ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
PM Narendra Modi's influence prevented a nuclear strike by Russia on Ukraine! 🇮🇳🇷🇺🇺🇦
Władysław Bartoszewski, Poland's Deputy Foreign Minister, highlights India's rising stature, stating that Poland views India as a "responsible global power." 🌍💪#RussiaUkraineWar pic.twitter.com/SUEuCCAU1u
— Sanatan Prabhat (@SanatanPrabhat) February 7, 2026
ಬಾರ್ಟೋಶೆವ್ಸ್ಕಿ ಅವರು …,
೧. ಇಂದು ಭಾರತವು ಜಗತ್ತಿನಲ್ಲಿ ನಿರ್ವಹಿಸುತ್ತಿರುವ ಭೂಮಿಕೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಪೋಲೆಂಡ್ ಭಾರತದೊಂದಿಗಿನ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ ಮತ್ತು ಭಾರತವನ್ನು ಒಂದು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ನೋಡುತ್ತದೆ.
೨. ಭಾರತವು ಅಮೆರಿಕದೊಂದಿಗೆ ಇತರ ದೇಶಗಳಿಗಿಂತ ಹೆಚ್ಚು ಲಾಭದಾಯಕ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ. ಭಾರತವು ಅತ್ಯಂತ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಒಟ್ಟು ದೇಶೀಯ ಉತ್ಪನ್ನದ ವಿಷಯದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದ್ದು, ಶೀಘ್ರದಲ್ಲೇ ಮೂರನೇ ಸ್ಥಾನಕ್ಕೆ ತಲುಪುವ ಗುರಿಯನ್ನು ಪ್ರಧಾನಿ ಮೋದಿ ಅವರ ನೇತೃತ್ವದ ಸರಕಾರ ಸ್ಪಷ್ಟಪಡಿಸಿದೆ. ಅಂದಾಜು ಒಂದೂವರೆ ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತವು ದೊಡ್ಡ ಮತ್ತು ಮುಂದುವರಿದ ಮಾರುಕಟ್ಟೆಯಾಗಿದೆ. ಆದ್ದರಿಂದ ಇಂತಹ ಸಾಮರ್ಥ್ಯವಿರುವ ದೇಶವನ್ನು ನಿರ್ಲಕ್ಷಿಸುವುದು ಜಾಣತನವಲ್ಲ.
೩. ಭಾರತದೊಂದಿಗೆ ನಮ್ಮ ಸಂಬಂಧಗಳು ಅತ್ಯಂತ ಉತ್ತಮವಾಗಿವೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !