
ಹೀಗೆಹೇಳಲಾಗುತ್ತದೆ, ‘ಈ ಜಗತ್ತಿನಲ್ಲಿ ಒಬ್ಬನೇ ಒಬ್ಬ ದೇವರು, ಅಂದರೆ ಭಗವಾನ ಶಿವನು, ಪೃಥ್ವಿಯಲ್ಲಿ ತನ್ನ ವಾಸ್ತವ್ಯವನ್ನು ಉಳಿಸಿಕೊಂಡಿದ್ದಾನೆ; ಏಕೆಂದರೆ ಪೃಥ್ವಿ ಎಂದರೆ ಮಾತಾ ದುರ್ಗೆಯ ವಾಸಸ್ಥಾನವಾಗಿದೆ ! ತನ್ನ ಪತ್ನಿಯ ಮೇಲಿನ ಪ್ರೀತಿಯಿಂದ ಭಗವಾನ ಶಿವನು ಈ ಭೂಮಿಯಲ್ಲಿ ವಾಸಿಸುತ್ತಾನೆ. ಭಗವಾನ ಮಹಾದೇವನ ಪೂಜೆಯನ್ನು ಪೃಥ್ವಿಯಲ್ಲಿ ಅವನ ಲಿಂಗದ ರೂಪದಲ್ಲಿ ಮಾಡಲಾಗುತ್ತದೆ; ಏಕೆಂದರೆ ಅವನಿಗೆ ಆ ರೀತಿಯ ಶಾಪವನ್ನು ನೀಡಲಾಗಿತ್ತು. ಆ ಶಾಪದ ಪರಿಣಾಮವೇ ಮಹಾದೇವನ ‘ಶಿವಲಿಂಗ’. ಶಿವಲಿಂಗವು ಮಹಾದೇವನ ಲಿಂಗದ ಮತ್ತು ಸೃಷ್ಟಿಯ ಯೋನಿಯ ಪ್ರತೀಕವಾಗಿದೆ. ಇದೇ ಶಿವಲಿಂಗದಿಂದ ಸಂಪೂರ್ಣ ಸೃಷ್ಟಿಯ ಪುನಃ ಪುನಃ ನಿರ್ಮಿತಿಯಾಗುತ್ತಿರುತ್ತದೆ. ಶಿವಲಿಂಗವನ್ನು ಪೂಜಿಸುವುದೆಂದರೆ ನಿಸರ್ಗ ಮತ್ತು ದೇವರನ್ನು ಪೂಜಿಸುವುದಾಗಿದೆ ! ಇದರಿಂದಲೇ ಮನುಷ್ಯನ ಕಲ್ಯಾಣವು ಸಾಧಿಸಲ್ಪಡುತ್ತದೆ.
ವಿವಿಧ ಶಿವಲಿಂಗಗಳ ಮಾಹಿತಿ ಮತ್ತು ಅವುಗಳ ಪೂಜಾ ಪದ್ಧತಿ

೧. ಕಪ್ಪು ಕಲ್ಲಿನ ಶಿವಲಿಂಗ : ಇದು ಎಲ್ಲಕ್ಕಿಂತ ಹೆಚ್ಚು ಪ್ರಚಲಿತ ಶಿವಲಿಂಗವಾಗಿದೆ. ಈ ಶಿವಲಿಂಗವು ಮುಖ್ಯವಾಗಿ ಶಿವಮಂದಿರಗಳಲ್ಲಿ ನಮಗೆ ಕಂಡುಬರುತ್ತದೆ. ಯಾವ ವ್ಯಕ್ತಿಯ ಮೇಲೆ ಶನಿಯ ಕೋಪವು ಹೆಚ್ಚಿದೆಯೋ, ಅವರು ಈ ಶಿವಲಿಂಗವನ್ನು ಪೂಜಿಸಬೇಕು. ವಿವಾಹ ನೆರವೇರದಿರುವುದು, ಸತತ ಅಪಘಾತಗಳು ಆಗುವುದು, ಹುಟ್ಟಿದ ಮಕ್ಕಳು ಬದುಕದಿರುವುದು, ಶತ್ರುಗಳ ಮೇಲೆ ವಿಜಯ ಸಾಧಿಸಲು, ದೊಡ್ಡ ಕೆಲಸಗಳನ್ನು ಪೂರ್ಣಗೊಳಿಸಲು, ಭೂತಬಾಧೆಯನ್ನು ದೂರ ಮಾಡಲು, ನಿದ್ರೆ ಬಾರದಿರುವುದು, ಹಾಗೂ ಕೆಟ್ಟ ಕನಸುಗಳು ಬೀಳಬಾರದೆಂದರೆ ಕಪ್ಪು ಕಲ್ಲಿನ ಶಿವಲಿಂಗದ ಪೂಜೆಯು ಸೂಕ್ತವಾಗಿದೆ. ಮುಖ್ಯವಾಗಿ ಕಪ್ಪು ಕಲ್ಲಿನ ಶಿವಲಿಂಗವು ಸ್ವಯಂಭೂ ಆಗಿರುತ್ತದೆ. ಇದು ಇಚ್ಛಾಪೂರ್ತಿ ಶಿವಲಿಂಗವಾಗಿರುತ್ತದೆ. ಈ ಶಿವಲಿಂಗವು ಪಿತೃದೋಷ, ನಾರಾಯಣ ನಾಗಬಲಿ ಮತ್ತು ಕಾಲಸರ್ಪ ದೋಷದಂತಹ ಮಹಾದೋಷಗಳನ್ನು ದೂರ ಮಾಡಲು ಸೂಕ್ತವಾಗಿದೆ; ಆದರೆ ಇಂತಹ ಶಿವಲಿಂಗವನ್ನು ಮನೆಯಲ್ಲಿ ಇಡುವುದು ಯೋಗ್ಯವಾಗಿಲ್ಲ. (ಆಧಾರ : ಮಾಸಿಕ ‘ಸ್ವಾಮಿ ಸಂಕೇತ’) ಅದನ್ನು ಮನೆಯಲ್ಲಿಟ್ಟರೆ. ಇದರಿಂದ ಆಕಸ್ಮಿಕ ಸಾವು, ವ್ಯಕ್ತಿಯ ಮಾನಸಿಕ ಸಮತೋಲನವು ಹಾಳಾಗುವುದು, ಮಕ್ಕಳು ತಾಯಿ-ತಂದೆಯರಿಂದ ದೂರವಾಗುವುದು, ಮೇಲಿಂದ ಮೇಲೆ ಅಪಘಾತಗಳಲ್ಲಿ ಸಾವು ಸಂಭವಿಸುವುದು ಇತ್ಯಾದಿ ಸಂಕಷ್ಟಗಳನ್ನು ಎದುರಿಸ ಬೇಕಾಗುತ್ತದೆ. ಈ ಶಿವಲಿಂಗಕ್ಕೆ ಸರಿಯಾದ ರೀತಿಯಲ್ಲಿ ಪೂಜೆ ಪುನಸ್ಕಾರಗಳಾಗುವುದು ಅವಶ್ಯಕವಾಗಿದೆ. ಈ ಶಿವಲಿಂಗವನ್ನು ಮುಖ್ಯವಾಗಿ ಮನುಷ್ಯನ ಮಹಾದೋಷಗಳನ್ನು ನಿವಾರಿಸಲು ಬಳಸಲಾಗುತ್ತದೆ.

೨. ಅಮೃತಶಿಲೆಯ (ಬಿಳಿ) ಶಿವಲಿಂಗ : ಬಿಳಿ ಶಿವಲಿಂಗ ಕೂಡ ಜನರಲ್ಲಿ ಹೆಚ್ಚು ಪ್ರಚಲಿತವಾಗಿದೆ. ‘ಈ ಶಿವಲಿಂಗವನ್ನು ಮನೆಯಲ್ಲಿ ಇಡಬೇಕು, ಯಾವುದನ್ನು ಬೇಕಾದರೂ ಇಡಬಹುದು’ ಎಂಬ ಭ್ರಮೆ ಅನೇಕ ಭಕ್ತರಲ್ಲಿ ಇರುತ್ತದೆ. ಬಿಳಿ ಶಿವಲಿಂಗವನ್ನು ಇಡುವ ಉದ್ದೇಶವೇನೆಂದರೆ, ನಮ್ಮ ಜೀವನದಲ್ಲಿ ಬಂದಿರುವ ಕೆಟ್ಟ ಘಟನೆ ಅಥವಾ ಸಂಕಷ್ಟವನ್ನು ದೂರ ಮಾಡುವುದಾಗಿದೆ. ನಮ್ಮ ಜೀವನದಲ್ಲಿ ಭಗವಾನ ಬ್ರಹ್ಮದೇವರಿಂದ ನಮಗೆ ಏನು ಬೇಕೋ, ಅದನ್ನು ಪಡೆಯಲು ನಾವು ನಮ್ಮ ಮನೆಯಲ್ಲಿ ಬಿಳಿ ಶಿವಲಿಂಗವನ್ನು ಇಟ್ಟು ಪೂಜಿಸಬಹುದು.

೩. ಬೆಳ್ಳಿಯ ಶಿವಲಿಂಗ : ಅನೇಕ ಭಕ್ತರು ಬೆಳ್ಳಿಯ ಶಿವಲಿಂಗವನ್ನು ಇಷ್ಟಪಡುತ್ತಾರೆ ಮತ್ತು ಅದನ್ನು ಪೂಜಿಸುತ್ತಾರೆ. ಈ ಶಿವಲಿಂಗದಲ್ಲಿ ಹೆಚ್ಚಿನ ಬಾರಿ ಒಂದು ದೊಡ್ಡ ದೋಷ ಕಂಡುಬರುತ್ತದೆ. ಅದು ಎಂದರೆ ಶಿವಲಿಂಗವು ಪೊಳ್ಳಾಗಿರುತ್ತದೆ. ಶಿವಲಿಂಗವು ಯಾವುದಾದರೂ ಆಗಿರಲಿ, ಅದು ಎಂದಿಗೂ ಪೊಳ್ಳಾಗಿರಬಾರದು. ಅದರಿಂದ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ. ಬೆಳ್ಳಿಯ ಶಿವಲಿಂಗದ ಉಪಯೋಗವು ನಮ್ಮ ಮನಸ್ಸಿನ ದುರ್ಬಲ ಮಾನಸಿಕತೆ ಅಥವಾ ರೋಗಗಳನ್ನು ದೂರ ಮಾಡಲು ಉಪಯುಕ್ತವಾಗಿದೆ. ಈ ಶಿವಲಿಂಗದ ಒಂದು ಕಟ್ಟುನಿಟ್ಟಾದ ನಿಯಮವಿದೆ, ಈ ಶಿವಲಿಂಗವನ್ನು ಯಾವಾಗಲೂ ಹೊಳೆಯುವಂತೆ ಮತ್ತು ತೇಜಸ್ವಿಯಾಗಿ ಇಡಬೇಕಾಗುತ್ತದೆ. ಬೆಳ್ಳಿ ಕಪ್ಪಾದರೆ ಅದನ್ನು ಅಶುಭ ಸಂಕೇತವೆಂದು ತಿಳಿಯಬೇಕು. ಅದಕ್ಕಾಗಿ ಅದರ ಸರಿಯಾದ ವಿಧಿಗಳನ್ನು ಮಾಡುವುದೂ ಅವಶ್ಯಕವಾಗಿರುತ್ತದೆ.

೪. ಹಿತ್ತಾಳೆಯ ಶಿವಲಿಂಗ : ಅತಿಹೆಚ್ಚು ಬಳಕೆಯಲ್ಲಿರುವ ಶಿವಲಿಂಗವೆಂದರೆ ಹಿತ್ತಾಳೆ ಧಾತುವಿನ ಶಿವಲಿಂಗ. ಹಿತ್ತಾಳೆಯ ಶಿವಲಿಂಗವು ಭಗವಾನ ಶಂಕರನ ಅವತಾರವಾದ ಭೈರವ ದೇವರ ನೇತೃತ್ವವನ್ನು ಹೆಚ್ಚು ಎತ್ತಿ ತೋರಿಸುತ್ತದೆ. ಈ ಶಿವಲಿಂಗವನ್ನು ನಮ್ಮ ಮನೆಯಲ್ಲಿ ಸ್ಥಾಪಿಸುವುದೆಂದರೆ, ನಮ್ಮ ಮನೆಯಲ್ಲಿ ನಮ್ಮ ಕುಲದೇವರ ಅಥವಾ ಕುಲದೇವಿಯ ಸ್ಥಾಪನೆ ಮಾಡಿದಂತೆ. ನಾವು ನಮ್ಮ ಮನೆಯಲ್ಲಿ ನಮ್ಮ ಕುಲದೇವರ ಪ್ರತಿಮೆ/ಚಿಹ್ನೆಗಳನ್ನು ಹೇಗೆ ಪ್ರತಿಷ್ಠಾಪಿಸುತ್ತೇವೆಯೋ ಅದೇ ಶ್ರೇಷ್ಠತೆಯ ದೈವೀ ಮಹತ್ವವು ಈ ಹಿತ್ತಾಳೆಯ ಶಿವಲಿಂಗಕ್ಕೂ ಇರುತ್ತದೆ. ನಮ್ಮ ಮನೆಯಲ್ಲಿ ಒಗ್ಗಟ್ಟನ್ನು ಕಾಪಾಡುವ ಕೆಲಸವನ್ನು ಈ ಹಿತ್ತಾಳೆಯ ಶಿವಲಿಂಗವು ಮಾಡುತ್ತದೆ. ಈ ಶಿವಲಿಂಗವನ್ನು ಸರಿಯಾದ ಮಂತ್ರೋಚ್ಚಾರಣೆಯೊಂದಿಗೆ (ನಮ್ಮ ಕುಲದೇವತೆಗಳನ್ನು ಸ್ಮರಿಸಿ) ಮತ್ತು ಸರಿಯಾದ ಪೂಜಾ ವಿಧಿಗಳನ್ನು ಮಾಡಿ ಸ್ಥಾಪಿಸಿದರೆ ಅದು ಹೆಚ್ಚಿನ ಯೋಗ್ಯತೆ ಮತ್ತು ಫಲವನ್ನು ನೀಡಬಲ್ಲದು.

೫. ಸ್ಫಟಿಕದ ಶಿವಲಿಂಗ : ಪ್ರಸ್ತುತ ಕಾಲದಲ್ಲಿ ಅತಿಹೆಚ್ಚು ಉಪಯೋಗದಲ್ಲಿರುವ ಶಿವಲಿಂಗವೆಂದರೆ ‘ಸ್ಫಟಿಕದ ಶಿವಲಿಂಗ’. ಈ ಶಿವಲಿಂಗದ ಮಹತ್ವ ಮತ್ತು ಹಿರಿಮೆ ಬಹಳ ಭಿನ್ನವಾಗಿದೆ. ಈ ಶಿವಲಿಂಗದ ಮಹತ್ವವು ಸಂಪೂರ್ಣವಾಗಿ ಆ ‘ಸ್ಫಟಿಕ’ದ ಘಟಕದ ಮೇಲೆ ಅವಲಂಬಿಸಿರುತ್ತದೆ. ಇದು ಒಂದು ಪಾರದರ್ಶಕ ಕಲ್ಲು ಅಥವಾ ರತ್ನವಾಗಿದೆ. ಶಿವಲಿಂಗಕ್ಕೆ ಸಂಬಂಧಿಸಿದ ಒಂದು ವೈಶಿಷ್ಟ್ಯಪೂರ್ಣ ಮಹತ್ವವೆಂದರೆ, ಕೆಟ್ಟ ಅಗೋಚರ ಶಕ್ತಿಗಳ ನಾಶಕ್ಕಾಗಿ ಮುಖ್ಯವಾಗಿ ಈ ಶಿವಲಿಂಗವನ್ನು ಬಳಸಲಾಗುತ್ತದೆ. ಗ್ರಹಗಳ, ಅದರಲ್ಲಿಯೂ ರಾಹು ಮತ್ತು ಕೇತುವಿನ ಕೆಟ್ಟ ಪ್ರಭಾವವನ್ನು ನಾಶ ಮಾಡಲು ಈ ಶಿವಲಿಂಗವನ್ನು ಬಳಸಲಾಗುತ್ತದೆ.

೬. ಪಾದರಸದ ಶಿವಲಿಂಗ : ಪಾದರಸದ ಶಿವಲಿಂಗವು ಭಕ್ತರಲ್ಲಿ ಕಡಿಮೆ ಪ್ರಚಲಿತವಿರುವ ಶಿವಲಿಂಗವಾಗಿದೆ; ಆದರೆ ಸತ್ಯವೇನೆಂದರೆ, ಈ ಪಾದರಸದ ಶಿವಲಿಂಗವು ಮೇಲೆ ಉಲ್ಲೇಖಿಸಿದ ಎಲ್ಲ ಶಿವಲಿಂಗಗಳಿಗಿಂತ ಹೆಚ್ಚು ಲಾಭದಾಯಕ ಮತ್ತು ಫಲದಾಯಕವಾದ ಶಿವಲಿಂಗವಾಗಿದೆ. ಈ ಶಿವಲಿಂಗವನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸಿ ಮತ್ತು ಪೂಜಾವಿಧಿಗಳನ್ನು ಮಾಡಿದರೆ ನಮಗೆ ನಿಶ್ಚಿತ ಫಲಪ್ರಾಪ್ತಿಯಾಗುತ್ತದೆ. ಈ ಪೃಥ್ವಿಯ ಮೇಲೆ ದೇವಿ ಲಕ್ಷ್ಮಿಯ ಆಶೀರ್ವಾದ, ಪ್ರಕೃತಿ ಮತ್ತು ಭಗವಾನ ಶಂಕರನ ಮಾಧ್ಯಮದಿಂದ ಅವರ ಭಕ್ತರಿಗೆ ಲಭಿಸಬೇಕೆಂದು; ಈ ಶಿವಲಿಂಗವು ಈ ಪೃಥ್ವಿಯಲ್ಲಿ ಪ್ರಕಟವಾಗಿದೆ. ಪಾರದ ಎಂದರೆ ಬುಧ ಗ್ರಹದ ಅಸ್ತಿತ್ವವು ಈ ಶಿವಲಿಂಗದಲ್ಲಿ ಬಂದಿದೆ.
(ಆಧಾರ : ಮಾಸಿಕ ‘ಸ್ವಾಮಿ ಸಂಕೇತ’)
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !